ಬೆಳಗಿನ ಉಪಹಾರಕ್ಕೆ ಓಟ್ ಮೀಲ್ ಖಾದ್ಯವನ್ನು ಅನೇಕರು ಇಷ್ಟ ಪಟ್ಟು ತಿನ್ನುತ್ತಾರೆ. ಓಟ್ ಮೀಲ್ ಖಾದ್ಯವು ಡಯಟ್, ಫಿಟ್ನೆಸ್, ವೇಟ್ ಲಾಸ್ ಮಾಡುವವರು ಹೆಚ್ಚು ಸೇವನೆ ಮಾಡುತ್ತಾರೆ. ತುಂಬಾ ಜನರು ಬೆಳಗಿನ ತಿಂಡಿಗೆ ಇಡ್ಲಿ, ದೋಸೆ ತಿಂದರೆ ಕೆಲವರು ಮನೆಗಳಲ್ಲಿ ಸಿಹಿ ಗಂಜಿ ಸೇವನೆ ಮಾಡ್ತಾರೆ. ವಿವಿಧ ಪದಾರ್ಥಗಳ ನುಚ್ಚುನಿಂದ ಮಾಡಿದ ಗಂಜಿಯು ರುಚಿಯಾಗಿರುತ್ತದೆ. ಕೆಲವರು ಗಂಜಿಗೆ ಖಾರದ ಟೇಸ್ಟ್ ನೀಡಲು ಇಷ್ಟ ಪಡ್ತಾರೆ. ಇನ್ನು ಕೆಲವರು ಸಿಹಿಯನ್ನೇ ಇಷ್ಟ ಪಡುತ್ತಾರೆ. ಗಂಜಿಯನ್ನು ಪ್ರತಿಯೊಬ್ಬರ ಮನೆಯಲ್ಲಿ ನೀಡಲಾಗುತ್ತದೆ. ಸಿಹಿ ಗಂಜಿ, ಖಾರದ ಗಂಜಿ, ಅನೇಕ ರೀತಿಯ ಗಂಜಿ ಜನರು ಮಾಡುತ್ತಾರೆ.
ಬೆಳಗಿನ ಉಪಹಾರಕ್ಕೆ ಓಟ್ ಮೀಲ್ ಸಿಹಿ ಗಂಜಿ ಪಾಕವಿಧಾನ
ಕೆಲವರಿಗೆ ಓಟ್ ಮೀಲ್ ಇಷ್ಟವಾಗುವುದಿಲ್ಲ. ಆದರೆ ಇದು ಅನೇಕ ಪ್ರಯೋಜನ ನೀಡುತ್ತದೆ. ಓಟ್ಮೀಲ್ ಫೈಬರ್ ಮತ್ತು ಪ್ರೋಟೀನ್ ಹೊಂದಿದೆ. ಓಟ್ ಮೀಲ್ ಫಿಟ್‌ನೆಸ್ ಫ್ರೀಕ್ಸ್‌ನಿಂದ ಮಧುಮೇಹ ರೋಗಿಗಳವರೆಗೆ ಎಲ್ಲರಿಗೂ ನೆಚ್ಚಿನ ಆಹಾರ.
ಓಟ್ ಮೀಲ್ ಕ್ಯಾಲ್ಸಿಯಂ, ಮೆಗ್ನೀಸಿಯಮ್, ಫಾಸ್ಫರಸ್, ಫೋಲೇಟ್, ಸತು, ಪೊಟ್ಯಾಸಿಯಮ್, ಥಯಾಮಿನ್, ವಿವಿಧ ಖನಿಜಗಳು ಮತ್ತು ವಿಟಮಿನ್ ಹೊಂದಿದೆ.
ಬೆಳಗಿನ ಉಪಾಹಾರಕ್ಕಾಗಿ ಓಟ್ ಮೀಲ್ ನಿಮಗೆ ಇಡೀ ದಿನಕ್ಕೆ ಬೇಕಾಗುವ ಶಕ್ತಿ ನೀಡುತ್ತದೆ. ಓಟ್ ಮೀಲ್ ಡಯಟ್ ಮಾಡುವವರ ಆಹಾರ ಯೋಜನೆಯಲ್ಲಿ ಇದ್ದೇ ಇರುತ್ತದೆ.
ಓಟ್ಮೀಲ್ ಸಿಹಿ ಗಂಜಿ ರೆಸಿಪಿ
ಬೇಕಾಗುವ ಪದಾರ್ಥಗಳು
ಓಟ್ಮೀಲ್ 1/3 ಕಪ್, ತುಪ್ಪ 1 ಟೀಸ್ಪೂನ್, ನೀರು 2 ಕಪ್, ಹಾಲು 2 ಕಪ್, ಸಕ್ಕರೆ ಸುಮಾರು ¼ ಕಪ್, ಬಾದಾಮಿ, ಇಲ್ಲವೇ ನಿಮ್ಮಿಷ್ಟದ ಡ್ರೈ ಫ್ರೂಟ್ಸ್, ನಿಮ್ಮಿಷ್ಟದ ಇತರೆ ಬೀಜಗಳು ¼ ಕಪ್, ಒಣದ್ರಾಕ್ಷಿ 1 ಟೀಸ್ಪೂನ್, ಹಸಿರು ಏಲಕ್ಕಿ 4 ಬೇಕು.
ಓಟ್ಮೀಲ್ ಸಿಹಿ ಗಂಜಿ ಪಾಕ ವಿಧಾನ:
ಬಾದಾಮಿ ಅಥವಾ ನಿಮ್ಮಿಷ್ಟದ ಯಾವುದೇ ಬೀಜಗಳನ್ನು ನುಣ್ಣಗೆ ಕತ್ತರಿಸಿ. ಹಸಿರು ಏಲಕ್ಕಿಯ ಸಿಪ್ಪೆಯನ್ನು ತೆಗೆದು ಹಾಕಿ. ಮತ್ತು ಬೀಜಗಳನ್ನು ಒರಟಾಗಿ ಪುಡಿ ಮಾಡಿ. ಈಗ 1 ಟೀಸ್ಪೂನ್ ತುಪ್ಪವನ್ನು ಕುಕ್ಕರ್‌ನಲ್ಲಿ ಬಿಸಿ ಮಾಡಿ. ನಂತರ ಓಟ್ಮೀಲ್ ಹಾಕಿ ಚೆನ್ನಾಗಿ ಫ್ರೈ ಮಾಡಿ.
ಓಟ್ಮೀಲ್ ಫ್ರೈ ಆಗಿ ಗೋಲ್ಡನ್ ಬಣ್ಣ ಬಂದ ನಂತರ ನೀರು ಹಾಕಿ ಗಂಜಿ ಕರಗುವವರೆಗೆ ಕುದಿಸಿ. ನಂತರ ಈಗ ಓಟ್ ಮೀಲ್ ಗೆ ಹಾಲು ಸೇರಿಸಿ ಮತ್ತೆ ಕುದಿಯಲು ಬಿಡಿ. ಈಗ ಕತ್ತರಿಸಿದ ಒಣ ಹಣ್ಣು ಮತ್ತು ಒಣದ್ರಾಕ್ಷಿ ಸೇರಿಸಿ. ಮಿಕ್ಸ್ ಮಾಡಿ. ಮತ್ತೆ ಬೇಯಿಸಿ.
ಗಂಜಿಗೆ ಸಕ್ಕರೆ ಸೇರಿಸಿ ಕುದಿಸಿ. ಚೆನ್ನಾಗಿ ಮಿಕ್ಸ್ ಮಾಡಿ. ಏಲಕ್ಕಿ ಸೇರಿಸಿ. ಈಗ ಗಂಜಿ ರೆಡಿಯಾಗಿದೆ ಸೇವಿಸಿ.
ಓಟ್ಮೀಲ್ ಗಂಜಿಯು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ
ಓಟ್ ಮೀಲ್ ಕೊಲೆಸ್ಟ್ರಾಲ್ ನಿಯಂತ್ರಿಸುವ ಫೈಬರ್ ಹೊಂದಿದೆ. ಓಟ್ ಮೀಲ್ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುವ ಮೂಲಕ ಹೃದಯ ಸಂಬಂಧಿ ಕಾಯಿಲೆ ಅಪಾಯ ಕಡಿಮೆ ಮಾಡುತ್ತದೆ. ಆಹಾರದಲ್ಲಿ ಓಟ್ ಮೀಲ್ ಅನ್ನು ಸೇರಿಸಿ. ಇದು ಪೌಷ್ಟಿಕ ಆಹಾರ ಹಾಗೂ ಉತ್ತಮ ಶಕ್ತಿ ನೀಡುತ್ತದೆ.
ಇದನ್ನೂ ಓದಿ: ಪರಂಗಿ ಹಣ್ಣಿನ ಬೀಜದಿಂದ ಸಿಗೋ ಲಾಭ ಕೇಳಿದ್ರೆ ನೀವು ಎಸೆಯೋದೇ ಇಲ್ಲ
ಮಲಬದ್ಧತೆ ಸಮಸ್ಯೆಗೆ ಪರಿಹಾರ ನೀಡುತ್ತದೆ
ಓಟ್ಮೀಲ್ ಫೈಬರ್ನ ಅತ್ಯುತ್ತಮ ಮೂಲ. ಓಟ್ ಮೀಲ್ ಆಗಾಗ್ಗೆ ಕರುಳಿನ ಚಲನೆ ಕಾಪಾಡಲು ಸಹಕಾರಿ. ಮಲಬದ್ಧತೆ ತಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ