ಗರ್ಭಿಣಿಯರಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ಅಧ್ಯಯನ

news18
Updated:July 25, 2018, 4:02 PM IST
ಗರ್ಭಿಣಿಯರಲ್ಲಿ ಹೆಚ್ಚುತ್ತಿದೆ ಹೃದಯಾಘಾತ: ಅಧ್ಯಯನ
news18
Updated: July 25, 2018, 4:02 PM IST
-ನ್ಯೂಸ್ 18 ಕನ್ನಡ

ಗರ್ಭಧಾರಣೆ ವೇಳೆ ಮಹಿಳೆಯರು ಸಾಮಾನ್ಯವಾಗಿ ಅನೇಕ ತೊಂದರೆಗಳಿಂದ ಬಳಲುತ್ತಿರುತ್ತಾರೆ. ಆದರೆ ಅವೆಲ್ಲಕ್ಕಿಂತ ಆಘಾತಕಾರಿ ವರದಿಯೊಂದು ಯುಸ್ಎಸ್​ ಅಧ್ಯಯನ ತಂಡ ತಿಳಿಸಿದೆ. ಮಹಿಳೆಯರು ಗರ್ಭಧಾರಣೆ ವೇಳೆ ಅಧಿಕ ಸಂಖ್ಯೆಯಲ್ಲಿ  ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ ಎಂದು ಅಮೆರಿಕ ಮೂಲದ ಸಂಶೋಧಕರು ಕಂಡು ಕೊಂಡಿದ್ದಾರೆ. ಇದಕ್ಕೆ ಗರ್ಭಧಾರಣೆಯನ್ನು ಮುಂದೂಡುವುದು ಮತ್ತು ವಯಸ್ಸು ಸಹ ಕಾರಣವಾಗುತ್ತಿದೆ  ಎಂದು ಅಧ್ಯಯನ ತಂಡ ಅಭಿಪ್ರಾಯ ಪಟ್ಟಿದ್ದಾರೆ.

ಸ್ತ್ರೀಯರು ಗರ್ಭಧರಿಸಿದಾಗ ದೇಹ ಮತ್ತು ಹೃದಯದ ಮೇಲೆ ಸಾಕಷ್ಟು ಬದಲಾವಣೆ ಉಂಟಾಗುತ್ತದೆ. ಒತ್ತಡದಿಂದ ಕೂಡಿದ ಗರ್ಭಧಾರಣೆ ಅಪಾಯಕಾರಿಯಾಗಿದ್ದು, ಈ ಕುರಿತು ನಡೆಸಲಾದ ಈ ಅಧ್ಯಯನವು ಈ ದಶಕದ ಅತಿದೊಡ್ಡ ಸಂಶೋಧನೆಯಲ್ಲಿ ಒಂದು ಎಂದು ನ್ಯೂಯಾರ್ಕ್ ವಿಶ್ವವಿದ್ಯಾನಿಲಯ ಲ್ಯಾಂಗೊನ್ ಹೆಲ್ತ್​ನ ಸಹ ಲೇಖಕ ಸ್ರಿಪಾಲ್ ಬೆಂಗಳೂರು ಅಭಿಪ್ರಾಯ ಪಟ್ಟಿದ್ದಾರೆ.

ಹಾಗೆಯೇ ಗರ್ಭಿಣಿಯರಲ್ಲಿ ಬೊಜ್ಜಿನ ಸಮಸ್ಯೆ ಅಥವಾ ಮಧುಮೇಹದ ಕಾಯಿಲೆ ಇದ್ದರೂ ಕೂಡ ಹೃದಯಾಘಾತಕ್ಕೆ ಒಳಗಾಗುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಈ ಅಧ್ಯಯನಕ್ಕಾಗಿ ಆಸ್ಪತ್ರೆಯಲ್ಲಿ ದಾಖಲಾದ 49,829,753 ಗರ್ಭಿಣಿಯರ ದಾಖಲೆಗಳನ್ನು ಪರಿಶೀಲಿಸಲಾಗಿತ್ತು. ಈ ವೇಳೆ ಅಮೆರಿಕ ಒಂದರಲ್ಲೇ 1061 ಗರ್ಭಿಣಿಯರು ಜನ್ಮ ನೀಡುವಾಗ ಮತ್ತು ಚಿಕಿತ್ಸೆಯ ವೇಳೆಯಲ್ಲಿ ಹೃದಯಾಘಾತಕ್ಕೆ ಇಡಾಗಿದ್ದಾರೆ ಎಂಬುದು ತಿಳಿದು ಬಂದಿದೆ.

ಇದಲ್ಲದೆ 922 ಗರ್ಭಿಣಿಯರು ಮಯೊಕಾರ್ಡಿಯಲ್ ಇನ್ಫಾರ್ಕ್ಷನ್​ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ. ಅಷ್ಟೇ ಅಲ್ಲದೆ ಜನ್ಮ ನೀಡಿದ ಬಳಿಕ ಕೂಡ 2,390 ಮಹಿಳೆಯರು ಹೃದಯಾಘಾತದಿಂದ ಮರಣ ಹೊಂದಿದ್ದಾರೆ ಎಂಬುದನ್ನು ಸಂಶೋಧಕರು ಕಂಡುಕೊಂಡಿದ್ದಾರೆ.

ಗರ್ಭಧಾರಣೆ ವೇಳೆ ಹೃದಯದ ಆರೋಗ್ಯದ ಕಡೆ ಗಮನ ಹರಿಸಲು ಈ ಸಂಶೋಧನೆ ಸಹಾಯಕವಾಗಲಿದೆ. ಗರ್ಭಾವಸ್ಥೆಯ ಸಮಯದಲ್ಲಿ ವೈದ್ಯರ ಸಲಹೆ ಪಡೆದು ವರ್ಕೌಟ್​ ಮಾಡುವುದರಿಂದ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಂಶೋಧಕರಲ್ಲಿ ಒಬ್ಬರಾಗಿರುವ ನಥಾನಿಯೆಲ್ ಸ್ಮಿಲೊವಿಟ್ಜ್​ ಅಭಿಪ್ರಾಯ ಪಟ್ಟಿದ್ದಾರೆ.
First published:July 25, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ