Linda Evangelista: ಬೊಜ್ಜು ಕರಗಿಸಿಕೊಳ್ಳಲು ಹೋಗಿ ಇಡೀ ದೇಹದ ಆಕಾರವನ್ನೇ ಕಳೆದುಕೊಂಡ ರೂಪದರ್ಶಿ

ಹೌದು, ದೇಹದ ತೂಕ ಇಳಿಸಿಕೊಳ್ಳಲು ಮಾಡಿಸಿಕೊಳ್ಳುವ ಶಸ್ತ್ರ ಚಿಕಿತ್ಸೆಯಿಂದಾಗಿ ಜೀವ ಕಳೆದುಕೊಂಡವರೂ ಇದ್ದಾರೆ. ಇಂತಹ ಘಟನೆಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ. ಆದರೆ, ಇಲ್ಲೊಬ್ಬರು ಬೊಜ್ಜು ಕರಗಿಸಲು ಹೋಗಿ ತನ್ನ ಇಡೀ ದೇಹದ ಆಕಾರವನ್ನೇ ಕಳೆದುಕೊಂಡು ಈಗ ನ್ಯಾಯಾಲಯದ ಮೆಟ್ಟಿಲೇರಿರುವ ರೂಪದರ್ಶಿಯ ಕತೆಯಿದು.

ರೂಪದರ್ಶಿ ಲಿಂಡಾ

ರೂಪದರ್ಶಿ ಲಿಂಡಾ

  • Share this:
ಲಿಂಡಾ ಇವಾಂಜೆಲಿಸ್ಟಾ (Linda Evangelista) ಅವರು ಇತ್ತೀಚಿನ ವರ್ಷಗಳಲ್ಲಿ ಸಾರ್ವಜನಿಕವಾಗಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. 56 ವರ್ಷದ ಸೂಪರ್ ಮಾಡೆಲ್ ಈ ಬಗ್ಗೆ ಕಡೆಗೂ ತಮ್ಮ ಮೌನ ಮುರಿದಿದ್ದಾರೆ. ಲಿಂಡಾ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಐದು ವರ್ಷಗಳ ಹಿಂದೆ ತಾವು 'ಕೂಲ್‌ಸ್ಕಲ್ಪಿಂಗ್' ಬೊಜ್ಜು ತೆಗೆಸಿಕೊಳ್ಳುವ ಪ್ರಕ್ರಿಯೆಗೆ ಒಳಗಾಗಿದ್ದ ಪ್ರಕ್ರಿಯೆಯ ಬಗ್ಗೆ ಬಹಿರಂಗಪಡಿಸಿದ್ದಾರೆ. ಆ ಒಂದು ನಿರ್ಧಾರ ಆಕೆಯ ಬದುಕನ್ನೇ ಬದಲಿಸಿದೆ. ಬೊಜ್ಜು ತೆಗೆಸಿಕೊಳ್ಳುವ ಶಸ್ತ್ರ ಚಿಕಿತ್ಸೆ ಆಕೆಗೆ ಆಘಾತವನ್ನೇ ಉಂಟು ಮಾಡಿದೆ. ಸರ್ಜರಿ ಬಳಿಕ ಲಿಂಡಾ ಅತ್ಯಂತ ಗಂಭೀರವಾದ ಗಾಯಕ್ಕೆ ಒಳಗಾಗಿದ್ದಾರೆ ಎನ್ನುವ ಆತಂಕಕಾರಿ ಅಂಶವನ್ನು ಈಗ ಬಹಿರಂಗ ಪಡಿಸಿದ್ದಾರೆ.

ಲಿಂಡಾ ಈಗ ಕೂಲ್‌ಸ್ಕಲ್ಪಿಂಗ್‌ನ ಮೂಲ ಕಂಪನಿಯಾದ 'Zeltiq Aesthetics'​​ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. "ಐದು ವರ್ಷಗಳ ಕಾಲ ನನ್ನೊಳಗೆ ಮುಚ್ಚಿಟ್ಟಿದ್ದ ವಿಷಯ ಪ್ರಸ್ತಾಪಿಸುತ್ತಿದ್ದೇನೆ. ನಾನು ಅನುಭವಿಸಿದ ತಪ್ಪನ್ನು ಸರಿಪಡಿಸುವ ಕಡೆಗೆ ಇಂದು ನಾನು ಒಂದು ಮಹತ್ವದ ಹೆಜ್ಜೆ ಇಟ್ಟಿದ್ದೇನೆ" ಎಂದು ಇವಾಂಜೆಲಿಸ್ಟಾ ಬರೆದುಕೊಂಡಿದ್ದಾರೆ.


ಮುಂದುವರೆದು "#TheTruth" ಮತ್ತು "#MyStory" ಎಂಬ ಹ್ಯಾಶ್‌ಟ್ಯಾಗ್‌ಗಳೊಂದಿಗೆ ತಮ್ಮ ಪೋಸ್ಟ್​ಗೆ ಶೀರ್ಷಿಕೆ ನೀಡಿದ್ದಾರೆ. 'ನನ್ನೆಲ್ಲ ಮಿತ್ರರ ವೃತ್ತಿಜೀವನವು ಕೆಲಸದೊಟ್ಟಿಗೆ ಅಭಿವೃದ್ಧಿ ಹೊಂದುತ್ತಿರುವಾಗ ನಾನು ಏಕೆ ಕೆಲಸ ಮಾಡುತ್ತಿಲ್ಲ? ಎಂದು ನನ್ನ ಅನುಯಾಯಿಗಳು ಯೋಚಿಸಿರಬಹುದು. ಅದಕ್ಕೆ ಇಂದು ಉತ್ತರಿಸಿದ್ದೇನೆ ' ಎಂದಿದ್ದಾರೆ.

ಇದನ್ನೂ ಓದಿ: ಮಗನನ್ನು ಎತ್ತಿಕೊಂಡು ಮುದ್ದಾಡಿದ Nikhil Kumaraswamy: ಇಲ್ಲಿವೆ ಚಿತ್ರಗಳು

'ನಿಜವೇನೆಂದರೇ Cool Sculpting ಶಸ್ತ್ರ ಚಿಕಿತ್ಸೆಯಿಂದ ನನ್ನ ಆಕಾರವನ್ನು ಕಳೆದುಕೊಂಡಿದ್ದೇನೆ. ದೇಹದ ಆಕಾರವನ್ನು ಉತ್ತಮಗೊಳಿಸುವ ಪ್ರಮಾಣಕ್ಕೆ ವಿರುದ್ಧವಾಗಿ ಕಂಪನಿ ನನ್ನನ್ನು ವಿಕಾರಗೊಳಿಸಿದೆ ' ಎಂದು ಲಿಂಡಾ ಪೋಸ್ಟ್​​ನಲ್ಲಿ ತಿಳಿಸಿದ್ದಾರೆ.

ಇವಾಂಜೆಲಿಸ್ಟಾ ಈ ಪೋಸ್ಟ್‌ನಲ್ಲಿ ಹಲವಾರು ಭಯಾನಕ ಅಂಶಗಳ ಬಗ್ಗೆ ತಿಳಿಸಿದ್ದಾರೆ. 'ಈ ಸರ್ಜರಿಯೂ ಕೊಬ್ಬನ್ನು ಕಡಿಮೆ ಮಾಡಲಿಲ್ಲ, ಬದಲಿಗೆ ಇನ್ನಷ್ಟು ವೃದ್ಧಿಸಿದೆ. ಇದನ್ನು ಸರಿ ಮಾಡಲು ನೋವು ಭರಿತ ಎರಡು ಶಸ್ತ್ರಚಿಕಿತ್ಸೆಗೆ ಒಳಗಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಇದು ಶಾಶ್ವತವಾಗಿ ವಿಕಾರಗೊಳಿಸಿದೆ. ಮಾಧ್ಯಮಗಳು ನನ್ನನ್ನು ಗುರುತಿಸದಂತೆ ಮಾಡಿದೆ' ಎಂದು ಇವಾಂಜೆಲಿಸ್ಟಾ ತಮ್ಮ ಮನದಲ್ಲಿರುವ ನೋವು ತುಂಬಿದ ಮಾತುಗಳಿಗೆ ಅಕ್ಷರ ರೂಪಕ್ಕೆ ಕೊಟ್ಟಿದ್ದಾರೆ.
'ಅಡಿಪೋಸ್ ಹೈಪರ್ಪ್ಲಾಸಿಯಾ' ಅಥವಾ 'ಪಿಎಹೆಚ್' (Paradoxical Adipose Hyperplasia or PAH) ಎನ್ನುವ ಅಪರೂಪದ ಪ್ರತಿಕೂಲ ಪರಿಣಾಮಕ್ಕೆ ತುತ್ತಾಗಿದ್ದಾರೆ ಲಿಂಡಾ. ಈ ಚಿಕಿತ್ಸೆಯ ಪರಿಣಾಮ ಕೊಬ್ಬಿನ ಕೋಶಗಳು ಕುಗ್ಗುವುದಕ್ಕಿಂತ ಹೆಚ್ಚಾಗುತ್ತದೆ ಎನ್ನುವ ಆಘಾತಕಾರಿ ಅಂಶವನ್ನು ಇನ್​ಸ್ಟಾಗ್ರಾಂ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ ಲಿಂಡಾ.

ಕೊನೆಯಲ್ಲಿ, ಕೆನಾಡದ ಈ ಸೂಪರ್ ಮಾಡೆಲ್​ ಕಾನೂನು ಕ್ರಮವನ್ನು ಮುಂದುವರಿಸುವ ಉದ್ದೇಶವನ್ನು ವ್ಯಕ್ತಪಡಿಸಿದ್ದಾರೆ. 'ಈ ಮೊಕದ್ದಮೆಯೊಂದಿಗೆ, ನಾನು ಅವಮಾನದಿಂದ ಹೊರ ಬರಲು ಹೆಜ್ಜೆ ಇಟ್ಟಿದ್ದೇನೆ. ಸಾರ್ವಜನಿಕವಾಗಿ ನನ್ನ ಅನುಭವವನ್ನು ಹಂಚಿಕೊಳ್ಳುತ್ತಿದ್ದೇನೆ. ಈ ರೀತಿ ಬದುಕು ನಡೆಸಿ ರೋಸಿ ಹೋಗಿದ್ದೇನೆ. ನಾನು ನನ್ನ ಹಾಗೇ ಎಂದಿಗೂ ಕಾಣುವುದಿಲ್ಲ ಎನ್ನುವ ನಿಜದೊಟ್ಟಿಗೆ ನಾನು ತಲೆ ಎತ್ತಿಕೊಂಡು ನನ್ನ ಮನೆಯ ಬಾಗಿಲನ್ನು ದಾಟಲು ಬಯಸುತ್ತೇನೆ' ಎಂದು ಪದಗಳ ಮೂಲಕ ವಿವರಿಸಿದ್ದಾರೆ ಲಿಂಡಾ.

ಇದನ್ನೂ ಓದಿ: ಚಂದನವನದ ಹಿರಿಯ ನಟಿ M N Lakshmidevi ಭೇಟಿ ಮಾಡಿ ಸನ್ಮಾನ ಮಾಡಿದ ಶ್ರುತಿ-ಸುಧಾರಾಣಿ..!

ಪೀಪಲ್ ಪ್ರಕಾರ, ಮೊಕದ್ದಮೆಯ ಆಪಾದಿತೆ ಸೂಪರ್ ಮಾಡೆಲ್ ಹೇಳುವಂತೆ ವಿಕಾರದ ಪರಿಣಾಮವಾಗಿ ಸೂಪರ್ ಮಾಡೆಲ್ ನಿರುದ್ಯೋಗಿಯಾಗಿದ್ದಾರೆ. ಮಾಡೆಲ್ ಆಗಿ ಆದಾಯವನ್ನು ಗಳಿಸಲು ಸಾಧ್ಯವಾಗದ ಪರಿಣಾಮವಾಗಿ ಸೂಪರ್ ಮಾಡೆಲ್ ಆರ್ಥಿಕ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಆರೋಪದಲ್ಲಿ ತಿಳಿಸಿದ್ದಾರೆ. ಈ ಸುದ್ದಿ ಗ್ಲಾಮರ್ ಲೋಕವನ್ನು ಇನ್ನೊಂದು ಕಣ್ಣಿನಲ್ಲಿ ನೋಡುವಂತೆ ಮಾಡಿದ್ದು, ಯುವ ಕನಸುಗಾರರಿಗೆ ಸಣ್ಣ ಅರಿವಿನ ಜಾಗರೂಕತೆಯ ಬಗ್ಗೆಯೂ ತಿಳಿಸುತ್ತಿದೆ.
Published by:Anitha E
First published: