ಭಾನುವಾರ (Sunday) ರಜಾ ದಿನ. ತುಂಬಾ ಜನರು (People) ಭಾನುವಾರದಂದು ತಡವಾಗಿ ಏಳುತ್ತಾರೆ. ತಡವಾಗಿ ತಿಂಡಿ (Breakfast) ತಿನ್ನುತ್ತಾರೆ. ಅದರಲ್ಲೂ ಭಾನುವಾರ ಸ್ಪೆಷಲ್ ಖಾದ್ಯ (Special Recipe) ಸೇವನೆಗೆ ಮನಸ್ಸು ಮಾಡುತ್ತಾರೆ. ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ನಾನ್ ವೆಜ್, ಪಿಜ್ಜಾ ಹೀಗೆ ಹಲವು ಖಾದ್ಯಗಳ ಸೇವನೆಗೆ ಮುಂದಾಗುತ್ತಾರೆ. ಅದರಲ್ಲೂ ವೆಜ್ ಮತ್ತು ನಾನ್ ವೆಜ್ ಸೇವಿಸುವ ಇಬ್ಬರೂ ಜನರು ಪಿಜ್ಜಾ (Pizza) ಮಾಡಿ ತಿನ್ನಬಹುದು. ಪಿಜ್ಜಾ ಮಾಡಿ ಸೇವಿಸುವುದು ಮಕ್ಕಳಿಗೂ ಖುಷಿ ಕೊಡುತ್ತದೆ. ಬೆಳಗಿನ ತಿಂಡಿಗೆ ಆರೋಗ್ಯಕರ ಪಿಜ್ಜಾ ಮಾಡುವುದು ಹೇಗೆ ಅಂತಾ ನಾವು ನೋಡೋಣ.
ಬೆಳಗಿನ ತಿಂಡಿಗೆ ರಾಗಿ ಪಿಜ್ಜಾ ರೆಸಿಪಿ
ಯಾವಾಗಲೂ ಪಿಜ್ಜಾವನ್ನು ಮೈದಾ ಹಿಟ್ಟಿನಿಂದ ಮಾಡುತ್ತಾರೆ. ಆದರೆ ನೀವು ಆರೋಗ್ಯಕರ ಪಿಜ್ಜಾವನ್ನು ರಾಗಿ ಹಿಟ್ಟಿನಿಂದ ಮಾಡಿ ತಿನ್ನಬಹದು. ಭಾನುವಾರದ ಬ್ರಂಚ್ ಅಥವಾ ತಿಂಡಿಗೆ ರಾಗಿ ಪಿಜ್ಜಾ ಟೇಸ್ಟಿ ಮತ್ತು ಹೆಲ್ದೀ ಆಯ್ಕೆ ಆಗಿದೆ.
ತೂಕ ಇಳಿಕೆ ಪ್ರಯಾಣದಲ್ಲಿರುವವರು ಮತ್ತು ಮಧುಮೇಹ ತಪ್ಪಿಸಲು ಆರೋಗ್ಯಕರ ಮತ್ತು ಪೌಷ್ಟಿಕಾಂಶ ಭರಿತ ರಾಗಿ ಪಿಜ್ಜಾ ಸೇವನೆ ಮಾಡಬಹುದು. ಹಾಗಾದ್ರೆ ಇಲ್ಲಿ ನಾವು ರಾಗಿ ಪಿಜ್ಜಾ ತಯಾರಿಸುವ ಆರೋಗ್ಯಕರ ಪಾಕವಿಧಾನದ ಬಗ್ಗೆ ತಿಳಿಯೋಣ.
ರಾಗಿ ಪಿಜ್ಜಾ ರೆಸಿಪಿ
ಬೇಕಾಗುವ ಪದಾರ್ಥಗಳು
ರಾಗಿ ಹಿಟ್ಟು 2 ಕಪ್, ದೇಸಿ ತುಪ್ಪ 2 ಚಮಚ, ಉಗುರು ಬೆಚ್ಚಗಿನ ನೀರು ಅಗತ್ಯಕ್ಕೆ ತಕ್ಕಷ್ಟು, ಪಿಜ್ಜಾ ಸಾಸ್ 2 ರಿಂದ 3 ಟೀಸ್ಪೂನ್, ಕಲ್ಲು ಉಪ್ಪು, ಕತ್ತರಿಸಿದ 1 ದೊಡ್ಡ ಈರುಳ್ಳಿ, ಕತ್ತರಿಸಿದ 1 ಟೊಮೆಟೊ, ಕತ್ತರಿಸಿದ 1 ಕ್ಯಾಪ್ಸಿಕಂ, ಬೇಯಿಸಿದ ಕಾರ್ನ್ 3 ರಿಂದ 4 ಟೀಸ್ಪೂನ್, ಆರೋಗ್ಯಕರ ಚೀಸ್,
ರಾಗಿ ಪಿಜ್ಜಾ ತಯಾರಿಸುವ ವಿಧಾನ
ಮೊದಲು ಒಂದು ಬಟ್ಟಲಿನಲ್ಲಿ ರಾಗಿ ಹಿಟ್ಟು ಶೋಧಿಸಿ ಹಾಕಿರಿ. ನಂತರ ಅದಕ್ಕೆ ಚಿಟಿಕೆ ಉಪ್ಪು ಸೇರಿಸಿ ಮಿಕ್ಸ್ ಮಾಡಿ. ನಂತರ ಹಿಟ್ಟನ್ನು ಉಗುರು ಬೆಚ್ಚಗಿನ ನೀರಿನಿಂದ ಬೆರೆಸಿ. ಹತ್ತು ನಿಮಿಷ ಹಾಗೇ ನೆನೆಯಲು ಬಿಡಿ. ನಂತರ ಈಗ ಪ್ಯಾನ್ ಅನ್ನು ಬಿಸಿ ಮಾಡಿ.
ಈ ಪಿಜ್ಜಾ ಹಾಕಿ ಗರಿಗರಿಯಾಗುವವರೆಗೆ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿ. ಟಾಪಿಂಗ್ ಗಾಗಿ ಮೇಲೆ ಹೇಳಿದ ಎಲ್ಲಾ ತರಕಾರಿಗಳನ್ನು ನುಣ್ಣಗೆ ಕತ್ತರಿಸಿಡಿ. 2 ರಿಂದ 3 ಸ್ಪೂನ್ ಪಿಜ್ಜಾ ಸಾಸ್ ತೆಗೆದುಕೊಳ್ಳಿ. ಈಗ ಸಣ್ಣದಾಗಿ ಕೊಚ್ಚಿದ ತರಕಾರಿ ಸೇರಿಸಿ.
ಪಿಜ್ಜಾ ಸಾಸ್ ಉಪ್ಪನ್ನು ಹೊಂದಿದೆ. ಹಾಗಾಗಿ ಬೇಕಾದಷ್ಟು ಉಪ್ಪನ್ನು ಸೇರಿಸಿ. ಅರ್ಧ ಟೀಚಮಚ ಓರೆಗಾನೊ ಸೇರಿಸಿ. ಪಿಜ್ಜಾ ಬೇಸ್ ಗಳ ಮೇಲೆ ಸ್ವಲ್ಪ ದೇಸಿ ತುಪ್ಪ ಅನ್ವಯಿಸಿ. ಈಗ ಇದು ಆರೋಗ್ಯಕರ ಮತ್ತು ಮೃದುವಾಗಿದೆ.
ಚಮಚದಿಂದ ಸ್ಟಫಿಂಗ್ ಮತ್ತು ಚೀಸ್ ಸೇರಿಸಿ. ಪ್ಯಾನ್ ಬಿಸಿ ಮಾಡಿ. ತುಪ್ಪ ಹಾಕಿ ನಂತರ ಸಂಪೂರ್ಣ ಪಿಜ್ಜಾ ಬೇಯಲು ಇಡಿ. ಚೀಸ್ ಕರಗುವ ತನಕ ಬೇಯಿಸಿ, ತೆಗೆಯಿರಿ. ಈಗ ನಿಮ್ಮ ನೆಚ್ಚಿನ ರಾಗಿ ಪಿಜ್ಜಾ ರೆಡಿ ಇದೆ. ಸವಿಯಿರಿ.
ಇದನ್ನೂ ಓದಿ: ಸ್ತ್ರೀಯರ ಎದೆಯ ಮೇಲೆ ದದ್ದುಗಳು ಉಂಟಾಗುವುದೇಕೆ? ಇದಕ್ಕೆ ಪರಿಹಾರ ಏನು?
ತೂಕ ನಷ್ಟಕ್ಕೆ ರಾಗಿ ಪಿಜ್ಜಾ ಸಹಕಾರಿ
ತೂಕ ನಷ್ಟದ ಯೋಜನೆಯವರಿಗೆ ರಾಗಿ ಪಿಜ್ಜಾ ಉತ್ತಮ ಆಹಾರ. ರಾಗಿ ಕಡಿಮೆ ಕ್ಯಾಲೋರಿ ಹೊಂದಿದೆ. ತರಕಾರಿಗಳು, ಇದು ಫೈಬರ್ ಮತ್ತು ಕಾರ್ಬೋಹೈಡ್ರೇಟ್ ಹೊಂದಿದೆ. ರಾಗಿಯಲ್ಲಿ ಹೆಚ್ಚಿನ ಪ್ರಮಾಣದ ಫೈಬರ್ ಇದೆ. ಇದು ಮಧುಮೇಹ ತಡೆಗೆ ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ