ಬೆಳಗಿನ ಉಪಹಾರದಲ್ಲಿ (Morning Breakfast) ರೊಟ್ಟಿ ಸೇವನೆ ಆರೋಗ್ಯಕ್ಕೆ (Health) ಉತ್ತಮ. ರೊಟ್ಟಿ (Roti) ಮಾಡುವುದು ತುಂಬಾ ಸುಲಭ. ನೀವು ರೊಟ್ಟಿ ಮಾಡಲು ನಿಮ್ಮ ಆಯ್ಕೆಯ ಹಿಟ್ಟನ್ನು ಬಳಕೆ ಮಾಡಬಹುದು. ಉಪಹಾರಕ್ಕೆ ರಾಗಿ ಇಲ್ಲವೇ ಜೋಳ ಹಾಗೂ ಗೋವಿನಜೋಳದ ರೊಟ್ಟಿ ಸೇವನೆ ಸಾಕಷ್ಟು ಪ್ರಯೋಜನ ನೀಡುತ್ತದೆ. ನೀವು ಮನೆಯಲ್ಲಿ ರೊಟ್ಟಿ ಮಾಡಿ, ಅದು ಉಳಿದರೆ ಏನ್ ಮಾಡೋದಪ್ಪಾ, ಚೆಲ್ಲಿ ಬಿಡೋಣ. ರೊಟ್ಟಿ ಯಾರೂ ತಿನ್ನಲ್ಲ ಅಂದುಕೊಳ್ತಿದ್ದೀರಾ? ಹಾಗಿದ್ದರೆ ಇಲ್ಲಿ ನಾವು ಉಳಿದ ರೊಟ್ಟಿಗಾಗಿ ಸೂಪರ್ ರೆಸಿಪಿ (Super Recipe) ತಂದಿದ್ದೇವೆ. ಇದರಿಂದ ನಿಮ್ಮ ರೊಟ್ಟಿ ಡಸ್ಟ್ ಬಿನ್ ಸೇರಿ ವೇಸ್ಟ್ ಆಗುವುದು ತಪ್ಪುತ್ತದೆ.
ಬೆಳಗಿನ ತಿಂಡಿಗೆ ರೊಟ್ಟಿ ರೆಸಿಪಿ
ಮನೆಯಲ್ಲಿ ಮಾಡಿದ ರೊಟ್ಟಿಗಳು ಉಳಿದರೆ ಅದನ್ನು ವೇಸ್ಟ್ ಮಾಡ್ಬೇಡಿ. ಅದರಿಂದ ಬೆಳಗಿನ ತಿಂಡಿಗೆ ಆರೋಗ್ಯಕರ ರೆಸಿಪಿ ಮಾಡಿ ನೀವು ತಿನ್ನಬಹುದು. ಕೆಲವೊಮ್ಮೆ ಮನೆಯಲ್ಲಿ ಮಾಡಿದಷ್ಟು ರೊಟ್ಟಿಯನ್ನು ಯಾರೂ ತಿನ್ನಲ್ಲ. ಹೀಗಾಗಿ ರೊಟ್ಟಿಗಳು ಉಳಿಯುತ್ತವೆ.
ಕೆಲವೊಮ್ಮೆ ಹೆಚ್ಚು ರೊಟ್ಟಿ ಮಾಡಿದರೆ ರೊಟ್ಟಿ ಉಳಿಯುತ್ತವೆ. ರೊಟ್ಟಿ ತಂಗಳಾದರೆ ತಿನ್ನಲು ಯಾರೂ ಇಷ್ಟ ಪಡಲ್ಲ. ಹೀಗಾಗಿ ರೊಟ್ಟಿ ಬಿಸಾಡಬೇಕಾಗುತ್ತದೆ. ಆಹಾರ ಚೆಲ್ಲುವ ಬದಲು ಉಳಿದ ರೊಟ್ಟಿಯಿಂದ ತಿಂಡಿ ತಯಾರಿಸಿ. ಪಾಕವಿಧಾನ ಹೀಗಿದೆ.
ಮಕ್ಕಳ ಟಿಫಿನ್ ಗೆ ಹಾಗೂ ನಿಮಗಾಗಿಯೂ ನೀವು ಈ ರೆಸಿಪಿ ಮಾಡಬಹುದು.
ರೊಟ್ಟಿ ಹಲ್ವಾ ರೆಸಿಪಿ
ಬೇಕಾಗುವ ಪದಾರ್ಥಗಳು
ರೊಟ್ಟಿಗಳು, ತುಪ್ಪ 3 tbsp, ಸಕ್ಕರೆ 1-2 ಟೀಸ್ಪೂನ್, ಖೋಯಾ 1 ಕಪ್, ಒಣ ಹಣ್ಣುಗಳು 5-6 ಟೀಸ್ಪೂನ್, ಹಾಲು 3 ಕಪ್ಗಳು, ಹಸಿರು ಏಲಕ್ಕಿ ಪುಡಿ ಬೇಕು.
ರೊಟ್ಟಿ ಹಲ್ವಾ ಮಾಡುವುದು ಹೇಗೆ?
ರೊಟ್ಟಿಯನ್ನು ಮಿಕ್ಸಿಯಲ್ಲಿ ರುಬ್ಬಿ ಪುಡಿ ಮಾಡಿ. ಬಾಣಲೆಗೆ ತುಪ್ಪ ಹಾಕಿ ರುಬ್ಬಿದ ರೊಟ್ಟಿಯನ್ನು 5-7 ನಿಮಿಷ ಫ್ರೈ ಮಾಡಿ. ಅದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಹಾಲು ಬೆಂದ ಮೇಲೆ ಸಕ್ಕರೆ ಹಾಕಿ ಕರಗುವವರೆಗೆ ಬೇಯಿಸಿ. ನಂತರ ಖೋಯಾ ಮತ್ತು ಏಲಕ್ಕಿ ಪುಡಿ ಸೇರಿಸಿ. ಅಂತಿಮವಾಗಿ ಒಣ ಹಣ್ಣು ಸೇರಿಸಿ. ಸವಿಯಿರಿ.
ರೋಟಿ ಲಡ್ಡೂ ರೆಸಿಪಿ
ಬೇಕಾಗುವ ಪದಾರ್ಥಗಳು
ರೊಟ್ಟಿ, ತುಪ್ಪ 2 tbsp, ಒಣದ್ರಾಕ್ಷಿ 3 ಟೀಸ್ಪೂನ್, ಗೋಡಂಬಿ 3 tbsp, ಬಾದಾಮಿ 3 ಟೀಸ್ಪೂನ್, ಬೆಲ್ಲ 1 ಕಪ್, ನೀರು 2 ಟೀಸ್ಪೂನ್, ಖೋವಾ 1 ಕಪ್, ಏಲಕ್ಕಿ ಪುಡಿ ¼ ಟೀಸ್ಪೂನ್ ಬೇಕು.
ರೊಟ್ಟಿ ಲಡ್ಡೂ ಮಾಡುವುದು ಹೇಗೆ?
ಉಳಿದ ರೊಟ್ಟಿ ಸಣ್ಣ ತುಂಡುಗಳಾಗಿ ಕತ್ತರಿಸಿ ಸಣ್ಣ ಉರಿಯಲ್ಲಿ ಗರಿಗರಿಯಾಗುವವರೆಗೆ ಫ್ರೈ ಮಾಡಿ. ತುಂಡುಗಳನ್ನು ಮಿಕ್ಸರ್ ನಲ್ಲಿ ಮಿಶ್ರಣ ಮಾಡಿ. ಅದರಿಂದ ಒರಟಾದ ಪುಡಿ ತಯಾರಿಸಿ. ಬಾಣಲೆಗೆ ತುಪ್ಪವನ್ನು ಬಿಸಿ ಮಾಡಿ, ಒಣ ಹಣ್ಣು, ಒಣದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿ ಫ್ರೈ ಮಾಡಿ.
ರೋಟಿ ಪುಡಿಯೊಂದಿಗೆ ಹುರಿದ ಬೀಜಗಳನ್ನು ಮಿಶ್ರಣ ಮಾಡಿ. ಬಾಣಲೆಗೆ ಬೆಲ್ಲ ಮತ್ತು ನೀರು ಹಾಕಿ. ನೀರು ಮತ್ತು ಬೆಲ್ಲ ಮಿಶ್ರಣವಾಗುವವರೆಗೆ ಬೇಯಿಸಿ. ರೊಟ್ಟಿ ಮಿಶ್ರಣದ ಮೇಲೆ ಬೆಲ್ಲದ ನೀರನ್ನು ಸುರಿಯಿರಿ ಮತ್ತು ಮಿಶ್ರಣ ಮಾಡಿ.
ಇದನ್ನೂ ಓದಿ: ದಿನಾ 2 ಸೇಬು ತಿಂದ್ರೆ ಕೊಲೆಸ್ಟ್ರಾಲ್ ಸಮಸ್ಯೆ ಬರೋದೇ ಇಲ್ಲ
ನಂತರ ಖೋವಾ ಮತ್ತು ಏಲಕ್ಕಿ ಪುಡಿ ಸೇರಿಸಿ. ಮಿಕ್ಸ್ ಮಾಡಿ. ಈಗ ಇದರಿಂದ ಸಣ್ಣ ಉಂಡೆ ಮಾಡಿ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ