ಹಾಲಿನಲ್ಲಿ ಏಲಕ್ಕಿ ಬೆರೆಸಿ ಯಾಕೆ ಕುಡಿಯಬೇಕು ಅಂದರೆ..!

ಅಧಿಕ ರಕ್ತದೊತ್ತಡ ರೋಗಿಗಳು ಯಾವುದೇ ಸಮಯದಲ್ಲಿ ಹೃದ್ರೋಗಗಳಿಗೆ ಗುರಿಯಾಗಬಹುದು. ಇದು ಮಾತ್ರವಲ್ಲ, ಅಧಿಕ ರಕ್ತದೊತ್ತಡದಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಅನೇಕ ಗಂಭೀರ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ.

news18-kannada
Updated:July 2, 2020, 3:04 PM IST
ಹಾಲಿನಲ್ಲಿ ಏಲಕ್ಕಿ ಬೆರೆಸಿ ಯಾಕೆ ಕುಡಿಯಬೇಕು ಅಂದರೆ..!
ಸಾಂದರ್ಭಿಕ ಚಿತ್ರ
  • Share this:
ಒಂದೆಡೆ ಕೊರೋನಾ ವೈರಾಣು, ಮತ್ತೊಂದೆಡೆ ಮಳೆಗಾಲದ ಪ್ರಾರಂಭ. ಇಂತಹ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಾಗಿದೆ. ಸಾಮಾನ್ಯವಾಗಿ ನಾವುಗಳು ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಲಿನ ಮೊರೆ ಹೋಗುತ್ತೇವೆ. ಆದರೆ ಇದಕ್ಕೆ ಏಲಕ್ಕಿಯನ್ನು ಬೆರೆಸಿ ಕುಡಿಯುವುದರಿಂದ ಅನಾರೋಗ್ಯವನ್ನು ದೂರ ಮಾಡಬಹುದು ಎಂಬುದು ಅನೇಕರಿಗೆ ತಿಳಿದಿಲ್ಲ. ಹೀಗೆ ಏಲಕ್ಕಿ ಹಾಲು ಕುಡಿಯುವುದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಮೂಳೆಗಳು ಬಲಗೊಳ್ಳುತ್ತವೆ:

ದೇಹದ ಮೂಳೆಗಳು ಬಲವಾಗಲು ಹಾಲು ತುಂಬಾ ಪ್ರಯೋಜನಕಾರಿ. ಹಾಲಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇರುವುದರಿಂದ ಸ್ನಾಯುಗಳು ಬಲಗೊಳ್ಳುತ್ತವೆ. ಅದೇ ಸಮಯದಲ್ಲಿ, ಏಲಕ್ಕಿಯಲ್ಲಿರುವ ಕ್ಯಾಲ್ಸಿಯಂ ಪ್ರಮಾಣವು ಅದರ ಪ್ರಯೋಜನಗಳನ್ನು ದ್ವಿಗುಣಗೊಳಿಸುತ್ತದೆ. ಆದ್ದರಿಂದ, ವಯಸ್ಸಾದವರಿಗೆ ಏಲಕ್ಕಿ ಬೆರೆಸಿದ ಹಾಲನ್ನು ನೀಡುವುದು ಉತ್ತಮ.

ಜೀರ್ಣಕಾರಿ ಪ್ರಬಲ:
ಏಲಕ್ಕಿ ಬೆರೆಸಿದ ಹಾಲನ್ನು ಕುಡಿಯುವುದರಿಂದ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಫೈಬರ್ ಎಂಬ ಪೋಷಕಾಂಶವು ನಮ್ಮ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವ ಪಾತ್ರ ನಿರ್ವಹಿಸುತ್ತದೆ. ಹಾಗಾಗಿ, ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಂತೆ ಮಾಡಲು ಏಲಕ್ಕಿ ಹಾಲು ಕುಡಿಯುವುದು ಉತ್ತಮ. ಹಾಗೆಯೇ ಇದರಿಂದ ಅನೇಕ ರೀತಿಯ ಜೀರ್ಣಕಾರಿ ಕಾಯಿಲೆಗಳು ಸಹ ದೂರವಾಗುತ್ತದೆ.

ಬಾಯಿ ಹುಣ್ಣಿಗೆ ಮನೆಮದ್ದು:
ಅನೇಕ ಜನರು ಬಾಯಿ ಹುಣ್ಣಿನ ತೊಂದರೆಗೊಳಗಾಗುತ್ತಾರೆ. ಇದಕ್ಕೆ ಒಂದು ಕಾರಣ ಹೊಟ್ಟೆಯ ಅಸ್ವಸ್ಥತೆ. ಏಲಕ್ಕಿಯಲ್ಲಿರುವ ವಿಶೇಷ ಗುಣಗಳು ಬಾಯಿ ಮತ್ತು ಹೊಟ್ಟೆಯ ಹುಣ್ಣುಗಳನ್ನು ಗುಣಪಡಿಸುವಲ್ಲಿ ಪರಿಣಾಮಕಾರಿ. ಹಾಲು ಮತ್ತು ಏಲಕ್ಕಿಯನ್ನು ಒಟ್ಟಿಗೆ ಸೇವಿಸುವುದರಿಂದ ಬಾಯಿ ಹುಣ್ಣು ಸಮಸ್ಯೆಯನ್ನು ನಿವಾರಿಸಬಹುದು.ರಕ್ತದೊತ್ತಡ ನಿಯಂತ್ರಣ:
ರಕ್ತದೊತ್ತಡವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅಧಿಕ ರಕ್ತದೊತ್ತಡ ರೋಗಿಗಳು ಯಾವುದೇ ಸಮಯದಲ್ಲಿ ಹೃದ್ರೋಗಗಳಿಗೆ ಗುರಿಯಾಗಬಹುದು. ಇದು ಮಾತ್ರವಲ್ಲ, ಅಧಿಕ ರಕ್ತದೊತ್ತಡದಿಂದ ಪಾರ್ಶ್ವವಾಯು ಮತ್ತು ಹೃದಯಾಘಾತದಂತಹ ಅನೇಕ ಗಂಭೀರ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ಇದನ್ನು ತಪ್ಪಿಸಲು ಹಾಲು ಮತ್ತು ಏಲಕ್ಕಿ ಕುಡಿಯುವುದು ಉತ್ತಮ. ಹಾಲು ಮತ್ತು ಏಲಕ್ಕಿ ಎರಡರಲ್ಲೂ ಸಾಕಷ್ಟು ಮೆಗ್ನೀಸಿಯಮ್ ಕಂಡುಬರುತ್ತದೆ. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡವನ್ನು ಸಮತೋಲನದಲ್ಲಿಡಲು ಈ ಪೋಷಕಾಂಶವು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ.

ಹಾಲನ್ನು ಕುದಿಸುವಾಗ ಏಲಕ್ಕಿಯನ್ನು ಹಾಕಬೇಕು. ಇದರ ಹೊರತಾಗಿ ಏಲಕ್ಕಿ ಪುಡಿಯನ್ನು ಬೆರೆಸಿ ಕುಡಿಯಬಹುದು. ಹಾಗೆಯೇ ರುಚಿಯನ್ನು ಹೆಚ್ಚಿಸಲು ಜೇನುತುಪ್ಪ ಬಳಕೆ ಕೂಡ ಆರೋಗ್ಯದ ದೃಷ್ಟಿಯಿಂದ ಉತ್ತಮ.
First published: July 2, 2020, 3:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading