ಅದು ಸೂಪ್ ಇರಬಹುದು, ತಿಂಡಿ (Breakfast) ಆಗಿರಬಹುದು, ಕಾಳು, ಹಣ್ಣುಗಳು, ತರಕಾರಿಗಳ ಸಲಾಡ್ (Vegetable Salad) ಇರಬಹುದು ಎಲ್ಲದರಲ್ಲೂ ಕೋಸುಗಡ್ಡೆ ಬಳಕೆ ಮಾಡಲಾಗುತ್ತದೆ. ಕೋಸುಗಡ್ಡೆ (Cabbage Recipe) ಒಂದು ಪೋಷಕಾಂಶ ಸಮೃದ್ಧ ಆಹಾರ ಪದಾರ್ಥವಾಗಿದೆ. ಕೋಸುಗಡ್ಡೆಯನ್ನು ವಿವಿಧ ತಿಂಡಿಗಳ ಜೊತೆ ತಿನ್ನಲು ಕೊಡುತ್ತಾರೆ. ಕೋಸುಗಡ್ಡೆಯನ್ನು ವಿವಿಧ ಖಾದ್ಯಗಳಲ್ಲಿ ಬಳಕೆ ಮಾಡಲಾಗುತ್ತದೆ. ಪ್ರತಿಯೊಂದು ಖಾದ್ಯದಲ್ಲಿ ಎಲೆಕೋಸು ಇದ್ದೇ ಇರುತ್ತದೆ. ಅದು ಆಹಾರವನ್ನು ಹೆಚ್ಚು ರುಚಿಕರ ಮತ್ತು ವರ್ಣಮಯವಾಗಿಸುತ್ತದೆ. ಈ ಸೂಪರ್‌ಫುಡ್ ನ್ನು ಹಸಿರು ಎಲೆಗಳ ತರಕಾರಿಗಳು, ಕಚ್ಚಾ, ಬೇಯಿಸಿ, ಹುರಿದ ಅಥವಾ ಸ್ಟಫಿಂಗ್‌ನಂತೆ ಸೇರಿಸಿ ಸೇವನೆ ಮಾಡುವುದು ರೂಢಿಯಲ್ಲಿದೆ.
ಬೆಳಗಿನ ತಿಂಡಿಗೆ ಕೋಸುಗಡ್ಡೆಯ ವಿವಿಧ ರೆಸಿಪಿಗಳು
ಗರಿಗರಿಯಾದ ಎಲೆಕೋಸನ್ನು ಜನರು ಸಲಾಡ್ ಮತ್ತು ಅಲಂಕಾರಕ್ಕೆ ಬಳಕೆ ಮಾಡಲಾಗುತ್ತದೆ. ಎಲೆಕೋಸು ಶಕ್ತಿ ವರ್ಧಕವಾಗಿದೆ. ನಿಯಮಿತ ಎಲೆಕೋಸು ಸೇವನೆ ಮಾಡಿದರೆ ಇದು ದೇಹದ ಸಕ್ಕರೆ, ಬೊಜ್ಜು ಮತ್ತು ಹೃದ್ರೋಗ ಕಾಯಿಲೆಯಿಂದ ರಕ್ಷಣೆ ಮಾಡುತ್ತದೆ.
ಎಲೆಕೋಸಿನಿಂದ ತಯಾರಿಸಲಾದ 3 ಸುಲಭ ಪಾಕವಿಧಾನಗಳ ಬಗ್ಗೆ ನೋಡೋಣ.
ಎಲೆಕೋಸು ವಡಾ ರೆಸಿಪಿ
1 ಕಪ್ ಸಣ್ಣದಾಗಿ ಕೊಚ್ಚಿದ ಎಲೆಕೋಸು, ಉದ್ದಿನಬೇಳೆ ಒಂದು ಬಟ್ಟಲು, ಚನಾ ದಾಲ್ ಒಂದು ಬಟ್ಟಲು, ಜೀರಿಗೆ ಒಂದು ಟೀಚಮಚ, ಒಂದು ಚಿಟಿಕೆ ಕೆಂಪು ಮೆಣಸಿನಕಾಯಿ, ಕೊತ್ತಂಬರಿ ಪುಡಿ ಒಂದು ಟೀಚಮಚ, ಗರಂ ಮಸಾಲಾ ಒಂದು ಟೀಚಮಚ, ಒಂದು ಪಿಂಚ್ ಕರಿಮೆಣಸು, ಕ್ಯಾಪ್ಸಿಕಂ 1 ಕತ್ತರಿಸಿದ, ಕ್ಯಾರೆಟ್ 1 ಕತ್ತರಿಸಿದ, ಶುಂಠಿ 1 ಇಂಚು, ರುಚಿಗೆ ಉಪ್ಪು ಬೇಕು.
ಎಲೆಕೋಸು ವಡಾ ಹೇಗೆ ತಯಾರಿಸುವುದು?
ನೆನೆಸಿದ ಉದ್ದಿನಬೇಳೆ ಮತ್ತು ಬೇಳೆಯಿಂದ ನೀರನ್ನು ಬೇರ್ಪಡಿಸಿ ಅದಕ್ಕೆ ಜೀರಿಗೆ ಮತ್ತು ಕರಿಮೆಣಸು ಸೇರಿಸಿ ರುಬ್ಬಿರಿ. ನಂತರ, ಎಲೆಕೋಸಿನಲ್ಲಿ ಶುಂಠಿ, ಹಸಿರು ಮೆಣಸಿನಕಾಯಿ ಮತ್ತು ಕೊತ್ತಂಬರಿ ಸೊಪ್ಪನ್ನು ಬೆರೆಸಿ ರುಬ್ಬಿರಿ. ಈಗ ಅದನ್ನು ಪಿಸಿ ದಾಲ್ ಮಿಶ್ರಣಕ್ಕೆ ಸೇರಿಸಿ.
ನಂತರ ಹಿಟ್ಟಿನಲ್ಲಿ ರುಚಿಗೆ ಅನುಗುಣವಾಗಿ ಕತ್ತರಿಸಿದ ತರಕಾರಿಗಳು ಮತ್ತು ಮಸಾಲೆ ಮಿಶ್ರಣ ಮಾಡಿ. ಈಗ ಪ್ಯಾನ್ ತೆಗೆದುಕೊಂಡು ಅದನ್ನು ಆಲಿವ್ ಎಣ್ಣೆಯಿಂದ ಗ್ರೀಸ್ ಮಾಡಿ. ಈಗ ಅದನ್ನು ಕಟ್ಲೆಟ್ ಆಕಾರದಲ್ಲಿ ಮಾಡಿ ಬಾಣಲೆಗೆ ಹಾಕಿ ಬೇಯಿಸಿ. ತಿಳಿ ಚಿನ್ನದ ಕಂದು ಬಣ್ಣಕ್ಕೆ ತಿರುಗಿದ ನಂತರ ಅದನ್ನು ತಿರುಗಿಸಿ. ಬೇಯಿಸಿ. ಸಂಪೂರ್ಣವಾಗಿ ಬೇಯಿಸಿದ ನಂತರ ನಿಮ್ಮಿಷ್ಟದ ಚಟ್ನಿ ಜೊತೆ ಸೇವಿಸಿ.
ಎಲೆಕೋಸು ಕಾರ್ನ್ ಸೂಪ್ ರೆಸಿಪಿ
ಎಲೆಕೋಸು ಕತ್ತರಿಸಿದ್ದ, ಚೂರುಚೂರು ಕ್ಯಾರೆಟ್, ಬೇಯಿಸಿದ ಕಾರ್ನ್ಗಳು, ಅವರೆಕಾಳು, ಪನೀರ್ ಕ್ಯೂಬ್ಸ್, ಒಂದು ಪಿಂಚ್ ಕರಿಮೆಣಸು, ರುಚಿಗೆ ಉಪ್ಪು ಬೇಕು.
ಎಲೆಕೋಸು ಕಾರ್ನ್ ಸೂಪ್ ತಯಾರಿಸುವುದು ಹೇಗೆ?
ಮೊದಲು ಕುಕ್ಕರ್ ನಲ್ಲಿ ಎರಡು ಕಪ್ ನೀರು ಮತ್ತು ಅರಿಶಿನ ಹಾಕಿ ಮತ್ತು ತರಕಾರಿ ಎರಡು ಸೀಟಿಗೆ ಬೇಯಿಸಿ. ನಂತರ ಎಲ್ಲಾ ತರಕಾರಿಗಳನ್ನು ತೆರೆದ ಪಾತ್ರೆಗೆ ಹಾಕಿ. ಅಗತ್ಯವಿದ್ದರೆ ಹೆಚ್ಚು ನೀರು ಸೇರಿಸಿ.
ಈಗ ಗ್ಯಾಸ್ ಮೇಲೆ ಎರಡರಿಂದ ಮೂರು ನಿಮಿಷ ಬೇಯಿಸಿ. ಬೇಯಿಸಿದ ನಂತರ ಅದನ್ನು ಸೂಪ್ ಬೌಲ್ ಗೆ ಹಾಕಿ ಮತ್ತು ಅದಕ್ಕೆ ಕಾರ್ನ್ ಮತ್ತು ಪನೀರ್ ಕ್ಯೂಬ್ ಗಳನ್ನು ಸೇರಿಸಿ. ಇದರ ನಂತರ ಅದಕ್ಕೆ ಕರಿಮೆಣಸು ಮತ್ತು ಉಪ್ಪನ್ನು ಸೇರಿಸಿ. ಬಡಿಸಿ.
ಎಲೆಕೋಸು ಸಲಾಡ್ ರೆಸಿಪಿ
ಕತ್ತರಿಸಿದ ಎಲೆಕೋಸು, ಬೀನ್ಸ್ ಕತ್ತರಿಸಿದ, ಸಣ್ಣದಾಗಿ ಕೊಚ್ಚಿದ ಕ್ಯಾರೆಟ್, ಕ್ಯಾಪ್ಸಿಕಂ ಚದರ ಕತ್ತರಿಸಿ, ಸಾಸಿವೆ ಬೀಜಗಳು ಒಂದು ಚಮಚ, ಕರಿಬೇವಿನ ಎಲೆಗಳು 8 ರಿಂದ 10 ಬೇಕು.
ಇದನ್ನೂ ಓದಿ: ದಿನವೂ ಪಪ್ಪಾಯಿ ನೀರನ್ನು ಕುಡಿಯಿರಿ, ಈ ಆರೋಗ್ಯ ಪ್ರಯೋಜನ ಪಡೆಯಿರಿ
ಎಲೆಕೋಸು ಸಲಾಡ್ ಮಾಡುವುದು ಹೇಗೆ?
ಮೊದಲು ಎಲ್ಲಾ ಕತ್ತರಿಸಿದ ತರಕಾರಿಗಳನ್ನು 5 ನಿಮಿಷ ಕುದಿಸಿ. ನಂತರ ಬಾಣಲೆಗೆ ಕೆಲವು ಹನಿ ಎಣ್ಣೆ ತೆಗೆದುಕೊಂಡು ಸಾಸಿವೆ ಹಾಕಿ ಮತ್ತು ಕರಿಬೇವಿನ ಎಲೆ ಹಾಕಿ. ಈಗ ಎಲೆಕೋಸು, ಬೀನ್ಸ್, ಕ್ಯಾರೆಟ್, ಕ್ಯಾಪ್ಸಿಕಂ ಮತ್ತು ಸ್ಪ್ರಿಂಗ್ ಆನಿಯನ್ ಹಾಕಿ ಸ್ವಲ್ಪ ಸಮಯ ಬೆರೆಸಿ. ಉಪ್ಪು ಮತ್ತು ಮೆಣಸು ಹಾಕಿ. ಕಾರ್ನ್ ಮತ್ತು ಪನೀರ್ ಅನ್ನು ಒಟ್ಟಿಗೆ ಬಡಿಸಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ