Breakfast: ಇದು ಆರೋಗ್ಯಕ್ಕೂ ಹಿತ, ರುಚಿಗೂ ಬೆಸ್ಟ್; ಬೆಳಗಿನ ತಿಂಡಿಗೆ ಮಾಡಿ ಸ್ಪ್ರೌಟ್ಸ್ ಭೇಲ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸ್ಪ್ರೌಟ್ಸ್ ಭೇಲ್ ತಯಾರಿಸಲು ಬಳಸುವ ಎಲ್ಲಾ ಪದಾರ್ಥಗಳು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತವೆ. ಸ್ಪ್ರೌಟ್ಸ್ ಭೇಲ್ ಖಾದ್ಯ ಸೇವನೆಯು ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ನೀವು ಬೊಜ್ಜು ಕರಗಿಸಲು ಮನಸ್ಸು ಮಾಡಿದ್ದರೆ, ಬೆಳಗ್ಗೆ ನಿಯಮಿತವಾಗಿ ವ್ಯಾಯಾಮ ಮಾಡಿ. ಮತ್ತು ಸ್ಪ್ರೌಟ್ಸ್ ಭೇಲ್ ಸೇವಿಸಿ.

ಮುಂದೆ ಓದಿ ...
  • Share this:

    ಬೆಳಗಿನ ಉಪಹಾರಕ್ಕೆ (Morning Breakfast) ಯಾವಾಗಲೂ ಆರೋಗ್ಯಕರ (Health) ಆಯ್ಕೆ ಮಾಡಿಕೊಳ್ಳಬೇಕೆಂದು ಹೇಳಲಾಗುತ್ತದೆ. ತಜ್ಞರು ಸಹ ಬೆಳಗಿನ ತಿಂಡಿಯನ್ನು ತಪ್ಪದೇ ಮಾಡುವಂತೆ ಸಲಹೆ ನೀಡುತ್ತಾರೆ. ಬೆಳಗಿನ ತಿಂಡಿಯಲ್ಲಿ ಆರೋಗ್ಯರ ಮಿಲೆಟ್ಸ್ ಹಾಗೂ ರೊಟ್ಟಿ, ಬೇಳೆಕಾಳು ಹಾಗೂ ಮೊಳಕೆ ಕಾಳುಗಳ (Sprouts) ಸೇವನೆ ಮಾಡುವುದು, ತರಕಾರಿ ಸೂಪ್ ಸೇವಿಸುವುದು, ಸಾಕಷ್ಟು ಪೋಷಕಾಂಶಗಳನ್ನು (Nutrients) ದೇಹಕ್ಕೆ (Body) ನೀಡುತ್ತದೆ. ಇದು ನಿಮ್ಮನ್ನು ಆರೋಗ್ಯಕರವಾಗಿ ಇರಿಸಲು ಸಹಾಯ ಮಾಡುತ್ತದೆ. ಪೋಷಕಾಂಶ-ಭರಿತ ಸ್ಪ್ರೌಟ್ಸ್ ಭೇಲ್ ತಿಂದು ನೋಡಿ. ಇದು ಆರೋಗ್ಯಕರ ಆಯ್ಕೆಯಾಗಿದೆ. ಯಾರೆಲ್ಲಾ ಡಯಟ್ ಹಾಗೂ ಬೊಜ್ಜು ಕರಗಿಸಲು ಕಸರತ್ತು ಮಾಡ್ತಿದ್ದಾರೋ, ಅವರೆಲ್ಲರಿಗೂ ಸ್ಪ್ರೌಟ್ಸ್ ಭೇಲ್ ಆರೋಗ್ಯಕರ ಆಯ್ಕೆ ಆಗಿದೆ.


    ಬೆಳಗಿನ ತಿಂಡಿಗೆ ಆರೋಗ್ಯಕರ ಸ್ಪ್ರೌಟ್ಸ್ ಭೇಲ್ ಖಾದ್ಯ ಸೇವಿಸಿ


    ಸ್ಪ್ರೌಟ್ಸ್ ಭೇಲ್ ತಯಾರಿಸಲು ಬಳಸುವ ಎಲ್ಲಾ ಪದಾರ್ಥಗಳು ಒಟ್ಟಾರೆ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತವೆ. ಅವುಗಳು ಪ್ರೋಟೀನ್, ಫೈಬರ್, ವಿಟಮಿನ್‌ ಮತ್ತು ಉತ್ಕರ್ಷಣ ನಿರೋಧಕಗಳಿಂದ ಕೂಡಿವೆ. ಸ್ಪ್ರೌಟ್ಸ್ ಭೇಲ್ ಸೇವನೆ ಮೂಲಕ ನಿಮ್ಮ ದಿನವನ್ನು ಶುರು ಮಾಡುವುದು, ದೇಹಕ್ಕೆ ಶಕ್ತಿ ನೀಡುತ್ತದೆ.


    ದೇಹವು ಉಲ್ಲಾಸ ಮತ್ತು ಹೊಟ್ಟೆ ಭಾರ ಹಾಗೂ ಹೊಟ್ಟೆಯುಬ್ಬರ ಸಮಸ್ಯೆ ಇರುವುದಿಲ್ಲ. ಸ್ಪ್ರೌಟ್ಸ್ ಭೇಲ್ ಖಾದ್ಯ ಸೇವನೆಯು ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಲು ಸಹಾಯ ಮಾಡುತ್ತದೆ. ನೀವು ಬೊಜ್ಜು ಕರಗಿಸಲು ಮನಸ್ಸು ಮಾಡಿದ್ದರೆ, ಬೆಳಗ್ಗೆ ನಿಯಮಿತವಾಗಿ ವ್ಯಾಯಾಮ ಮಾಡಿ. ಮತ್ತು ಸ್ಪ್ರೌಟ್ಸ್ ಭೇಲ್ ಸೇವಿಸಿ.




    ಮೊಳಕೆ ಕಾಳು ಅಂದ್ರೆ ಸ್ಪ್ರೌಟ್ಸ್ ಭೇಲ್ ರೆಸಿಪಿ


    ಬೇಕಾಗುವ ಸಾಮಗ್ರಿಗಳು


    ಮೊಳಕೆಯೊಡೆದ ಹೆಸರುಕಾಳು, ಹಸಿ ಗೋವಿನ ಜೋಳ, ನೆನೆಸಿದ ಕಡಲೆಕಾಳು, ಸೌತೆಕಾಯಿ, ಟೊಮೆಟೊ, ಕ್ಯಾರೆಟ್, ಮೊಸರು, ಉಪ್ಪು, ಮಸಾಲೆ, ನಿಂಬೆ ರಸ, ಕರಿಬೇವು ಮತ್ತು ಕೊತ್ತಂಬರಿ ಸೊಪ್ಪು ಬೇಕು.


    ಸ್ಪ್ರೌಟ್ಸ್ ಭೇಲ್ ಖಾದ್ಯ ತಯಾರಿಸುವುದು ಹೇಗೆ?


    ಒಂದು ದೊಡ್ಡ ಬಟ್ಟಲು ತೆಗೆದುಕೊಳ್ಳಿ. ಅದಕ್ಕೆ ಮೊಳಕೆಯೊಡೆದ ಹೆಸರುಕಾಳು, ಹಸಿ ಗೋವಿನ ಜೋಳ, ನೆನೆಸಿದ ಕಡಲೆಕಾಳು, ಸೇರಿಸಿ. ಜೊತೆಗೆ ಸೌತೆಕಾಯಿ, ಟೊಮೆಟೊ ಮತ್ತು ಕ್ಯಾರೆಟ್ ಅನ್ನು ಸಣ್ಣದಾಗಿ ಕತ್ತರಿಸಿ ಕಾಳುಗಳಿಗೆ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ.


    ನಂತರ ಇದಕ್ಕೆ ಮೊಸರು, ಉಪ್ಪು, ಚಾಟ್ ಮಸಾಲಾ ಮತ್ತು ನಿಂಬೆ ರಸ ಸೇರಿಸಿ. ಒಟ್ಟಿಗೆ ಮಿಶ್ರಣ ಮಾಡಿ. ಕೊನೆಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪಿನಿಂದ ಭೆಲ್ ಅನ್ನು ಅಲಂಕರಿಸಿ. ಸೇವಿಸಿ.


    ಸ್ಪ್ರೌಟ್ಸ್ ಭೇಲ್ ಏಕೆ ವಿಶೇಷವಾಗಿದೆ?


    ಪೋಷಕಾಂಶ ಭರಿತ ಪದಾರ್ಥಗಳ ಕಣಜ ಸ್ಪ್ರೌಟ್ಸ್ ಭೇಲ್


    ಮೊಳಕೆ ಕಾಳುಗಳ ಸೇವನೆಯಿಂದ ದೇಹದಲ್ಲಿ ಸಾಕಷ್ಟು ಪ್ರಮಾಣದ ರಕ್ತ ಉತ್ಪತ್ತಿಯಾಗುತ್ತದೆ. ಅಲ್ಲದೆ ಮೂಳೆಗಳನ್ನು ಗಟ್ಟಿಗೊಳಿಸುತ್ತದೆ. ಇದು ಪ್ರೋಟೀನ್, ಫೈಬರ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಅತ್ಯುತ್ತಮ ಮೂಲ.


    ಸಾಂದರ್ಭಿಕ ಚಿತ್ರ


    ಈ ಎಲ್ಲಾ ಪೋಷಕಾಂಶಗಳು ರಕ್ತದ ಸ್ಥಿರತೆ ಸಾಮಾನ್ಯವಾಗಿರಿಸುತ್ತದೆ. ಇದರಿಂದ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ದೂರವಾಗುತ್ತದೆ. ರಕ್ತದ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸುತ್ತದೆ.


    ಶೇಂಗಾ ಸೇವನೆ ಆರೋಗ್ಯಕ್ಕೆ ಮುಖ್ಯ


    ಕಡಲೆಕಾಯಿ ಪ್ರೋಟೀನ್, ಫೈಬರ್, ಫೋಲೇಟ್, ಮೆಗ್ನೀಸಿಯಮ್, ವಿಟಮಿನ್ ಎ ಮತ್ತು ತಾಮ್ರ ಸಮೃದ್ಧವಾಗಿದೆ. ಇದರ ಸೇವನೆಯು ಸಂತಾನೋತ್ಪತ್ತಿ ಮತ್ತು ಅಂತಃಸ್ರಾವಕ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ದೀರ್ಘಕಾಲ ಹೊಟ್ಟೆ ತುಂಬಿರುತ್ತದೆ.


    ಇದನ್ನೂ ಓದಿ: ಹಲಸಿನ ಹಣ್ಣಿನಿಂದ ಆಗುವ ಪ್ರಯೋಜನಗಳನ್ನು ಕೇಳ್ತಾ ಇದ್ರೆ, ಈಗ್ಲೇ ಪಕ್ಕಾ ತಿನ್ನೋಕೆ ಸ್ಟಾರ್ಟ್​ ಮಾಡ್ತೀರ!


    ನಿಯಮಿತ ಕ್ಯಾಲೋರಿ ಸೇವನೆಯು ಸೀಮಿತವಾಗಿರುತ್ತದೆ. ಹೀಗಾಗಿ ಇದು ತೂಕ ನಷ್ಟ, ಹೃದಯದ ಆರೋಗ್ಯ ಮತ್ತು ಮಧುಮೇಹದಲ್ಲಿ ಪ್ರಯೋಜನಕಾರಿಯಾಗಿದೆ. ಕ್ಯಾರೆಟ್ ಮತ್ತು ಸೌತೆಕಾಯಿ, ಲಿಂಬು ಪದಾರ್ಥಗಳ ಆರೋಗ್ಯ ವೃದ್ಧಿಸುತ್ತವೆ.

    Published by:renukadariyannavar
    First published: