ಕಷಾಯಗಳು ಯಾವಾಗಲೂ ಉತ್ತಮ ಆರೋಗ್ಯಕ್ಕೆ ಪೂರಕವಾದ ಮನೆಮದ್ದು. ಆದರೆ ಇದು ಬೇಸಿಗೆ ಮುಗಿಯುವ ವೇಳೆ ಮಳೆಗಾಲ ಪ್ರಾರಂಭವಾಗುವ ಅವಧಿಯಲ್ಲಿ ಕಷಾಯಗಳು ಎಲ್ಲರ ಮನೆಗಳಲ್ಲೂ ಮಾಡುತ್ತಾರೆ. ಏಕೆಂದರೆ ಮಳೆಗಾಲದಲ್ಲಿ ಶೀತ, ಜ್ವರ, ಕೆಮ್ಮು, ಕಫ ಅಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಇವುಗಳಿಗೆ ಮಾತ್ರೆಗಿಂತ ಕಷಾಯವೇ ಉತ್ತಮ.. ಅಲ್ಲದೇ ಕೋವಿಡ್ ಸಮಯದಲ್ಲೂ ಇದು ಉಪಯೋಗಕ್ಕೆ ಬಂದಿದ್ದು, ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಡಯಟಿಷಿಯನ್ ವೃಂದಾ ನಾಯರ್ ಮನೆಯಲ್ಲೇ ಮಾಡುವ ಐದು ಕಷಾಯಗಳ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್‍ಗೆ ತಿಳಿಸಿದ್ದಾರೆ.
1. ತುಳಸಿ ಮತ್ತು ಕಾಳು ಮೆಣಸು ಕಷಾಯ
ಬೇಕಾಗುವ ಸಾಮಾಗ್ರಿಗಳು:
ನೀರು –ಎರಡು ಕಪ್
ಸಕ್ಕರೆ – 1 ಚಮಚ
ಕಾಳು ಮೆಣಸು ಪುಡಿ- 1 ಚಮಚ
ತುಪ್ಪ- 1 ಚಮಚ
ಲವಂಗ- 1 ರಿಂದ 2
ಕೆಲವು ತುಳಸಿ ಎಲೆಗಳು
ಮಾಡುವ ವಿಧಾನ: ಒಂದು ಬಾಣಲೆಗೆ ತುಪ್ಪ ಹಾಕಿ ಬಿಸಿ ಮಾಡಿ. ನಂತರ ಅದಕ್ಕೆ ಲವಂಗ, ಕಪ್ಪು ಕಾಳು ಮೆಣಸು ಪುಡಿ, ಶುಂಠಿ, ತುಳಸಿ ಹಾಕಿ. ಸ್ವಲ್ಪ ಸಮಯದ ನಂತರ ನೀರು ಮತ್ತು ಸಕ್ಕರೆ ಸೇರಿಸಿ. ಮಿಶ್ರಣವನ್ನು 15-20 ನಿಮಿಷಗಳ ಕಾಲ ಕುದಿಸಿ. ನಂತರ ತುಳಸಿ ಎಲೆಗಳನ್ನು ಹಾಕಿದ ನಂತರವೂ ಕುದಿಯುವುದು ಮುಂದುವರೆಯಲಿ. ಕಷಾಯ ಬಿಸಿಯಾಗಿರಲಿ
2. ತುಳಸಿ ಮತ್ತು ಲವಂಗ ಕಷಾಯ
ಬೇಕಾಗುವ ಸಾಮಾಗ್ರಿಗಳು:
ಅಂಗೈ ತುಂಬಾ ತುಳಸಿ ಎಲೆಗಳು
ಲವಂಗ - 3 ರಿಂದ 6
ನೀರು – ಒಂದೂವರೆ ಕಪ್
ಮಾಡುವ ವಿಧಾನ: ಲವಂಗ ಮತ್ತು ತುಳಸಿ ಎಲೆ ಹಾಕಿ ನೀರನ್ನು ಚೆನ್ನಾಗಿ ಕುದಿಸಿ. ನೀರು ಅರ್ಧಕ್ಕೆ ಇಂಗಬೇಕು. ನಂತರ ತಣ್ಣಗಾಗಲು ಬಿಡಿ. ಸ್ವಲ್ಪ ಕಲ್ಲುಪ್ಪು ಬೆರೆಸಿ ದಿನದಲ್ಲಿ 2 ರಿಂದ 3 ಸಲ ಕುಡಿಯಿರಿ
3. ಶುಂಠಿ, ನಿಂಬೆಹಣ್ಣು ಮತ್ತು ಜೇನುತುಪ್ಪ ಕಷಾಯ
ಬೇಕಾಗುವ ಸಾಮಾಗ್ರಿಗಳು:
ಶುಂಠಿ ರಸ – 1 ಚಮಚ
ಜೇನುತುಪ್ಪ – 1 ಚಮಚ
ನಿಂಬೆ ರಸ – 1/2 ಚಮಚ
ಮಾಡುವ ವಿಧಾನ: ಈ ಮೇಲೆ ಹೇಳಿದ ರಸಗಳನ್ನು ಚೆನ್ನಾಗಿ ಮಿಕ್ಸ್ ಮಾಡಿ. ಈ ಮಿಕ್ಸ್ ಮಾಡಿದ ಮಿಶ್ರಣವನ್ನು ಸ್ವಲ್ಪ ಬೆಚ್ಚಗಿನ ನೀರಿಗೆ ಹಾಕಿ ದಿನಕ್ಕೊಮ್ಮೆ ಕುಡಿಯಿರಿ
4. ದಾಲ್ಚಿನ್ನಿ ಚಹಾ
ಒಂದು ಕಪ್ ಬಿಸಿ ನೀರಿಗೆ ಒಂದು ಪಿಂಚ್ ಲವಂಗ ಪುಡಿಯೊಂದಿಗೆ ಶುಂಠಿ ಪುಡಿ, ಫೆನ್ನೆಲ್ ಬೀಜಗಳು ಮತ್ತು ದಾಲ್ಚಿನ್ನಿಯನ್ನು ಸೇರಿಸಿ. ಗಿಡಮೂಲಿಕೆಗಳು ಸುಮಾರು 10 ನಿಮಿಷಗಳ ಕಾಲ ಕುದಿಯಲು ಬಿಡಿ.
5. ಕಷಾಯ ಟೀ
ಬೇಕಾಗುವ ಸಾಮಾಗ್ರಿಗಳು:
ಶುಂಠಿ – 3 ರಿಂದ 4
ಅರಿಶಿಣ – 1 ಚಮಚ
3 ಮಧ್ಯಮ ಗಾತ್ರದ ದಾಲ್ಚಿನ್ನಿ, ಅಥವಾ 1/4 ಚಮಚ ದಾಲ್ಚಿನ್ನಿ ಪುಡಿ
ಏಲಕ್ಕಿ – 4
ತುಳಸಿ ಎಲೆಗಳು – 4
ನೀರು – 4 ಕಪ್
ಕೇಸರಿಯ ಕೆಲವು ಒಣ ಎಲೆಗಳು
ರುಚಿಗೆ ಜೇನುತುಪ್ಪ
ಮಾಡುವ ವಿಧಾನ: ಶುಂಠಿ, ಅರಿಶಿಣ, ಏಲಕ್ಕಿ, ಮತ್ತು ತುಳಸಿ ಎಲೆಗಳನ್ನು ಹಾಕಿ ರುಬ್ಬಿಕೊಳ್ಳಿ. ಇದಕ್ಕೆ ನೀರನ್ನು ಸೇರಿಸಿ ಬಿಸಿ ಮಾಡಿ. ಇದೆಲ್ಲವನ್ನು ಸೇರಿಸಿ 5 ನಿಮಿಷಗಳ ಕಾಲ ಕುದಿಸಿ. ನಂತರ ಇದನ್ನು ಒಂದು ಲೋಟಕ್ಕೆ ಸೋಸಬೇಕು. ಬೇಕಾದಲ್ಲಿ ಜೇನುತುಪ್ಪ ಹಾಕಿಕೊಳ್ಳಬಹುದು. ಸ್ವಲ್ಪ ಬಿಸಿ ಇರುವಾಗಲೇ ಕುಡಿದು ಬಿಡಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ