ದೋಸೆ (Dose) ದಕ್ಷಿಣ ಭಾರತದವರಿಗೆ ತುಂಬಾ ಇಷ್ಟವಾದ (Favorite) ತಿಂಡಿಗಳಲ್ಲಿ ಒಂದು. ದೋಸೆ ಅಂದ್ರೆ ಸಾಕು ಆಸೆ ಆಗುತ್ತೆ. ವೈರಿಟಿ ದೋಸೆಗಳನ್ನು ನೋಡಿದಬಹುದು. ಕೆಲವರಿಗೆ ಮಸಲಾ ದೋಸೆ ಅಂದ್ರೆ ಪ್ರಾಣ. ಇನ್ನೂ ಕೆಲವರಿಗೆ ಪ್ಲೇನ್ ದೋಸೆ ಇಷ್ಟ. ಒಟ್ನನಲ್ಲಿ ದೋಸೆ ಬೇಕು ಅಷ್ಟೆ. ದೋಸೆ ಮಾಡೋಕೆ ಬೆಳಗ್ಗೆಯೆಲ್ಲಾ ಅಕ್ಕಿ (Rice) ನೆನೆಸಿ, ರಾತ್ರಿ ರುಬ್ಬಿ ಮರುದಿನ ಮಾಡಬೇಕು. ಅದು ಕೆಲವರಿಗೆ ಇಷ್ಟ ಆಗಲ್ಲ. ಅಲ್ಲದೇ ಕೆಲವೊಮ್ಮೆ ಲೇಟ್ ಆಗಿ ಎದ್ದಾಗ, ಏನ್ ತಿಂಡಿ ಮಾಡೋದು ಅಂತ ತಲೆ ಕೆಡುತ್ತೆ. ಅಂತವರಿಗೆ ಹತ್ತೇ ನಿಮಿಷದಲ್ಲಿ (10 Minute) ದೋಸೆ ಮಾಡೋದನ್ನು ಹೇಳಿ ಕೊಡ್ತೀವಿ ನೋಡಿ. ಇದು ತುಂಬಾ ಈಸಿ. ಬೇಗ ಕೂಡ ಆಗುತ್ತೆ. ಇದನ್ನು ನೀವು ಟ್ರೈ ಮಾಡಿ.
10 ನಿಮಿಷದಲ್ಲಿ ರೆಡಿ ಆಗುತ್ತೆ ದೋಸೆ
ಈ ತ್ವರಿತ ದೋಸೆ ತಯಾರಿಸಲು ಕೇವಲ ಹತ್ತು ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ನಿಮ್ಮ ಪತಿ ಅಥವಾ ಮಕ್ಕಳು ರೆಡಿಯಾಗುವುದರೊಳಗೆ ಈ ದೋಸೆ ಮಾಡಬಹುದು. ಇಲ್ಲವೇ ಬ್ಯಾಚುಲರ್ ಗೆ ಸೂಪರ್ ಆಗಿ ಇಷ್ಟ ಆಗುತ್ತೆ.
ತ್ವರಿತ ದೋಸೆಗೆ ಬೇಕಾಗುವ ಸಾಮಗ್ರಿಗಳು
ಅವಲಕ್ಕಿ, ರವೆ, ರುಚಿಗೆ ತಕ್ಕಷ್ಟು ಉಪ್ಪು, ಮೊಸರು ಇಷ್ಟು ಇದ್ರೆ ಸಾಕು ನಿಮಗೆ ರುಚಿಯಾದ ದೋಸೆ ಸವಿಯಲು.
ಹಿಟ್ಟು ಮಾಡುವ ವಿಧಾನ
ಅವಲಕ್ಕಿಯನ್ನು ಕೆಲ ನಿಮಿಷ ನೆನೆಸಿ, ನಂತರ ರವೆ ಜೊತೆ ನೆನೆಸಿದ ಅವಲಕ್ಕಿಯನ್ನು ಮಿಕ್ಸಿ ಮಾಡಿಕೊಳ್ಳಿ. ಒಂದು ಪಾತ್ರೆಗೆ ಹಾಕಿಕೊಂಡು ಮೊಸರು, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ನಿಮ್ಮ ಹದಕ್ಕೆ ನೀರು ಹಾಕಿ ಮಿಕ್ಸ್ ಮಾಡಿಕೊಳ್ಳಿ. ಆಗ ದೋಸೆ ರೆಡಿ ಆಗುತ್ತೆ. ನಿಮ್ಮ ನೆಚ್ಚನ ಚಟ್ನಿ ಜೊತೆ ತಿನ್ನಬಹುದು.
ಇದನ್ನೂ ಓದಿ: Morning Breakfast: ಕ್ರಿಸ್ಪಿ ಶಾವಿಗೆ ದೋಸೆ ಮಾಡೋದು ಹೇಗೆ? ಇಲ್ಲಿದೆ ನೋಡಿ ರೆಸಿಪಿ
ಯಾವಾಗಲೂ ಬೆಳಗಿನ ಉಪಹಾರಕ್ಕೆ ದೋಸೆ ಜನಪ್ರಿಯ ಆಯ್ಕೆ ಆಗಿದೆ. ಇದು ಅತ್ಯಂತ ತ್ವರಿತ, ಮತ್ತು ಸುಲಭ ಪಾಕವಿಧಾನ ಆಗಿದೆ. ರವೆ ಅಥವಾ ಅಕ್ಕಿ ಹಿಟ್ಟಿನ ದೋಸೆ ನೀವು ಪ್ರತೀ ವಾರ ಮಾಡಿ ತಿನ್ನುತ್ತೀರಿ.
ಬೆಳಗಿನ ಜಾವ ಈ ತಿಂಡಿಗಳನ್ನು ತಿನ್ನಬೇಡಿ
ಆಲೂ ಪುರಿ ತಿಂಡಿ ಸೇವನೆ ತಪ್ಪಿಸಿ
ನೀವೂ ಬೆಳಗಿನ ತಿಂಡಿಯಲ್ಲಿ ಪುರಿ ಮತ್ತು ಆಲೂ ಪಲ್ಯ ತಿನ್ನಲು ಹೆಚ್ಚು ಇಷ್ಟ ಪಡಬಹುದು. ಆದರೆ ಇದು ಆರೋಗ್ಯ ಹದಗೆಡಿಸುತ್ತದೆ. ಯಾಕಂದ್ರೆ ಆಲೂ ಪುರಿಯನ್ನು ಎಣ್ಣೆಯಲ್ಲಿ ತಯಾರಿಸಲಾಗುತ್ತದೆ. ಜೊತೆಗೆ ಪುರಿಯನ್ನು ಮೈದಾ ಹಿಟ್ಟಿನಿಂದ ಮಾಡಲಾಗುತ್ತದೆ. ಮೈದಾದಲ್ಲಿ ಯಾವುದೇ ಪೋಷಕಾಂಶಗಳಿಲ್ಲ.
ಇದನ್ನು ಬಿಳಿ ವಿಷ ಎಂದು ಕರೆಯುತ್ತಾರೆ. ಜೊತೆಗೆ ಪುರಿಯನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದು ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಇದರಲ್ಲಿ ಯಾವುದೇ ಪೆÇೀಷಕಾಂಶಗಳಿರಲ್ಲ. ಇದು ಕೆಟ್ಟ ಕೊಬ್ಬು, ಬೊಜ್ಜು, ಹೃದ್ರೋಗ, ಪಾಶ್ರ್ವವಾಯು ಅಪಾಯ ಹೆಚ್ಚಿಸುತ್ತದೆ.
ವಡಾ ಸಾಂಬಾರ್ ಸೇವನೆ ಬೇಡ
ಸಾಂಬಾರ್ ವಡಾ ಖಾದ್ಯ, ದಕ್ಷಿಣ ಭಾರತದ ಆಹಾರವಾಗಿದೆ. ಬೆಳಗಿನ ಉಪಾಹಾರದಲ್ಲಿತುಂಬಾ ಜನ ಸೇವಿಸುತ್ತಾರೆ. ವಡಾವನ್ನು ಎಣ್ಣೆಯಲ್ಲಿ ಕರಿಯಲಾಗುತ್ತದೆ. ಇದು ಜೀರ್ಣಕ್ರಿಯೆಗೆ ತೊಂದರೆ ಮಾಡುತ್ತದೆ. ಬೇಗ ಜೀರ್ಣವಾಗುವುದಿಲ್ಲ. ಗ್ಯಾಸ್ ಮತ್ತು ಅಜೀರ್ಣ ಸಮಸ್ಯೆ ಉಂಟು ಮಾಡುತ್ತದೆ.
ಕಾರ್ನ್ ಫ್ಲೇಕ್ಸ್ ಸೇವನೆ ತಪ್ಪಿಸಿ
ಬೆಳಗಿನ ತಿಂಡಿಯಲ್ಲಿ ಪ್ಯಾಕ್ ಮಾಡಿದ ಕಾರ್ನ್ ಫ್ಲೇಕ್ಸ್ ಸೇವನೆ ಆರೋಗ್ಯಕರವಲ್ಲ. ಇದರಲ್ಲಿ ಸಕ್ಕರೆ, ಉಪ್ಪಿನ ಪ್ರಮಾಣ ಹೆಚ್ಚಿದೆ. ಕಾರ್ನ್ ಫ್ಲೇಕ್ಸ್ನಲ್ಲಿ ಫೈಬರ್ ಇಲ್ಲ. ಇದು ಅನಾರೋಗ್ಯಕರ ಉಪಹಾರದ ವರ್ಗಕ್ಕೆ ಸೇರಿದೆ.
ಇದನ್ನೂ ಓದಿ: Worst Breakfast: ಬೆಳಗಿನ ತಿಂಡಿಯಲ್ಲಿ ಈ ಪದಾರ್ಥಗಳ ಸೇವನೆ ಮಾಡುವ ಮುನ್ನ ಎಚ್ಚರವಿರಲಿ
ಜಾಮ್ ಮತ್ತು ಬಿಳಿ ಬ್ರೆಡ್ ಸೇವನೆ ಬೇಡ
ಬೆಳಗಿನ ಉಪಾಹಾರದಲ್ಲಿ ಬಿಳಿ ಬ್ರೆಡ್ ಹಣ್ಣಿನ ಜಾಮ್ ಸೇವನೆ ಆರೋಗ್ಯಕ್ಕೆ ಉತ್ತಮವಲ್ಲ. ಇದು ಅನಾರೋಗ್ಯಕರ ಉಪಹಾರವಾಗಿದೆ. ಇದು ಸಕ್ಕರೆ, ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಿಂದ ಕೂಡಿದೆ. ಇದು ಬೊಜ್ಜು ಮತ್ತು ಮಧುಮೇಹ ಕಾಯಿಲೆಗೆ ಕಾರಣವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ