Save your Ear: ಕಳೆದ ಒಂದೂವರೆ ವರ್ಷದಲ್ಲಿ ಹೆಚ್ಚು ಜನ ಕಿವುಡರಾಗಿದ್ದಾರಂತೆ, ಎಲ್ಲದಕ್ಕೂ ಕಾರಣ Earphone?

Earphone problems: ಇಯರ್​ಫೋನ್ ಬಳಕೆ ಒಂದು ರೀತಿಯಲ್ಲಿ ಅನಿವಾರ್ಯ ಪರಿಸ್ಥಿತಿ ಎನ್ನುವಂತಾಗಿದೆ. ಆದರೆ ಇದರಿಂದ ಕಿವಿಗಳ ಆರೋಗ್ಯದ ಮೇಲೂ ಸಾಕಷ್ಟು ಪರಿಣಾಮ ಬೀರುತ್ತಿದೆ. ಕಳೆದ ಒಂದೂವರೆ ವರ್ಷಗಳಲ್ಲಿ ಅನೇಕರು ಕಿವುಡರಾಗುತ್ತಿದ್ದಾರೆ ಎನ್ನುವ ಆತಂಕಕಾರಿ ವಿಚಾರವನ್ನು ವೈದ್ಯರು ಬಹಿರಂಗಪಡಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  Health Tips for Hearing Loss: ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನ ಶೈಲಿಯಿಂದ ಕಿವುಡು ತನ ಸಾಮಾನ್ಯವಾಗಿ ಹೋಗಿದೆ. ಹಿಂದೆಲ್ಲಾ 80 ವರ್ಷ ಮೇಲ್ಪಟ್ಟವರಲ್ಲಿ ಮಾತ್ರ ಕಿವುಡುತನ (Deafness) ಕಾಣುತ್ತಿದ್ದೆವು. ಆದರೀಗ, ವಯಸ್ಕರು, 50 ವರ್ಷ ಮೇಲ್ಪಟ್ಟವರಲ್ಲೂ ಈ ಸಮಸ್ಯೆ ಕಂಡು ಬರುತ್ತಿದೆ. ಇದಕ್ಕೆ ಕಾರಣ ನಾವು ಹೆಚ್ಚಾಗಿ ಬಳಸುವ ಇಯರ್‌ಫೋನ್‌ಗಳು (Earphone) ಎನ್ನಲಾಗುತ್ತಿದೆ. ಈಗಂತೂ ಅನಿವಾರ್ಯ ಎನ್ನುವಂತೆ ಆನ್ ಲೈನ್ ತರಗತಿಗಳು, ವರ್ಕ್ ಫ್ರಂ ಹೋಮ್ (Work from Home)​ ಸಂದರ್ಭಗಳು ಹೆಚ್ಚಾಗಿರುವುದರಿಂದ ಇಯರ್ ಫೋನ್ ಬಳಕೆ ಕೂಡಾ ಹೆಚ್ಚೇ ಆಗಿದೆ. ಇನ್ನು ಓಟಿಟಿ ಸೇರಿದಂತೆ ಮನರಂಜನಾ ಮಾರ್ಗಗಳನ್ನೂ ಬಹುಪಾಲು ಫೋನ್ ಅಥವಾ ಲ್ಯಾಪ್ ಟಾಪ್, ಟ್ಯಾಬ್ ಮುಂತಾದ ಎಲೆಕ್ಟ್ರಾನಿಕ್ ಡಿವೈಸ್ ಗಳ ಮೂಲಕವೇ ನೋಡುವುದು ಹೆಚ್ಚಿದೆ. ಆದ್ದರಿಂದ ಇಯರ್ ಫೋನ್ ಒಂದು ರೀತಿಯಲ್ಲಿ ಅನಿವಾರ್ಯ ವಸ್ತುವಾಗಿ ಬದಲಾಗಿದೆ. ಬಳಕೆ ಹೆಚ್ಚಾದಂತೆ ಅದರಿಂದ ಉಂಟಾಗುವ ಸೈಡ್ ಎಫೆಕ್ಟ್ ಕೂಡಾ ಅಷ್ಟೇ ಹಾನಿಕಾರಕವಾಗಿರುತ್ತದೆ. ಇಯರ್ ಫೋನ್ ಗೆ ಸಂಬಂಧಿಸಿದಂತೆ ಇತ್ತೀಚೆಗೆ ನಾನಾ ಸಮಸ್ಯೆಗಳು ಜನರನ್ನು ಕಾಡುತ್ತಿದೆ.

  ಹೌದು, ಮೊಬೈಲ್ ಬಳಕೆ ಹೆಚ್ಚಾದಂತೆ ಕರೆ ಸ್ವೀಕರಿಸಲು, ಹಾಡು ಕೇಳಲು ಸೇರಿದಂತೆ ಪ್ರತಿಯೊಂದಕ್ಕೂ ಇಯರ್‌ಫೋನ್ ಬಳಕೆ ಹೆಚ್ಚಾಗುತ್ತಿದೆ. ಇದರಿಂದ ಶಬ್ಧವು ನೇರವಾಗಿ ಕಿವಿಗಷ್ಟೇ ಸೀಮಿತವಾಗುವುದರಿಂದ ಕಿವಿಯ ಮೇಲೆ ಶಬ್ಧದ ಒತ್ತಡ ಹೆಚ್ಚು ಬೀಳುತ್ತದೆ. ಇದರಿಂದ ಕಾಲ ಕ್ರಮೇಣ ಕಿವುಡುತನಕ್ಕೆ ಹಾದಿ ಮಾಡಿಕೊಡಲಾಗುತ್ತದೆ. ಇಯರ್ ಫೋನ್ ಬಳಸೋದೇ ತಪ್ಪಾ? ಒಂದು ವೇಳೆ ಅನಿವಾರ್ಯವಾದರೆ ಯಾವ ಇಯರ್ ಫೋನ್ ಬಳಸಬೇಕು? ಹೇಗೆ ಬಳಸಬೇಕು? ಕಿವಿಗೆ ಸಮಸ್ಯೆ ಉಂಟಾದರೆ ಅದರ ಪರಿಹಾರ ಏನು? ಇಯರ್ ಫೋನ್ ಗಳನ್ನು ಬಳಸುವ ಜೊತೆಗೆ ಕಿವಿಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಈ ಎಲ್ಲಾ ಪ್ರಶ್ನೆಗಳಿಗೆ ಫೋರ್ಟಿಸ್ ಆಸ್ಪತ್ರೆಯ ಇಎನ್​ಟಿ ತಜ್ಞೆ ಡಾ ಅಥಿರಾ ರಾಮಕೃಷ್ಣನ್ ಉತ್ತರಿಸಿದ್ದಾರೆ.

  ಕಿವುಡುತನಕ್ಕೆ ಕಾರಣಗಳಿವು:

  * ವಂಶಪಾರಂಪರ್ಯ

  * ಕಿವಿಯ ಸೋಂಕು

  * ಅತಿಯಾದ ಇಯರ್‌ಫೋನ್ ಬಳಕೆ

  * ಸರಿಯಾದ ಸಮಯಕ್ಕೆ ನಿದ್ರೆ ಮಾಡದೇ ಇರುವುದು

  * ಒತ್ತಡ

  *ಶಬ್ಧಮಾಲಿನ್ಯಕ್ಕೆ ಕಿವಿಗಳನ್ನು ಹೆಚ್ಚು ತೆರೆದುಕೊಳ್ಳುವುದು

  * ವಯಸ್ಸಾದ ಬಳಿಕ ನರಗಳ ದೋಷ

  * ಕಿವಿ ಸೋಂಕು

  ಇಯರ್‌ಫೋನ್‌ ಎಲ್ಲಕ್ಕಿಂತ ಹೆಚ್ಚು ಡೇಂಜರ್: ಸಾಮಾನ್ಯವಾಗಿ ಈ ಎಲ್ಲಾ ಸಮಸ್ಯೆಗಳಿಂದ ಕಿವುಡುತನ ಬರಬಹುದು ಎಂದು ಬಹುತೇಕರಿಗೆ ತಿಳಿದಿದೆ. ಆದರೆ, ಇಯರ್ ಫೋನ್‌ನ ಅತಿಯಾದ ಬಳಕೆಯಿಂದಲೂ ಕಿವುಡುತನಕ್ಕೆ ಕಾರಣವಾಗಬಹುದು ಎಂಬ ವಿಷಯ ಬಹಳಷ್ಟು ವಯಸ್ಕರಿಗೆ ತಿಳಿದಿಲ್ಲ.

  ಇದನ್ನೂ ಓದಿ: Ear Massage - ಕಿವಿಯನ್ನು ಪ್ರತಿದಿನ ಮಸಾಜ್ ಮಾಡುವುದರಿಂದ ಸಿಗುವ ಪ್ರಯೋಜನಗಳೇನು ಗೊತ್ತಾ?

  ಮೊಬೈಲ್‌ನ ರೇಡಿಯೇಷೇನ್‌ನ್ನು ತಪ್ಪಿಸುವ ಸದುದ್ದೇಶದಿಂದ ಇಯರ್‌ಫೋನ್ ಬಳಕೆ ಮಾಡುವ ಅಭ್ಯಾಸ ರೂಢಿಸಿಕೊಂಡರೂ,  ಹೆಚ್ಚು ಶಬ್ಧವಿಟ್ಟು ಹಾಡು ಕೇಳುವುದರಿಂದ ಕಾಲಕ್ರಮೇಣ ಕಿವಿಯಿಂದ ಮೆದುಳಿಗೆ ಸಂಕೇತ ಸಾಗಿಸುವ ನರಗಳು ದುರ್ಬಲಗೊಳ್ಳುತ್ತವೆ. ಇದರಿಂದ ಕಿವುಡುತನ ಬರಬಹುದು.

  ಕಿವುಡುತನ ತಡೆಯಲು ಕೆಲವು ಟಿಪ್ಸ್:

  * ಕರೆಗಳನ್ನು ಸ್ವೀಕರಿಸಲು ಮಾತ್ರ ಇಯರ್ ಫೋನ್ ಬಳಕೆ ಮಾಡಿ.

  * ಹಾಡುಗಳನ್ನ ಕೇಳಲು ಇಚ್ಚಿಸುವವರು ಕಡಿಮೆ ಶಬ್ಧದೊಂದಿಗೆ ಇಯರ್‌ಫೋನ್ ಬಳಸಿ.

  * ದಿನದ 12 ತಾಸು ಇಯರ್‌ಫೋನ್ ಕಿವಿಯಲ್ಲಿ ಇರುವುದನ್ನು ತಪ್ಪಿಸಿ.

  * ಆಗಾಗ ಕಿವಿಯನ್ನು ವೈದ್ಯರೊಂದಿಗೆ ಪರೀಕ್ಷಿಸಿಕೊಳ್ಳಿ

  * ಹೆಚ್ಚು ಶಬ್ಧ ಉಂಟು ಮಾಡುವ ವಸ್ತುಗಳಿಂದ ದೂರವಿರಿ

  * ಕಿವಿಗೆ ನೇರವಾಗಿ ಚೂಪಾದ ವಸ್ತು ಹಾಕಿ ಸ್ವಚ್ಛಗೊಳಿಸುವ ಅಭ್ಯಾಸವಿದ್ದರೆ, ಅದನ್ನು ಬಿಡಿ

  * ವಯಸ್ಸಾದ ಬಳಿಕ ಕಿವುಡುತನ ಕಾಡುತ್ತಿದ್ದರೆ ವೈದ್ಯರನ್ನು ಶೀಘ್ರವೇ ಸಂಪರ್ಕಿಸಿ,, ಇಲ್ಲವಾದರೆ, ಬಲವಂತದಿಂದ ಕೇಳುವ ಪ್ರಯತ್ನ ಮಾಡುವುದರಿಂದ ಅದು ಮೆದುಳಿನ ಮೇಲೆ ಒತ್ತಡ ಬೀರಬಹುದು.

  ಈ ಎಲ್ಲಾ ಎಚ್ಚರಿಕೆ ವಹಿಸಿದರೆ ಇಯರ್ ಫೋನ್ ಬಳಸಿದರೂ ಕಿವಿಯ ಆರೋಗ್ಯ ಕಾಪಾಡಿಕೊಳ್ಳಬಹುದು.
  Published by:Soumya KN
  First published: