• Home
  • »
  • News
  • »
  • lifestyle
  • »
  • Ghee Health Benefits: ತುಪ್ಪದ ಜೊತೆಗೆ ಇವುಗಳನ್ನು ಸೇರಿಸಿ ತಿಂದರೆ ಆರೋಗ್ಯಕ್ಕೆ ಡಬಲ್ ಲಾಭ!

Ghee Health Benefits: ತುಪ್ಪದ ಜೊತೆಗೆ ಇವುಗಳನ್ನು ಸೇರಿಸಿ ತಿಂದರೆ ಆರೋಗ್ಯಕ್ಕೆ ಡಬಲ್ ಲಾಭ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ನೀವು ತುಪ್ಪದ ಪ್ರಯೋಜನ ದ್ವಿಗುಣಗೊಳಿಸಲು ಬಯಸಿದರೆ ತುಪ್ಪದ ಜೊತೆ ಈ ಐದು ಪದಾರ್ಥಗಳನ್ನು ಸೇರಿಸಿ ಸೇವಿಸಿ. ಆಯುರ್ವೇದ ತಜ್ಞ ಡಾ.ಶರದ್ ಕುಲಕರ್ಣಿ ಅವರ ಪ್ರಕಾರ ತುಪ್ಪದಲ್ಲಿ ಹಲವು ಔಷಧೀಯ ಗುಣಗಳಿವೆ. ನಿಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಇದು ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ.

ಮುಂದೆ ಓದಿ ...
  • Share this:

    ತುಪ್ಪವು (Ghee) ಭಾರತೀಯ ಅಡುಗೆ ಮನೆಯ (Indian Kitchen Room) ಪ್ರಮುಖ ಭಾಗ (Part) ಆಗಿದೆ. ತುಪ್ಪಕ್ಕೆ ಆದ್ಯತೆ ನೀಡದ ಯಾವುದೇ ಮನೆ (Home) ಇಲ್ಲ ಎಂದರೆ ಅತಿಶಯೋಕ್ತಿ ಆಗಲ್ಲ. ಅಷ್ಟರ ಮಟ್ಟಿಗೆ ಭಾರತದಲ್ಲಿ ತುಪ್ಪವನ್ನು ಪ್ರಧಾನವಾಗಿ ಬಳಕೆ ಮಾಡಲಾಗುತ್ತದೆ. ತುಪ್ಪ ರುಚಿ ಮಾತ್ರವಲ್ಲದೇ, ಅದರ ಪರಿಮಳ ಆಹಾರವನ್ನು (Food) ಹೆಚ್ಚು ರುಚಿ ಮತ್ತು ಅದ್ಭುತ ಆಗಿಸುತ್ತದೆ. ಹೆಚ್ಚಿನ ಜನರು ಇದನ್ನು ಬೇಳೆ, ಕರಿ ಅಥವಾ ತರಕಾರಿ ರೆಸಿಪಿ ತಯಾರಿಸಲು ಬಳಸುತ್ತಾರೆ. ಮತ್ತು ಕೆಲವರು ರೊಟ್ಟಿಗೆ ಅನ್ವಯಿಸಿ ತಿನ್ನುತ್ತಾರೆ. ತುಪ್ಪವು ಆಹಾರದ ರುಚಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಅನೇಕ ಆರೋಗ್ಯ ಪ್ರಯೋಜನ ನೀಡುತ್ತದೆ.


    ನೀವು ತುಪ್ಪದ ಪ್ರಯೋಜನ ದ್ವಿಗುಣಗೊಳಿಸಲು ಬಯಸಿದರೆ ತುಪ್ಪದ ಜೊತೆ ಈ ಐದು ಪದಾರ್ಥಗಳನ್ನು ಸೇರಿಸಿ ಸೇವಿಸಿ. ಆಯುರ್ವೇದ ತಜ್ಞ ಡಾ.ಶರದ್ ಕುಲಕರ್ಣಿ ಅವರ ಪ್ರಕಾರ ತುಪ್ಪದಲ್ಲಿ ಹಲವು ಔಷಧೀಯ ಗುಣಗಳಿವೆ. ನಿಮ್ಮ ದೇಹವನ್ನು ಅನೇಕ ರೋಗಗಳಿಂದ ರಕ್ಷಿಸಲು ಇದು ಕೆಲಸ ಮಾಡುತ್ತದೆ ಎಂದು ಹೇಳುತ್ತಾರೆ.


    ಅರಿಶಿನ, ಕರ್ಪೂರ, ತುಳಸಿ, ದಾಲ್ಚಿನ್ನಿ ಮುಂತಾದ ಗಿಡಮೂಲಿಕೆಗಳ ಜೊತೆ ತುಪ್ಪವನ್ನು ಸೇವಿಸಿದರೆ ಅದರ ಪ್ರಯೋಜನ ಡಬಲ್ ಆಗುತ್ತದೆ. ಹೆಚ್ಚು ಅಲ್ಲ ಆರೋಗ್ಯ ಸುಧಾರಿಸಲು ಇದನ್ನು ಒಮ್ಮೆ ಅಥವಾ ಎರಡು ಬಾರಿ ಸೇವಿಸಿದರೆ ಸಾಕು ಎನ್ನುವುದು ತಜ್ಞರ ಮಾತು.


    ಇದನ್ನೂ ಓದಿ: ತೂಕ ಇಳಿಕೆಯ ಜರ್ನಿಯಲ್ಲಿ ಈ ಪಾನೀಯ ಸೇರಿಸಿ ಹೊಟ್ಟೆ ಕೊಬ್ಬನ್ನು ವೇಗವಾಗಿ ಕರಗಿಸಿ!


    ಅರಿಶಿನದ ಜೊತೆ ತುಪ್ಪದ ಸೇವನೆ


    ಅರಿಶಿನವನ್ನು ತುಪ್ಪದ ಜೊತೆ ಬೆರೆಸಿ ಸೇವಿಸಲು ತಜ್ಞರು ಸಲಹೆ ನೀಡುತ್ತಾರೆ. ಈ ಮಿಶ್ರಣವು ತೂಕ ಕಡಿಮೆ ಮಾಡಲು, ಹೊಸ ರಕ್ತನಾಳಗಳನ್ನು ನಿರ್ಮಿಸಲು, ಹೃದಯದ ಆರೋಗ್ಯ ಸುಧಾರಿಸಲು ಮತ್ತು ಮೂತ್ರಪಿಂಡದ ಆರೋಗ್ಯಕ್ಕೆ ಸಹಕಾರಿ. ಈ ಮಿಶ್ರಣವು ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತದೆ.


    ಮಿಶ್ರಣವನ್ನು ಹೇಗೆ ತಯಾರಿಸುವುದು?


    ಅರಿಶಿನ ಸುವಾಸನೆಯ ತುಪ್ಪ ತಯಾರಿಸಲು, ಒಂದು ಜಾರ್ ನಲ್ಲಿ ಒಂದು ಕಪ್ ತುಪ್ಪವನ್ನು ಹಾಕಿ ಮತ್ತು ಒಂದು ಟೀಸ್ಪೂನ್ ಅರಿಶಿನ ಸೇರಿಸಿ. ಈ ಮಿಶ್ರಣವನ್ನು ಗಾಳಿಯಾಡದ ಜಾರ್‌ನಲ್ಲಿ ಸಂಗ್ರಹಿಸಿಟ್ಟು ಬಳಸಿ.


    ತುಳಸಿ ಜೊತೆ ತುಪ್ಪ ಸೇವನೆ


    ತುಳಸಿ ದೇಹಕ್ಕೆ ಹಲವು ಪ್ರಯೋಜನ ನೀಡುತ್ತದೆ. ತುಳಸಿ ಎಲೆಗಳಲ್ಲಿ ವಿಟಮಿನ್ ಎ, ಸಿ ಮತ್ತು ಕೆ ಸಮೃದ್ಧವಾಗಿದೆ. ರಕ್ತದ ಸಕ್ಕರೆ, ಲಿಪಿಡ್ ಮತ್ತು ರಕ್ತದೊತ್ತಡ ಮಟ್ಟ ಸಾಮಾನ್ಯಗೊಳಿಸಲು ತುಳಸಿ ಸಹಕಾರಿ. ಮಾನಸಿಕ ಒತ್ತಡ ನಿವಾರಿಸುತ್ತದೆ.


    ಮಿಶ್ರಣವನ್ನು ಹೇಗೆ ತಯಾರಿಸುವುದು?


    ತುಪ್ಪದ ಬೇಯಿಸುವಾ ಕೆಲವು ತುಳಸಿ ಎಲೆಗಳನ್ನು ಸೇರಿಸಿ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಬಳಸಿ.


    ತುಪ್ಪದ ಜೊತೆಗೆ ಕರ್ಪೂರ


    ತುಪ್ಪದಲ್ಲಿ ಕರ್ಪೂರ ಸೇರಿಸಿದರೆ ಇದು ವಾತ, ಪಿತ್ತ ಮತ್ತು ಕಫ ಮೂರು ದೋಷ ಸಮತೋಲನಗೊಳಿಸುತ್ತದೆ. ಜೀರ್ಣಶಕ್ತಿ ಹೆಚ್ಚಿಸುತ್ತದೆ. ಕರುಳಿನ ಹುಳುಗಳಿಗೆ ಚಿಕಿತ್ಸೆ ನೀಡುತ್ತದೆ. ಜ್ವರ ತಡೆಯುತ್ತದೆ. ಮತ್ತು ಹೃದಯ ಬಡಿತ ನಿಯಂತ್ರಿಸುತ್ತದೆ. ಇದು ಅಸ್ತಮಾ ಸಮಸ್ಯೆ ತಡೆಗೆ ಸಹಕಾರಿಯಾಗಿದೆ.


    ಮಿಶ್ರಣವನ್ನು ಹೇಗೆ ತಯಾರಿಸುವುದು?


    ಕರ್ಪೂರ ಮತ್ತು ತುಪ್ಪದ ಮಿಶ್ರಣ ತಯಾರಿಸಲು, ಎರಡು ತುಂಡು ಕರ್ಪೂರವನ್ನು ತುಪ್ಪದಲ್ಲಿ ಹಾಕಿ ಐದು ನಿಮಿಷ ಬಿಸಿ ಮಾಡಿ. ಈಗ ತುಪ್ಪವನ್ನು ತಣ್ಣಗಾಗಲು ಬಿಡಿ. ನಂತರ ಫಿಲ್ಟರ್ ಮಾಡಿ ಸೇವಿಸಿ.


    ದಾಲ್ಚಿನ್ನಿ ಜೊತೆಗೆ ತುಪ್ಪ ಸೇವನೆ


    ದಾಲ್ಚಿನ್ನಿ ವೈರಸ್ ವಿರೋಧಿ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ. ರಕ್ತದ ಸಕ್ಕರೆ ಕಡಿಮೆ ಮಾಡುತ್ತದೆ. ಹೊಟ್ಟೆಯ ಸಮಸ್ಯೆಗೆ ಪರಿಹಾರ ನೀಡುತ್ತದೆ.


    ಮಿಶ್ರಣವನ್ನು ಹೇಗೆ ತಯಾರಿಸುವುದು?


    ಬಾಣಲೆಗೆ ತುಪ್ಪ ಹಾಕಿ. ಮತ್ತು ಅದರಲ್ಲಿ ಎರಡು ದಾಲ್ಚಿನ್ನಿ ತುಂಡು ಹಾಕಿ. ತುಪ್ಪವನ್ನು ಮಧ್ಯಮ ಉರಿಯಲ್ಲಿ ಐದು ನಿಮಿಷ ಬಿಸಿ ಮಾಡಿ. ತಣ್ಣಗಾಗಲು ಬಿಡಿ ನಂತರ ಸೇವಿಸಿ.


    ಬೆಳ್ಳುಳ್ಳಿ ಜೊತೆಗೆ ತುಪ್ಪ ಸೇವನೆ


    ಬೆಳ್ಳುಳ್ಳಿ ಮತ್ತು ತುಪ್ಪವನ್ನು ಮಿಶ್ರಣ ಮಾಡಿ ಸೇವಿಸಿ. ದೇಹದಲ್ಲಿ ಉರಿಯೂತ, ಅಧಿಕ ರಕ್ತದೊತ್ತಡ ನಿಯಂತ್ರಿಸುತ್ತದೆ.


    ಇದನ್ನೂ ಓದಿ: ಮುಟ್ಟಿನ ಸಮಯದಲ್ಲಿ ರಕ್ತ ಹೆಪ್ಪುಗಟ್ಟುವಿಕೆ ಸಮಸ್ಯೆ ಇದ್ರೆ; ಈ ಪರಿಹಾರ ಬಳಸಿ


    ಮಿಶ್ರಣವನ್ನು ಹೇಗೆ ತಯಾರಿಸುವುದು?


    ಬಾಣಲೆಗೆ ಕತ್ತರಿಸಿದ ಬೆಳ್ಳುಳ್ಳಿ ಲವಂಗದೊಂದಿಗೆ ಸ್ವಲ್ಪ ತುಪ್ಪ ಸೇರಿಸಿ. ಕಡಿಮೆ ಉರಿಯಲ್ಲಿ 5 ನಿಮಿಷ ಬೇಯಿಸಿ. ನಂತರ ತಣ್ಣಗಾಗಲು ಬಿಡಿ. ಫಿಲ್ಟರ್ ಮಾಡಿ ಸೇವಿಸಿ.

    Published by:renukadariyannavar
    First published: