ಮಳೆಗಾಲ ಬಂತು... ಆಹಾರ ಕ್ರಮ ನಿರ್ಲಕ್ಷಿಸಿ ಅನಾರೋಗ್ಯಕ್ಕೀಡಾಗದಿರಿ!

news18
Updated:July 11, 2018, 4:44 PM IST
ಮಳೆಗಾಲ ಬಂತು... ಆಹಾರ ಕ್ರಮ ನಿರ್ಲಕ್ಷಿಸಿ ಅನಾರೋಗ್ಯಕ್ಕೀಡಾಗದಿರಿ!
news18
Updated: July 11, 2018, 4:44 PM IST
-ನ್ಯೂಸ್ 18 ಕನ್ನಡ

ಮಳೆಗಾಲ ಮನಸ್ಸಿಗೆ ಹಿತವೆನಿಸಿದರೂ ಆರೋಗ್ಯಕ್ಕೆ ಅಹಿತಕರ ಎಂದು ಪರಿಗಣಿಸಲಾಗುತ್ತದೆ. ಮಲೇರಿಯಾ, ಡೆಂಘೀ ಮುಂತಾದ ಸಾಂಕ್ರಾಮಿಕ ರೋಗಗಳು ಹೆಚ್ಚಾಗಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುತ್ತದೆ. ಈ ಸಮಯದಲ್ಲಿ ಬ್ಯಾಕ್ಟೀರಿಯಾಗಳು ಮತ್ತು ವೈರಸ್​ಗಳು ಸುಲಭವಾಗಿ ದೇಹ ಪ್ರವೇಶಿಸುತ್ತದೆ. ಮಾನ್ಸೂನ್ ಸಂದರ್ಭದಲ್ಲಿ ಆಹಾರ ಕ್ರಮದ ಮೇಲೆ ಕಾಳಜಿವಹಿಸುವುದರಿಂದ ಸೋಂಕು ತಗಲದಂತೆ ಎಚ್ಚರವಹಿಸಬಹುದು. ಮಳೆಗಾಲದಲ್ಲಿ ಆಹಾರ ಕ್ರಮದಲ್ಲಿ ಅನುಸರಿಸಬೇಕಾದ ಕೆಲ ಕ್ರಮಗಳು ಇಂತಿವೆ.

* ಮಳೆಗಾಲದಲ್ಲಿ ಬಿಸಿ ನೀರನ್ನು ಕುಡಿಯುವುದು ಅಭ್ಯಾಸ ಮಾಡಿಕೊಳ್ಳಿ. ನೀರನ್ನು ಕಾಯಿಸುವುದರಿಂದ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣುಗಳು ನಾಶವಾಗುತ್ತದೆ. ಹಾಗೆಯೇ ಬಿಸಿ ನೀರನ್ನು ಹೇರಳವಾಗಿ ಕುಡಿಯುವುದರಿಂದ ಆರೋಗ್ಯ ಕೂಡ ವೃದ್ಧಿಸುತ್ತದೆ.

* ಮಾನ್ಸೂನ್ ವೇಳೆ ಆಹಾರದಲ್ಲಿ ಕಡಿಮೆ ಉಪ್ಪನ್ನು ಬಳಸಿ. ಅಧಿಕ ಉಪ್ಪಿನ ಆಹಾರ ಸೇವಿರುವುದರಿಂದ ರಕ್ತದೊತ್ತಡದ ಸಮಸ್ಯೆಗೆ ಕಾರಣವಾಗಬಹುದು.

* ಮಳೆಗಾಲದ ಸಂದರ್ಭದಲ್ಲಿ ದೇಹದ ಜೀರ್ಣಕ್ರಿಯೆಯ ಸಾಮರ್ಥ್ಯ ಕಡಿಮೆ ಇರುತ್ತದೆ. ಹೀಗಾಗಿ ಜಂಕ್​ ಫುಡ್ ಅಥವಾ ಕರಿದ ಆಹಾರಗಳ ಸೇವನೆಯಿಂದ ದೂರವಿರಿ. ಇಂತಹ ಆಹಾರಗಳಿಂದ ಹೊಟ್ಟೆಯ ಅಸ್ವಸ್ಥತೆ ಉಂಟಾಗಬಹುದು.

* ಮಾನ್ಸೂನ್​ ಆಹಾರ ಕ್ರಮದಲ್ಲಿ ಹಣ್ಣುಗಳನ್ನು ಸೇರಿಸಿ. ಹಣ್ಣು ಹಂಪಲನ್ನು ತಿನ್ನುವುದರಿಂದ ಮಳೆಗಾಲದಲ್ಲಿ ದೇಹ ಶಕ್ತಿ ಹೆಚ್ಚುತ್ತದೆ. ಅದರಲ್ಲೂ ಮಳೆಗಾಲದಲ್ಲಿ ಸಿಗುವ ಹಣ್ಣುಗಳನ್ನೇ ಹೆಚ್ಚಾಗಿ ಸೇವಿಸಿ.

* ಮಳೆಗಾಲದಲ್ಲಿ ನೀರಿನ ಪ್ರಮಾಣ ಕಡಿಮೆ ಇರುವ ಹಣ್ಣುಗಳನ್ನೇ ತಿನ್ನಿ. ಬೇಸಿಗೆ ಕೊನೆಯಾಗುವಾಗ ಹಲವು ರೀತಿಯ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭಿಸುತ್ತದೆ. ಇದರಲ್ಲಿ ಕಡಿಮೆ ನೀರಿನ ಪ್ರಮಾಣ ಹೊಂದಿರುವ ಹಣ್ಣುಗಳನ್ನು ಆರಿಸಿಕೊಳ್ಳಿ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...