• Home
 • »
 • News
 • »
 • lifestyle
 • »
 • Weight Loss : ದಿಢೀರ್​​ ಅಂತ ತೂಕ ಗಣನೀಯವಾಗಿ ಇಳಿಕೆಯಾದರೆ ಈ ಕಾಯಿಲೆಯ ಲಕ್ಷಣವಾಗಿರಬಹುದು!

Weight Loss : ದಿಢೀರ್​​ ಅಂತ ತೂಕ ಗಣನೀಯವಾಗಿ ಇಳಿಕೆಯಾದರೆ ಈ ಕಾಯಿಲೆಯ ಲಕ್ಷಣವಾಗಿರಬಹುದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತೂಕ ನಷ್ಟದ ವೇಗವು ಮತ್ತು ಅತ್ಯಂತ ತ್ವರಿತ ಗತಿಯ ತೂಕ ನಷ್ಟ ನಿಮಗೆ ಹಾನಿಕರ ಆಗಬಹುದು. ತೂಕ ಹೆಚ್ಚಾಗುವುದು ಮತ್ತು ತೂಕ ನಷ್ಟ ಎರಡನ್ನೂ ಅನೇಕ ರೋಗಗಳ ಆರಂಭಿಕ ರೋಗ ಲಕ್ಷಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂತಹ ವೇಳೆ ನಿಮ್ಮ ತೂಕದ ಬಗ್ಗೆ ಪರಿಶೀಲನೆ ಮಾಡುವುದು ತುಂಬಾ ಮುಖ್ಯ.

 • Share this:

  ನೀವು ಹಲವು ಬಾರಿ ತೂಕ ಇಳಿಕೆಗೆ (Weight Loss) ಸಾಕಷ್ಟು ಪ್ರಯತ್ನ ಮಾಡಿರುತ್ತೀರಿ. ಆದರೆ ತೂಕ ಇಳಿಸಲು ಸಾಧ್ಯವಾಗದೇ ಒದ್ದಾಡುತ್ತೀರಿ. ನೀವು ಒಂದು ವಾರದಲ್ಲಿ (Week) ತೂಕ ಕಳೆದುಕೊಳ್ಳುವ ಮಾರ್ಗಗಳು, ತೂಕವನ್ನು ತ್ವರಿತವಾಗಿ ಇಳಿಸುವುದು ಹೇಗೆ, ಜಿಮ್ ಮತ್ತು ಡಯಟಿಂಗ್ (Jim And Dieting) ಇಲ್ಲದೆ ತೂಕ ನಷ್ಟ ಹೀಗೆ ಹಲವು ರೀತಿಯಲ್ಲಿ ತೂಕ ನಷ್ಟದ ವಿಷಯಗಳ ಬಗ್ಗೆ ಗೂಗಲ್ ನಲ್ಲಿ (Google) ಜಾಲಾಡಿ, ಅದನ್ನ ಫಾಲೋ ಕೂಡ ಮಾಡಿರುತ್ತೀರಿ. ಸ್ಥೂಲಕಾಯ ಹೊಂದಲು ಅಥವಾ ಬೊಜ್ಜು ದೇಹದ ಜೊತೆ ಬದುಕಲು ಯಾರೂ ಬಯಸುವುದಿಲ್ಲ. ಆರೋಗ್ಯಕರ ಹಾಗೂ ಫಿಟ್ ಆಗಿರಲು ತೂಕ ನಷ್ಟ ತುಂಬಾ ಮುಖ್ಯ.


  ತ್ವರಿತ ತೂಕ ನಷ್ಟ


  ಆದರೆ ತೂಕ ನಷ್ಟದ ವೇಗವು ಮತ್ತು ಅತ್ಯಂತ ತ್ವರಿತ ಗತಿಯ ತೂಕ ನಷ್ಟ ನಿಮಗೆ ಹಾನಿಕರ ಆಗಬಹುದು. ತೂಕ ಹೆಚ್ಚಾಗುವುದು ಮತ್ತು ತೂಕ ನಷ್ಟ ಎರಡನ್ನೂ ಅನೇಕ ರೋಗಗಳ ಆರಂಭಿಕ ರೋಗ ಲಕ್ಷಣಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಅಂತಹ ವೇಳೆ ನಿಮ್ಮ ತೂಕ ಸಮಾನವಾಗಿ ಪರಿಶೀಲನೆ ಮಾಡುವುದು ತುಂಬಾ ಮುಖ್ಯ.


  ನೀವು ಆಹಾರ ಕ್ರಮ ಮತ್ತು ವ್ಯಾಯಾಮ ಮಾಡದೆ ತೂಕ ಇಳಿಸಲು ತಕ್ಷಣವೇ ಆರೋಗ್ಯ ಪರೀಕ್ಷೆ ಮಾಡಿಸಿಕೊಳ್ಳುವುದು ನಿಮಗೆ ಪ್ರಯೋಜನಕಾರಿ ಆಗಿದೆ. ಮೊದಲ ಹಂತದಲ್ಲಿ ತೂಕ ಇಳಿಕೆಯ  ಲಕ್ಷಣ ತೋರಿಸುವ ಆ ಕಾಯಿಲೆಗಳು ಯಾವವು ಎಂಬುದನ್ನು ನೋಡೋಣ.


  ಇದನ್ನೂ ಓದಿ: ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ ಸಮಸ್ಯೆ ಕಡಿಮೆ ಮಾಡಲು ಯಾವ ಆಹಾರ ಸೇವಿಸಬೇಕು?


  ಕ್ಯಾನ್ಸರ್


  ಅಮೇರಿಕನ್ ಸೊಸೈಟಿ ಆಫ್ ಕ್ಲಿನಿಕಲ್ ಆಂಕೊಲಾಜಿ ಪ್ರಕಾರ, ಹಠಾತ್ ತೂಕ ನಷ್ಟವು ಕ್ಯಾನ್ಸರ್ ಕಾಯಿಲೆಗೆ ಸಂಬಂಧ ಪಟ್ಟಿದೆ. ತೂಕ ನಷ್ಟವು ಕ್ಯಾನ್ಸರ್ ರೋಗಿಗಳಲ್ಲಿ ಕಂಡು ಬರುವ ಆರಂಭಿಕ ಲಕ್ಷಣ ಆಗಿದೆ. ಮೊದಲ ಹಂತದಲ್ಲಿ ಕಂಡು ಬರುವ ಕ್ಯಾನ್ಸರ್‌ ಲಕ್ಷಣಗಳೆಂದರೆ ಆಯಾಸ, ದೌರ್ಬಲ್ಯ, ಶಕ್ತಿ ಕೊರತೆ, ಆಲಸ್ಯ ಮತ್ತು ಸಣ್ಣ ಕೆಲಸ ಮಾಡಲು ಕಷ್ಟವಾಗುವುದು ಇತ್ಯಾದಿ.


  ಮಧುಮೇಹ


  ಒಂದು ವರದಿಯ ಪ್ರಕಾರ, ಹಠಾತ್ ತೂಕ ನಷ್ಟ ಮಧುಮೇಹದ ಸಂಕೇತವಾಗಿದೆ. ಟೈಪ್ 1 ಡಯಾಬಿಟಿಸ್ ರೋಗ ನಿರ್ಣಯ ಮಾಡುವ ಮೊದಲು ಜನರು ಸಾಮಾನ್ಯವಾಗಿ ಅನಿರೀಕ್ಷಿತ ತೂಕ ನಷ್ಟ ಆಗುತ್ತದೆ. ಅಲ್ಲದೆ ತ್ವರಿತ ತೂಕ ನಷ್ಟವು ಟೈಪ್ 2 ಮಧುಮೇಹ ಹೊಂದಿರುವ ಜನರ ಮೇಲೆ ಪರಿಣಾಮ ಬೀರುತ್ತದೆ.


  ಬುದ್ಧಿಮಾಂದ್ಯತೆ


  ಬುದ್ಧಿಮಾಂದ್ಯತೆ ಮಾನಸಿಕ ಕಾಯಿಲೆ ಆಗಿದೆ. ಇದರಲ್ಲಿ ವ್ಯಕ್ತಿ ಮರೆವು ಅನುಭವಿಸುತ್ತಾನೆ. ಹೆಚ್ಚಾಗಿ ಈ ರೋಗವು ವೃದ್ಧಾಪ್ಯದಲ್ಲಿ ಕಂಡು ಬರುತ್ತದೆ. ಆದರೆ ಅದರ ಅಪಾಯವು ಎಲ್ಲಾ ವಯಸ್ಸಿನ ವ್ಯಕ್ತಿಗಳಲ್ಲಿ ಉಳಿದಿದೆ. ಮೊದಲಿನಿಂದಲೂ ಬುದ್ಧಿಮಾಂದ್ಯತೆ ಲಕ್ಷಣಗಳತ್ತ ಗಮನ ಹರಿಸುವುದು ತುಂಬಾ ಮುಖ್ಯ ಮತ್ತು ಇದರತ್ತ ಪ್ರಯೋಜನಕಾರಿ ಆಗಿದೆ.


  ಎನ್ ಸಿಬಿಐ ಪ್ರಕಾರ, ಬುದ್ಧಿಮಾಂದ್ಯತೆ ರೋಗಿಗಳಲ್ಲಿ ಕಡಿಮೆ ದೇಹದ ತೂಕವು ಸಾಮಾನ್ಯ ಆಗಿದೆ. ಮತ್ತು ಇದು ಸಾಮರ್ಥ್ಯದಲ್ಲಿನ ಕುಸಿತ ಮತ್ತು ಬುದ್ಧಿಮಾಂದ್ಯತೆಯ ಕಳಪೆ ಫಲಿತಾಂಶಕ್ಕೆ ಸಂಬಂಧಪಟ್ಟಿದೆ.


  ಥೈರಾಯ್ಡ್


  ದೇಹದ ತೂಕದಲ್ಲಿ ತೀವ್ರ ಬದಲಾವಣೆಗಳಿಗೆ ಮತ್ತೊಂದು ಪ್ರಮುಖ ಕಾರಣ ಹೈಪರ್ ಥೈರಾಯ್ಡಿಸಮ್. ದೇಹದ ಒಟ್ಟಾರೆ ಚಯಾಪಚಯ ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ. ತ್ವರಿತ ಹೃದಯ ಬಡಿತವು ಈ ರೋಗದ ಮತ್ತೊಂದು ವಿಶಿಷ್ಟ ಲಕ್ಷಣ ಆಗಿದೆ. ಇದರಲ್ಲಿ ಥೈರಾಯ್ಡ್ ಗ್ರಂಥಿಯು ಥೈರಾಕ್ಸಿನ್ ಎಂಬ ಹಾರ್ಮೋನ್ ಉತ್ಪಾದಿಸುತ್ತದೆ.


  ಜಠರದ ಹುಣ್ಣು


  ಜಠರ ಹುಣ್ಣು ಹೊಟ್ಟೆಯ ಮೇಲಿನ ಪದರ, ಸಣ್ಣ ಕರುಳಿನಲ್ಲಿ ಉಂಟಾಗುವ ಹುಣ್ಣು. ಹುಣ್ಣುಗಳು ಜೀರ್ಣಾಂಗವ್ಯೂಹದ ಮೂಲಕ ಆಹಾರ ಹಾದು ಹೋಗುವುದನ್ನು ತಡೆಯಬಹುದು. ಇದರಿಂದ ಬೇಗನೆ ಹೊಟ್ಟೆ ತುಂಬಿದಂತಾಗುತ್ತದೆ. ಪುನರಾವರ್ತಿತ ವಾಂತಿ ಕೂಡ ಜಠರ ಹುಣ್ಣು ಹೊಂದಿರುವ ಜನರಲ್ಲಿ ಕಂಡು ಬರುತ್ತದೆ ಹಠಾತ್ ತೂಕ ನಷ್ಟ ಲಕ್ಷಣ ಆಗಿದೆ.


  ಇದನ್ನೂ ಓದಿ: ಗರ್ಭಾವಸ್ಥೆಯಲ್ಲುಂಟಾಗುವ ಫೋಲಿಕ್ ಆಮ್ಲದ ಕೊರತೆಯಿಂದ ಯಾವೆಲ್ಲಾ ಸಮಸ್ಯೆ ಉಂಟಾಗುತ್ತದೆ? ಯಾವ ಪದಾರ್ಥಗಳು ಇದನ್ನು ಪೂರೈಸುತ್ತವೆ?


  ಈ ಕಾಯಿಲೆ ತ್ವರಿತ ತೂಕ ನಷ್ಟಕ್ಕೆ ಕಾರಣವಾಗುತ್ತದೆ


  ಹೈಪರ್ಕಾಲ್ಸೆಮಿಯಾ, ಪಾರ್ಕಿನ್ಸನ್ ಕಾಯಿಲೆ, ಪಾರ್ಶ್ವವಾಯು ಅಥವಾ ನರವೈಜ್ಞಾನಿಕ ಅಸ್ವಸ್ಥತೆ, ಅಡಿಸನ್ ಕಾಯಿಲೆ, ಉದರ ಕಾಯಿಲೆ, ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ, ಕ್ರೋನ್ಸ್ ಕಾಯಿಲೆ, ಮಾದಕ ವ್ಯಸನ ಮತ್ತು ಹೃದಯ ವೈಫಲ್ಯದಲ್ಲಿ ತ್ವರಿತ ತೂಕ ನಷ್ಟಕ್ಕೆ ಕಾರಣ ಆಗುತ್ತದೆ.

  Published by:renukadariyannavar
  First published: