• Home
 • »
 • News
 • »
 • lifestyle
 • »
 • Spinach: ಪಾಲಕ್ ಅಡುಗೆ ಮಾಡುವ ಮುನ್ನ ಹುಷಾರ್, ಸೊಪ್ಪು ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ!

Spinach: ಪಾಲಕ್ ಅಡುಗೆ ಮಾಡುವ ಮುನ್ನ ಹುಷಾರ್, ಸೊಪ್ಪು ಸೇವಿಸಿ 200ಕ್ಕೂ ಹೆಚ್ಚು ಜನ ಅಸ್ವಸ್ಥ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸದ್ಯಕ್ಕೆ ದೊರೆತಿರುವ ಮಾಹಿತಿಗಳ ಪ್ರಕಾರ ಪಾಲಕ್ ಅನ್ನು ಬೆಳೆಯುವಾಗ ಆಕಸ್ಮಿಕವಾಗಿ ಅದರೊಂದಿಗೆ ಈ ಥಾರ್ನ್ ಆಪಲ್ ಬೆಳೆಯನ್ನೂ ಬೆಳೆಯಲಾಗಿದೆ. ಇದನ್ನು ಜಿಮ್ಸ್ ಆನ್ ವೀಡ್ ಎಂದೂ ಸಹ ಕರೆಯಲಾಗುತ್ತದೆ ಹಾಗೂ ಇದರ ಸೇವನೆ ಸಾಕಷ್ಟು ಅನಾರೋಗ್ಯಕ್ಕೆ ಕಾರಣವಾಗುತ್ತದೆ.

 • Share this:

  ಪ್ರಾಕೃತಿಕವಾಗಿ ಆಯಾ ಋತುಮಾನಗಳಲ್ಲಿ ಮನುಷ್ಯನು ಸೇವಿಸಬೇಕಾದಂತಹ ಬೆಳೆಗಳು, ಹಣ್ಣುಗಳು, ತರಕಾರಿ-ಸೊಪ್ಪುಗಳು ಪ್ರಕೃತಿದತ್ತವಾಗಿಯೇ (nature) ಸಿಗುತ್ತದೆ. ಆದರೆ ಒಮ್ಮೊಮ್ಮೆ ಮನುಷ್ಯನ ನಿರ್ಲಕ್ಷ್ಯದಿಂದಾಗಿಯೋ ಅಥವಾ ಹೆಚ್ಚಿನ ಆಸೆಬುರುಕತನದಿಂದಾಗಿಯೋ ಪ್ರಕೃತಿಯ ವಿರುದ್ಧ ಏನಾದರೂ ಮಾಡಿದರೆ ಅದರಿಂದ ನಮಗೆ ದುರಂತ ಸಂಭವಿಸದೇ ಇರದು. ಆಸ್ಟ್ರೇಲಿಯಾದ (Australia) ಫಾರ್ಮ್ ಒಂದರಲ್ಲಿ ಆಕಸ್ಮಿಕವಾಗಿ ಸ್ಪಿನಾಚ್ (spinach) ಅಥವಾ ಪಾಲಕ್ ಸೊಪ್ಪಿನ ಜೊತೆ ಬೆಳೆದಿದ್ದ ಕಳೆ ಸೇವಿಸಿ ಕನಿಷ್ಠ 200 ಜನರು ಒಂದು ರೀತಿಯ ಭ್ರಾಂತಿಗೊಳಗಾಗಿದ್ದಾರೆಂದು ತಿಳಿದುಬಂದಿದೆ. ಇಂಥದ್ದೊಂದು ವಿಚಿತ್ರ ಘಟನೆ ಈಗ ದೂರದ ಆಸ್ಟ್ರೇಲಿಯಾ ದೇಶದಿಂದ ವರದಿಯಾಗಿದೆ. ಸುಮಾರು 200 ಜನರು ಕಳೆಗಳೊಂದಿಗೆ (weed) ಬೆಳೆದು ಕಲ್ಮಶವಾಗಿದ್ದಂತಹ ಬೇಬಿ ಸ್ಪಿನಾಚ್ (ಪಾಲಕ್ ಸೊಪ್ಪು) ಜೊತೆ ಬೆಳೆದ ಕಳೆ ಸೇವಿಸಿದ್ದುದರ ಪರಿಣಾಮದಿಂದಾಗಿ ಭ್ರಾಂತಿಗೊಳಗಾಗಿದ್ದಾರಲ್ಲದೆ ಇತರೇ ಅಡ್ಡಪರಿಣಾಮಗಳಿಗೆ ತುತ್ತಾಗಿದ್ದಾರೆ.


  ಪಾಲಕ್ ಜೊತೆ ಬೆಳೆದಿದ್ದ ಕಳೆ ಯಾವುದು?


  ಇದಾದ ದಿನಗಳ ನಂತರ ಈಗ ಫುಡ್ ಸ್ಟ್ಯಾಂಡರ್ಡ್ಸ್ ಆಸ್ಟ್ರೇಲಿಯಾ ಆಂಡ್ ನ್ಯೂಜಿಲ್ಯಾಂಡ್ ಈಗ ದೇಶಾದ್ಯಂತ ಪಾಲಕ್ ಸೊಪ್ಪನ್ನು ಹಿಂಪಡೆದುಕೊಳ್ಳುವ ಪ್ರಕ್ರಿಯೆಯನ್ನು ಆರಂಭಿಸಿರುವುದಾಗಿ ತಿಳಿದುಬಂದಿದೆ. ಕೊನೆಗೂ ಈ ರೀತಿಯ ಅನಾರೋಗ್ಯಕರ ಲಕ್ಷಣ ಉಂಟು ಮಾಡುತ್ತಿದ್ದ ಆ ಬೆಳೆಯನ್ನು ಈಗ ಕಂಡುಹಿಡಿಯಲಾಗಿದ್ದು ಅದನ್ನು ಥಾರ್ನ್ ಆಪಲ್ ಎಂದು ಹೇಳಲಾಗಿದೆ. ಈ ಕಳೆಯು ಪಾಲಕ್ ನೊಂದಿಗೆ ಬೆಳೆದು ಸಮ್ಮಿಳಿತವಾಗಿದ್ದರಿಂದ ಸೊಪ್ಪನ್ನು ಸೇವಿಸಿದವರಲ್ಲಿ ಇದು ಭ್ರಾಂತಿ, ಮಂದ ದೃಷ್ಟಿ ಮುಂತಾದ ಪರಿಣಾಮಗಳನ್ನು ಉಂಟು ಮಾಡಿರುವುದಾಗಿ ತಿಳಿದುಬಂದಿದೆ.


  ಆಕಸ್ಮಿಕವಾಗಿ ಬೆಳೆದ ಕಳೆ


  ಸದ್ಯಕ್ಕೆ ದೊರೆತಿರುವ ಮಾಹಿತಿಗಳ ಪ್ರಕಾರ ಪಾಲಕ್ ಅನ್ನು ಬೆಳೆಯುವಾಗ ಆಕಸ್ಮಿಕವಾಗಿ ಅದರೊಂದಿಗೆ ಈ ಥಾರ್ನ್ ಆಪಲ್ ಬೆಳೆಯನ್ನೂ ಬೆಳೆಯಲಾಗಿದೆ. ಇದನ್ನು ಜಿಮ್ಸ್ ಆನ್ ವೀಡ್ ಎಂದೂ ಸಹ ಕರೆಯಲಾಗುತ್ತದೆ ಹಾಗೂ ಇದರ ಸೇವನೆ ಸಾಕಷ್ಟು ಅನಾರೋಗ್ಯಕರ ಲಕ್ಷಣಗಳಾದ ಭ್ರಾಂತಿ, ಮಂದ ದೃಷ್ಟಿ, ಜೋರಾದ ಹೃದಯ ಬಡಿತ, ಒಣಗಿದ ಮುಖ, ಒಣಗಿದ ಬಾಯಿ, ತಲೆನೋವು, ನೌಸಿಯಾ ಇತ್ಯಾದಿಗಳನ್ನು ಉಂಟು ಮಾಡುತ್ತದೆ.


  ಇದನ್ನೂ ಓದಿ: Diet Tips: ದಿನವೂ ತಿನ್ನುವ ಈ ತರಕಾರಿಗಳಲ್ಲಿದೆ ವಿಷಕಾರಿ ಅಂಶ! ಬಳಸುವ ಮುನ್ನ ತಿಳಿದುಕೊಳ್ಳಿ


   190 ಜನರು ಅಸ್ವಸ್ಥ


  ಇನ್ನು, ಡಿಸೆಂಬರ್ 18ರ ವರೆಗೆ, ಆಸ್ಟ್ರೇಲಿಯಾದ ರಾಜಧಾನಿ ವಲಯ, ನ್ಯೂ ಸೌತ್ ವೇಲ್ಸ್, ವಿಕ್ಟೋರಿಯಾ ಮತ್ತು ಕ್ವೀನ್ಸ್ ಲ್ಯಾಂಡ್ ವ್ಯಾಪ್ತಿಯಲ್ಲಿ ಸುಮಾರು 190 ಜನರು ಈ ಕಲುಷಿತ ಪಾಲಕ್ ಸೊಪ್ಪು ಸೇವಿಸಿ ಅನಾರೋಗ್ಯದ ಲಕ್ಷಣಗಳಿಗೆ ಈಡಾಗಿದ್ದಾರೆಂದು ತಿಳಿದುಬಂದಿದೆ. ಈಗಾಗಲೇ ಈ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದ್ದು ಬಾಧ್ಯಸ್ಥರ ಸಂಖ್ಯೆ ಇನ್ನೂ ವೃದ್ಧಿಯಾಗಬಹುದೆಂದು ಅಲ್ಲಿನ ಅಧಿಕಾರಿಗಳು ಶಂಕಿಸಿದ್ದಾರೆ.


  ಹಲವರು ಆಸ್ಪತ್ರೆಗೆ ದಾಖಲು


  ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಸ್ಪತ್ರೆ ದಾಖಲಾತಿಗಳಾಗಿರುವ ಬಗ್ಗೆ ವರದಿಯಾಗಿದೆ. ಆದಾಗ್ಯೂ ಪರಿಸ್ಥಿತಿ ಅಷ್ಟೊಂದು ಗಂಭೀರವಾಗಿಲ್ಲವೆಂದು, ಸಾಕಷ್ಟು ಜನರು ಅಲ್ಪಕಾಲದವರೆಗೆ ಅಡ್ಡಪರಿಣಾಮ ಅನುಭವಿಸಿ ಇದೀಗ ಶೀಘ್ರವಾಗಿ ಚೇತರಿಕೊಳ್ಳುತ್ತಿದ್ದಾರೆಂದೂ ಸಹ ಹೇಳಲಾಗಿದೆ.


  ಗಾರ್ಡಿಯನ್ ವರದಿ ಮಾಡಿರುವಂತೆ, "ಈ ಕಲುಷಿತ ಸ್ಪಿನಾಚ್ ಬೆಳೆದ ರಿವೇರಿಯಾ ಫಾರ್ಮ್ ತನ್ನ ಹೇಳಿಕೆಯಲ್ಲಿ ಈಗಾಗಲೇ ನಡೆಸಲಾದ ತನಿಖೆಯಲ್ಲಿ ಇನ್ನಿತರ ಯಾವುದೇ ರಾಸಾಯನಿಕಗಳು ಬೆಳೆಯಲ್ಲಿ ಪತ್ತೆಯಾಗಿಲ್ಲ ಎಂದು ಹೇಳಿದೆ". ಅಲ್ಲದೆ, ಈ ವಿಕ್ಟೋರಿಯಾ ಮೂಲದ ಫಾರ್ಮ್ ತನ್ನ ಆಂತರಿಕ ಮಟ್ಟದ ತನಿಖೆಯನ್ನೂ ಸಹ ನಡೆಸುತ್ತಿರುವುದಾಗಿ ಹೇಳಿದೆ.


  FSANZ ಪ್ರಾಧಿಕಾರದ ಸಿಇಒ ಆಗಿರುವ ಡಾ. ಸಾಂಡ್ರಾ ಕತ್ಬರ್ಟ್ ಅವರು ಮಾತನಾಡಿದ್ದು ರಾಷ್ಟ್ರೀಯ ಆಹಾರ ನಿಯಂತ್ರಣವ್ಯವಸ್ಥೆಯು ಸಮರ್ಪಕವಾಗಿ ಕೆಲಸ ಮಾಡಿದ್ದು ಇದರಲ್ಲಡಗಿರುವ ಮೂಲದ ಮಾಹಿತಿಯನ್ನು ಕಲೆ ಹಾಕಿದೆ ಎಂದಿದ್ದಲ್ಲದೆ, ತಮ್ಮ ದೇಶದ ಈ ವ್ಯವಸ್ಥೆಯು ಆಧುನಿಕ ಜಗತ್ತಿನ ಆದರ್ಶಮಯವಾದ ವ್ಯವಸ್ಥೆಯಾಗಿದೆ ಎಂದು ಹೇಳಿದ್ದಾರೆ.


  ಇದನ್ನೂ ಓದಿ: Cardamom Market: ಗ್ವಾಟೆಮಾಲಾ ಪಾಲಾಗಿದ್ದ ಸಣ್ಣ ಏಲಕ್ಕಿ ಮಾರುಕಟ್ಟೆ! ರಾಜೀವ್ ಗಾಂಧಿ ಸರ್ಕಾರ ಮರಳಿ ಪಡೆದುಕೊಂಡಿದ್ದು ಹೇಗೆ?


  ಅಂತಿಮವಾಗಿ, ನಮಗೆ ಪ್ರಾಕೃತಿಕವಾಗಿ ಸಿಗುವ ಪ್ರತಿಯೊಂದು ಪದಾರ್ಥಗಳು ತಮ್ಮದೆ ಆದ ವಿಶೇಷತೆಗಳನ್ನು ಹೊಂದಿರುತ್ತವೆ. ಮನುಷ್ಯರಾದವರು ನಾವು ಯಾವುದು ಬೇಕೋ ಅದನ್ನು ಸಮರ್ಥವಾಗಿ ಬಳಸಬೇಕು ಹಾಗೂ ಕೃಷಿ ಚಟುವಟಿಕೆಗಳಲ್ಲಿ ಸಾಕಷ್ಟು ಜಾಗರೂಕತೆಯಿಂದ ಬೆಳೆಗಳ ಆಯ್ಕೆಯನ್ನು ಮಾಡಿಕೊಳ್ಳಬೇಕು ಮತ್ತು ಬೆಳೆಯುವಾಗ ಜಾಗರೂಕತೆಯಿಂದಿರಬೇಕು. ಯಾವುದೇ ರೀತಿಯ ಸಮಸ್ಯೆ ಇದ್ದಲ್ಲಿ ಆ ಬಗ್ಗೆ ತಜ್ಞರಿಂದ ಸಲಹೆ ಪಡೆಯುವುದು ಉತ್ತಮ.

  Published by:Annappa Achari
  First published: