ಇಡ್ಲಿ (Idli) ತುಂಬಾ ಜನರ ನೆಚ್ಚಿನ (Favorite) ತಿಂಡಿ. ಕೆಲವರು ತುಂಬಾ ಇಷ್ಟ ಪಟ್ಟು ತಿನ್ನುತ್ತಾರೆ. ಹೆಚ್ಚು ಜನ ಮನೆಯ ಇಡ್ಲಿಗಿಂತ ಹೋಟೆಲ್ (Hotel) ಇಡ್ಲಿಯನ್ನು ಇಷ್ಟ ಪಡುತ್ತಾರೆ. ಅವು ತುಂಬಾ ಮೃದು ಆಗಿರುತ್ತವೆ ಎನ್ನುವುದು ಎಲ್ಲರು ಹೇಳುವುದು. ನೀವು ಹುಷಾರಿಲ್ಲದೇ ಆಸ್ಪತ್ರೆಗೆ ಹೋದ್ರೆ ಡಾಕ್ಟರ್ (Doctor) ಹೇಳುವುದು ಇಡ್ಲಿ ತಿಂಡಿ ತಿನ್ನಿ ಅಂತ. ಎಣ್ಣೆ ಇಲ್ಲದೇ, ಆರೋಗ್ಯಕ್ಕೆ (Health) ಒಳ್ಳೆಯದು ಇಡ್ಲಿ. ಮನೆಯಲ್ಲಿ ಎಷ್ಟೇ ಟ್ರೈ ಮಾಡಿದ್ರೂ ಇಡ್ಲಿ ಮೃದು ಬರುವುದೇ ಇಲ್ಲ ಎನ್ನುವುದು ಹಲವರ ಕೊರಗು. ಆ ರೀತಿ ಚಿಂತೆ ಇದ್ರೆ, ಇವತ್ತೇ ಬಿಟ್ಟು ಬಿಡಿ, ನಾವು ನಿಮಗೆ ಈಸಿ ಮತ್ತು ಮೃದುವಾದ ಇಡ್ಲಿ ಮಾಡುವುದನ್ನು ಹೇಳಿಕೊಡ್ತೇವೆ.
ಮೃದು ಇಡ್ಲಿ ಮಾಡುವುದು ಹೇಗೆ?
ಮೊದಲು ಗ್ರೈಂಡರ್ ಅನ್ನು ಕೈಯಿಂದ ಚೆನ್ನಾಗಿ ತೊಳೆಯಿರಿ. ಈ ರೀತಿ ಮಾಡುವುದರಿಂದ ಹಿಟ್ಟು ಹುಳಿಯಾಗುವುದನ್ನು ತಪ್ಪಿಸಬಹುದು.
ಅಕ್ಕಿಯನ್ನು ಕನಿಷ್ಠ 3 ರಿಂದ 4 ಗಂಟೆಗಳ ಕಾಲ ಮಾತ್ರ ನೆನೆಸಿಡಿ. ಕೆಲವು ಜನರು ರಾತ್ರಿಯಿಡೀ ನೆನೆಸುತ್ತಾರೆ. ನಂತರ ಬೆಳಿಗ್ಗೆ ಹಿಟ್ಟು ರುಬ್ಬುತ್ತಾರೆ. ಆ ರೀತಿ ಮಾಡಬೇಡಿ. 4 ಗಂಟೆ ಕಾಲ ನೆನೆದ್ರೆ ಸಾಕು. ಈ ರೀ ಮಾಡುವುದರಿಂದ ವೇಗವಾಗಿ ಹಿಟ್ಟು ಹುದುಗಲು ಸಹಾಯ ಮಾಡುತ್ತೆ.
ಉದ್ದಿನ ಬೇಳೆಯನ್ನು 1 ಗಂಟೆ ಕಾಲ ನೆನೆಸಿದ್ರೆ ಸಾಕು. ಇನ್ನೊಂದು ನೆನಪಿಡಿ. ಉದ್ದಿನಬೇಳೆ ಮತ್ತು ಅಕ್ಕಿಯನ್ನು ಒಟ್ಟಿಗೆ ರುಬ್ಬಬೇಡಿ. ಇದರಿಂದ ನಿಮ್ಮ ಹಿಟ್ ಹಾಳಾಗಬಹುದು. ಬೇರೆ ಬೇರೆ ರುಬ್ಬಿದ ಹಿಟನ್ನು ಕೈಯಿಂದ ಮಿಕ್ಸ್ ಮಾಡಬೇಡಿ. ಬದಲಾಗಿ, ಒಂದು ಚಮಚದೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಏಕೆಂದರೆ ಕೈಯಿಂದ ಬೆರೆಸುವಾಗ ಕೈ ಬೆಚ್ಚಗಾಗುತ್ತದೆ ಮತ್ತು ಹಿಟ್ಟು ಹುಳಿ ಆಗುತ್ತೆ.
ಇದನ್ನೂ ಓದಿ: Breakfast: ಬೆಳಗಿನ ಚುಮು ಚುಮು ಚಳಿಗೆ ಮಾಡಿ ಮೆಂತ್ಯ ಸೊಪ್ಪಿನ ಪರಾಠಾ
ಇಡ್ಲಿ ರೆಸಿಪಿಗೆ ಬೇಕಾಗುವ ಪದಾರ್ಥಗಳು
ಎರಡು ಕಪ್ ಇಡ್ಲಿ ಅಕ್ಕಿ ಅಥವಾ ದೋಸೆ ಅಕ್ಕಿ ಅಥವಾ ಸೋನಾ ಮಸೂರಿ ಅಕ್ಕಿ, ಒಂದು ಕಪ್ ಉದ್ದಿನ ಬೇಳೆ, ಮುಕ್ಕಾಲು ಕಪ್ ತೆಳುವಾದ ಅವಲಕ್ಕಿ, ತುಪ್ಪ ಅಥವಾ ಎಣ್ಣೆ ಬೇಕು.
ಫ್ರಿಡ್ಜ್ ಇಲ್ಲದವರು ಏನ್ ಮಾಡಬೇಕು?
ಫ್ರಿಡ್ಜ್ ಇಲ್ಲದವರು ಇಡ್ಲಿ ಹಿಟ್ಟನ್ನು ಹೆಚ್ಚು ಕಾಲ ಹುದುಗದೆ ಇಡುವುದು ಸವಾಲಾಗಿ ಪರಿಣಮಿಸುತ್ತದೆ. ನೀವು ಏನು ಮಾಡಿದರೂ, ಹಿಟ್ಟು ಒಂದು ಅಥವಾ ಎರಡು ದಿನ ಮಾತ್ರ ಹುಳಿಯಿಲ್ಲದೆ ಉಳಿಯುತ್ತದೆ. ನಂತರ ಅದು ಹುದುಗಲು ಪ್ರಾರಂಭಿಸುತ್ತದೆ.
ಕೆಲವು ಜಿಲ್ಲೆಗಳಲ್ಲಿ ಫ್ರಿಡ್ಜ್ ಇಲ್ಲದವರು ಈಗಲೂ ಹಿಟ್ಟನ್ನು ನೀರಿನೊಂದಿಗೆ ದೊಡ್ಡ ಪಾತ್ರೆಯಲ್ಲಿ ಸುರಿಯುತ್ತಾರೆ ಮತ್ತು ಅದರ ಮೇಲೆ ಹಿಟ್ಟಿನ ಪಾತ್ರೆಯನ್ನು ಇಡುತ್ತಾರೆ. ಹೀಗೆ ಮಾಡುವುದರಿಂದ ಬೇಗ ಹುಳಿಯಾಗುವುದಿಲ್ಲ. ಇಡ್ಲಿ ಹಿಟ್ಟನ್ನು ಬಾಳೆ ಎಲೆಯ ತುಂಡುಗಳಿಂದ ಮುಚ್ಚಿಟ್ಟರೆ, ಹಿಟ್ಟು ಎರಡು ದಿನಗಳವರೆಗೆ ತಾಜಾವಾಗಿರುತ್ತದೆ.
ಇದನ್ನೂ ಓದಿ: Raw Vegetables: ಯಾವ ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು? ಇದರಿಂದ ಹೇಗೆ ಅನಾರೋಗ್ಯ ಉಂಟಾಗುತ್ತದೆ?
ಬೆಳಗಿನ ತಿಂಡಿಗೆ ತುಂಬಾ ಜನರು ಇಡ್ಲಿ ತಿನ್ನಲು ತುಂಬಾ ಇಷ್ಟ ಪಡ್ತಾರೆ. ಮೃದುವಾದ ಇಡ್ಲಿ ತಿನ್ನುವ ಮನಸ್ಸು ಯಾರಿಗೇ ತಾನೇ ಆಗಲ್ಲ. ಈಗೆಲ್ಲಾ ಹೋಟೆಲುಗಳಲ್ಲಿ , ಬೀದಿ ಬದಿಯ ಅಂಗಡಿಗಳಲ್ಲಿ ವಿಭಿನ್ನ ರೀತಿಯ ಇಡ್ಲಿಗಳನ್ನು ಮಾಡಿ ಕೊಡುವುದನ್ನು ನೀವು ನೋಡಿರಬಹುದು.
ಡಯಟ್ ಫಾಲೋ ಮಾಡುವವರು ತಪ್ಪದೇ ಅವರ ಆಹಾರ ಕ್ರಮದಲ್ಲಿ ಇಡ್ಲಿ ಸೇರಿಸುತ್ತಾರೆ. ಅದರಲ್ಲೂ ಕರ್ನಾಟಕದಲ್ಲಿ ಇಡ್ಲಿ ರೆಸಿಪಿ ತುಂಬಾ ಜನಪ್ರಿಯ ತಿಂಡಿಯಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ