ಬೆಳಗಿನ ತಿಂಡಿಗೆ (Morning Breakfast) ಎಲ್ಲರೂ ತಿನ್ನಬಹುದಾದ ರಾಗಿ ರಿಸೊಟ್ಟೊ ರುಚಿಕರ (Tasty) ತಿಂಡಿಯಾಗಿದೆ (Food). ರಾಗಿ (Ragi) ಹಲವು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಜೋಳ ಮತ್ತು ರಾಗಿ ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಆಹಾರದ ಫೈಬರ್‌ಗಳಿಂದ ತುಂಬಿದೆ. ಇದು ಬೆಳವಣಿಗೆ ಮತ್ತು ಅಭಿವೃದ್ಧಿ ಉತ್ತೇಜಿಸುತ್ತದೆ. ಮಧುಮೇಹವನ್ನು ನಿಯಂತ್ರಿಸುತ್ತದೆ. ಪಾಲಕ್ ಧೋಕ್ಲಾ ಕೂಡ ಬೆಳಗಿನ ತಿಂಡಿಗೆ ಆರೋಗ್ಯಕರ ಆಯ್ಕೆಯಾಗಿದೆ. ಇದು ಕಬ್ಬಿಣದ ಉಗ್ರಾಣವಾಗಿದೆ. ಪಾಲಕ್ ಸೊಪ್ಪು ಕಡಿಮೆ ಕಾರ್ಬೋಹೈಡ್ರೇಟ್ ಹೊಂದಿದೆ. ಫೈಬರ್‌ನಲ್ಲಿ ಸಮೃದ್ಧವಾಗಿದೆ. ಇದು ನಿಮ್ಮ ಜೀರ್ಣಕ್ರಿಯೆ ಚೆನ್ನಾಗಿರಿಸುತ್ತದೆ. ಪಾಲಕ್ ಆರೋಗ್ಯಕರ ಪೋಷಕಾಂಶ ಹೊಂದಿದೆ.
ರಾಗಿ ರಿಸೊಟ್ಟೊ ರೆಸಿಪಿ
ಬೇಕಾಗುವ ಪದಾರ್ಥಗಳು
ರಾಗಿ – 50 ಗ್ರಾಂ, ಈರುಳ್ಳಿ – 1/2 ಕಪ್, ಬೆಳ್ಳುಳ್ಳಿ – 4 ರಿಂದ 5 ಲವಂಗ, ಬೆಣ್ಣೆ – ಸ್ವಲ್ಪ, ಪಾರ್ಸ್ಲಿ – 5 ಗ್ರಾಂ, ಪಾರ್ಮ ಗಿಣ್ಣು – 30 ಗ್ರಾಂ, ಥೈಮ್ – 5 ಗ್ರಾಂ, ತಾಜಾ ಕೆನೆ – 50 ಗ್ರಾಂ , ಅಡುಗೆ ಎಣ್ಣೆ – 20 ಗ್ರಾಂ, ಭಾರತೀಯ ಶತಾವರಿ - 20 ಗ್ರಾಂ, ಬ್ರೊಕೊಲಿ - 30 ಗ್ರಾಂ. ಇದಲ್ಲದೆ, ನಿಮ್ಮ ಇಚ್ಛೆಯಂತೆ ಉಪ್ಪು, ಕರಿಮೆಣಸು ಸಂಪೂರ್ಣ, ಕೆಂಪು ಮೆಣಸಿನಕಾಯಿ ಬೇಕು.
ರಾಗಿ ರಿಸೊಟ್ಟೊ ತಯಾರಿಸುವ ವಿಧಾನ
ಜೋಳ ಮತ್ತು ರಾಗಿಯನ್ನು 8 ಗಂಟೆಗಳ ಕಾಲ ಪ್ರತ್ಯೇಕವಾಗಿ ನೆನೆಸಿ. ನಂತರ ಜೋಳ ಮತ್ತು ರಾಗಿಯನ್ನು ಪ್ರತ್ಯೇಕವಾಗಿ ಕುದಿಸಿ. ಬಾಣಲೆಗೆ ಬೆಣ್ಣೆ ಮತ್ತು ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಕತ್ತರಿಸಿದ ಈರುಳ್ಳಿ ಮತ್ತು ಬೆಳ್ಳುಳ್ಳಿ ಸೇರಿಸಿ. ಫ್ರೈ ಮಾಡಿ. ನಂತರ ಬೇಯಿಸಿದ ಜೋಳ ಮತ್ತು ಬಜ್ರಾ ಸೇರಿಸಿ.
ನೀರು ಸ್ವಲ್ಪ ಸ್ವಲ್ಪ ಸೇರಿಸಿ ಮತ್ತು ಬೇಯಿಸಿ. ತಾಜಾ ಥೈಮ್, ಆವಿಯಲ್ಲಿ ಬೇಯಿಸಿದ ಕೋಸುಗಡ್ಡೆ ಮತ್ತು ಶತಾವರಿ ಸೇರಿಸಿ. ಇದಕ್ಕೆ ಪಾರ್ಮೆಸನ್ ಚೀಸ್ ಮತ್ತು ತಾಜಾ ಕೆನೆ ಸೇರಿಸಿ. ಸೊಪ್ಪಿನೊಂದಿಗೆ ಉಪ್ಪು, ಮೆಣಸು ಪುಡಿ ಸೇರಿಸಿ. ತುರಿದ ಪಾರ್ಮೆಸನ್ ಚೀಸ್ ಮತ್ತು ಟ್ಯೂಲ್ ಹಾಕಿ ಅಲಂಕರಿಸಿ. ಬಿಸಿಯಾಗಿ ತಿನ್ನಿ. ಬೆಳಗಿನ ತಿಂಡಿಗೆ ರುಚಿಕರ ತಿಂಡಿಯಾಗಿದೆ.
ಪಾಲಕ್ ಧೋಕ್ಲಾ ರೆಸಿಪಿ
ರವೆ - 300 ಗ್ರಾಂ, ಮೊಸರು - 100 ಗ್ರಾಂ, ಪಾಲಕ - 150 ಗ್ರಾಂ, ಹಸಿರು ಮೆಣಸಿನಕಾಯಿ – 5, ಕರಿಬೇವಿನ ಎಲೆಗಳು – 10, ಬೆಳ್ಳುಳ್ಳಿ ಎಸಳು, ಲವಂಗ, ಶುಂಠಿ - 2 ತುಂಡುಗಳು, ರೈ - 1 ಟೀಸ್ಪೂನ್, ಎಳ್ಳು ಬೀಜಗಳು - 1 ಟೀಸ್ಪೂನ್, ಸಕ್ಕರೆ - 2 ಟೀಸ್ಪೂನ್, ಆಲಿವ್ ಎಣ್ಣೆ – ಅಗತ್ಯವಿರುವಂತೆ, ಕಲ್ಲು ಉಪ್ಪು – ಅಗತ್ಯವಿರುವಂತೆ, ಅಡಿಗೆ ಸೋಡಾ - 1 ಟೀಸ್ಪೂನ್ ಬೇಕು.
ಪಾಲಕ್ ಧೋಕ್ಲಾ ಮಾಡುವ ವಿಧಾನ
ಬೌಲ್‌ನಲ್ಲಿ ರವೆ ಮತ್ತು ಮೊಸರು ಮಿಶ್ರಣ ಮಾಡಿ. ದಪ್ಪ ಪೇಸ್ಟ್ ಮಾಡಿ. ಧೋಕ್ಲಾಕ್ಕೆ ರವೆ ಹಿಟ್ಟನ್ನು 40 ನಿಮಿಷ ಹಾಗೆ ಇರಿಸಿ. ಪಾಲಕವನ್ನು ಕತ್ತರಿಸಿ ಪ್ರತ್ಯೇಕಿಸಿ. ಈಗ ಮಿಕ್ಸಿ ಜಾರ್ ಗೆ ಹಸಿರು ಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಮತ್ತು ಪಾಲಕವನ್ನು ಸೇರಿಸಿ ಪೇಸ್ಟ್ ತಯಾರಿಸಿ. ರವೆ ಮತ್ತು ಮೊಸರು ಹಿಟ್ಟಿನಲ್ಲಿ ಚೆನ್ನಾಗಿ ಮಿಶ್ರಣ ಮಾಡಿ.
ರುಚಿಗೆ ತಕ್ಕಂತೆ ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಮತ್ತು ಅಡಿಗೆ ಸೋಡಾ ಸೇರಿಸಿ . ಸ್ಟೀಮರ್ ಅನ್ನು ತಯಾರಿಸಿ ಮತ್ತು ಅದರ ಮೇಲೆ ಆಲಿವ್ ಎಣ್ಣೆಯನ್ನು ಅನ್ವಯಿಸಿ ಬಿಸಿ ಮಾಡಿ. 20 ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಬೇಯಿಸಿ. ಧೋಕ್ಲಾ ಸಿದ್ಧ. ಇದಕ್ಕೆ ಕೆಂಪು ಮೆಣಸಿನಕಾಯಿ ಪಉಡಿ ಸಿಂಪಡಿಸಿ. ಸಣ್ಣ ತುಂಡುಗಳಾಗಿ ಕತ್ತರಿಸಿ.
ಇದನ್ನೂ ಓದಿ: ಊಟ ಮಾಡಲು ಹಿಂದೇಟು ಹಾಕೋ ಮಕ್ಕಳಿಗಾಗಿ ತಯಾರಿಸಿ ಈ ಖಾದ್ಯ
ಧೋಕ್ಲಾ ಚೋಕಾವನ್ನು ತಯಾರಿಸಲು ಬಾಣಲೆಗೆ ಆಲಿವ್ ಎಣ್ಣೆ ಹಾಕಿ. ಚಮಚ ಸಾಸಿವೆ ಮತ್ತು ಎಳ್ಳು ಸೇರಿಸಿ ಸಿಡಿಸಿ. ಕೊನೆಗೆ ಕರಿಬೇವಿನ ಸೊಪ್ಪು ಹಾಕಿ ಒಂದು ನಿಮಿಷ ಫ್ರೈ ಮಾಡಿ ಧೋಕ್ಲಾ ಹಾಕಿ. ನಂತರ ನಿಮ್ಮಿಷ್ಟದ ಚಟ್ನಿ ಜೊತೆ ಸವಿಯಿರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ