• Home
  • »
  • News
  • »
  • lifestyle
  • »
  • Stroke Symptoms: 85% ಜನಕ್ಕೆ ಪಾರ್ಶ್ವವಾಯು ಕಾಯಿಲೆಯ ರೋಗಲಕ್ಷಣಗಳ ಬಗ್ಗೆ ಇನ್ನೂ ಗೊತ್ತೇ ಇಲ್ವಂತೆ

Stroke Symptoms: 85% ಜನಕ್ಕೆ ಪಾರ್ಶ್ವವಾಯು ಕಾಯಿಲೆಯ ರೋಗಲಕ್ಷಣಗಳ ಬಗ್ಗೆ ಇನ್ನೂ ಗೊತ್ತೇ ಇಲ್ವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Stroke Patients Symptoms: ಪ್ರಸ್ತುತ ಸಮೀಕ್ಷೆಯ ಫಲಿತಾಂಶಗಳು ಪಾರ್ಶ್ವವಾಯು ರೋಗಿಗಳು ಮತ್ತು ಕುಟುಂಬದ ಸದಸ್ಯರಲ್ಲಿ ಪಾರ್ಶ್ವವಾಯುವಿನ ಸಾಮಾನ್ಯ ಅರಿವು ಕಡಿಮೆಯಾಗಿದೆ ಎಂಬುದನ್ನು ಒತ್ತಿ ಹೇಳುತ್ತಿದೆ.

  • Share this:

ಕೊಚ್ಚಿ: ಕ್ಷಣಮಾತ್ರದಲ್ಲಿ ಜೀವಕ್ಕೆ ಹಾನಿಯನ್ನುಂಟು ಮಾಡುವಂತಹ ಹೃದಯಾಘಾತ (Heart Attack) , ಸ್ಟ್ರೋಕ್‌ನಂತಹ (Stroke) ಕಾಯಿಲೆಗಳ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸುವುದು ಅತ್ಯಗತ್ಯ. ಇಂತಹ ಕಾಯಿಲೆಗಳ ರೋಗಲಕ್ಷಣಗಳು (Symptoms), ಅವುಗಳು ಬಾರದಂತೆ ತೆಡೆಯಬಹುದಾದ ಜೀವನ ಶೈಲಿ, ಆಹಾರ ಪದ್ಧತಿ (Food Style) ಹೀಗೆ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅದರಲ್ಲೂ ಇಂತಹ ಕಾಯಿಲೆಗಳ ರೋಗಲಕ್ಷಣಗಳ ಬಗ್ಗೆ ತಿಳಿದುಕೊಂಡಿದ್ದರೆ ಅಪಾಯವನ್ನು ತಡೆಯಬಹುದು. ಹೃದಯಾಘಾತದಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಈ ಬಗ್ಗೆ ಜನ ಸ್ವಲ್ಪ ಹೆಚ್ಚು ಕಾಳಜಿ ಮಾಡುತ್ತಿದ್ದಾರೆ. ಸ್ವಲ್ಪ ಎದೆ ನೋವು ಇಂತಹ ಯಾವುದೇ ಲಕ್ಷಣ ಕಂಡುಬಂದರೂ ಕೂಡಲೇ ವೈದ್ಯರನ್ನು ಕಾಣುತ್ತಾರೆ. ಇತ್ತೀಚೆಗೆ ಹೃದಯಾಘಾತದಂತೆ ಈ ಪಾರ್ಶ್ವವಾಯು ಪ್ರಕರಣಗಳು ಸಹ ಮಿತಿಮೀರುತ್ತಿವೆ. ಆದರೆ ದುರಾದೃಷ್ಟವಶಾತ್‌ ಈ ಮಾರಣಾಂತಿಕ ಕಾಯಿಲೆಯ ರೋಗಲಕ್ಷಣಗಳ ಬಗ್ಗೆ ಅದೆಷ್ಟೋ ಜನರಿಗೆ ಇನ್ನೂ ಗೊತ್ತೇ ಇಲ್ವಂತೆ.


85% ಜನಕ್ಕೆ ಪಾರ್ಶ್ವವಾಯುವಿನ ರೋಗಲಕ್ಷಣಗಳ ಬಗ್ಗೆ ತಿಳಿದಿಲ್ಲ


ಸಾವು ಮತ್ತು ದೇಹದ ಅಂಗಗಳ ದುರ್ಬಲತೆಗೆ ಪ್ರಮುಖ ಕಾರಣವಾದ ಪಾರ್ಶ್ವವಾಯುವಿಗೆ ಒಳಗಾದವರಲ್ಲಿ ಶೇಕಡಾ 85 ಕ್ಕಿಂತ ಹೆಚ್ಚು ಜನರಿಗೆ ಅದರ ರೋಗಲಕ್ಷಣಗಳ ಬಗ್ಗೆ ತಿಳಿದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ.


ಪಾರ್ಶ್ವವಾಯು ರೋಗನಿರ್ಣಯ ಮಾಡಿದ 91 ರೋಗಿಗಳ ಸಮೀಕ್ಷೆಯ ಗುಂಪಿನಲ್ಲಿ, 85.7 % ಜನರಿಗೆ ರೋಗಲಕ್ಷಣಗಳ ಬಗ್ಗೆ ತಿಳಿದಿಲ್ಲ ಎಂದು ಕಂಡುಬಂದಿದೆ ಎಂದು ಕೇರಳದ ಕೊಚ್ಚಿಯ ಅಮೃತ ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.


ಬದಲಾದ ಜೀವನಶೈಲಿ, ಒತ್ತಡದ ಬದುಕು ಪ್ರಸ್ತುತ ಯುವಕರಲ್ಲೂ ಸಹ ಪಾರ್ಶವಾಯು ಹೆಚ್ಚಾಗಿ ಸಂಭವಿಸುವಂತೆ ಮಾಡುತ್ತಿದೆ. ಆದರೆ ಆಶ್ಚರ್ಯವೆಂದರೆ ಈ ಸ್ಟ್ರೋಕ್‌ ಎಂದು ಕರೆಯುವ ರೋಗದ ಲಕ್ಷಣಗಳ ಬಗ್ಗೆ ಹೆಚ್ಚಿನವರಿಗೆ ಇನ್ನೂ ತಿಳಿದಲ್ಲವಂತೆ.


ಸ್ಟ್ರೋಕ್ ರೋಗಿಗಳಲ್ಲಿ ಅರಿವಿನ ಕೊರತೆ


"ಕೇರಳವು ಹೆಚ್ಚಿನ ಸಾಕ್ಷರತೆ ಪ್ರಮಾಣವನ್ನು ಹೊಂದಿರುವ ರಾಜ್ಯವಾದರೂ, ಅಧ್ಯಯನದ ಜನಸಂಖ್ಯೆಯ ಸುಮಾರು 87.5% ರಷ್ಟು ಜನರಿಗೆ ಹೆಚ್ಚಿನ ಅನಾರೋಗ್ಯ ಮತ್ತು ಮರಣಕ್ಕೆ ಕಾರಣವಾಗುವ ಪಾರ್ಶ್ವವಾಯು ರೋಗಲಕ್ಷಣಗಳ ಬಗ್ಗೆ ತಿಳಿದಿಲ್ಲ. ಹೆಚ್ಚಿನ ರೋಗಿಗಳನ್ನು (ಶೇ. 90) ಆಸ್ಪತ್ರೆಗೆ ಕರೆದೊಯ್ಯಲಾಗಿದ್ದರೂ ಸಹ.


ಆಸ್ಪತ್ರೆಯಲ್ಲಿ ಪಾರ್ಶ್ವವಾಯು ರೋಗಲಕ್ಷಣಗಳು ಮತ್ತು ಅಪಾಯದ ಅಂಶಗಳ ಅರಿವು ಸ್ಟ್ರೋಕ್ ರೋಗಿಗಳಲ್ಲಿ ಕಡಿಮೆಯಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ" ಎಂದು ಆಸ್ಪತ್ರೆಯ ಪಾರ್ಶ್ವವಾಯು ಔಷಧ ಮತ್ತು ನರವಿಜ್ಞಾನ ವಿಭಾಗದ ಮುಖ್ಯಸ್ಥ ಡಾ. ವಿವೇಕ್ ನಂಬಿಯಾರ್ ಹೇಳಿದ್ದಾರೆ.


ಭಾರತದಲ್ಲಿ, ಯುವಜನರಲ್ಲಿ ಪಾರ್ಶ್ವವಾಯು ಹರಡುವಿಕೆಯು ಪಾಶ್ಚಿಮಾತ್ಯ ದೇಶಗಳಿಗಿಂತ ಹೆಚ್ಚಾಗಿದೆ, ಮತ್ತು ವಿಶೇಷವಾದ ಸ್ಟ್ರೋಕ್ ಘಟಕಗಳು ಮತ್ತು ಥ್ರಂಬೋಲಿಟಿಕ್ ಚಿಕಿತ್ಸೆಯ ಅನುಷ್ಠಾನದ ಹೊರತಾಗಿಯೂ, ಸಾರ್ವಜನಿಕರಿಗೆ ಪಾರ್ಶ್ವವಾಯುಗಳ ಬಗ್ಗೆ ಮಾಹಿತಿಯಿಲ್ಲ ಎಂದು ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ: ಮಗುವಿನ ನಡವಳಿಕೆಯಲ್ಲಿ ಈ ಬದಲಾವಣೆ ಅಪಾಯದ ಸೂಚನೆ, ನೆಗ್ಲೆಕ್ಟ್​ ಮಾಡ್ಲೇಬೇಡಿ


ಅಪಾಯ ತಡೆಗಟ್ಟಲು ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಉತ್ತಮ


ಪಾರ್ಶ್ವವಾಯು ಉಂಟಾದ ಸಂದರ್ಭದಲ್ಲಿ ಅಂಗವೈಕಲ್ಯವನ್ನು ಕಡಿಮೆ ಮಾಡಲು ಮತ್ತು ಜೀವನದ ಗುಣಮಟ್ಟವನ್ನು ಹೆಚ್ಚಿಸಲು ಪಾರ್ಶ್ವವಾಯು ಸಂಭವಿಸಿದ ಮೊದಲ ಕೆಲವು ಗಂಟೆಗಳಲ್ಲಿ ರೋಗಲಕ್ಷಣಗಳು ಮತ್ತು ಆರಂಭಿಕ ವೈದ್ಯಕೀಯ ಆರೈಕೆಯನ್ನು ಅಗತ್ಯವಾಗಿ ಪಡೆಯಬೇಕು. ಹೀಗಾಗಿ ಅದರ ಬಗೆಗಿನ ಲಕ್ಷಣಗಳ ಬಗ್ಗೆ ವ್ಯಾಪಕವಾದ ಅರಿವು ಅಗತ್ಯ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.
ಮಾತಿನ ತೊಂದರೆ ಮತ್ತು ಕಾಲು, ಕೈ ದೌರ್ಬಲ್ಯದ ಲಕ್ಷಣದ ಬಗ್ಗೆ ಇರಲಿ ಎಚ್ಚರ


ಪಾರ್ಶ್ವವಾಯುವಿನ ರೋಗಲಕ್ಷಣಗಳ ಬಗ್ಗೆ ತಿಳಿದಿಲ್ಲದವರಿಗೆ ಮುಂಜಾಗ್ರತಾ ಕ್ರಮವಾಗಿ ಅವುಗಳ ಲಕ್ಷಣಗಳ ಬಗ್ಗೆ ತಿಳಿದಿರಬೇಕು. ಮೊದಲನೆಯದಾಗಿ ಮುಖ್ಯವಾದ ಲಕ್ಷಣ ಎಂದರೆ ಮಾತಿನ ತೊಂದರೆ ಮತ್ತು ಅಸ್ಥಿರವಾದ ಕಾಲು ಮತ್ತು ಕೈ ದೌರ್ಬಲ್ಯ. ಅಂದರೆ ಕೈ, ಕಾಲುಗಳು ಚಲಿಸದೇ ಸೆಟೆದುಕೊಳ್ಳುತ್ತವೆ.


ಈ ಲಕ್ಷಣಗಳು ಮಾರಣಾಂತಿಕವಾಗಿದ್ದು, ತಕ್ಷಣ ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಬೇಕು. ಆಸ್ಪತ್ರೆಯಲ್ಲಿ ಡಾಪ್ಲರ್ ಪರೀಕ್ಷೆಯಂತಹ ನಿಯಮಿತ ತಪಾಸಣೆ/ಪರೀಕ್ಷೆಗಳು ಮತ್ತು ಹೃತ್ಕರ್ಣವನ್ನು ನೋಡಲು ಹೃದಯದ ಆರೋಗ್ಯವನ್ನು ಪರೀಕ್ಷಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.


ಇದನ್ನೂ ಓದಿ: ಗ್ರಿಲ್ಡ್‌ ಚಿಕನ್‌ ತಿಂದ್ರೆ ತೂಕ ಕಡಿಮೆಯಾಗುತ್ತಂತೆ! ಅರೇ, ಹೇಗೆ ಅಂದ್ರೆ ಹೀಗೆ ಅಂತಿದ್ದಾರೆ ತಜ್ಞರು!


ಪ್ರಸ್ತುತ ಸಮೀಕ್ಷೆಯ ಫಲಿತಾಂಶಗಳು ಪಾರ್ಶ್ವವಾಯು ರೋಗಿಗಳು ಮತ್ತು ಕುಟುಂಬದ ಸದಸ್ಯರಲ್ಲಿ ಪಾರ್ಶ್ವವಾಯುವಿನ ಸಾಮಾನ್ಯ ಅರಿವು ಕಡಿಮೆಯಾಗಿದೆ ಎಂಬುದನ್ನು ಒತ್ತಿ ಹೇಳುತ್ತಿದೆ. ಪಾರ್ಶ್ವವಾಯು ರೋಗಿಗಳ ಚಿಕಿತ್ಸೆ ಮತ್ತು ಫಲಿತಾಂಶವನ್ನು ಸುಧಾರಿಸಲು ವರ್ಧಿತ ಸಾರ್ವಜನಿಕ ಜಾಗೃತಿಯ ತುರ್ತು ಅವಶ್ಯಕತೆಯಿದೆ ಎಂದು ಅದು ಹೇಳಿದೆ.

Published by:Sandhya M
First published: