Salt And Health: ಹೆಚ್ಚು ಉಪ್ಪು ಸೇವನೆಯಿಂದ ಸಾವಿನ ಸಾಧ್ಯತೆ ಹೆಚ್ಚಳ!

ಲೂಸಿಯಾನದ ಟುಲೇನ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯು ಆಹಾರಕ್ಕೆ ಉಪ್ಪು ಸೇರಿಸುವುದು ಅಪಾಯದಿಂದ ಮುಕ್ತವಾಗಿಲ್ಲ ಎಂದು ತಿಳಿದು ಬಂದಿದೆ. ಇದು ಅಕಾಲಿಕ ಮರಣದ ಅಪಾಯ ಹೆಚ್ಚಿಸುತ್ತದೆ. ಉಪ್ಪು ಕಡಿಮೆ ಇದ್ದರೆ ಉಪ್ಪಿನಕಾಯಿ ಮತ್ತು ಚಟ್ನಿ ಊಟದಲ್ಲಿ ಸೇರಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಜುಲೈ 11 (July) ರಂದು ಸಂಶೋಧನೆ (Research) ಪ್ರಕಟವಾಗಿದೆ. 2006 ಮತ್ತು 2010 ರ ನಡುವೆ ನಡೆದ ಯುಕೆ ಬಯೋಬ್ಯಾಂಕ್ ಯೋಜನೆಯ ಅಧ್ಯಯನದಲ್ಲಿ (Study) 501,379 ಜನರು (People) ಭಾಗವಹಿಸಿದ್ದರು (Participate). ಅಧ್ಯಯನದಲ್ಲಿ ಭಾಗವಹಿಸಿದವರಿಗೆ ಹಲವು ಪ್ರಶ್ನೆಗಳನ್ನು ಕೇಳಲಾಗಿತ್ತು. ಈ ಮೂಲಕ ಅವರು ತಮ್ಮ ಊಟದಲ್ಲಿ ಹೆಚ್ಚಿನ ಉಪ್ಪು ಸೇರಿಸುತ್ತಾರೆಯೇ ಇಲ್ಲವೇ ಎಂದು ನೋಡಲಾಗಿದೆ. ಜೊತೆಗೆ ಅವರು ಎಷ್ಟು ಬಾರಿ ಉಪ್ಪನ್ನು ತಮ್ಮ ಅಡುಗೆಯಲ್ಲಿ ಸೇರಿಸುತ್ತಾರೆ ಎಂಬುದನ್ನು ಅಬ್ಸರ್ವ್ ಮಾಡಲಾಗಿದೆ. ಜೊತೆಗೆ ಆಹಾರದಲ್ಲಿ ಹೆಚ್ಚು ಉಪ್ಪು ಸೇವನೆ ಮಾಡುವ ಜನರಲ್ಲಿ ಅಕಾಲಿಕ ಮರಣದ ಅಪಾಯ ಹೆಚ್ಚು.

    ಮಹಿಳೆಯರು ಮತ್ತು ಪುರುಷರ ಮೇಲೆ ವಿಭಿನ್ನ ಪರಿಣಾಮ ಬೀರುತ್ತದೆ

    ಅದು 28 ಪ್ರತಿಶತದಷ್ಟು ಹೆಚ್ಚಿದೆ ಎಂದು ಅಧ್ಯಯನದಲ್ಲಿ ತಿಳಿದು ಬಂದಿದೆ. ಆಹಾರದಲ್ಲಿ ಹೆಚ್ಚುವರಿ ಉಪ್ಪು ತಿನ್ನುವ ಅಪಾಯ ಮಹಿಳೆಯರು ಮತ್ತು ಪುರುಷರಲ್ಲಿ ಭಿನ್ನವಾಗಿದೆ. ತಮ್ಮ ಆಹಾರದಲ್ಲಿ ಹೆಚ್ಚು ಉಪ್ಪು ಸೇರಿಸುವ 50 ವರ್ಷಕ್ಕಿಂತ ಮೇಲ್ಪಟ್ಟ ಪುರುಷರು, ಸುಮಾರು 2.28 ವರ್ಷ ವಯಸ್ಸಿನಲ್ಲಿ ತಮ್ಮ ಜೀವನ ಕೊನೆಗೊಳಿಸುತ್ತಾರೆ ಎಂದು ಅಧ್ಯಯನ ಕಂಡು ಹಿಡಿದಿದೆ. ಆದರೆ ಮಹಿಳೆಯರ ಜೀವನದ ಸಮಯ 1.5 ವರ್ಷ ಆಗಿರುತ್ತದೆ ಎಂದು ಕಂಡು ಹಿಡಿದಿದೆ.

    ಹೆಚ್ಚಿನ ಪ್ರಮಾಣದ ಉಪ್ಪು ಸೇವನೆ ಸಮಸ್ಯೆ

    ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಹೆಚ್ಚಿನ ಸೋಡಿಯಂ ಸೇವನೆ ದಿನಕ್ಕೆ 2 ಗ್ರಾಂ ಉಪ್ಪು, 5 ಗ್ರಾಂ ಉಪ್ಪುದಿನಕ್ಕೆ ಸಮ. ಮತ್ತು ಅಸಮರ್ಪಕ ಪೊಟ್ಯಾಸಿಯಮ್ ಸೇವನೆಯು 3.5 ಗ್ರಾಂ ದಿನಕ್ಕಿಂತ ಕಡಿಮೆ. ಇದು ಅಧಿಕ ರಕ್ತದೊತ್ತಡ, ಹೃದ್ರೋಗ, ಪಾರ್ಶ್ವವಾಯು ಅಪಾಯ ಹೆಚ್ಚಿಸುತ್ತದೆ. ಈ ಅಪಾಯವನ್ನು ಕಡಿಮೆ ಮಾಡಲು, ವಯಸ್ಕರರು ದಿನಕ್ಕೆ 5 ಗ್ರಾಂಗಿಂತ ಕಡಿಮೆ ಉಪ್ಪು ಸೇವಿಸುವಂತೆ ಗ್ಲೋಬಲ್ ಹೆಲ್ತ್ ಏಜೆನ್ಸಿ ಸೂಚಿಸಿದೆ.

    ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

    ದೇಹದಲ್ಲಿ ಉಪ್ಪಿನ ಪ್ರಮಾಣ ಹೆಚ್ಚುತ್ತಿದೆ ಎಂದು ತಿಳಿಯುವುದು ಹೇಗೆ?

    ವಾಯು ಸಮಸ್ಯೆ

    ಊತ

    ಹೆಚ್ಚಿದ ರಕ್ತದೊತ್ತಡ

    ಆಗಾಗ್ಗೆ ಬಾಯಾರಿಕೆ ಮತ್ತು ಮೂತ್ರ ವಿಸರ್ಜನೆ

    ನಿದ್ರಾ ಭಂಗ

    ದೌರ್ಬಲ್ಯ

    ಜೀರ್ಣಾಂಗವ್ಯೂಹ ತೊಂದರೆ

    ಉಪ್ಪು ಸೇವನೆಯಿಂದಾಗುವ ಅಪಾಯ ಕಡಿಮೆ ಮಾಡುವುದು ಹೇಗೆ?

    UK ರಾಷ್ಟ್ರೀಯ ಆರೋಗ್ಯ ಸೇವೆ (NHS) ಪ್ರಕಾರ, ಕಡಿಮೆ ಉಪ್ಪಿನ ಆಹಾರ ಖರೀದಿಸಲು ಶಿಫಾರಸು ಮಾಡುತ್ತದೆ. ದೈನಂದಿನ ವಸ್ತುಗಳ ಖರೀದಿ ವೇಳೆ ಆಹಾರದ ಪ್ಯಾಕೇಜಿಂಗ್‌ನಲ್ಲಿ ಪೌಷ್ಟಿಕಾಂಶದ ಲೇಬಲ್‌ಗಳನ್ನು ಚೆಕ್ ಮಾಡಿ.

    ಕ್ಯಾರೆಟ್, ಸೆಲರಿ, ಹಣ್ಣುಗಳು ಅಥವಾ ತರಕಾರಿಗಳು, ಆರೋಗ್ಯಕರ ತಿಂಡಿ ಸೇವನೆ ಮಾಡಿ. ಕಡಿಮೆ ಉಪ್ಪಿನಲ್ಲಿ ಬೇಯಿಸಿದ ಪದಾರ್ಥ ಸೇವನೆ ಮಾಡಿ. ಮೆಣಸು, ಗಿಡಮೂಲಿಕೆ ಮತ್ತು ಮಸಾಲೆಗಳಂತಹ ಪರ್ಯಾಯ ಪದಾರ್ಥ ಬಳಕೆ ಮಾಡಿ.

    ಉಪ್ಪು ಸಾವಿಗೆ ಕಾರಣವಾಗುವ ಸಾಧ್ಯತೆ ಹೆಚ್ಚು

    ನೀವು ದೀರ್ಘಕಾಲ ಬದುಕಲು ಬಯಸಿದರೆ, ಊಟದ ಮೇಜಿನ ಮೇಲೆ ಉಪ್ಪು ಇಡುವುದನ್ನು ನಿಲ್ಲಿಸಿ. ಆಹಾರದಲ್ಲಿ ಉಪ್ಪು ಕಡಿಮೆ ಇದ್ದರೆ, ಉಪ್ಪಿನಕಾಯಿ ಮತ್ತು ಚಟ್ನಿ ಊಟದಲ್ಲಿ ಸೇರಿಸಿ. ಆದರೆ ಮೇಲೆ ಉಪ್ಪು ಸೇವನೆ ಮಾಡಬೇಡಿ.

    ಲೂಸಿಯಾನದ ಟುಲೇನ್ ವಿಶ್ವವಿದ್ಯಾನಿಲಯದಲ್ಲಿ ನಡೆಸಿದ ಸಂಶೋಧನೆಯು ಆಹಾರಕ್ಕೆ ಉಪ್ಪು ಸೇರಿಸುವುದು ಅಪಾಯದಿಂದ ಮುಕ್ತವಾಗಿಲ್ಲ ಎಂದು ತಿಳಿದು ಬಂದಿದೆ. ಇದು ಅಕಾಲಿಕ ಮರಣದ ಅಪಾಯ ಹೆಚ್ಚಿಸುತ್ತದೆ.

    ಪೊಟ್ಯಾಸಿಯಮ್ ಅಪಾಯ ಕಡಿಮೆ ಮಾಡುತ್ತದೆ

    ಆಹಾರಕ್ಕೆ ಉಪ್ಪನ್ನು ಸೇರಿಸುವುದು ವಯಸ್ಸಿನ ಮೇಲೆ ಪರಿಣಾಮ ಬೀರುತ್ತದೆಯೇ ಎಂದು ಕಂಡು ಹಿಡಿಯಲು ಸಂಶೋಧಕರು ಪ್ರಯತ್ನಿಸಿದ್ದಾರೆ. ಸಂಶೋಧಕರ ಪ್ರಕಾರ, 18,474 ಅಕಾಲಿಕ ಮರಣ ವರದಿ ಆಗಿವೆ. ಸಂಶೋಧನೆಯ ಫಲಿತಾಂಶಗಳನ್ನು ಯುರೋಪಿಯನ್ ಹಾರ್ಟ್ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

    ಇದನ್ನೂ ಓದಿ: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

    ಉಪ್ಪಿನಲ್ಲಿನ ಹೆಚ್ಚಿನ ಪ್ರಮಾಣದ ಸೋಡಿಯಂ ಹಾನಿಕಾರಕ. ಸಂಶೋಧಕರ ಪ್ರಕಾರ, ಹೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನುವ ಜನರಲ್ಲಿ ಈ ಅಪಾಯ ಕಡಿಮೆ.
    Published by:renukadariyannavar
    First published: