ಆರೋಗ್ಯ (Health) ಹಾಗೂ ಸದೃಢ ದೇಹಕ್ಕೆ (Body) ಆರೋಗ್ಯಕರ ಆಹಾರ (Food) ಸೇವನೆ ಮಾಡುವುದು ತುಂಬಾ ಮುಖ್ಯ. ಹಣ್ಣುಗಳು, ತರಕಾರಿಗಳು, ಧಾನ್ಯಗಳು ಮತ್ತು ಕೊಬ್ಬು-ಮುಕ್ತ ಅಥವಾ ಕಡಿಮೆ ಕೊಬ್ಬಿನ ಹಾಲು ಮತ್ತು ಅದರ ಉತ್ಪನ್ನಗಳು ನಿಮಗೆ ಶಕ್ತಿ ಮತ್ತು ಪೋಷಕಾಂಶವನ್ನು ದೇಹಕ್ಕೆ ಒದಗಿಸುತ್ತವೆ. ಖನಿಜಗಳು ಮತ್ತು ವಿಟಮಿನ್ ಗಳಲ್ಲಿ (Vitamin) ಸಮೃದ್ಧವಾಗಿರುವ ಆಹಾರಗಳ ಸೇವನೆ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿ. ಅಂತಹ ಪದಾರ್ಥಗಳಲ್ಲಿ ಬೀಟ್ರೂಟ್ ಮತ್ತು ಸಾಬುದಾನ ಕೂಡ ಒಂದು. ಸಾಬುದಾನ ಜೀರ್ಣಕ್ರಿಯೆಗೆ ಉತ್ತಮವಾಗಿದೆ. ಇದು ಸುಲಭವಾಗಿ ಜೀರ್ಣವಾಗುತ್ತದೆ. ಜೊತೆಗೆ ಮಲಬದ್ಧತೆ ಸಮಸ್ಯೆ ತಡೆಯುತ್ತದೆ. ಇದು ಕಾರ್ಬೋಹೈಡ್ರೇಟ್‌ಗಳ ಸಮೃದ್ಧ ಮೂಲ. ಇದು ದೇಹವನ್ನು ತಂಪಾಗಿಸುತ್ತದೆ.
ಬೆಳಗಿನ ತಿಂಡಿಗೆ ಬೀಟ್ರೂಟ್ ಮತ್ತು ಸಾಬುದಾನ ಖೀರ್ ರೆಸಿಪಿ
ಬೆಳಗಿನ ತಿಂಡಿಗೆ ತರಕಾರಿ ಮಿಶ್ರಿತ ಪದಾರ್ಥಗಳ ಮತ್ತು ಖಾದ್ಯಗಳ ಸೇವನೆ ತುಂಬಾ ಉತ್ತಮ. ಕಡಲೆಕಾಳು ಹಾಗು ಬೀಟ್ರೂಟ್ ಮತ್ತು ಸಾಬುದಾನ ಗರ್ಭಿಣಿಯರಿಗೆ ಉತ್ತಮ ಆಹಾರ ಆಯ್ಕೆಯಾಗಿದೆ.
ಆರೋಗ್ಯಕರ ದೇಹಕ್ಕೆ ಸರಿಯಾದ ಪ್ರಮಾಣದ ಕಾರ್ಬೋಹೈಡ್ರೇಟ್ ಮತ್ತು ಪ್ರೋಟೀನ್ ಬೇಕು. ಹಾಗಾದ್ರೆ ಸುಲಭವಾಗಿ ತಯಾಸಿಸಬಹುದಾದ ಆರೋಗ್ಯಕರ ಆಹಾರ ಬೀಟ್ರೂಟ್ ಮತ್ತು ಸಾಬುದಾನ ಖೀರ್ ಮಾಡುವ ಬಗ್ಗೆ ತಿಳಿಯೋಣ.
ಪೋಷಕಾಂಶಗಳಿಂದ ಸಮೃದ್ಧವಾಗಿದೆ ಬೀಟ್ರೂಟ್ ಮತ್ತು ಸಾಬುದಾನ
ಬೀಟ್ರೂಟ್ ಮತ್ತು ಸಾಬುದಾನ ಆರೋಗ್ಯಕರ ಆಯ್ಕೆ ಆಗಿದೆ. ಇದು ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಸುಲಭವಾಗಿ ತಯಾರಾಗುತ್ತದೆ.
ಬೀಟ್ರೂಟ್ ಮತ್ತು ಸಾಬುದಾನ ಖೀರ್ ರೆಸಿಪಿ
ಬೇಕಾಗುವ ಪದಾರ್ಥಗಳು
ಸಾಬುದಾನ ಅರ್ಧ ಕಪ್, ಅರ್ಧ ಕಪ್ ಕಂದು ಅಥವಾ ಕಲ್ಲು ಸಕ್ಕರೆ, ಬೇಯಿಸಿದ 300 ಗ್ರಾಂ ಬೀಟ್ರೂಟ್, 2 ಕಪ್ ಹಾಲು, ಬಾದಾಮಿ ಹಾಲು, ಗೋಡಂಬಿ ಹಾಲು ಮುಂತಾದ ಸಸ್ಯ ಆಧಾರಿತ ಹಾಲನ್ನು ಸಹ ಸೇವಿಸಬಹುದು. 1 ಚಮಚ ಪುಡಿಮಾಡಿದ ಗೋಡಂಬಿ, ½ ಟೀಸ್ಪೂನ್ ಏಲಕ್ಕಿ ಪುಡಿ, 1 ಪಿಂಚ್ ಕೇಸರಿ, ಪಿಸ್ತಾ ಬೇಕು.
ಬೀಟ್ರೂಟ್ ಮತ್ತು ಸಾಬುದಾನ ಖೀರ್ ತಯಾರಿಸುವ ವಿಧಾನ ಹೀಗಿದೆ
ಮೊದಲು ಸಾಬುದಾನವನ್ನು ಚೆನ್ನಾಗಿ ತೊಳೆಯಿರಿ. ಇದನ್ನು 2 ಕಪ್ ನೀರಿನಲ್ಲಿ 1 ಗಂಟೆ ನೆನೆಸಿಡಿ. ಸಕ್ಕರೆ ಪುಡಿಯನ್ನು ಅರ್ಧ ಕಪ್ ನೀರಿನಲ್ಲಿ ನೆನೆಸಿ. ಬೀಟ್ರೂಟ್ ಅನ್ನು ಸಿಪ್ಪೆ ತೆಗೆದು ತುರಿ ಮಾಡಿ. ಹಾಲು, ಗೋಡಂಬಿ ಮತ್ತು ಬೀಟ್ರೂಟ್ ಅನ್ನು ಮಿಕ್ಸಿಯಲ್ಲಿ ಮಿಶ್ರಣ ಮಾಡಿ.
ಅವೆಲ್ಲವನ್ನೂ ಮಿಶ್ರಣ ಮಾಡಿ. ಈ ಮಿಶ್ರಣವನ್ನು ನಾನ್ ಸ್ಟಿಕ್ ಪ್ಯಾನ್ ಗೆ ಸುರಿದು ಕಡಿಮೆ ಉರಿಯಲ್ಲಿ ಕುದಿಸಿ. ಅದರಲ್ಲಿ ಕೇಸರಿ, ಏಲಕ್ಕಿ ಪುಡಿ ಹಾಕಿ. ಸಾಬುದಾನ ನೀರು ತೆಗೆಯಿರಿ. ಒಂದು ಪಾತ್ರೆಯಲ್ಲಿ 4 ಕಪ್ ನೀರು ಸೇರಿಸಿ. ಸಾಬುದಾನ ಮಿಕ್ಸ್ ಮಾಡಿ. ಬೀಟ್ರೂಟ್ ಸೇರಿಸಿ. ಈಗ ಬೀಟ್ರೂಟ್ ಸಾಬುದಾನ ಖೀರ್ ರೆಡಿ, ಸವಿಯಿರಿ.
ಬೀಟ್ರೂಟ್ ಪ್ರಯೋಜನಗಳು
ಅಗತ್ಯವಾದ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ ಬೀಟ್ರೂಟ್. ಇದು ಫೈಬರ್, ಫೋಲೇಟ್ (ವಿಟಮಿನ್ B9), ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲ. ನೀರು, ಪ್ರೊಟೀನ್ ಹೊರತಾಗಿ, ಇದು ಕಾರ್ಬೋಹೈಡ್ರೇಟ್ಗಳು, ಫೈಬರ್ ಹೊಂದಿದೆ.
ಬೀಟ್ರೂಟ್ ವಿಟಮಿನ್ ಬಿ9 ಸಮೃದ್ಧವಾಗಿದೆ. ಇದು ಜೀವಕೋಶಗಳು ಬೆಳೆಯಲು ಮತ್ತು ಕಾರ್ಯ ನಿರ್ವಹಿಸಲು ಸಹಕಾರಿ. ರಕ್ತನಾಳಗಳ ಹಾನಿಯನ್ನು ನಿಯಂತ್ರಿಸುತ್ತದೆ ಫೋಲೇಟ್. ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಈ ಚಟ್ನಿಗೆ ತೆಂಗಿನಕಾಯಿ ಬೇಕು ಅಂತಾನೇ ಇಲ್ಲ! ಮಾರ್ನಿಂಗ್ ಇಡ್ಲಿ, ದೋಸೆ, ಚಪಾತಿಗೆ ಜೊತೆ ತಿಂದ್ರೆ ಸೂಪರೋ ಸೂಪರ್!
ಸಾಬುದಾನ ಪ್ರಯೋಜನಗಳು
ಸಾಬುದಾನ ಕಾರ್ಬೋಹೈಡ್ರೇಟ್, ಫೈಬರ್, ಪ್ರೋಟೀನ್, ಕೊಬ್ಬು, ಕ್ಯಾಲ್ಸಿಯಂ, ಕಬ್ಬಿಣ, ಮೆಗ್ನೀಸಿಯಮ್ ಹೊಂದಿದೆ. ಇದು ಶಕ್ತಿಯ ಉತ್ತಮ ಮೂಲ. ಮಲಬದ್ಧತೆಯನ್ನು ತಡೆಯುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ