ಧೂಮಪಾನದ ಅಭ್ಯಾಸಕ್ಕಿಂತ ಮೊಲದೇ ಗಾಂಜಾ ಮತ್ತಿಗೆ ಬಲಿಯಾಗುತ್ತಿರುವ ಯುವ ಸಮೂಹ

news18
Updated:May 21, 2018, 1:04 PM IST
ಧೂಮಪಾನದ ಅಭ್ಯಾಸಕ್ಕಿಂತ ಮೊಲದೇ ಗಾಂಜಾ ಮತ್ತಿಗೆ ಬಲಿಯಾಗುತ್ತಿರುವ ಯುವ ಸಮೂಹ
FILE - This April 15, 2017 file photo shows marijuana plants on display at a medical marijuana provider in downtown Los Angeles. A new study released on Wednesday, May 24, 2017 about using a marijuana ingredient to treat epilepsy joins a limited record of scientific knowledge about the harms and benefits of pot. Experts have called for a national effort to learn more about pot and its chemical cousins. (AP Photo/Richard Vogel)
news18
Updated: May 21, 2018, 1:04 PM IST
ನ್ಯೂಸ್ 18 ಕನ್ನಡ

ಯುವಜನರು ಸಿಗರೇಟ್ ಅಥವಾ ಮದ್ಯಪಾನದ ಚಟಕ್ಕೆ ಬೀಳುವ ಮೊದಲೇ ಗಾಂಜಾ ಮತ್ತಿಗೆ ಬಲಿಯಾಗುತ್ತಿದ್ದಾರೆ ಎಂದು ಅಮೆರಿಕದ ಸಂಶೋಧಕರ ಸಂಶೋಧನೆಯಿಂದ ತಿಳಿದು ಬಂದಿದೆ.

ರಾಷ್ಟ್ರೀಯ ಮಕ್ಕಳ ಆರೊಗ್ಯ ಮತ್ತು ಮಾನವ ಅಭಿವೃದ್ಥಿ ಸಂಸ್ಥೆಯ (ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಚೈಲ್ಡ್ ಹೆಲ್ತ್ ಆ್ಯಂಡ್​ ಹ್ಯೂಮನ್ ಡೆವಲಪ್​ಮೆಂಟ್) ಸಂಶೋಧಕರ ಅಧ್ಯಯನದಿಂದ ಈ ಹೊಸ ಅಂಶ ಬೆಳಕಿಗೆ ಬಂದಿದೆ.

ಈ ಅಧ್ಯಯನಕ್ಕಾಗಿ ಅಮೆರಿಕದ ಡ್ರಗ್ ಯೂಸ್ ಆ್ಯಂಡ್​ ಹೆಲ್ತ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ 12 ರಿಂದ 21 ವಯೋಮಾನದ 275,500 ಯುವಕರನ್ನು ಬಳಸಿಕೊಳ್ಳಲಾಗಿತ್ತು. ಈ ಯುವಕರು ಅವರು ಧೂಮಪಾನ ಆರಂಭಿಸಿದ ಸಂಪೂರ್ಣ ಮಾಹಿತಿಯನ್ನು ಹಂಚಿಕೊಂಡಿದ್ದರು.

ಸಮೀಕ್ಷೆಯಲ್ಲಿ ಸಿಗರೇಟ್, ಗಾಂಜಾ, ಮದ್ಯಪಾನ ಮತ್ತು ಇತರ ತಂಬಾಕು, ಮಾದಕ ವಸ್ತುಗಳ ಬಳಕೆಯ ಬಗ್ಗೆ ಕೇಳಲಾಗಿತ್ತು. 2014ರಲ್ಲಿ ಸಂಗ್ರಹಿಸಿದ ಮಾಹಿತಿಯ ಒಟ್ಟಾರೆ ಫಲಿತಾಂಶದಲ್ಲಿ ಶೇ.8ರಷ್ಟು ಮಂದಿ ಧೂಮಪಾನಕ್ಕಿಂತ ಸೇರಿದಂತೆ ಇತರೆ ಮಾದಕ ವಸ್ತುಗಳಿಗಿಂತ ಮೊದಲು ಗಾಂಜಾ ಸೇದಿದ್ದರು. 2004ರಲ್ಲಿ ಶೇ4.8 ರಷ್ಟಿದ್ದ ಅಂಕಿ ಅಂಶಗಳಿಗೆ ಹೋಲಿಸಿದರೆ ಗಾಂಜಾ ಮೊದಲು ಬಳಸಿದವರ ಪ್ರಮಾಣ ಶೇ.8ರಷ್ಟು ಹೆಚ್ಚಾಗಿದೆ.

'ಗಾಂಜಾ ಸೇವನೆ ಹೆಚ್ಚಾಗಿರುವುದರಿಂದ 2004 ರಿಂದ 2014ರ ನಡುವೆ ಸಿಗರೇಟ್ ಸೇದುವವರ ಪ್ರಮಾಣ 21% ರಿಂದ 9% ರಷ್ಟು ಇಳಿಕೆಯಾಗಿದೆ. ಯುವಕರಲ್ಲಿ ಶೇ.36 ರಿಂದ ಶೇ. 46 ರಷ್ಟು ಗಾಂಜಾ ಸೇವೆನೆಯು ಗಮನಾರ್ಹ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಯುವ ಸಮೂಹಕ್ಕೆ ಇದರಿಂದಾಗುವ ಅಪಾಯಗಳ ಬಗ್ಗೆ ಅರಿವು ಕೂಡ ಅಸ್ಪಷ್ಟವಾಗಿದೆ' ಎಂದು ಲೇಖಕ ಬ್ರಿಯಾನ್ ಫೇರ್​ಮ್ಯಾನ್ ಅಭಿಪ್ರಾಯ ಪಟ್ಟಿದ್ದಾರೆ.

'ನಮ್ಮ ಸಂಶೋಧನೆಯ ಪ್ರಮುಖ ಗುರಿ ಗಾಂಜಾ ಬಳಕೆಯನ್ನು ತಡೆಗಟ್ಟುವುದಾಗಿದೆ. ತಂಬಾಕು,ಆಲ್ಕೋಹಾಲ್ ಅಥವಾ ಗಾಂಜಾ ವ್ಯಸನಿಗಳನ್ನು ವಿವಿಧ ಗುಂಪುಗಳಾಗಿ ವಿಂಗಡಿಸಿ ದುಶ್ಚಟಗಳ ಬಗ್ಗೆ ಅರಿವು ಮೂಡಿಸಬೇಕಿದೆ. ಅದರಲ್ಲೂ ವಿಶೇಷವಾಗಿ ಗಾಂಜಾ ವ್ಯಸನಿ ಯುವಕರಿಗೆ ಚಿಕಿತ್ಸೆ ಒದಗಿಸಿ ಅವರನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಬೇಕಿದೆ' ಎಂದು ಫೇರ್​ಮ್ಯಾನ್ ತಿಳಿಸಿದ್ದಾರೆ.
Loading...

ಹದಿಹರೆಯದವರು ಗಾಂಜಾಗೆ ಆಕರ್ಷಿತರಾಗಿದ್ದು, ಇದನ್ನು ಒಂದು ಚಟವನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಈ ಸಂಶೋಧನೆಯಿಂದ ತಿಳಿದು ಬಂದಿದೆ. 15 ವಯಸ್ಸಿಗಿಂತ ಮುಂಚಿತವಾಗಿ ಮಾದಕ ವಸ್ತುವಿಗೆ ದಾಸರಾಗುವರಲ್ಲಿ ಶೇ.68 ಮಂದಿಗೆ ಮತ್ತು 15 ಮತ್ತು 17 ರ ನಡುವೆ ಮಾದಕ ವಸ್ತುವಿನ ಚಟ ಆರಂಭಿಸುವವರಲ್ಲಿ ಶೇ.44ರಷ್ಟು ಮಂದಿಗೆ 28 ವಯಸ್ಸಿನ ಒಳಗಿನವರಿಗೆ ಇದರ ಪರಿಣಾಮ ಅಪಾಯಕಾರಿಯಾಗಿರಲಿದೆ ಎಂದು ಕೆನಡಾದಲ್ಲಿ ನಡೆಸಿದ ಮತ್ತೊಂದು ಸಂಶೋಧನೆಯಿಂದ ತಿಳಿದು ಬಂದಿದೆ.
First published:May 21, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ