• Home
  • »
  • News
  • »
  • lifestyle
  • »
  • Moringa: ನುಗ್ಗೆ ಸೊಪ್ಪು ಸೇವಿಸಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಿ..!

Moringa: ನುಗ್ಗೆ ಸೊಪ್ಪು ಸೇವಿಸಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳಿ..!

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

Moringa: ನುಗ್ಗೆ ಸೊಪ್ಪಿನ ರಸ- ತಾಜಾ ನುಗ್ಗೆ ಸೊಪ್ಪನ್ನು ರುಬ್ಬಿ, ರಸವನ್ನು ತೆಗೆದು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ವಿಶೇಷ ರುಚಿಯುಳ್ಳ ನುಗ್ಗೆ ಸೊಪ್ಪು ಪೋಷಕಾಂಶಗಳ ಆಗರವಾಗಿದ್ದು, ದಿನನಿತ್ಯದ ಹಲವು ಅಡುಗೆಗಳಲ್ಲಿ ಬಳಕೆ ಮಾಡಬಹುದು. ಆ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮುಂದೆ ಓದಿ ...
  • Share this:

ಸೊಪ್ಪು, ತರಕಾರಿಗಳು ನಮ್ಮ ದೇಹದ ಆರೋಗ್ಯಕ್ಕೆ ಅತ್ಯಂತ ಅಗತ್ಯ. ಅದರಲ್ಲೂ ವಿವಿಧ ರೀತಿಯ ಸೊಪ್ಪುಗಳು ವಿಭಿನ್ನ ಮತ್ತು ಹೇರಳ ಪೋಷಕಾಂಶಗಳನ್ನು ಹೊಂದಿರುತ್ತವೆ. ಅಂತಹ ಸೊಪ್ಪುಗಳಲ್ಲಿ ನುಗ್ಗೆ ಸೊಪ್ಪು ಕೂಡ ಒಂದು. ನುಗ್ಗೆ ಸೊಪ್ಪಿನಲ್ಲಿ, ಪ್ರೋಟೀನ್, ಕ್ಯಾಲ್ಸಿಯಂ, 8 ಅಮಿನೋ ಆಮ್ಲಗಳು, ಕಬ್ಬಿಣಾಂಶ, ವಿಟಮಿಮ್ ಸಿ, ಎ ಮತ್ತು ಮಿನರಲ್‍ಗಳಿವೆ. ಆ್ಯಂಟಿಫಂಗಲ್, ಆ್ಯಂಟಿವೈರಲ್, ಆ್ಯಂಟಿಡಿಪ್ರೆಸೆಂಟ್ ಮತ್ತು ಆ್ಯಂಟಿ- ಇನ್‍ಫ್ಲಮೇಟರಿ ಅಂಶಗಳನ್ನು ಹೊಂದಿರುವ ನುಗ್ಗೆ ಸೊಪ್ಪು ಔಷಧೀಯ ಗುಣಗಳ ಆಗರ. ನುಗ್ಗೆ ಮರದ ಪ್ರತಿಯೊಂದು ಭಾಗವು ಆರೋಗ್ಯಕ್ಕೆ ಉಪಯೋಗವಾಗುವ ಅಂಶಗಳನ್ನು ಹೊಂದಿದೆ. ಸಾಮಾನ್ಯವಾಗಿ ನುಗ್ಗೆ ಕಾಯಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ ನುಗ್ಗೆ ಸೊಪ್ಪಿನ ಪ್ರಯೋಜನಗಳು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ.


ಸಾಮಾನ್ಯವಾಗಿ ನುಗ್ಗೆ ಕಾಯಿಯನ್ನು ಎಲ್ಲರೂ ಬಳಸುತ್ತಾರೆ. ಆದರೆ ನುಗ್ಗೆ ಸೊಪ್ಪಿನ ಪ್ರಯೋಜನಗಳು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. ನುಗ್ಗೆ ಸೊಪ್ಪು ಔಷಧೀಯ ಗುಣಗಳ ಆಗರ. ನುಗ್ಗೆ ಸೊಪ್ಪಿನ ಪ್ರಯೋಜನಗಳನ್ನು ತಿಳಿಯೋಣ ಬನ್ನಿ...


Moringa Leaf, Health, Immunity.  ನುಗ್ಗೆ ಸೊಪ್ಪು, ಆರೋಗ್ಯ, ರೋಗನಿರೋಧಕ ಶಕ್ತಿ, Moringa leaves keeps your bones strong and fights against osteoporosis stg ae
ನುಗ್ಗೆ ಸೊಪ್ಪು (Pc: themoringainitiative Instagram Account)


  1. ಸಾಮರ್ಥ್ಯದ ಮಟ್ಟವನ್ನು ಹೆಚ್ಚಿಸುತ್ತದೆ: ನಮ್ಮ ದೇಹದಲ್ಲಿನ ದಣಿವನ್ನು ನಿವಾರಿಸಿ , ದೈಹಿಕ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಹೇರಳ ಕಬ್ಬಿಣಾಂಶಗಳು ಶಕ್ತಿಹೀನತೆಯನ್ನು ಕಡಿಮೆ ಮಾಡುತ್ತದೆ.


2. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ: ನುಗ್ಗೆ ಸೊಪ್ಪಿನಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೈಟೋನ್ಯೂಟ್ರಿಯಂಟ್ಸ್ ಅಧಿಕವಾಗಿರುವುದರಿಂದ, ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಶಕ್ತಿಯುತವಾಗುತ್ತದೆ ಮತ್ತು ಎಲ್ಲಾ ರೀತಿಯ ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ.ಅದರಲ್ಲಿರುವ ವಿಟಮಿನ್ ಎ, ಸಿ ಮತ್ತು ಕಬ್ಬಿಣಾಂಶವೂ ರೋಗ ನಿರೋಧಕ ಸಾಮರ್ಥ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ.


ಇದನ್ನೂ ಓದಿ: Sai Pallavi: ಮದುವೆ ಸ್ಕ್ವಾಡ್​ ಜತೆ ಸಹಜ ಸುಂದರಿ ಸಾಯಿ ಪಲ್ಲವಿ..!


3. ರಕ್ತದಲ್ಲಿ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ: ನುಗ್ಗೆ ಸೊಪ್ಪು ರಕ್ತದಲ್ಲಿನ ಗ್ಲೂಕೋಸ್‌ ಪ್ರಮಾಣವನ್ನು ನಿಯಂತ್ರಿಸುತ್ತದೆ, ಅದರಿಂದ ಮಧುಮೇಹದ ಅಪಾಯ ಕಡಿಮೆಯಾಗುತ್ತದೆ. ನುಗ್ಗೆ ಸೊಪ್ಪಿನಲ್ಲಿರುವ ವರ್ಣದ್ರವ್ಯ ಕ್ಲೊರೊಜೆನಿಕ್ ಆಮ್ಲವು ಊಟದ ನಂತರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡುತ್ತದೆ.


4. ಉರಿಯೂತದ ನಿಯಂತ್ರಣಕ್ಕೆ ಸಹಾಯ: ಉರಿಯೂತ ಎಂದರೆ, ದೇಹ ನೋವು ಮತ್ತು ಗಾಯಗಳಿಗೆ ನೈಸರ್ಗಿಕವಾಗಿ ಹೇಗೆ ಸ್ಪಂದಿಸುತ್ತದೆ ಎಂಬುವುದು. ಆದರೆ ಅದು ಅನಿಯಂತ್ರಿತವಾದರೆ ದೇಹಕ್ಕೆ ಒಳ್ಳೆಯದಲ್ಲ. ನುಗ್ಗೆ ಸೊಪ್ಪು , ಉರಿಯೂತದ ಕಿಣ್ವಗಳನ್ನು ನಿಗ್ರಹಿಸಿ ಮತ್ತು ಆ್ಯಂಟಿ ಇನ್‍ಫ್ಲಮೇಟರಿ ಸೈಟೋಕಿನ್‍ಗಳನ್ನು ಹೆಚ್ಚಿಸುವ ಮೂಲಕ ದೇಹದ ಉರಿಯೂತವನ್ನು ಶಮನಗೊಳಿಸಲು ಸಹಾಯ ಮಾಡುತ್ತದೆ.


5. ಹೃದಯದ ಆರೋಗ್ಯವನ್ನು ಕಾಪಾಡುತ್ತದೆ: ಕೆಟ್ಟ ಕೊಲೆಸ್ಟ್ರಾಲ್‍ಗಳು ರಕ್ತನಾಳಗಳನ್ನು ಬ್ಲಾಕ್​ ಮಾಡಿ, ಹೃದಯಾಘಾತಕ್ಕೆ ಕಾರಣವಾಗಬಹುದು. ನುಗ್ಗೆ ಸೊಪ್ಪು ಹೃದಯವನ್ನು ರಕ್ಷಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್‍ಮಟ್ಟವನ್ನು ಕಡಿಮೆ ಮಾಡುವ ಮೂಲಕ ರಕ್ತನಾಳದ ವ್ಯವಸ್ಥೆಯ ಸುಗಮ ಕಾರ್ಯನಿರ್ವಣೆಗೆ ಬೆಂಬಲ ನೀಡುತ್ತದೆ.


6. ಹೊಟ್ಟೆಗೆ ಪ್ರಯೋಜನಕಾರಿ: ಅಜೀರ್ಣದ ಸಮಸ್ಯೆಗಳನ್ನು ನಿವಾರಿಸಲು ನುಗ್ಗೆ ಸೊಪ್ಪು ಸಹಕಾರಿ. ಮಲಬದ್ಧತೆ, ಉಬ್ಬರಿಕೆ, ಅನಿಲ, ಜಠರದ ಉರಿತ ಮತ್ತು ಅಲ್ಸರೇಟಿವ್ ಕೊಲೈಟಿಸ್ ಸಮಸ್ಯೆ ಇರುವವರು , ತಮ್ಮ ಆಹಾರದ ನುಗ್ಗೆ ಸೊಪ್ಪನ್ನು ಸೇವಿಸುವುದರಿಂದ ಪ್ರಯೋಜನವಾಗುತ್ತದೆ.


7. ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ: ನುಗ್ಗೆ ಸೊಪ್ಪು , ಮೂಳೆಗಳ ಆರೋಗ್ಯಕ್ಕೆ ಅತ್ಯಂತ ಲಾಭದಾಯಕವಾಗಿರುವ ಕ್ಯಾಲ್ಸಿಯಂ ಮತ್ತು ಪ್ರಾಸ್ಫರಸ್‍ನ ಖಜಾನೆಯಾಗಿದೆ. ನುಗ್ಗೆ ಸೊಪ್ಪು, ಅರ್ಥರೈಟಿಸ್‍ನಿಂದ ರಕ್ಷಿಸುತ್ತದೆ ಮತ್ತು ಮೂಳೆಗಳನ್ನು ಸದೃಢಗೊಳಿಸುವ ಮೂಲಕ ಆಸ್ಟಿಯೋಪೊರೋಸಿಸ್ ವಿರುದ್ಧ ಹೋರಾಡುತ್ತದೆ.


ಇದನ್ನೂ ಓದಿ: Kannada Bigg Boss 8: ಕನ್ನಡ ಬಿಗ್ ಬಾಸ್​ 8 ಸೆಕೆಂಡ್​ ಇನ್ನಿಂಗ್ಸ್ ಆರಂಭ​: ಅಧಿಕೃತವಾಗಿ ಪ್ರಕಟಿಸಿದ ಪರಮೇಶ್ವರ ಗುಂಡ್ಕಲ್​


ನುಗ್ಗೆ ಸೊಪ್ಪನ್ನು ಬಳಸುವ ವಿಧಾನ ನುಗ್ಗೆ ಸೊಪ್ಪಿನ ಪುಡಿ- ನುಗ್ಗೆ ಸೊಪ್ಪನ್ನು ಒಣಗಿಸಿ ಪುಡಿ ಮಾಡಿ, ಸ್ಮೂತಿಗಳು, ಸೂಪ್‍ಗಳು ಅಥವಾ ಚಹಾದಲ್ಲಿ ಸೇರಿಸಿ ಸೇವಿಸಬಹುದು.
ನುಗ್ಗೆ ಸೊಪ್ಪಿನ ಎಣ್ಣೆ- ಇದೊಂದು ಅತ್ಯುತ್ತಮ ಎಸೆನ್ಶಿಯಲ್ ತೈಲವಾಗಿದ್ದು, ಚರ್ಮ ಮತ್ತು ಕೂದಲಿನ ರಕ್ಷಣೆಗೆ ಬಳಕೆಯಾಗುತ್ತದೆ.


ನುಗ್ಗೆ ಸೊಪ್ಪಿನ ರಸ- ತಾಜಾ ನುಗ್ಗೆ ಸೊಪ್ಪನ್ನು ರುಬ್ಬಿ, ರಸವನ್ನು ತೆಗೆದು ಸೇವಿಸುವುದು ಆರೋಗ್ಯಕ್ಕೆ ಉತ್ತಮ. ವಿಶೇಷ ರುಚಿಯುಳ್ಳ ನುಗ್ಗೆ ಸೊಪ್ಪು ಪೋಷಕಾಂಶಗಳ ಆಗರವಾಗಿದ್ದು, ದಿನನಿತ್ಯದ ಹಲವು ಅಡುಗೆಗಳಲ್ಲಿ ಬಳಕೆ ಮಾಡಬಹುದು. ಆ ಮೂಲಕ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

Published by:Anitha E
First published: