• Home
  • »
  • News
  • »
  • lifestyle
  • »
  • Hyponatremia Disease: ಅತಿಯಾಗಿ ನೀರು ಕುಡಿದರೆ ಸಾವಿನ ಅಪಾಯ, ಎಚ್ಚರ!

Hyponatremia Disease: ಅತಿಯಾಗಿ ನೀರು ಕುಡಿದರೆ ಸಾವಿನ ಅಪಾಯ, ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಇತ್ತೀಚಿನ ಸಂಶೋಧನೆಯೊಂದು ಶಾಕಿಂಗ್ ಸುದ್ದಿ ನೀಡಿದೆ. ಹೆಚ್ಚು ನೀರು ಕುಡಿಯುವುದು ಸಾವಿಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳಿದೆ. ಕ್ಲಿನಿಕಲ್ ಕಿಡ್ನಿ ಜರ್ನಲ್‌ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಅತೀ ನೀರು ಸೇವನೆ ಮರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.

  • Share this:

    ಆಗಾಗ್ಗೆ ನೀರು ಕುಡಿದರೆ (Drinking Water) ಆರೋಗ್ಯಕ್ಕೆ (Health) ಉತ್ತಮ ಎಂದು ತಜ್ಞರು (Experts) ಹೇಳ್ತಾರೆ. ಇದು ದೇಹವನ್ನು ಆರೋಗ್ಯವಾಗಿ (Body Health) ಮತ್ತು ನಿರ್ವಿಶೀಕರಣ ಮಾಡುತ್ತದೆ. ಜೊತೆಗೆ ಯಾರ ಆಹಾರ ಪದ್ಧತಿ ಮತ್ತು ಜೀವನಶೈಲಿ ಸರಿ ಇರುವುದಿಲ್ಲವೋ ಅವರು ಬಹುಬೇಗ ಕಾಯಿಲೆಗೆ ತುತ್ತಾಗುತ್ತಾರೆ. ಇದು ಅವರಲ್ಲಿ ಸಾಕಷ್ಟು ಆರೋ್ಯ ಸಮಸ್ಯೆ ತಂದೊಡ್ಡುತ್ತದೆ. ಇನ್ನು ಇತ್ತೀಚಿನ ಸಂಶೋಧನೆಯೊಂದು ಶಾಕಿಂಗ್ ಸುದ್ದಿ ನೀಡಿದೆ. ಹೆಚ್ಚು ನೀರು ಕುಡಿಯುವುದು ಸಾವಿಗೆ ಕಾರಣವಾಗುತ್ತದೆ ಎಂದು ಸಂಶೋಧನೆ ಹೇಳಿದೆ. ಕ್ಲಿನಿಕಲ್ ಕಿಡ್ನಿ ಜರ್ನಲ್‌ ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದಲ್ಲಿ ಅತೀ ನೀರು ಸೇವನೆ ಮರಣಕ್ಕೆ ಕಾರಣವಾಗುತ್ತದೆ ಎಂದು ಹೇಳಿದೆ.


    ಸೂಪರ್ ಸ್ಟಾರ್ ಬ್ರೂಸ್ ಲೀ ಸಾವಿಗೆ ಹೆಚ್ಚು ನೀರು ಕುಡಿದದ್ದೆ ಕಾರಣ


    ಪೌರಾಣಿಕ ಚಲನಚಿತ್ರ ನಟ, ನಿರ್ದೇಶಕ ಮತ್ತು ಸಮರ ಕಲೆಗಳ ಸೂಪರ್‌ ಸ್ಟಾರ್ ಆಗಿದ್ದ ಬ್ರೂಸ್ ಲೀ ಸಾಷ್ಟು ಫೇಮಸ್ ಆದವರು. ಅವರ ಪ್ರತಿಭೆ ಅನೇಕ ದೇಶಗಳಲ್ಲಿ ಜನರನ್ನು ಆಕರ್ಷಿಸಿತ್ತು. ಆದರೆ ಚಿಕ್ಕ ವಯಸ್ಸಿನಲ್ಲೇ ತೀರಿ ಹೋದ್ರು. ಅವರ ಮರಣದ ವೇಳೆ ಅವರಿಗೆ 32 ವರ್ಷ ವಯಸ್ಸಾಗಿತ್ತು.


    ಈಗ ಅವರ ಸಾವಿನ 49 ವರ್ಷಗಳ ನಂತರ ವಿಜ್ಞಾನಿಗಳು, ಬ್ರೂಸ್ ಲೀ ಸಾವಿಗೆ ಹೆಚ್ಚು ನೀರು ಕುಡಿಯುತ್ತಿದ್ದುದೇ ಕಾರಣವಾಗಿತ್ತು ಎಂದು ಹೇಳಿದ್ದಾರೆ. ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೈಪೋನಾಟ್ರೀಮಿಯಾ ಎನ್ನುತ್ತಾರೆ.




    ಬ್ರೂಸ್ ಲೀ ಅವರ ಸಾವಿಗೆ ಅತಿಯಾದ ನೋವು ನಿವಾರಕಗಳ ಸೇವನೆ ಮತ್ತು ಸೆರೆಬ್ರಲ್ ಎಡಿಮಾ ಅಂದ್ರೆ ಮೆದುಳಿನ ಊತ ಕಾಯಿಲೆ ಕಾರಣವೆಂದು ಹೇಳಲಾಗಿತ್ತು. ಆದ್ರೆ ಇತ್ತೀಚೆಗೆ ಬಹಿರಂಗಗೊಂಡ ಅಧ್ಯಯನದಲ್ಲಿ ಬ್ರೂಸ್ ಲೀ ಸಾವಿಗೆ ಹೈಪೋನಾಟ್ರೀಮಿಯಾ ಕಾರಣ ಎಂದು ಹೇಳಿದ್ದಾರೆ.


    ಇದು ಹೆಚ್ಚು ನೀರು ಕುಡಿಯುವುದರಿಂದ ಉಂಟಾಗುವ ಸ್ಥಿತಿ ಆಗಿದೆ. ಈ ಅಧ್ಯಯನ ಕ್ಲಿನಿಕಲ್ ಕಿಡ್ನಿ ಜರ್ನಲ್‌ನಲ್ಲಿ ಪ್ರಕಟವಾಗಿದೆ.


    ಬ್ರೂಸ್ ಲೀ ಸಾವಿನ ಬಗ್ಗೆ ಹಲವು ಅನುಮಾನಗಳು ಹುಟ್ಟಿದ್ದವು. ಮೊದಲು ಕೆಲವು ದರೋಡೆಕೋರರು ಅವನನ್ನು ಕೊಲೆ ಮಾಡಿದ್ದಾರೆಂದು, ಕೆಲವರು ಹಳೆಯ ಗೆಳತಿ ಅವನಿಗೆ ವಿಷ ನೀಡಿದ್ದಾಳೆ,


    ಇನ್ನು ಕೆಲವರು ಅವನ ಸಾವಿಗೆ ಪಾರ್ಶ್ವವಾಯು ಕಾರಣ ಎಂದಿದ್ದರು. ಆದ್ರೆ ಪ್ರಸ್ತುತ ಅಧ್ಯಯನವು ಈ ಎಲ್ಲಾ ಊಹಾಪೋಹಗಳನ್ನು ಅಲ್ಲಗಳೆಯುತ್ತದೆ.


    ಹೈಪೋನಾಟ್ರೀಮಿಯಾ ಕಾಯಿಲೆ ಎಂದರೇನು?


    ಸೋಡಿಯಂ ದೇಹಕ್ಕೆ ಅತ್ಯಗತ್ಯ. ಇದು ಹೃದಯ, ಜೀವಕೋಶಗಳು ಮತ್ತು ಮೂತ್ರಪಿಂಡಗಳ ಕಾರ್ಯ ಸರಾಗವಾಗಿಸುತ್ತದೆ. ಸೋಡಿಯಂ ನಮ್ಮ ದೇಹದ ಜೀವಕೋಶಗಳ ಸುತ್ತ ಒಂದು ವೃತ್ತ ರೂಪಿಸುತ್ತದೆ. ಇದು ಜೀವಕೋಶಗಳ ಕಾರ್ಯ ನಿರ್ವಹಣೆಗೆ ಸಹಕಾರಿ.


    ನಾವು ಅಗತ್ಯಕ್ಕಿಂತ ಹೆಚ್ಚು ನೀರು ಕುಡಿದರೆ ಸೋಡಿಯಂ ಹೆಚ್ಚುವರಿ ನೀರಿನಿಂದ ಕರಗುತ್ತದೆ ಮತ್ತು ಮೂತ್ರಪಿಂಡಗಳ ಮೂಲಕ ಹಾದು ಹೋಗುತ್ತದೆ.


    ಇದು ದೀರ್ಘಕಾಲದವರೆಗೆ ಉಂಟಾದ್ರೆ, ನಂತರ ದೇಹದಲ್ಲಿ ಸೋಡಿಯಂ ಪ್ರಮಾಣವು ಕಡಿಮೆಯಾಗುತ್ತದೆ. ದೇಹವು ಸರಿಯಾಗಿ ಕೆಲಸ ಮಾಡಲ್ಲ. ಇದು ವ್ಯಕ್ತಿಯ ಸಾವಿಗೆ ಕಾರಣವಾಗಬಹುದು ಎನ್ನುತ್ತಾರೆ ವೈವ್ಯರು.


    ಬ್ರೂಸ್ ಲೀ ಸಾವಿಗೆ ನಿಜವಾದ ಕಾರಣವೇನು?


    ವಿಜ್ಞಾನಿಗಳ ಪ್ರಕಾರ, ಬ್ರೂಸ್ ಲೀ ಅವರ ಸಾವಿಗೆ ಹೈಪೋನಾಟ್ರೀಮಿಯಾ ಕಾರಣವೆಂದು ಹೇಳ್ತಾರೆ. ಅಧಿಕ ದ್ರವ ಸೇವನೆ ಹೈಪೋನಾಟ್ರೀಮಿಯಾ ಸಮಸ್ಯೆ ಉಂಟು ಮಾಡುತ್ತದೆ. ಇದು ದೇಹದಲ್ಲಿ ಕಡಿಮೆ ಸೋಡಿಯಂ ಮಟ್ಟ ಉಂಟು ಮಾಡುತ್ತದೆ


    ಮತ್ತು ಉರಿಯೂತ ಉಂಟುಮಾಡುವ ಜೀವಕೋಶಗಳಲ್ಲಿ ಅಸಮತೋಲನ ಉಂಟು ಮಾಡುತ್ತದೆ, ಮೆದುಳಿನ ಜೀವಕೋಶಗಳಲ್ಲಿ. ಸಮಸ್ಯೆ ಹೆಚ್ಚಸುತ್ತದೆ.


    ಬ್ರೂಸ್ ಲೀ ಹೈಪೋನಾಟ್ರೀಮಿಯಾ ಗುರಿಯಾಗಲು ಹಲವು ಕಾರಣಗಳಿವೆ. ಅವರು ಹೆಚ್ಚು ದ್ರವ ಪದಾರ್ಥ ಸೇವಿಸುತ್ತಿದ್ದರು. ವಿಜ್ಞಾನಿಗಳ ಪ್ರಕಾರ, ಲೀ ಅವರು ಗಾಂಜಾ ಮಿಶ್ರಿತ ದ್ರವ ಸೇವಿಸಬಹುದು. ಇದು ಹೈಪೋನಾಟ್ರೀಮಿಯಾ ಅಭಿವೃದ್ಧಿಪಡಿಸಿದೆ.


    ಇದನ್ನೂ ಓದಿ: ಚಳಿಗಾಲದಲ್ಲಿ ಬಿಟ್ಟೂ ಬಿಡದೇ ಕಾಡುವ ಅನಾರೋಗ್ಯಕ್ಕಿದೆ ಆಯುರ್ವೇದದಲ್ಲಿ ಪರಿಹಾರ


    ಹೆಚ್ಚು ನೀರು ಕುಡಿದರೆ ಹಾನಿ ?


    ಹೈಪೋನಾಟ್ರೀಮಿಯಾ ಮೂತ್ರಪಿಂಡಗಳು ದೇಹದಿಂದ ಹೆಚ್ಚುವರಿ ನೀರನ್ನು ಹೊರಹಾಕುವ ಸಾಮರ್ಥ್ಯಕ್ಕೆ ಅಡ್ಡಿ ಮಾಡಿದೆ. ಹಾಗಾಗಿ ಇದು ಬ್ರೂಸ್ ಲೀಯ ಸಾವಿಗೆ ಕಾರಣವಾಗಿದೆ. ಹೆಚ್ಚು ಡ್ರಗ್ಸ್ ಮತ್ತು ಆಲ್ಕೋಹಾಲ್ ಸೇವನೆ ಸಹ ಕಾರಣ ಎಂದಿದ್ದಾರೆ. ಬ್ರೂಸ್ ಲೀ ಅವರ ಸಾವಿಗೆ ಮೆದುಳಿನ ಊತ ಕಾರಣ ಎಂದಿದ್ದಾರೆ ವಿಜ್ಞಾನಿಗಳು.

    Published by:renukadariyannavar
    First published: