• Home
  • »
  • News
  • »
  • lifestyle
  • »
  • Poha And Health: ಅವಲಕ್ಕಿಯನ್ನು ಬೆಳಗ್ಗೆ-ಸಾಯಂಕಾಲದ ತಿಂಡಿಯಾಗಿ ಸೇವಿಸುವುದು ಎಷ್ಟು ಆರೋಗ್ಯಕರ?

Poha And Health: ಅವಲಕ್ಕಿಯನ್ನು ಬೆಳಗ್ಗೆ-ಸಾಯಂಕಾಲದ ತಿಂಡಿಯಾಗಿ ಸೇವಿಸುವುದು ಎಷ್ಟು ಆರೋಗ್ಯಕರ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಬಿಳಿ ಅನ್ನದ ಬದಲಿಗೆ ಪೋಹಾ ಸೇವಿಸಬಹುದು. ಆದರೂ ಅವಲಕ್ಕಿ ಮತ್ತು ಅನ್ನ ಎರಡನ್ನೂ ಭತ್ತದಿಂದಲೇ ತಯಾರು ಮಾಡಲಾಗುತ್ತದೆ. ಆದರೆ ಅವಲಕ್ಕಿ ಕಡಿಮೆ ಸಂಸ್ಕರಣೆಗೆ ಒಳಗಾಗುತ್ತದೆ. ಹಾಗಾಗಿ ಇದು ಅಕ್ಕಿಗಿಂತ ಹೆಚ್ಚಿನ ಪೋಷಕಾಂಶ ಹೊಂದಿದೆ.

  • Share this:

    ಪೋಹಾ ಅಂದರೆ ಅವಲಕ್ಕಿಯನ್ನು (Poha) ಬಹಳ ವರ್ಷಗಳ ಹಿಂದಿನಿಂದಲೂ ಭಾರತದ (India) ಅನೇಕ ಭಾಗಗಳಲ್ಲಿ ನೆಚ್ಚಿನ ಉಪಹಾರ (Breakfast) ಭಕ್ಷ್ಯವಾಗಿ ಸೇವನೆ ಮಾಡಲಾಗ್ತಿದೆ. ಅವಲಕ್ಕಿ ಉಪಾಹಾರವು ಉತ್ತಮ ಆರೋಗ್ಯ ಮತ್ತು ಶಕ್ತಿ (Health And Energy) ನೀಡುತ್ತದೆ. ದಿನವನ್ನು ಚೆನ್ನಾಗಿ ಉತ್ತಮವಾಗಿ ಪ್ರಾರಂಭಿಸಲು ಇದು ಉತ್ತಮ ಆಹಾರ ಪದಾರ್ಥ ಆಗಿದೆ. ಅವಲಕ್ಕಿ ಸೇವನೆ ನಿಮ್ಮನ್ನು ದೀರ್ಘಕಾಲದವರೆಗೆ ಹೊಟ್ಟೆ ತುಂಬಿಸಿಡುತ್ತದೆ. ಅವಲಕ್ಕಿ ಜೀರ್ಣಿಸಿಕೊಳ್ಳಲು ಹಗುರ ಆಗಿದೆ. ಇದು ಕಬ್ಬಿಣ ಮತ್ತು ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧ ಆಗಿದೆ. ಮತ್ತು ಗ್ಲೈಸೆಮಿಕ್ ಇಂಡೆಕ್ಸ್‌ ಕಡಿಮೆ ಆಗಿದೆ. ಬೆಳಗಿನ ಉಪಾಹಾರದಲ್ಲಿ ಅವಲಕ್ಕಿ ಸೇವನೆ ಬಹುತೇಕ ಜನರ ಮೊದಲ ಆಯ್ಕೆ ಆಗಿರುತ್ತದೆ.


     ಬಿಳಿ ಅಕ್ಕಿ ಆರೋಗ್ಯಕರವಲ್ಲ?


    ಜನರು ಖಂಡಿತವಾಗಿ ದಿನದ ಊಟದಲ್ಲಿ ಬಿಳಿ ಅಕ್ಕಿ ಸೇವನೆ ಮಾಡುತ್ತಾರೆ. ಆದರೆ ಬಿಳಿ ಅಕ್ಕಿ ಆರೋಗ್ಯಕರವಲ್ಲ. ಹಾಗಾಗಿ ಮಧುಮೇಹದಂತಹ ದೀರ್ಘಕಾಲ ಕಾಯಿಲೆ ಹೊಂದಿದವರು ವೈದ್ಯರು ರೋಗಿಯನ್ನು ಅದರ ಸೇವನೆಯಿಂದ ದೂರವಿರಲು ಸಲಹೆ ನೀಡುತ್ತಾರೆ. ಅಕ್ಕಿಯು ಬಹಳಷ್ಟು ಸರಳ ಕಾರ್ಬೋಹೈಡ್ರೇಟ್‌ ಹೊಂದಿದೆ.


    ಇದು ಇನ್ಸುಲಿನ್ ಏರಿಳಿತ, ಆಲಸ್ಯ ಮತ್ತು ತೂಕ ಹೆಚ್ಚಾಗುವಿಕೆಗೆ ದೀರ್ಘಕಾಲ ಸಂಬಂಧ ಹೊಂದಿದೆ. ಹಾಗಾಗಿ ನೀವು ಬಿಳಿ ಅನ್ನದ ಬದಲಿಗೆ ಪೋಹಾ ಸೇವಿಸಬಹುದು. ಆದರೂ ಅವಲಕ್ಕಿ ಮತ್ತು ಅನ್ನ ಎರಡನ್ನೂ ಭತ್ತದಿಂದಲೇ ತಯಾರು ಮಾಡಲಾಗುತ್ತದೆ. ಆದರೆ ಅವಲಕ್ಕಿ ಕಡಿಮೆ ಸಂಸ್ಕರಣೆಗೆ ಒಳಗಾಗುತ್ತದೆ. ಹಾಗಾಗಿ ಇದು ಅಕ್ಕಿಗಿಂತ ಹೆಚ್ಚಿನ ಪೋಷಕಾಂಶ ಹೊಂದಿದೆ.


    ಇದನ್ನೂ ಓದಿ: ಸಸ್ಯಾಹಾರಿಗಳಿಗೆ ಪ್ರೋಟೀನ್ ಕೊರತೆ ಕಾಡುತ್ತದೆ ಎಂಬ ಯೋಚನೆಯೇ? ಈ ಪದಾರ್ಥಗಳಲ್ಲಿದೆ ಸಮೃದ್ಧ ಪೋಷಕಾಂಶ!


    ಅವಲಕ್ಕಿ ಆರೋಗ್ಯಕರ ಕಾರ್ಬೋಹೈಡ್ರೇಟ್‌ ಸಮೃದ್ಧವಾಗಿದೆ


    ಅವಲಕ್ಕಿ ಅತ್ಯುತ್ತಮ ಉಪಹಾರ. ಇದು ಸುಮಾರು 70 ಪ್ರತಿಶತ ಆರೋಗ್ಯಕರ ಕಾರ್ಬೋಹೈಡ್ರೇಟ್‌ಗಳು ಮತ್ತು 30 ಪ್ರತಿಶತ ಕೊಬ್ಬನ್ನು ಹೊಂದಿದೆ. ಹೀಗಾಗಿ ದಿನದ ಆರಂಭದಲ್ಲಿ ಅವಲಕ್ಕಿ ಸೇವನೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ.


    ಅಕ್ಕಿಯಲ್ಲಿ ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿವೆ. ತೂಕ ಇಳಿಕೆ ಬಯಸುವವರು ಅದನ್ನು ತಿನ್ನುವುದನ್ನು ತಪ್ಪಿಸುತ್ತಾರೆ. ಅಲ್ಲದೆ, ಅನ್ನವು ನಿಮಗೆ ದಿನವಿಡೀ ಆಲಸ್ಯ ಉಂಟು ಮಾಡುತ್ತದೆ.


    ಅವಲಕ್ಕಿಯಲ್ಲಿ ಕಬ್ಬಿಣದಂಶವಿದೆ


    ಅವಲಕ್ಕಿಯನ್ನು ಚಪ್ಪಟೆಗೊಳಿಸಲು ಕಬ್ಬಿಣದ ರೋಲರ್ ಬಳಸುತ್ತಾರೆ. ಇದು ಕಬ್ಬಿಣದ ಹೆಚ್ಚಿನ ಅಂಶವಿದೆ ಎಂದು ಪರಿಗಣಿಸಲಾಗುತ್ತದೆ. ಗರ್ಭಾವಸ್ಥೆಯ ರಕ್ತಹೀನತೆ ಅಪಾಯ ಹೊಂದಿರುವ ಮಹಿಳೆಯರು ಸಾಮಾನ್ಯವಾಗಿ ಅವಲಕ್ಕಿ ತಿನ್ನಲು ಸಲಹೆ ನೀಡಲಾಗುತ್ತದೆ.


    ಒಂದು ಬೌಲ್ ಅವಲಕ್ಕಿಗೆ ನಿಂಬೆ ರಸ ಸೇರಿಸಿದರೆ ಅದು ಕಬ್ಬಿಣವನ್ನು ಸರಿಯಾಗಿ ಹೀರಿಕೊಳ್ಳಲು ಅಗತ್ಯವಾದ ವಿಟಮಿನ್ ಸಿ ಅನ್ನು ಒದಗಿಸುತ್ತದೆ.


    ಜೀರ್ಣಕ್ರಿಯೆಗೆ ಸಹಕಾರಿ


    ದಿನದ ಎಲ್ಲಾ ಸಮಯದಲ್ಲೂ ಅನ್ನ ಸೇವನೆ ಮಾಡಲಾಗದಿದ್ದರೂ, ಅವಲಕ್ಕಿಯನ್ನು ಉಪಹಾರ ಮತ್ತು ಸಂಜೆಯ ತಿಂಡಿಯಾಗಿ ಸೇವಿಸಬಹುದು. ಇದು ಜೀರ್ಣಾಂಗ ವ್ಯವಸ್ಥೆಯಲ್ಲಿ ಸುಲಭವಾಗಿದೆ. ಮತ್ತು ಉಬ್ಬುವಿಕೆ ಉಂಟು ಮಾಡುಲ್ಲ.


    ಅವಲಕ್ಕಿ ಪ್ರೋಬಯಾಟಿಕ್ ಆಹಾರವಾಗಿದೆ


    ಅವಲಕ್ಕಿ ಪ್ರೋಬಯಾಟಿಕ್ ಗುಣ ಹೊಂದಿದೆ. ಅವಲಕ್ಕಿ ಉತ್ಪಾದನಾ ಪ್ರಕ್ರಿಯೆಯು ಅದನ್ನು ಹುದುಗುವಿಕೆಗೆ ಒಳಪಡಿಸುತ್ತದೆ. ಇದು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಚಯಾಪಚಯ ಕ್ರಿಯೆ ಪರಿಣಾಮವಾಗಿ ರೂಪುಗೊಂಡ ಉತ್ತಮ ಬ್ಯಾಕ್ಟೀರಿಯಾ ಉಳಿಸುತ್ತದೆ. ಕರುಳನ್ನು ಆರೋಗ್ಯವಾಗಿಡುತ್ತದೆ.


    ಅವಲಕ್ಕಿ ಕಡಿಮೆ ಕ್ಯಾಲೋರಿ ಹೊಂದಿದೆ


    ತರಕಾರಿಗಳ ಜೊತೆ ಬೇಯಿಸಿದ ಅವಲಕ್ಕಿ ಬೌಲ್ ಸುಮಾರು 250 ಕ್ಯಾಲೊರಿ ಹೊಂದಿದೆ. ಅದೇ ಪ್ರಮಾಣದ ಫ್ರೈಡ್ ರೈಸ್ 333 ಕ್ಯಾಲೊರಿ ಹೊಂದಿದೆ. ಇದು ಉತ್ತಮ ಭೋಜನ ಆಗಿದೆ. ಅದು ನಿಮ್ಮನ್ನು ಹೆಚ್ಚು ಕಾಲ ಹೊಟ್ಟೆ ತುಂಬಿಸಿಡುತ್ತದೆ.


    ಕೆಲವರು ರುಚಿ ಹೆಚ್ಚಿಸಲು ಹುರಿದ ಕಡಲೆಕಾಯಿ ಸೇರಿಸುತ್ತಾರೆ ಆದರೆ ಇದು ಕ್ಯಾಲೋರಿ ಸಂಖ್ಯೆ ಹೆಚ್ಚಿಸುತ್ತದೆ. ನೀವು ತೂಕ ಇಳಿಸಲು ಪ್ರಯತ್ನಿಸುತ್ತಿದ್ದರೆ, ಅನ್ನದ ಬದಲಿಗೆ ಪೋಹಾ ತಿನ್ನಿರಿ. ಮತ್ತು ಅದಕ್ಕೆ ಕಡಲೆಕಾಯಿ ಸೇರಿಸಬೇಡಿ.


    ಇದನ್ನೂ ಓದಿ: ರಕ್ತದೊತ್ತಡ ಸುಧಾರಿಸುವ ಖರ್ಜೂರದ ಪ್ರಯೋಜನ ತಿಳಿದರೆ ಇಂದೇ ಸೇವಿಸಲು ಪ್ರಾರಂಭಿಸುವಿರಿ


    ರಕ್ತದ ಸಕ್ಕರೆ ನಿಯಂತ್ರಿಸುತ್ತದೆ


    ಬಿಳಿ ಅಕ್ಕಿಯು ರಕ್ತದ ಸಕ್ಕರೆ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ರಕ್ತದ ಸಕ್ಕರೆ ಮಟ್ಟ ಹಠಾತ್ ಏರಿಕೆ ನಿಯಂತ್ರಿಸುತ್ತದೆ.

    Published by:renukadariyannavar
    First published: