ರಷ್ಯಾದತ್ತ ಮುಖ ಮಾಡಿದ ಭಾರತೀಯ ಫುಟ್​ಬಾಲ್​ ಪ್ರೇಮಿಗಳು

zahir | news18
Updated:June 14, 2018, 6:52 PM IST
ರಷ್ಯಾದತ್ತ ಮುಖ ಮಾಡಿದ ಭಾರತೀಯ ಫುಟ್​ಬಾಲ್​ ಪ್ರೇಮಿಗಳು
Soccer Football - 2018 FIFA World Cup Draw - State Kremlin Palace, Moscow, Russia - December 1, 2017 General view during the draw REUTERS/Kai Pfaffenbach
zahir | news18
Updated: June 14, 2018, 6:52 PM IST
ನ್ಯೂಸ್ 18 ಕನ್ನಡ

ಫಿಫಾ ವಿಶ್ವಕಪ್​ 2018 ಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ವಿಶ್ವದಾದ್ಯಂತ ಫುಟ್​ಬಾಲ್ ಜ್ವರವು ತಾರಕಕ್ಕೇರಿದ್ದು, ಇದರಲ್ಲಿ ಭಾರತೀಯರೂ ಹಿಂದೆ ಬಿದ್ದಿಲ್ಲ ಎಂದು ಅಧ್ಯಯನವೊಂದು ತಿಳಿಸಿದೆ. ವಿಶ್ವಕಪ್ ಫುಟ್​ಬಾಲ್​​ ಪಂದ್ಯವನ್ನು ವೀಕ್ಷಿಸಲು ಹೆಚ್ಚಿನ ಭಾರತೀಯರು ರಷ್ಯಾದತ್ತ ಪ್ರಯಾಣ ಬೆಳೆಸುತ್ತಿದ್ದಾರೆಂದು ಈಝಿಗೊ (ixigo) ಟ್ರಾವೆಲ್ ಸಂಸ್ಥೆ ನಡೆಸಿದ ಅಧ್ಯಯನದಿಂದ ತಿಳಿದು ಬಂದಿದೆ.

ಭಾರತದಿಂದ ರಷ್ಯಾಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆಯು ಶೇಕಡ 23 ರಷ್ಟು ಹೆಚ್ಚಾಗಿದೆ. ಇನ್ನೇನು ಫುಟ್​ಬಾಲ್​ ಪ್ರಾರಂಭವಾಗಲಿದೆ ಎನ್ನುವಷ್ಟರಲ್ಲಿ ಬೇಸಿಗೆಯ ರಜೆಯನ್ನು ಫುಟ್​ಬಾಲ್​ ಸ್ಟೇಡಿಯಂನಲ್ಲಿ ಕಳೆಯಲು ಭಾರತೀಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಫಿಫಾ ವಿಶ್ವಕಪ್ ಟಿಕೆಟ್ ಅನ್ನು ಹೊಂದಿದ್ದರೆ ವೀಸಾ ಇಲ್ಲದೆ ರಷ್ಯಾಗೆ ಪ್ರಯಾಣ ಬೆಳೆಸುವ ಅವಕಾಶ ನೀಡಲಾಗಿದೆ. ಪಂದ್ಯ ಆರಂಭಕ್ಕೂ 10 ದಿನಗಳ ಮುಂಚಿತವಾಗಿ ವೀಸಾ ಅವಧಿ ಆರಂಭವಾಗಲಿದ್ದು, ಫೈನಲ್ ಪಂದ್ಯದ ನಂತರ ಹತ್ತು ದಿನಗಳ ಕಾಲ ವೀಸಾ ಇಲ್ಲದೆ ರಷ್ಯಾದಲ್ಲಿ ಉಳಿಯಲು ಅಲ್ಲಿನ ಸರ್ಕಾರ ಅವಕಾಶ ನೀಡಿದೆ.

ಈಝಿಗೊ ಅಂಕಿ-ಅಂಶಗಳ ಪ್ರಕಾರ ಒಟ್ಟಾರೆ ಶೇ.48ರಷ್ಟು ಮಂದಿ ಪಂದ್ಯಾವಳಿ ವೀಕ್ಷಿಸಲು ಪ್ರಯಾಣಿಸುತ್ತಿದ್ದಾರೆ. ಇದರಲ್ಲಿ ಶೇ 16 ರಷ್ಟು ಮಂದಿ ಕುಟುಂಬ ಸಮೇತರಾಗಿ ಪ್ರಯಾಣ ಕೈಗೊಂಡರೆ, ಶೇ12 ರಷ್ಟು ಮಂದಿ ಸಂಗಾತಿಯೊಂದಿಗೆ ರಷ್ಯಾಗೆ ಹಾರಾಲು ತಯಾರಾಗಿದ್ದಾರೆ.

ರಷ್ಯಾ ಪ್ರವಾಸಕ್ಕೆ ಜೂನ್ ತಿಂಗಳು ಅತ್ಯುತ್ತಮ ಸಮಯವಾಗಿದ್ದು, ಇದೇ ಸಂದರ್ಭದಲ್ಲಿ ಫುಟ್​ಬಾಲ್ ಕೂಡ ನಡೆಯುತ್ತಿರುವುದರಿಂದ 8-10 ದಿನಗಳನ್ನು ಪಂದ್ಯಾಟ ನಡೆಯುವ ನಗರಗಳಲ್ಲಿ ಕಳೆಯಲು ಪ್ರಯಾಣಿಕರು ನಿರ್ಧರಿಸಿದ್ದಾರೆ.

'ಫುಟ್​ಬಾಲ್​ ಕ್ರೇಜ್​ ಜನರಲ್ಲಿ ಹೆಚ್ಚುತ್ತಿದ್ದು, ಮುಂಬರುವ ದಿನಗಳಲ್ಲಿ ಶೇ.25ರಷ್ಟು ಪ್ರಯಾಣದ ಬುಕಿಂಗ್ ಹೆಚ್ಚಾಗುವ ನಿರೀಕ್ಷೆಯಿದೆ. ಈಝಿಗೊ ಸಂಸ್ಥೆ ಟಿಕೆಟ್​ ದರದಲ್ಲಿ ವಿಶೇಷ ಕಡಿತವನ್ನು ನೀಡಿರುವುದರಿಂದ ಪ್ರಯಾಣಿಕರು ತಮ್ಮ ನೆಚ್ಚಿನ ತಂಡವನ್ನು ಬೆಂಬಲಿಸಲು ರಷ್ಯಾದತ್ತ ಮುಖ ಮಾಡಿದ್ದಾರೆ' ಎಂದು ಈಝಿಗೊ ಸಿಇಒ ಮತ್ತು ಸಹ-ಸಂಸ್ಥಾಪಕ ಅಲೋಕ್ ಬಾಜ್ಪಾಯ್ ಹೇಳಿದ್ದಾರೆ.
Loading...

ಫಿಫಾ ವಿಶ್ವಕಪ್​ 2018 ಉದ್ಘಾಟನಾ ಸಮಾರಂಭವು ಜೂನ್​ 14ರಂದು ಮಾಸ್ಕೋ ನಗರದ ಲುಝಿನಿಕಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಇದರ ವೀಕ್ಷಣೆಗೆಂದು ಶೇ.73 ಮಂದಿ ಈ ನಗರಕ್ಕೆ ಪ್ರಯಾಣ ಬೆಳೆಸಲಿದ್ದಾರೆಂದು ಅಂಕಿ-ಅಂಶದಿಂದ ಗೊತ್ತಾಗಿದೆ.
First published:June 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...