• Home
  • »
  • News
  • »
  • lifestyle
  • »
  • Deadly Momos: ಜೀವಕ್ಕೆ ಕುತ್ತು ತರುವ ಮೊಮೊಸ್ ಸೇವನೆ ಎಷ್ಟು ಅಪಾಯಕಾರಿ?

Deadly Momos: ಜೀವಕ್ಕೆ ಕುತ್ತು ತರುವ ಮೊಮೊಸ್ ಸೇವನೆ ಎಷ್ಟು ಅಪಾಯಕಾರಿ?

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮೊಮೊಸ್ ನ್ನು ಸಾಕಷ್ಟು ಇಷ್ಟಪಟ್ಟು ತಿನ್ನುವ ಹಲವರನ್ನು ಕಾಣಬಹುದು. ಆದರೆ ಮೊಮೊಸ್ ಜೀವಕ್ಕೆ ಅಪಾಯಕಾರಿ. ಮೊಮೊಸ್ ನುಂಗಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಏಮ್ಸ್ ತಜ್ಞರು ಎಚ್ಚರಿಕೆ ನೀಡಿದ್ದಾರೆ.

  • Share this:

    ಚಾಟ್ ಮಸಾಲಾ (Chat Masala), ಜಂಕ್ ಫುಡ್ (Junk Food), ಸ್ಟ್ರೀಟ್ ಫುಡ್ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ? ಎಲ್ಲರೂ ಪಾಸ್ತಾ (Pasta), ನೂಡಲ್ಸ್, ಗೋಬಿ, ಪಾನಿಪುರಿ ಜೊತೆಗೆ ಮೊಮೊಸ್ (Momos) ತಿನ್ನೋಕೆ ತುದಿಗಾಲ ಮೇಲೆ ನಿಂತಿರ್ತಾರೆ. ಹಾಗಾಗಿಯೇ ಫುಡ್ ಸ್ಟ್ರೀಟ್ ಸೇರಿದಂತೆ ಸಂಜೆಯಾಗುತ್ತಿದ್ದಂತೆಯೇ ಚಾಟ್ ಹಾಗೂ ಜಂಕ್ ಫುಡ್ ಅಂಗಡಿಗಳು ತುಂಬಿ ತುಳುಕುತ್ತಿರುತ್ತವೆ. ಈಗ ನಾವು ಹೇಳೋಕೆ ಹೊರಟಿರೋದು ಆರೋಗ್ಯ ಹಾಗೂ ಜೀವದ ವಿಷಯ. ಹೌದು ಒಳ್ಳೆಯ ಆರೋಗ್ಯ ಮತ್ತು ಆರೋಗ್ಯಕರ ಜೀವನ ನಡೆಸಲು ಬೇಕಿರೋದು ಒಳ್ಳೆಯ ಹಾಗೂ ಸತ್ವಯುತ ಆಹಾರ. ಅದು ನಮಗೆ ಸಿಗೋದು ಹಸಿರು ತರಕಾರಿ, ಕಾಳುಗಳು, ಹಣ್ಣು ಮತ್ತು ಪೋಷಕಾಂಶ ಭರಿತ ಪದಾರ್ಥಗಳಿಂದ.


    ಆದರೆ ಇತ್ತೀಚೆಗೆ ಜನರು ಹೆಚ್ಚು ಜಂಕ್ ಫುಡ್ ತಿನ್ನುವುದನ್ನು ರೂಢಿ ಮಾಡಿಕೊಂಡಿದ್ದಾರೆ. ಅದರಲ್ಲೂ ಮೊಮೊಸ್ ನ್ನು ಸಾಕಷ್ಟು ಇಷ್ಟಪಟ್ಟು ತಿನ್ನುವ ಹಲವರನ್ನು ಕಾಣಬಹುದು. ಆದರೆ ಮೊಮೊಸ್ ಜೀವಕ್ಕೆ ಅಪಾಯಕಾರಿ.


    ಮೊಮೊಸ್ ತಿಂದು ವ್ಯಕ್ತಿ ಸಾವು


    ಹೌದು.. ಮೊಮೊಸ್ ನುಂಗಿದರೆ ಸಾವು ಸಂಭವಿಸುವ ಸಾಧ್ಯತೆ ಇದೆ ಎಂದು ಏಮ್ಸ್ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಮೊಮೊಸ್ ತಿಂದು ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಈಗಾಗಲೇ ಬೆಳಕಿಗೆ ಬಂದಿದೆ. AIIMS ತಜ್ಞರು ಇದರ ಹಿಂದಿನ ಕಾರಣ ಏನೆಂಬುದನ್ನು ಹೇಳಿದ್ದಾರೆ. ಮೊಮೊಸ್ ಗಳನ್ನು ಜಗಿಯುವುದು ಮತ್ತು ನುಂಗುವುದು ನಿಮ್ಮ ಆರೋಗ್ಯಕ್ಕೆ ಅಪಾಯಕಾರಿ ಎನ್ನುತ್ತಾರೆ ವೈದ್ಯರು.


    ಇದನ್ನೂ ಓದಿ: ಮೂತ್ರದ ಬಣ್ಣ ಗಾಢವಾಗಿ ನೊರೆ ಇದ್ದರೆ ನಿರ್ಲಕ್ಷ್ಯ ಬೇಡ! ಅಪಾಯಕಾರಿ ರೋಗದ ಲಕ್ಷಣಗಳಿವು


    ಮೊಮೊಸ್ ತಿನ್ನುವವರಿಗೆ AIIMS ಎಚ್ಚರಿಕೆ


    ನೀವು ಕೂಡ ಮೊಮೊಸ್ ತಿನ್ನಲು ಇಷ್ಟಪಟ್ಟು ಬಾಯಿ ಚಪ್ಪರಿಸಿ ತಿನ್ನುವವರಲ್ಲಿ ಒಬ್ಬರಾಗಿದ್ದರೆ, AIIMS ನ ಈ ಎಚ್ಚರಿಕೆಯನ್ನು ಖಂಡಿತವಾಗಿ ಗಂಭೀರವಾಗಿ ತೆಗೆದುಕೊಳ್ಳಿ. ಕೆಂಪು ಚಟ್ನಿಯೊಂದಿಗೆ ಬಿಸಿ ಮೊಮೊಸ್ ತಿನ್ನುವಾಗ ಸೂಕ್ತ ಎಚ್ಚರಿಕೆ ವಹಿಸುವಂತೆ ಏಮ್ಸ್ ತಿಳಿಸಿದೆ. ಮೊಮೊಸ್ ನ್ನು ತೀವ್ರವಾಗಿ ಅಗಿಯಲು ಮತ್ತು ಎಚ್ಚರಿಕೆಯಿಂದ ನುಂಗಲು AIIMS ಸಲಹೆ ನೀಡಿದೆ. ಹಾಗೆ ಮಾಡಲು ವಿಫಲವಾದರೆ ನಿಮ್ಮ ಆರೋಗ್ಯಕ್ಕೆ ಅಪಾಯವಾಗಬಹುದು.


    ಅಷ್ಟೇ ಅಲ್ಲ, ಈ ಮೊಮೊಸ್ ಗಳು ನಿಮ್ಮ ಜೀವನಕ್ಕೂ ಭಾರವಾಗಬಹುದು. ಇದು ಹೊಟ್ಟೆಯಲ್ಲಿ ಸಿಲುಕಿ, ಇದು ಜೀವಕ್ಕೆ ಅಪಾಯ ಎಂದು AIIMS ನ ತಜ್ಞರು ಹೇಳಿದ್ದಾರೆ. ವಾಸ್ತವವಾಗಿ, ಮೊಮೊಸ್ ಸೇವಿಸಿದ ನಂತರ 50 ವರ್ಷದ ವ್ಯಕ್ತಿಯ ಆರೋಗ್ಯ ಹದಗೆಟ್ಟಿತ್ತು. AIIMS ನ ತಜ್ಞರು ಇದನ್ನು ಮುನ್ನೆಲೆಗೆ ತಂದಿದ್ದಾರೆ.


    ಶ್ವಾಸನಾಳದಲ್ಲಿ ಸಿಲುಕಿದ ಮೊಮೊಸ್


    ಈ ಪ್ರಕರಣ ದಕ್ಷಿಣ ದೆಹಲಿಯಲ್ಲಿ ನಡೆದಿದೆ. 50 ವರ್ಷದ ವ್ಯಕ್ತಿಯನ್ನು ಏಮ್ಸ್ ಆಸ್ಪತ್ರೆಗೆ ಕರೆ ತರಲಾಗಿತ್ತು. ಅಲ್ಲಿ ಅವರು ಸಾವನ್ನಪ್ಪಿದ್ದಾರೆ. ಫೋರೆನ್ಸಿಕ್ ವರದಿಯ ಪ್ರಕಾರ, ಈ ವ್ಯಕ್ತಿ ಮದ್ಯ ಸೇವಿಸಿದ್ದ ಜೊತೆಗೆ ಮೊಮೊಸ್ ಸೇವಿಸಿದ್ದ. ಈ ವೇಳೆ ಆತ ನೆಲದ ಮೇಲೆ ಕುಸಿದು ಬಿದ್ದಿದ್ದ. ಆ ವ್ಯಕ್ತಿಯ ಶ್ವಾಸನಾಳದಲ್ಲಿ ಮೊಮೊಸ್ ಸಿಲುಕಿದ್ದು ಆತ ಸಾವನ್ನಪ್ಪಿದ್ದ ಎಂದು ತಜ್ಞರು ಹೇಳಿದ್ದಾರೆ. ಈ ಸಮಸ್ಯೆಯನ್ನು ನ್ಯೂರೋಜೆನಿಕ್ ಕಾರ್ಡಿಯಾಕ್ ಅರೆಸ್ಟ್ ಎಂದು ಕರೆಯುತ್ತಾರೆ.


    ಹೆಚ್ಚು ಅಗಿಯುವುದು ಅವಶ್ಯಕ


    ತಜ್ಞರು ಸಾವಿಗೆ ಕಾರಣವೆಂದರೆ ನಾವು ಅಂತಹ ಯಾವುದೇ ಗಾತ್ರದಲ್ಲಿ ಹೆಚ್ಚು ಅಥವಾ ಒಳಗೆ ಉಬ್ಬುವ ಸಾಧ್ಯತೆಯಿರುವ ಪದಾರ್ಥಗಳನ್ನು ಹೆಚ್ಚು ಅಗಿದು ಸೇವನೆ ಮಾಡಬೇಕು. ಅಗಿಯದೆ ತಿಂದರೆ ಆ ವಸ್ತು ಜಾರಿ ಶ್ವಾಸನಾಳದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ. ಇದು ಉಸಿರಾಟದ ವ್ಯವಸ್ಥೆಗೆ  ನಿರ್ಬಂಧ ಹೇರುತ್ತದೆ. ಮತ್ತು ಇದು ಸಾವಿಗೆ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು.


    ರಕ್ತದ ಸಕ್ಕರೆ ಮಟ್ಟ ಹೆಚ್ಚಿಸಬಹುದು


    ಮೊಮೊಸ್ ಸೇವನೆ ರಕ್ತದ ಸಕ್ಕರೆ ಮಟ್ಟವನ್ನು ವೇಗವಾಗಿ ಹೆಚ್ಚಿಸುತ್ತದೆ. ಮೈದಾ ಹಿಟ್ಟಿನಿಂದ ತಯಾರಿಸಿದ ಮೊಮೊಸ್, ಮೇದೋಜ್ಜೀರಕ ಗ್ರಂಥಿಯನ್ನು ಹಾನಿಗೊಳಿಸುತ್ತದೆ. ಮತ್ತು ಇನ್ಸುಲಿನ್ ಮಾಡುವ ಸಾಮರ್ಥ್ಯ ಕಡಿಮೆ ಮಾಡುತ್ತದೆ. ಇದು ಮಧುಮೇಹದ ಅಪಾಯ ಹೆಚ್ಚಿಸುತ್ತದೆ.


    ಮೊಮೊಸ್ ಚಟ್ನಿ ಪೈಲ್ಸ್‌ ಉಂಟು ಮಾಡುತ್ತದೆ


    ಮೆಣಸಿನಕಾಯಿಯನ್ನು ಮೊಮೊಸ್ ಚಟ್ನಿಯಲ್ಲಿ ಹೆಚ್ಚು ಬಳಕೆ ಮಾಡುತ್ತಾರೆ. ಗುಣಮಟ್ಟವಿಲ್ಲದ ಮೆಣಸಿನಕಾಯಿ ಪೈಲ್ಸ್ ಉಂಟು ಮಾಡುತ್ತದೆ. ಕೆಂಪು ಮೆಣಸಿನ ಪುಡಿಯ ಅತಿಯಾದ ಸೇವನೆ ಪೈಲ್ಸ್ ಅಪಾಯ ಹೆಚ್ಚಿಸುತ್ತದೆ.


    ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತೂಕ ಇಳಿಸುವ ಪ್ರಯತ್ನವನ್ನು ಸುಲಭವಾಗಿಸಿ!


    ಸ್ಥೂಲಕಾಯ ಹೆಚ್ಚಿಸುತ್ತದೆ


    ಮೊಮೊಸ್ ಸೇವನೆ ಬೊಜ್ಜು ಹೆಚ್ಚಿಸುತ್ತದೆ. ಮೊಮೊಸ್ ತಯಾರಿಸುವಾಗ ಹಿಟ್ಟಿನಲ್ಲಿ ಪಿಷ್ಟ ಹೆಚ್ಚಾಗಿರುತ್ತದೆ. ಇದು ಸ್ಥೂಲಕಾಯತೆ ಹೆಚ್ಚಿಸುತ್ತದೆ.

    Published by:renukadariyannavar
    First published: