ಬೆಳಗಿನ ಉಪಹಾರದಲ್ಲಿ (Morning Breakfast) ಇಂದು ನಾವು ಓಟ್ ಮೀಲ್ (Oat Meal) ಖಾದ್ಯ ಹಾಗೂ ಓಟ್ ಮೀಲ್ ನೀರು (Oat Meal Water) ಹೇಗೆ ಮಾಡುವುದು ಅಂತಾ ನೋಡೋಣ. ನೀವು ಓಟ್ ಮೀಲ್ ತಿಂದಿರಬಹುದು. ದಿನವೂ ಬೆಳಗ್ಗಿನ ತಿಂಡಿಗೆ ಎಲ್ಲಾ ರೀತಿಯ ಪದಾರ್ಥ ತಿಂದಿರುವ ನೀವು ಒಮ್ಮೆ ಓಟ್ ಮೀಲ್ ವಾಟರ್ ರೆಸಿಪಿ (Recipe) ಟ್ರೈ ಮಾಡಿ. ಇದು ದೀರ್ಘಕಾಲ ಹಸಿವಾಗದಂತೆ ತಡೆಯುತ್ತದೆ. ಆರೋಗ್ಯಕ್ಕೆ (Health) ಅನೇಕ ಪ್ರಯೋಜನ (Health Benefits)ನೀಡುತ್ತದೆ. ಜೊತೆಗೆ ಆಗಾಗ್ಗೆ ತಿನ್ನುವುದನ್ನು ತಪ್ಪಿಸುತ್ತದೆ. ಓಟ್ಸ್ ಸೇವನೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ಇದು ಆರೋಗ್ಯಕರ ಪದಾರ್ಥ ಅಂತಾರೆ ತಜ್ಞರು. ತುಂಬಾ ಜನರು ತಮ್ಮ ಡಯಟ್ ನಲ್ಲಿ ಓಟ್ ಮೀಲ್ ಸೇರಿಸುತ್ತಾರೆ.
ಬೆಳಗಿನ ತಿಂಡಿಗೆ ಓಟ್ ಮೀಲ್ ಖಾದ್ಯ
ಅಂದ ಹಾಗೆ ವಿವಿಧ ಆರೋಗ್ಯ ಪ್ರಯೋಜನ ನೀಡುವ ಓಟ್ ಮೀಲ್ ನೀರನ್ನು, ನೀರು ಅಥವಾ ಹಾಲಿನಲ್ಲಿ ತಯಾರಿಸಲಾಗುತ್ತದೆ. ನೀರಿನಿಂದ ಮಾಡಿದರೆ ಇದಕ್ಕೆ ನೀವು ಸಿಹಿ ಮತ್ತು ಉಪ್ಪು ಎರಡೂ ರೀತಿಯಲ್ಲೂ ಮಾಡಿ ಸೇವನೆ ಮಾಡಬಹುದು. ಒಣ ಹಣ್ಣುಗಳನ್ನು ಓಟ್ ಮೀಲ್ ವಾಟರ್ ಗೆ ಸೇರಿಸಿದರೆ ಅದರ ಪೌಷ್ಟಿಕಾಂಶದ ಮೌಲ್ಯ ಹೆಚ್ಚುತ್ತದೆ.
ಜೊತೆಗೆ ನೀವು ಓಟ್ ಮೀಲ್ ವಾಟರ್ ನಲ್ಲಿ ನಿಮ್ಮಿಷ್ಟದ ವಿವಿಧ ಹಣ್ಣುಗಳನ್ನು ಸಹ ಸೇರಿಸಬಹುದು. ಇದನ್ನು ಆರೋಗ್ಯಕರವಾಗಿ ಮಾಡಬಹುದು. ಜನರು ಸಾಮಾನ್ಯವಾಗಿ ಉಪಹಾರಕ್ಕಾಗಿ ಗಂಜಿ ಸೇವಿಸುತ್ತಾರೆ. ಇಂದು ನಾವು ಓಟ್ ಮೀಲ್ ವಾಟರ್ ಖಾದ್ಯದ ಬಗ್ಗೆ ತಿಳಿಯೋಣ.
ಓಟ್ ಮೀಲ್ ಪೌಷ್ಟಿಕಾಂಶದ ಮೌಲ್ಯ ಎಷ್ಟಿರುತ್ತದೆ ಎಂಬುದನ್ನು ನೀವು ಮೊದಲು ತಿಳಿಯಬೇಕಾಗುತ್ತದೆ. ಇದರಲ್ಲಿ ಕ್ಯಾಲೋರಿ 116, ಕಾರ್ಬೋಹೈಡ್ರೇಟ್ ಗಳು 20 ಗ್ರಾಂ, ಕೊಬ್ಬು 2 ಗ್ರಾಂ, ಪ್ರೋಟೀನ್ 4 ಗ್ರಾಂ, ಫೈಬರ್ 3 ಗ್ರಾಂ ಇದೆ. ಹಾಗಾದ್ರೆ ಓಟ್ ಮೀಲ್ ವಾಟರ್ ಪಾಕವಿಧಾನವನ್ನು ತಿಳಿಯೋಣ.
ಓಟ್ ಮೀಲ್ ನೀರು ರೆಸಿಪಿ
ಬೇಕಾಗುವ ಪದಾರ್ಥಗಳು
ಓಟ್ಮೀಲ್ನ ಬೌಲ್, ಎರಡು ಗ್ಲಾಸ್ ನೀರು, ಜೇನುತುಪ್ಪ ಒಂದು ಚಮಚ, ಸೋಂಪು ಪೌಡರ್, ಸಣ್ಣ ಏಲಕ್ಕಿ ಪುಡಿ, ದಾಲ್ಚಿನ್ನಿ ಪುಡಿ ಬೇಕು.
ಮೊದಲು ಅರ್ಧ ಬೌಲ್ ಓಟ್ ಮೀಲ್ ಅನ್ನು ಎರಡು ಗ್ಲಾಸ್ ನೀರಿನಲ್ಲಿ ನೆನೆಸಿಡಿ. ನಂತರ ರಾತ್ರಿಯಿಡೀ ನೆನೆಯಲು ಬಿಡಿ. ಬೆಳಗ್ಗೆ ಹೊತ್ತಿಗೆ ಓಟ್ ಗಂಜಿ ಮೃದುವಾಗಿರುತ್ತದೆ. ರಾತ್ರಿಯಿಡೀ ನೆನೆಸಿದ ನಂತರ ಇದನ್ನು ಬೆಳಿಗ್ಗೆ ಶೋಧಿಸಿ.
ಪರಿಮಳ ಹೆಚ್ಚಿಸಲು ನೀವು ಯಾವುದೇ ಸಾರ ಸೇರಿಸಬಹುದು. ನಂತರ ಒಂದು ಲೋಟದಲ್ಲಿ ಓಟ್ಮೀಲ್ ನೀರು ತೆಗೆದುಕೊಂಡು ಅದರಲ್ಲಿ ಜೇನುತುಪ್ಪ, ಏಲಕ್ಕಿ ಪುಡಿ ಮತ್ತು ಸೋಂಪು ಪುಡಿಯನ್ನು ರುಚಿಗೆ ತಕ್ಕಂತೆ ಹಾಕಿ ಮಿಶ್ರಣ ಮಾಡಿ. ಈಗ ಓಟ್ ಮೀಲ್ ವಾಟರ್ ಸಿದ್ಧವಾಗಿದೆ. ನಿಮ್ಮಿಷ್ಟದ ಹಣ್ಣು, ಡ್ರೈ ಫ್ರೂಟ್ಸ್ ಹಾಕಿ ಸವಿಯಿರಿ.
ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ
ಓಟ್ ಮೀಲ್ ವಾಟರ್ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ. ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸುತ್ತದೆ. ಹೃದಯವನ್ನು ಆರೋಗ್ಯವಾಗಿರಿಸುತ್ತದೆ.
ಇದನ್ನೂ ಓದಿ: ಹೃದಯಾಘಾತಕ್ಕೂ ಮುನ್ನಈ ಲಕ್ಷಣಗಳು ಕಾಣಿಸಿಕೊಳ್ಳುತ್ತಂತೆ, ಎಚ್ಚರ!
ರಕ್ತದ ಸಕ್ಕರೆ ನಿಯಂತ್ರಿಸುತ್ತದೆ
ಕಾರ್ಬೋಹೈಡ್ರೇಟ್ ಸೇವಿಸಿದ ನಂತರ ದೇಹದ ಮೇದೋಜ್ಜೀರಕ ಗ್ರಂಥಿಯಿಂದ ಇನ್ಸುಲಿನ್ ಬಿಡುಗಡೆಯಾಗುತ್ತದೆ. ದೇಹವು ಬಹಳಷ್ಟು ಬಳಲುತ್ತದೆ. ಕಾರ್ಬೋಹೈಡ್ರೇಟ್‌ಗಳನ್ನು ಫೈಬರ್ ಜೊತೆ ಸೇವಿಸಿದ್ರೆ ಅಂದರೆ ಓಟ್ ಮೀಲ್ ನೀರಿನಲ್ಲಿ ಬೀಟಾ ಗ್ಲುಕನ್ ರೂಪದಲ್ಲಿ ಸೇವಿಸುವುದು. ಇದು ದೇಹದಲ್ಲಿರುವ ಕಾರ್ಬೋಹೈಡ್ರೇಟ್ ಗಳನ್ನು ನಿಧಾನವಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತವೆ. ದೇಹದ ಸಕ್ಕರೆ ಮಟ್ಟ ನಿಯಂತ್ರಣದಲ್ಲಿರುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ