ನೀವು ಚೀಸ್ (Cheese) ತುಂಬಾ ಇಷ್ಟ ಪಡುವವರಾದರೆ ಬೆಳಗಿನ ತಿಂಡಿಗೆ (Morning Breakfast) ಚೀಸ್ ಸ್ಯಾಂಡ್‌ವಿಚ್ (Sandwitch) ಮಾಡಿ ಸೇವನೆ ಮಾಡಿ. ಚೀಸ್ ಸ್ಯಾಂಡ್ ವಿಚ್ ನ್ನು ಅತ್ಯಂತ ತ್ವರಿತವಾಗಿ ಸೇವನೆ ಮಾಡಿ. ಚೀಸ್ ಸ್ಯಾಂಡ್ ವಿಚ್ ಎಲ್ಲರಿಗೂ ಇಷ್ಟವಾಗುತ್ತದೆ. ಅದರಲ್ಲೂ ಮಕ್ಕಳು ಚೀಸ್ ನ್ನು ಹೆಚ್ಚು ಇಷ್ಟ ಪಟ್ಟು ಮಾಡ್ತಾರೆ. ನೀವು ಸ್ಯಾಂಡ್ ವಿಚ್ ನ್ನು ಸರಳವಾಗಿ ಸೇವನೆ ಮಾಡಿ. ಬೆಣ್ಣೆ ಸವರಿದ ಬ್ರೆಡ್ (Bread) ಸ್ಲೈಸ್ ಗಳ ನಡುವೆ ಚೀಸ್ ಹಾಕಿ ಮಾಡಿದ ಸ್ಯಾಂಡ್ ವಿಚ್ ತುಂಬಾ ರುಚಿ ಹಾಗೂ ಲಘು ಆಹಾರವಾಗಿದೆ. ಚೀಸ್ ಕರಗುವ ತನಕ ಈ ಸ್ಯಾಂಡ್‌ವಿಚ್ ಗಳನ್ನು ಸುಡಲಾಗುತ್ತದೆ. ಬಿಸಿ ಮಾಡಲಾಗುತ್ತದೆ.
ಬೆಳಗಿನ ತಿಂಡಿಗೆ ಚೀಸ್ ಸ್ಯಾಂಡ್ ವಿಚ್ ರೆಸಿಪಿ
ಪ್ಯಾಂಟ್ರಿ ಸ್ಟೇಪಲ್ಸ್ ಜೊತೆ ಕೇವಲ 10 ನಿಮಿಷದಲ್ಲಿ ಸರಳ ಹಾಗೂ ಸುಲಭವಾಗಿ ಚೀಸ್ ಸ್ಯಾಂಡ್‌ವಿಚ್ ಹೇಗೆ ತಯಾರಿಸಬೇಕು ಎಂದು ನೋಡೋಣ. ಮನೆಯಲ್ಲಿ ಸುಟ್ಟ ಚೀಸ್ ಸ್ಯಾಂಡ್‌ವಿಚ್ ತಯಾರಿಸುವುದು ಸುಲಭವಾಗಿದೆ.
ಪದಾರ್ಥಗಳನ್ನು ಸ್ವಲ್ಪಮಟ್ಟಿಗೆ ಬದಲಾಯಿಸಿ. ಸ್ಯಾಂಡ್ ವಿಚ್ ಗೆ ತರಕಾರಿ, ಮಸಾಲೆ, ಗಿಡಮೂಲಿಕೆ ಮತ್ತು ಸುಗಂಧ ದ್ರವ್ಯ ಹಾಕಲಾಗುತ್ತದೆ. ಸ್ಯಾಂಡ್ ವಿಚ್ ಗಾಗಿ ಚೀಸ್ ಬಳಸುವುದು ರುಚಿ ಹೆಚ್ಚಿಸುತ್ತದೆ.
ತರಕಾರಿ, ಬೇಯಿಸಿದ ಮಾಂಸ, ಹುರಿದ ಮೊಟ್ಟೆ, ಬೇಯಿಸಿದ ಮೊಟ್ಟೆ ಮತ್ತು ಮೇಯನೇಸ್ನಂತಹ ಪದಾರ್ಥ ಸೇರಿಸಿದರೆ ರುಚಿ ಹೆಚ್ಚುತ್ತದೆ. ಆರೋಗ್ಯವೂ ಚೆನ್ನಾಗಿರುತ್ತದೆ.
ಚೀಸ್ ಸ್ಯಾಂಡ್ವಿಚ್ ಮಾಡುವ ವಿಧಾನ
ಅತ್ಯುತ್ತಮ ಸುಟ್ಟ ಚೀಸ್ ಸ್ಯಾಂಡ್ ವಿಚ್ ತಯಾರಿಸಲು ಗ್ರಿಡಲ್ ಅಥವಾ ಫ್ರೈಯಿಂಗ್ ಪ್ಯಾನ್‌ನಲ್ಲಿ ಎರಡು ಸ್ಯಾಂಡ್ ವಿಚ್ ತೆಗೆದುಕೊಂಡು ಅದರಲ್ಲಿ ಹಾಕಿ ಚೆನ್ನಾಗಿ ಬೇಯಿಸಿ. ಸ್ಯಾಂಡ್‌ವಿಚ್ ಟೋಸ್ಟರ್‌ನಲ್ಲಿ ಯೂ ನೀವು ಬ್ರೆಡ್ ಸ್ಲೈಸ್ ಗಳನ್ನು ಬಿಸಿ ಮಾಡಬಹುದು.
ನಂತರ ಬಿಸಿ ಪ್ಯಾನ್ ಗೆ 1 ರಿಂದ 2 ಟೀ ಚಮಚ ಬೆಣ್ಣೆ ಸೇರಿಸಿ ಮತ್ತು ಅದನ್ನು ಕರಗಿಸಿ. ಅದು ಕರಗಿದಾಗ ಒಂದು ಚಾಕು ತೆಗೆದುಕೊಂಡು ಸುತ್ತಲೈ ಹರಡಿ. ಕರಗಿದ ಬೆಣ್ಣೆಯ ಮೇಲೆ ಬ್ರೆಡ್ ಚೂರು ಇರಿಸಿ.
ಮೃದುವಾದ ಬೆಣ್ಣೆಯನ್ನು ಚೂರುಗಳ ಮೇಲೆ ಸ್ಮೀಯರ್ ಮಾಡಿ. ಬೆಣ್ಣೆಯು ಮೃದುವಾಗಿರದೇ ಹೋದರೆ ನೀವು ಅದನ್ನು ಬಿಸಿ ಪ್ಯಾನ್ ಗೆ ಕೂಡ ಸೇರಿಸಬಹುದು. ನೀವು ಇಷ್ಟ ಪಡುವಷ್ಟು ಬೆಣ್ಣೆ ಬಳಕೆ ಮಾಡಬಹುದು.
ಬ್ರೆಡ್ ಸ್ಲೈಸ್ ಗಳನ್ನು ಎರಡೂ ಸ್ಲೈಸ್ ಗಳ ಒಂದು ಬದಿಯಲ್ಲಿ ಗೋಲ್ಡನ್ ಆಗುವವರೆಗೆ ಟೋಸ್ಟ್ ಮಾಡಿ. ಒಂದನ್ನು ತಿರುಗಿಸಿ ಮತ್ತು 2 ಚೀಸ್ ಸ್ಲೈಸ್ ಗಳು ಅಥವಾ ತುರಿದ ಚೀಸ್ ಹಾಕಿ ಚೆನ್ನಾಗಿ ಲೇಪನ ಮಾಡಿ.
ಈಗ ನಿಮ್ಮಿಷ್ಟದ ಕರಿಮೆಣಸು, ಕೆಂಪು ಮೆಣಸಿನಕಾಯಿ, ಓರೆಗಾನೊ, ಈರುಳ್ಳಿ, ಟೊಮೆಟೋ, ದಪ್ಪ ಮೆನಸಿಣಕಾಯಿ ಬಳಕೆ ಮಾಡಿ. ಇದಕ್ಕಾಗಿ ಚೀಸ್ ಮೇಲೆ ಗೋಲ್ಡನ್ ಟೋಸ್ಟ್ ಮಾಡಿದ ಭಾಗ ಇರಿಸಿ. ಹುರಿದ ಬಿಸಿ ಬ್ರೆಡ್ ಮೇಲೆ ಚೀಸ್ ಹಾಕಿ. ಚೀಸ್ ವೇಗವಾಗಿ ಕರಗಲು ಇದು ತುಂಬಾ ಚೆನ್ನಾಗಿ ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮುಖದ ತ್ವಚೆ ಸುಂದರವಾಗಲಿ ಅಂತ ಅಡುಗೆ ಸೋಡಾ ಬಳಸುತ್ತೀರಾ? ಹಾಗಿದ್ರೆ ಇದು ಎಷ್ಟು ಸೇಫ್?
ಪ್ಯಾನ್ಗೆ ಸ್ವಲ್ಪ ಹೆಚ್ಚು ಬೆಣ್ಣೆ ಸೇರಿಸಿ. ಒಂದು ಚಾಕು ಜೊತೆ ಫ್ಲಿಪ್ ಮಾಡಿ ಮತ್ತು ಚೀಸ್ ಕರಗುವ ತನಕ ಕಡಿಮೆ ಶಾಖದಲ್ಲಿ ಎರಡೂ ಬದಿ ರೋಸ್ಟ್ ಮಾಡಿ. ಈಗ ನಿಮ್ಮ ಇಷ್ಟದ ಚೀಸ್ ಸ್ಯಾಂಡ್‌ವಿಚ್ ರೆಡಿ. ನೀವು ಇದನ್ನು ಬಿಸಿಯಾಗಿ ನೆಚ್ಚಿನ ಸಾಸ್ ಅಥವಾ ಚೆಟ್ನಿ ಜೊತೆ ಸವಿಯಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ