Monsoon And Health: ಮಳೆಗಾಲದಲ್ಲಿ ರೋಗಗಳ ಅಪಾಯ ಕಡಿಮೆ ಮಾಡಲು ಆರೋಗ್ಯಕರ ಸುಲಭ ಸಲಹೆ!

ಮಳೆಗಾಲದಲ್ಲಿ ಲೆಕ್ಕ ಇಲ್ಲದಷ್ಟು ಸಮಸ್ಯೆ ನಿಮ್ಮನ್ನು ಹೆಚ್ಚು ಬಾಧಿಸಬಹುದು. ಪುನರಾವರ್ತಿತ ಸೋಂಕಿನಿಂದ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಇದು ರೋಗಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಮಳೆಗಾಲದಲ್ಲಿ (Monsoon) ಆರೋಗ್ಯ (Health) ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸವೇ ಸರಿ. ಯಾಕೆಂದರೆ ತಂಪು ವಾತಾವರಣ (Cold Weather), ಸುರಿಯುವ ಮಳೆ (Rain) ಹಲವು ಕಾಯಿಲೆಗಳನ್ನು (Disease) ಹರಡುತ್ತದೆ. ಅಲ್ಲದೇ ಹೊರಗೆ ಕೊಳಕು ಹಾಗೂ ತಂಪು ವಾತಾವರಣದಲ್ಲಿ ಅಡ್ಡಾಡುವುದು ಜನರನ್ನು ಮತ್ತಷ್ಟು ಆರೋಗ್ಯ ತೊಂದರೆ ಅನುಭವಿಸುವಂತೆ ಮಾಡುತ್ತದೆ. ಮಳೆಗಾಲದಲ್ಲಿ ಮನೆಯಿಂದ ಹೊರಗೆ ಕಾಲಿಡುವುದು ತುಂಬಾ ಕಷ್ಟ. ಹಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಅಲ್ಲದೆ, ಈ ಋತುವಿನಲ್ಲಿ ನೊಣಗಳು ಮತ್ತು ಸೊಳ್ಳೆಗಳಿಂದ ಹರಡುವ ರೋಗಗಳು ಉಲ್ಬಣವು ಹೆಚ್ಚಾಗುತ್ತದೆ. ಮಳೆಗಾಲದಲ್ಲಿ ನೀವು ಸಾಮಾನ್ಯವಾಗಿ ವೈರಲ್ ಸೋಂಕು, ಚರ್ಮದ ಅಲರ್ಜಿ ಹೆಚ್ಚು ವ್ಯಕ್ತಿಯನ್ನು ಬಾಧಿಸುತ್ತವೆ.

    ಮಳೆಗಾಲದಲ್ಲಿ ರೋಗಗಳ ಅಪಾಯ

    ಆಹಾರ ವಿಷ, ಅತಿಸಾರ, ಶೀತ, ಜ್ವರ, ವೈರಲ್ ಜ್ವರ ಮತ್ತು ಇತರೆ ಅನೇಕ ರೋಗ ಎದುರಿಸುತ್ತೀರಿ. ಮಳೆಗಾಲದಲ್ಲಿ ಲೆಕ್ಕ ಇಲ್ಲದಷ್ಟು ಸಮಸ್ಯೆ ನಿಮ್ಮನ್ನು ಹೆಚ್ಚು ಬಾಧಿಸಬಹುದು. ಪುನರಾವರ್ತಿತ ಸೋಂಕಿನಿಂದ ರೋಗ ನಿರೋಧಕ ಶಕ್ತಿ ದುರ್ಬಲವಾಗುತ್ತದೆ. ಇದು ರೋಗಗಳಿಂದ ಚೇತರಿಸಿಕೊಳ್ಳಲು ಬಹಳ ಸಮಯ ತೆಗೆದುಕೊಳ್ಳುತ್ತದೆ.

    ಆರೋಗ್ಯಕರ ಆಹಾರ ಮತ್ತು ವ್ಯಾಯಾಮ

    ಆರೋಗ್ಯಕರ ಆಹಾರ ಮತ್ತು ವ್ಯಾಯಾಮವನ್ನು ನಿಮ್ಮ ದಿನಚರಿಯಲ್ಲಿ ಸೇರಿಸುವುದು ಮತ್ತು ಸೇವನೆ ಮಾಡುವುದು ಮಾನ್ಸೂನ್‌ನಲ್ಲಿ ನಿಮ್ಮನ್ನು ಆರೋಗ್ಯವಾಗಿ ಮತ್ತು ಫಿಟ್ ಆಗಿರಲು ಸಾಧ್ಯ. ಅಲ್ಲದೇ, ಮನೆಯೊಳಗೆ ಕೆಲವು ವ್ಯಾಯಾಮ, ಚಟುವಟಿಕೆ ಮಾಡುವ ಮೂಲಕ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಕಾರಿ.

    ಇದನ್ನೂ ಓದಿ: ಮಲಬದ್ಧತೆ ಸಮಸ್ಯೆಗೆ ನೈಸರ್ಗಿಕ ಪರಿಹಾರ, ನಿಮ್ಮ ಆಹಾರದಲ್ಲಿ ಇವುಗಳನ್ನು ಸೇರಿಸಿ

    ಫಿಟ್ನೆಸ್ ಗುರು ಮತ್ತು ಸಮಗ್ರ ತಜ್ಞ ಮಿಕ್ಕಿ ಮೆಹ್ತಾ ಅವರು, ಮಳೆಗಾಲದಲ್ಲಿ ನಿಮಗೆ ಕೆಲವು ಪರಿಹಾರ ಹೇಳುತ್ತಾರೆ. ಇದನ್ನು ಬಳಸಿಕೊಂಡು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಮತ್ತು ಸೋಂಕಿನ ಅಪಾಯ ಕಡಿಮೆ ಮಾಡುತ್ತದೆ. ಇದರ ಜೊತೆಗೆ ನೀವು ಯಾವಾಗಲೂ ಫಿಟ್ ಮತ್ತು ಆರೋಗ್ಯವಾಗಿರುತ್ತೀರಿ. ನೀವು ಮಾನ್ಸೂನ್ ಸಹ ಆನಂದಿಸಬಹುದು.

    ವ್ಯಾಯಾಮ

    ಮಾನ್ಸೂನ್ ನಲ್ಲಿ ವರ್ಕ್ ಔಟ್ ಮಾಡುವ ಉದ್ದೇಶ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಈ ಋತುವಿನಲ್ಲಿ ತಂಪಾದ ಗಾಳಿ ಮತ್ತು ತೇವಾಂಶವು ಸೋಂಕಿಗೆ ಕಾರಣ ಆಗುತ್ತದೆ.

    ವ್ಯಾಯಾಮ ಮಾಡುವುದು ದೇಹದ ಉಷ್ಣತೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹೀಗಾಗಿ ಮನೆಯೊಳಗೆ ಪ್ರತಿದಿನ ಕನಿಷ್ಠ ಅರ್ಧ ಗಂಟೆ ವ್ಯಾಯಾಮ ಮಾಡಬೇಕು. ವ್ಯಾಯಾಮದ ಜೊತೆ ಆರೋಗ್ಯಕರ ಆಹಾರ ಸೇವನೆ ಮಾಡಿ. ಮತ್ತು ಸಾಕಷ್ಟು ನೀರು ಕುಡಿಯಿರಿ.

    ಯೋಗಾಸನ

    ಮಳೆಗಾಲದಲ್ಲಿ ದೇಹ ಸದೃಢವಾಗಿಡಲು ಶಿಶಿರಾಸನ, ಸೇತು ಬಂಧಾಸನ, ಹಲಾಸನ, ಭುಜಂಗಾಸನ, ಧನುರಾಸನ ಮತ್ತು ಮತ್ಸ್ಯಾಸನ ಸೇರಿ ಅನೇಕ ಯೋಗಾಸನಗಳನ್ನು ನಿಯಮಿತವಾಗಿ ಅಭ್ಯಾಸ ಮಾಡಿ. ಈ ಎಲ್ಲಾ ಯೋಗಾಸನಗಳು ರೋಗ ನಿರೋಧಕ ಶಕ್ತಿ ಬಲಪಡಿಸಲು ಸಹಾಯ ಮಾಡುತ್ತದೆ. ನಿಯಮಿತವಾಗಿ ಧ್ಯಾನ ಮಾಡಿ. ಮನಸ್ಸನ್ನು ಶಾಂತವಾಗಿರಿಸಿ.

    ಪ್ರಾಣಾಯಾಮ

    ಮಳೆಗಾಲದಲ್ಲಿ ಮನೆಯೊಳಗೆ ಪ್ರಾಣಾಯಾಮ ಮಾಡಿ. ಇದು ವ್ಯಕ್ತಿ ತನ್ನನ್ನು ತಾನು ಸದೃಢವಾಗಿ ಮತ್ತು ರೋಗಗಳಿಂದ ಮುಕ್ತನಾಗಿರಿಸಿಕೊಳ್ಳಲು ಸಹಕಾರಿ. ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಭ್ರಮರಿ ಪ್ರಾಣಾಯಾಮ, ಕಪಾಲಭಾತಿ ಪ್ರಾಣಾಯಾಮ, ಅನುಲೋಮ್ ವಿಲೋಮ್ ಪ್ರಾಣಾಯಾಮ ಮತ್ತು ಭಸ್ತ್ರಿಕಾ ಪ್ರಾಣಾಯಾಮ ನಿಯಮಿತವಾಗಿ ಮಾಡಬೇಕು. ಈ ಎಲ್ಲಾ ಪ್ರಾಣಾಯಾಮ ಎಲ್ಲಾ ವಯಸ್ಸಿನ ಜನರು ಸುಲಭವಾಗಿ ಮಾಡಬಹುದು.

    ಇದನ್ನೂ ಓದಿ: ಒಂಟಿ ಕಾಲಿನ ಮೇಲೆ ನಿಂತರೆ ಎಷ್ಟೊಂದು ಪ್ರಯೋಜನ! ಮಿಸ್ ಮಾಡಬೇಡಿ

    ಒಳಾಂಗಣ ಚಟುವಟಿಕೆ

    ಮಳೆಗಾಲದಲ್ಲಿ ನೀವು ಮನೆಯಿಂದ ಹೊರ ಬರಲು ಸಾಧ್ಯವಾಗದೇ ಇದ್ದರೆ, ಒಳಾಂಗಣ ಚಟುವಟಿಕೆ ಮಾಡುವ ಮೂಲಕ ನೀವು ನಿಮ್ಮನ್ನು ಫಿಟ್ ಆಗಿರಿಸಿಕೊಳ್ಳಬಹುದು. ನೀವು ಸ್ಕಿಪ್ಪಿಂಗ್, ಮೆಟ್ಟಿಲು ಹತ್ತುವುದು, ಜಗ್ಲಿಂಗ್, ನೃತ್ಯ, ಹುಲಾ ಹೂಪ್ ಮುಂತಾದ ಅನೇಕ ಚಟುವಟಿಕೆ ಮಾಡಬಹುದು. ನಿಮ್ಮ ಜೀವನದಲ್ಲಿ ಧನಾತ್ಮಕತೆ ತರಲು ದೃಶ್ಯೀಕರಣದ ಶಕ್ತಿ ಬಳಸಿ. ಮನೆಕೆಲಸದಲ್ಲಿ ನಿರತರಾಗಿರಿ.
    Published by:renukadariyannavar
    First published: