Weight loss: ಬೆಳಗಿನ ಉಪಹಾರದಲ್ಲಿ ಅವಲಕ್ಕಿ ಸೇರಿಸಿ ಹೀಗೆ ತೂಕ ಇಳಿಸಿಕೊಳ್ಳಿ

ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಅವಲಕ್ಕಿಯನ್ನು ತಯಾರಿಸಲಾಗುತ್ತದೆ. ಅವಲಕ್ಕಿ ಪೋಷಕಾಂಶಗಳಿಂದ ತುಂಬಿದೆ. ಬೆಲ್ಲ ಅಥವಾ ಮೊಸರಿನೊಂದಿಗೆ ಸೇವಿಸಿದಾಗ ಇದು ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪೋಹಾ ಅಂದ್ರೆ ಅವಲಕ್ಕಿ (Poha) ಅತ್ಯಂತ ಜನಪ್ರಿಯ (Famous) ಭಾರತೀಯ ಉಪಹಾರ (Indian Breakfast) ಆಗಿದೆ. ಬೆಳಗಿನ ಉಪಾಹಾರಕ್ಕಾಗಿ ಭಾರತದ ಪ್ರತಿಯೊಂದು ಮನೆಯಲ್ಲೂ (Home) ಒಂದು ದಿನ ಬಿಟ್ಟು ಒಂದು ದಿನವಾದರೂ ಅವಲಕ್ಕಿ ಮಾಡಿಯೇ ಇರುತ್ತಾರೆ. ಮನೆಗೆ ಸಂಬಂಧಿಕರು, ಅತಿಥಿಗಳು ಬಂದಾಗ ಅವಲಕ್ಕಿ ಮಾಡಿ, ಬಡಿಸುವುದು ರೂಢಿಯಲ್ಲಿದೆ. ಅಲ್ಲದೇ ಕೆಲವರು ಉಪವಾಸದ ಸಮಯದಲ್ಲೂ ಅವಲಕ್ಕಿ ತಿನ್ನುತ್ತಾರೆ. ಅದಾಗ್ಯೂ ಅವಲಕ್ಕಿಯನ್ನು ಹಲವು ವಿಧದ ರೆಸಿಪಿ ಮೂಲಕ ಮಾಡಿಕೊಂಡು ಸೇವನೆ ಮಾಡುತ್ತಾರೆ. ಅವಲಕ್ಕಿಯನ್ನು ಉತ್ತರ ಪ್ರದೇಶ ಮತ್ತು ರಾಜಸ್ಥಾನ ಹಾಗೂ ಕರ್ನಾಟಕದಲ್ಲಿ ಸೇರಿದಂತೆ ಕೆಲವು ಭಾಗಗಳಲ್ಲಿ ಅವಲಕ್ಕಿಯನ್ನು ಭುಜಿಯಾ ಮತ್ತು ಜಲೇಬಿ ಜೊತೆ ನೀಡುತ್ತಾರೆ.

    ಅವಲಕ್ಕಿ

    ಇನ್ನು ವಿವಿಧ ರಾಜ್ಯಗಳಲ್ಲಿ ವಿವಿಧ ರೀತಿಯಲ್ಲಿ ಅವಲಕ್ಕಿಯನ್ನು ತಯಾರಿಸಲಾಗುತ್ತದೆ. ಅವಲಕ್ಕಿ ಪೋಷಕಾಂಶಗಳಿಂದ ತುಂಬಿದೆ. ಬೆಲ್ಲ ಅಥವಾ ಮೊಸರಿನೊಂದಿಗೆ ಸೇವಿಸಿದಾಗ ಇದು ಆರೋಗ್ಯಕ್ಕೆ ಪ್ರಯೋಜನ ನೀಡುತ್ತದೆ. ಇದು ಕಾರ್ಬೋಹೈಡ್ರೇಟ್ಗಳು, ಪ್ರೋಟೀನ್, ಫೈಬರ್, ವಿಟಮಿನ್ಗಳು ಮತ್ತು ಕಬ್ಬಿಣ ಹೊಂದಿದೆ. ಎಲ್ಲಾ ಪೋಷಕಾಂಶಗಳು ತೂಕ ಕಡಿಮೆ ಮಾಡಲು ಸಹಕಾರಿ.

    ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ತೂಕ ಕಡಿಮೆ ಮಾಡಲು ಅವಲಕ್ಕಿ ಹೇಗೆ ಕೆಲಸ ಮಾಡುತ್ತದೆ ಮತ್ತು ಅದರ ಪ್ರಯೋಜನಗಳೇನು ಎಂದು ಇಲ್ಲಿ ತಿಳಿಯೋಣ.

    ಇದನ್ನೂ ಓದಿ: ಹೇಗಪ್ಪಾ ತೂಕ ಇಳಿಸೋದು ಎಂಬ ಚಿಂತೆನಾ? ಹಾಗಿದ್ರೆ ತಜ್ಞರು ಹೇಳಿರುವ ಈ ಟಿಪ್ಸ್ ಫಾಲೋ ಮಾಡಿ

    ಅವಲಕ್ಕಿ ತೂಕ ನಷ್ಟಕ್ಕೆ ಪ್ರಯೋಜನಕಾರಿ

    ತೂಕ ನಷ್ಟಕ್ಕೆ ಅವಲಕ್ಕಿ ಉತ್ತಮ ಆಯ್ಕೆ. ಫೈಬರ್ ಪ್ರಮಾಣವಿದೆ. ಅವಲಕ್ಕಿ ಕರುಳಿನ ಚಲನೆಗೆ ಒಳ್ಳೆಯದು ಮತ್ತು ಅದು ವ್ಯಕ್ತಿಯನ್ನು ದೀರ್ಘ ಕಾಲದವರೆಗೆ ಹಸಿವಾಗದಂತೆ ನೋಡಿಕೊಳ್ಳುತ್ತದೆ. ಆಹಾರದ ಫೈಬರ್ನಲ್ಲಿ ಸಮೃದ್ಧವಾಗಿರುವ ಆಹಾರ ತಿನ್ನುವುದು ನಿಮ್ಮ ಹಸಿವು ಕಡಿಮೆ ಮಾಡುತ್ತದೆ. ಕಡುಬಯಕೆ ನಿಗ್ರಹಿಸುತ್ತದೆ. ಆದರೆ ಇದನ್ನು ಅತಿಯಾಗಿ ತಿನ್ನಬೇಡಿ.

    ಅವಲಕ್ಕಿ ಕಡಿಮೆ ಕ್ಯಾಲೋರಿ ಉಪಹಾರ

    ಪೌಷ್ಟಿಕ ತಜ್ಞರ ಪ್ರಕಾರ, ಅವಲಕ್ಕಿ ಕಡಿಮೆ ಕ್ಯಾಲೋರಿ ಹೊಂದಿದೆ. ಮತ್ತು ಹೆಚ್ಚಿನ ಕಾರ್ಬೋಹೈಡ್ರೇಟ್ಗಳನ್ನು ಹೊಂದಿದೆ. ಇದರ ಹೊರತಾಗಿ, ಅವಲಕ್ಕಿ ಸಂಪೂರ್ಣ ಪ್ಲೇಟ್ 23 ಪ್ರತಿಶತ ಕೊಬ್ಬು, 2.5 ಮಿಗ್ರಾಂ ಫೈಬರ್, 2.6 ಮಿಗ್ರಾಂ ಕಬ್ಬಿಣ ಮತ್ತು 5 ಮಿಗ್ರಾಂ ಪೊಟ್ಯಾಸಿಯಮ್ ಅನ್ನು ಹೊಂದಿದೆ.

    ತೂಕ ನಷ್ಟಕ್ಕೆ ಇದು ಉತ್ತಮ ಆಯ್ಕೆಯಾಗಿದೆ ಏಕೆಂದರೆ ಇದನ್ನು ಹಲವು ವಿಧಗಳಲ್ಲಿ ಬೇಯಿಸಲಾಗುತ್ತದೆ. ನೀವು ಇದಕ್ಕೆ ತರಕಾರಿ ಸೇರಿಸಬಹುದು. ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ, ವಿಶೇಷವಾಗಿ ಆಲೂಗಡ್ಡೆಯನ್ನು ಅವಲಕ್ಕಿಗೆ ಸೇರಿಸುವುದನ್ನು ತಪ್ಪಿಸಿ. ಏಕೆಂದರೆ ಆಲೂಗಡ್ಡೆ ತಿನ್ನುವುದರಿಂದ ಕ್ಯಾಲೋರಿ ಪ್ರಮಾಣ ಹೆಚ್ಚುತ್ತದೆ.

    ಜೀರ್ಣಿಸಿಕೊಳ್ಳಲು ಸುಲಭ ಅವಲಕ್ಕಿ

    ಅವಲಕ್ಕಿ ಲಘು ಉಪಹಾರ. ಇದು ಜೀರ್ಣಕ್ರಿಯೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಇದು ಉಬ್ಬುವಿಕೆ ಉಂಟು ಮಾಡುವುದಿಲ್ಲ ಮತ್ತು ಹೆಚ್ಚು ಕಾಲ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಉತ್ತಮ ಭಾಗವೆಂದರೆ ಅದು ಜೀರ್ಣಿಸಿಕೊಳ್ಳಲು ತುಂಬಾ ಸುಲಭ.

    ಆರೋಗ್ಯಕರ ಅವಲಕ್ಕಿ ತಯಾರಿಸುವುದು ಹೇಗೆ?

    ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ

    ಅವಲಕ್ಕಿ ಫೈಬರ್ನಲ್ಲಿ ಸಮೃದ್ಧವಾಗಿದೆ. ಇದು ರಕ್ತ ಪ್ರವಾಹಕ್ಕೆ ತಲುಪುವ ಸಕ್ಕರೆಯ ಪ್ರಮಾಣ ನಿಯಂತ್ರಿಸುತ್ತದೆ. ಇದು ರಕ್ತದ ಸಕ್ಕರೆಯ ಮಟ್ಟದಲ್ಲಿ ಸ್ಪೈಕ್‌ಗಳನ್ನು ತಡೆಯಲು ಸಹಾಯ ಮಾಡುತ್ತದೆ. ಮಧುಮೇಹದಿಂದ ಬಳಲುತ್ತಿರುವ ರೋಗಿಗಳಿಗೆ ಅವಲಕ್ಕಿ ವರದಾನ.

    ರಕ್ತಹೀನತೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ

    ನಿಮಗೆ ಅವಲಕ್ಕಿ ಇಷ್ಟವಿಲ್ಲದಿದ್ದರೂ ಸಹ ನಿಮ್ಮ ಆಹಾರದಲ್ಲಿ ಸೇರಿಸಿ. ಕಬ್ಬಿಣದ ಕೊರತೆಯನ್ನು ಹೋಗಲಾಡಿಸಲು ಅವಲಕ್ಕಿ ಸಹಾಯ ಮಾಡುತ್ತದೆ. ಇದರ ಸೇವನೆಯಿಂದ ರಕ್ತಹೀನತೆ ಬರುವ ಸಾಧ್ಯತೆಗಳು ತೀರಾ ಕಡಿಮೆ.

    ಅವಲಕ್ಕಿ ಗ್ಲುಟನ್ ಮುಕ್ತವಾಗಿದೆಯೇ?

    ಏನು ತಿನ್ನಬೇಕು ಅಥವಾ ತಿನ್ನಬಾರದು ಎಂದು ಗೊಂದಲದಲ್ಲಿದ್ದರೆ ಅವಲಕ್ಕಿ ಗ್ಲುಟನ್ ಮುಕ್ತವಾಗಿದೆ. ವೈದ್ಯರನ್ನು ಸಂಪರ್ಕಿಸಿದ ನಂತರ ನೀವು ಅದನ್ನು ಸುಲಭವಾಗಿ ಸೇವಿಸಬಹುದು.

    ಇದನ್ನೂ ಓದಿ: ಸಿಗರೇಟ್ ಸೇದುವುದರಿಂದ ಕೂದಲು ಉದುರುತ್ತವೆಯೇ? ಪೌಷ್ಟಿಕ ತಜ್ಞರು ಹೇಳಿದ್ದೇನು?

    ಅವಲಕ್ಕಿ ಮನಸ್ಸನ್ನು ಚುರುಕಾಗಿಸುತ್ತದೆ

    ಅವಲಕ್ಕಿ ವಿಟಮಿನ್ ಬಿ ಸಾಕಷ್ಟು ಪ್ರಮಾಣದಲ್ಲಿದೆ. ಇದು ನಿಮಗೆ ಶಕ್ತಿ ಮತ್ತು ಮೆದುಳಿನ ಆರೋಗ್ಯ ಸುಧಾರಿಸುತ್ತದೆ.
    Published by:renukadariyannavar
    First published: