• Home
  • »
  • News
  • »
  • lifestyle
  • »
  • Health Care: ಕರ್ಪೂರ, ತೆಂಗಿನ ಎಣ್ಣೆಯ ಮಿಶ್ರಣದಿಂದ ಈ ಎಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತದೆ

Health Care: ಕರ್ಪೂರ, ತೆಂಗಿನ ಎಣ್ಣೆಯ ಮಿಶ್ರಣದಿಂದ ಈ ಎಲ್ಲಾ ಆರೋಗ್ಯ ಪ್ರಯೋಜನ ಸಿಗುತ್ತದೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಕರ್ಪೂರದ ಪರಿಮಳ ಚಿತ್ತವನ್ನು ಉಲ್ಲಾಸಗೊಳಿಸುತ್ತದೆ. ಮನಸ್ಸನ್ನು ಶಾಂತವಾಗಿರಿಸುತ್ತದೆ. ಚರ್ಮದ ಕಿರಿಕಿರಿ ಮತ್ತು ಸೋಂಕಿನ ಸಮಸ್ಯೆ ನಿವಾರಣೆಗೂ ಕರ್ಪೂರ ಮತ್ತು ತೆಂಗಿನ ಎಣ್ಣೆಯನ್ನು ಅನೇಕರು ಬಳಕೆ ಮಾಡುತ್ತಾರೆ. ಕರ್ಪೂರವು ಇತರೆ ಅನೇಕ ಆರೋಗ್ಯ ಸಮಸ್ಯೆ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

ಮುಂದೆ ಓದಿ ...
  • Share this:

    ಕರ್ಪೂರವನ್ನು (Camphor) ಮರದ ಕಾಂಡದಿಂದ ಪಡೆಯಲಾಗುತ್ತದೆ. ಇದು ಬಿಳಿ ಬಣ್ಣದ (White Color) ಬಾಷ್ಪಶೀಲ ಎಣ್ಣೆಯುಕ್ತ ವಸ್ತು ಆಗಿದೆ. ಕರ್ಪೂರವನ್ನು ಸುಲಭವಾಗಿ ಸುಡಬಹುದಾಗಿದೆ. ಕರ್ಪೂರವನ್ನು ದೇವರ ಪೂಜೆಗೆ (Pooja) ಬಳಕೆ ಮಾಡಲಾಗುತ್ತದೆ. ಹಲವು ವರ್ಷಗಳಿಂದ ಕರ್ಪೂರವನ್ನು ಧಾರ್ಮಿಕ ಆರಾಧನೆಯಲ್ಲಿ ಬಳಕೆ ಮಾಡುತ್ತಾ ಬರಲಾಗಿದೆ. ಬಿಳಿ ಬಣ್ಣದ ಕರ್ಪೂರವು ಧಾರ್ಮಿಕವಾಗಿ ಮಾತ್ರವಲ್ಲದೇ, ವೈದ್ಯಕೀಯವಾಗಿಯೂ ಸಾಕಷ್ಟು ಜನಪ್ರಿಯತೆ (Famous) ಪಡೆದುಕೊಂಡಿದೆ. ಆಯುರ್ವೇದದಿಂದ (Ayurveda) ಆಧುನಿಕ ವಿಜ್ಞಾನದವರೆಗೆ ಕರ್ಪೂರದ ಪ್ರಯೋಜನಗಳನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ. ಕರ್ಪೂರವನ್ನು ತೆಂಗಿನ ಎಣ್ಣೆ ಜೊತೆ ಬೆರೆಸಿದಾಗ, ಈ ಸಂಯೋಜನೆಯು ತುಂಬಾ ಅದ್ಭುತ ಪ್ರಯೋಜನ ನೀಡುತ್ತದೆ. ಕರ್ಪೂರ ಮತ್ತು ತೆಂಗಿನ ಎಣ್ಣೆಯ ನಾಲ್ಕು ಮನೆಮದ್ದುಗಳನ್ನು ತಿಳಿಯೋಣ.


    ಕರ್ಪೂರ ಮತ್ತು ತೆಂಗಿನ ಎಣ್ಣೆಯ ಪ್ರಯೋಜನಗಳು


    ಕರ್ಪೂರದ ಪರಿಮಳವು ಚಿತ್ತವನ್ನು ಉಲ್ಲಾಸಗೊಳಿಸಲು ಮತ್ತು ಮನಸ್ಸನ್ನು ಶಾಂತವಾಗಿರಿಸಲು ಸಹಾಯ ಮಾಡುತ್ತದೆ. ಚರ್ಮದ ಕಿರಿಕಿರಿ ಮತ್ತು ಸೋಂಕಿನ ಸಮಸ್ಯೆ ನಿವಾರಣೆಗೂ ಕರ್ಪೂರ ಮತ್ತು ತೆಂಗಿನ ಎಣ್ಣೆಯನ್ನು ಅನೇಕರು ಬಳಕೆ ಮಾಡುತ್ತಾರೆ. ಕರ್ಪೂರವು ಇತರೆ ಅನೇಕ ಆರೋಗ್ಯ ಸಮಸ್ಯೆ ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.


    ಚರ್ಮದ ಸೋಂಕು ಕಡಿಮೆ ಮಾಡುತ್ತದೆ ಕರ್ಪೂರ


    ಜರ್ನಲ್ ಆಫ್ ಎಥ್ನೋಫಾರ್ಮಾಕಾಲಜಿ ಪ್ರಕಾರ, ಕರ್ಪೂರವು ಉರಿಯೂತ, ಆಂಟಿಫಂಗಲ್ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ಇದು ಚರ್ಮದ ಸೋಂಕುಗಳು ಮತ್ತು ಅಲರ್ಜಿ ಸಮಸ್ಯೆ ನಿವಾರಣೆ ಮಾಡುತ್ತದೆ. ಕರ್ಪೂರವನ್ನು ಬಳಸಲು ಹಲವು ಮಾರ್ಗಗಳಿವೆ. ಆದರೆ ಕರ್ಪೂರದ ನೀರು ಅಥವಾ ಕರ್ಪೂರ ಮತ್ತು ತೆಂಗಿನ ಎಣ್ಣೆಯ ಸಂಯೋಜನೆ ಬಳಸಲು ಶಿಫಾರಸು ಮಾಡಲಾಗಿದೆ.


    ಇದನ್ನೂ ಓದಿ: ಹೊಟ್ಟೆ ಸಮಸ್ಯೆ ತಪ್ಪಿಸಲು ಅಗಸೆ ಬೀಜಗಳನ್ನು ಆಹಾರದಲ್ಲಿ ಈ ರೀತಿ ಸೇರಿಸಿ ಸೇವಿಸಿ!


    ಇದು ಚರ್ಮದ ಮೇಲೆ ಬ್ಯಾಕ್ಟೀರಿಯಾ ಬೆಳವಣಿಗೆ ತಡೆಯುತ್ತದೆ. ಹಾಗಾಗಿ ಇದು ಸೋಂಕನ್ನು ನಿಯಂತ್ರಿಸಲು ಸಹಕಾರಿ ಆಗಿದೆ. ನೆತ್ತಿಯ ಚರ್ಮದ ಆರೋಗ್ಯ ಕಾಪಾಡುತ್ತದೆ. ತಲೆಹೊಟ್ಟು, ತುರಿಕೆ, ಒಣ ನೆತ್ತಿ, ಪರೋಪಜೀವಿಗಳು ಮುಂತಾದ ಸಮಸ್ಯೆ ನಿವಾರಿಸಲು ತುಂಬಾ ಪ್ರಯೋಜನಕಾರಿ ಆಗಿದೆ.


    ಪರಿಣಾಮಕಾರಿ ಫಲಿತಾಂಶಕ್ಕೆ ತೆಂಗಿನ ಎಣ್ಣೆ ಜೊತೆ ಕರ್ಪರ ಮಿಶ್ರಣ ಮಾಡಿ. ನೆತ್ತಿಯನ್ನು ಹಗುರವಾದ ಕೈಗಳಿಂದ ಮಸಾಜ್ ಮಾಡಿ. ಆಯುರ್ವೇದದ ಪ್ರಕಾರ, ಚರ್ಮದ ಸೋಂಕುಗಳಲ್ಲಿ ಕರ್ಪೂರದ ಬಳಕೆ ತುಂಬಾ ಪ್ರಯೋಜನಕಾರಿ ಆಗಿದೆ. ಚರ್ಮದ ಮೇಲೆ ತುರಿಕೆ ಮತ್ತು ಸೋಂಕನ್ನು ಕಡಿಮೆ ಮಾಡಲು ಸಹಾಯಕ.


    ಕರ್ಪೂರ ಮತ್ತು ತೆಂಗಿನ ಎಣ್ಣೆಯ ಇತರೆ ಪ್ರಯೋಜನಗಳು


    ಹಲ್ಲಿನ ಆರೋಗ್ಯಕ್ಕೆ ಸಹಕಾರಿ


    ಕರ್ಪೂರವು ನಿಮ್ಮ ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆ ನಿವಾರಿಸುತ್ತದೆ. ಮೌಖಿಕ ನೈರ್ಮಲ್ಯ ಕಾಪಾಡುತ್ತದೆ. ತೆಂಗಿನ ಎಣ್ಣೆಯನ್ನು ಹಲವು ವರ್ಷಗಳಿಂದ ಬಾಯಿಯ ನೈರ್ಮಲ್ಯ ಕಾಪಾಡಲು ಬಳಸಲಾಗುತ್ತದೆ.


    ಕರ್ಪೂರ ಮತ್ತು ತೆಂಗಿನ ಎಣ್ಣೆ ಮಿಶ್ರಣ ಮಾಡಿ ಮತ್ತು ಅದನ್ನು ಹಲ್ಲುಗಳ ಕುಹರದ ಮೇಲೆ ಹಚ್ಚಿ. ಇದು ನೋವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಕುಳಿ ಉಂಟು ಮಾಡುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳ ಬೆಳವಣಿಗೆ ತಡೆಯುತ್ತದೆ.


    ಮೊಡವೆಗಳನ್ನು ನಿವಾರಿಸುತ್ತದೆ


    ಚರ್ಮದ ಮೇಲೆ ಕರ್ಪೂರ ಮತ್ತು ತೆಂಗಿನ ಎಣ್ಣೆಯ ಬಳಕೆ ಚರ್ಮದ ರಂಧ್ರಗಳಲ್ಲಿ ಅಡಗಿರುವ ಬ್ಯಾಕ್ಟೀರಿಯಾ ವಿರುದ್ಧ ಹೋರಾಡುತ್ತದೆ. ಮತ್ತು ಮೊಡವೆಗಳ ಸಾಧ್ಯತೆ ಕಡಿಮೆ ಮಾಡುತ್ತದೆ. ಹೊರಗಿನ ಧೂಳು ಮತ್ತು ಕೊಳೆಯನ್ನು ಸ್ವಚ್ಛಗೊಳಿಸುತ್ತದೆ. ಉರಿಯೂತದ ಗುಣಲಕ್ಷಣವು ಚರ್ಮದ ಕೆಂಪು ಮತ್ತು ನೋವನ್ನು ಕಡಿಮೆ ಮಾಡುತ್ತದೆ.


    ಶೀತ ಕೆಮ್ಮು ನಿವಾರಿಸುತ್ತದೆ


    ನೆಗಡಿ, ಕೆಮ್ಮು ಮತ್ತು ಕಫದ ಸಮಸ್ಯೆ ನಿವಾರಿಸಲು ಇದು ಸಹಕಾರಿಯಾಗಿದೆ. ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಎದೆಗೆ ಮಸಾಜ್ ಮಾಡಿ. ನೀರಿನಲ್ಲಿ ಬೆರೆಸಿ ಹಬೆ ತೆಗೆದುಕೊಳ್ಳಬಹುದು. ಎದೆಯಲ್ಲಿ ಸಂಗ್ರಹವಾಗಿರುವ ಲೋಳೆಯನ್ನು ಹೊರತೆಗೆಯಲು ಇದು ಸಹಾಯ ಮಾಡುತ್ತದೆ.


    ಇದನ್ನೂ ಓದಿ: ಕೈಗಳಲ್ಲಿ ಕಾಣಿಸಿಕೊಳ್ಳುವ ಈ ಲಕ್ಷಣಗಳು ಮಧುಮೇಹ ಕಾಯಿಲೆಯ ಸಂಕೇತಗಳಾಗಿರಬಹುದು ಎಚ್ಚರ!


    ಉಗುರುಗಳ ಶಿಲೀಂಧ್ರ ಸೋಂಕು ತೆಗೆದು ಹಾಕುತ್ತದೆ


    ಉಗುರುಗಳಲ್ಲಿನ ಶಿಲೀಂಧ್ರಗಳ ಸೋಂಕು ನಿವಾರಣೆಗೆ ಕರ್ಪೂರ ಮತ್ತು ತೆಂಗಿನ ಎಣ್ಣೆಯ ಬಳಕೆ ತುಂಬಾ ಪ್ರಯೋಜನಕಾರಿ. ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ಸೋಂಕನ್ನು ಉಂಟು ಮಾಡುವ ಶಿಲೀಂಧ್ರ ಹರಡುವಿಕೆ ತಡೆಯುತ್ತದೆ.

    Published by:renukadariyannavar
    First published: