Mitti Cafe: ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಇವರ ಜೀವನ, ವಿಶೇಷ ಚೇತನರ ಸಾಧನೆಯ ಕಥೆ ಈ ಮಿಟ್ಟಿ ಕೆಫೆ!

Mitti Cafe Near Me Bengaluru:  ಕೆಫೆಯಲ್ಲಿ ಎಲ್ಲವೂ ಪರಿಪೂರ್ಣ ಕ್ರಮದಲ್ಲಿದೆ. ಮಿಟ್ಟಿ ಕೆಫೆಯಲ್ಲಿ ಅಡುಗೆ, ಶುಚಿಗೊಳಿಸುವಿಕೆ, ಉದ್ಯೋಗಿಗಳಿಗೆ ತರಬೇತಿ ನೀಡುವವರೆಗೆ ಎಲ್ಲವನ್ನೂ ವಿಶೇಷ ಸಾಮರ್ಥ್ಯವುಳ್ಳ ಸಿಬ್ಬಂದಿ ನೋಡಿಕೊಳ್ಳುತ್ತಾರೆ.

ಮಿಟ್ಟಿ ಕೆಫೆ

ಮಿಟ್ಟಿ ಕೆಫೆ

  • Share this:
ಪದಗಳ ಮೂಲಕ ವ್ಯಕ್ತಪಡಿಸಲಾಗದ ಕೆಲವು ಸ್ಥಳಗಳಿರುತ್ತದೆ. ಅವು ಭಾವನೆಗಳ ಮೂಲಕ ನಮ್ಮನ್ನ ತಲುಪುತ್ತವೆ. ಕೆಲವೊಂದು ಸ್ಥಳಗಳು ಕೇವಲ ಸಣ್ಣ ಕಲ್ಪನೆಯಿಂದ ಮೊಳಕೆಯೊಡೆದು ಮರವಾಗಿ ಬೆಳೆದು, ದೊಡ್ಡದಾಗಿ ಆಶ್ರಯ ನೀಡುತ್ತದೆ. ವಿಭಿನ್ನ ಅನುಭವವನ್ನು ಸಹ ನೀಡುತ್ತದೆ. ಆ ರೀತಿಯ ಒಂದು ಸ್ಥಳ ಬೆಂಗಳೂರಿನ ಮಿಟ್ಟಿ ಕೆಫೆ. ಅದ್ಭುತ ಕೆಫೆಗಳ ಸರಪಳಿ, ಮಿಟ್ಟಿ ಒಂದು ಲಾಭರಹಿತ ಸಂಸ್ಥೆಯಾಗಿದ್ದು, ಇದು ಕಡಿಮೆ-ಆದಾಯದ ಕುಟುಂಬಗಳಿಂದ ಬಂದಿರುವ, ದೈಹಿಕ, ಬೌದ್ಧಿಕ ಮತ್ತು ಮನೋವೈದ್ಯಕೀಯ ಅಸಾಮರ್ಥ್ಯಗಳೊಂದಿಗೆ ಹೋರಾಡುವ ವಿಶೇಷ ಸಾಮರ್ಥ್ಯವುಳ್ಳ ಜನರಿಂದ ನಡೆಸಲ್ಪಡುತ್ತದೆ.

2 ಬ್ರ್ಯಾಂಚ್ ಹೊಂದಿರುವ ಕೆಫೆ

ಜಯನಗರ ಮತ್ತು ಕೋರಮಂಗಲದಲ್ಲಿರುವ ಕೆಫೆ,  ಕ್ಲೌಡ್ ಕಿಚನ್‌ಗಳೊಂದಿಗೆ, ಅದು ಅತಿಥಿಗಳಿಗೆ ಅಸಾಧಾರಣ ಅನುಭವವನ್ನು ನೀಡುತ್ತದೆ.  ಮಿಟ್ಟಿ ಕೆಫೆಯನ್ನು 27 ವರ್ಷದ ಅಲೀನಾ ಆಲಂ  ಎನ್ನುವವರು ಆರಂಭಿಸಿದ್ದು, ಅವರು ಬೆಂಗಳೂರಿನ ಸಮರ್ಥನಂ ಟ್ರಸ್ಟ್ ಫಾರ್ ದಿ ಡಿಸೇಬಲ್ಡ್‌ನಲ್ಲಿ ಇಂಟರ್ನ್‌ಶಿಪ್ ಮಾಡುವಾಗ ಮೊದಲ ಬಾರಿ ಈ ರೀತಿ ಕೆಫೆ ಆರಂಭಿಸಿರುವ ಕಲ್ಪನೆ ಬಂದಿತ್ತಂತೆ. ಎನ್‌ಜಿಒದಲ್ಲಿ ಕಳೆದ ಸಮಯವು ಅಲೀನಾ ಅವರಿಗೆ ಈ ವಿಕಲಚೇತನರ ಸಾಮರ್ಥ್ಯದ ಬಗ್ಗೆ ಹೆಚ್ಚು ತಿಳಿಯಲು ಸಹಾಯ ಮಾಡಿದ್ದು, ನಂತರ ಈ ಕೆಫೆ ಆರಂಭಿಸಲು ನಿರ್ಧರಿಸಿದ್ದರಂತೆ.

ಹೆಸರಲ್ಲಿ ಅಡಗಿದ ಅದ್ಭುತ ಅರ್ಥ

ಅಸಾಮಾನ್ಯ ಜನರಿಂದ ನಡೆಸಲ್ಪಡುವ ಅಸಾಮಾನ್ಯ ಕೆಫೆ ಈಗ ಜನರ ಫೇವರೇಟ್​ ಸ್ಥಳಗಳಲ್ಲಿ ಒಂದು. ಮಿಟ್ಟಿ ಎಂದರೆ ಮಣ್ಣು , ಹಾಗಾಗಿ ಇದಕ್ಕೆ ಮಿಟ್ಟಿ ಕೆಫೆ ಎಂಬ ಹೆಸರು ಇಡಲಾಗಿದೆ. ಪ್ರತಿಯೊಬ್ಬರೂ ಮಣ್ಣಿನಿಂದ ಬಂದವರು ಮತ್ತು ಅಂತಿಮವಾಗಿ ಮಣ್ಣಿನ ಕಡೆಗೆ ಮರಳುತ್ತಾರೆ ಎಂಬ ಸರಳ ಕಲ್ಪನೆಯಿಂದ ಈ ಹೆಸರು ಇಡಲಾಗಿದೆ ಎನ್ನುತ್ತಾರೆ. ಆದ್ದರಿಂದ, ವಿವಿಧ ಧರ್ಮ, ಜನಾಂಗ, ಜಾತಿ, ಪಂಥ ಮತ್ತು ಲಿಂಗದಿಂದ ಜನರು, ಯಾರೇ ಆದರೂ ನಮ್ಮ ಅಸ್ತಿತ್ವ ಮತ್ತು ನಮ್ಮ ಅಂತ್ಯವು ಅಂತಿಮವಾಗಿ ಒಂದೇ ಆಗಿರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ, ಮಿಟ್ಟಿ ಕೆಫೆಯು ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿದೆ.

ಪ್ರತಿ ಕೆಫೆಯು ತನ್ನ USP ಅನ್ನು ಹೊಂದಿರುತ್ತದೆ ಮತ್ತು ಮಿಟ್ಟಿ ಕೆಫೆಯ USP ಅದರ ಉದ್ಯೋಗಿಗಳು ಎಂದರೆ ತಪ್ಪಲ್ಲ. ಮಿಟ್ಟಿ ಕೆಫೆಯನ್ನು ಅಲಂಕರಿಸಿದ ಮೊದಲ ಉದ್ಯೋಗಿ ಕೀರ್ತಿ. ದೈಹಿಕ ವಿಕಲತೆಯೊಂದಿಗೆ ಜನಿಸಿದ ಕೀರ್ತಿ, ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತೆವಳುತ್ತಾ ಹೋಗುವ ಕಾರಣದಿಂದ ಅನೇಕ ಉದ್ಯೋಗ ಸಂದರ್ಶನಗಳಲ್ಲಿ ರಿಜೆಕ್ಟ್​ ಆಗಿದ್ದರು. ಆದರೆ ಅವರು ಮೊದಲು ಮಿಟ್ಟಿ ಕೆಫೆಗೆ ಸೇರಿದಾಗ, ಕೀರ್ತಿ ಸ್ವಲ್ಪ ತೊಂದರೆ ಅನುಭವಿಸಿದ್ದರು.  ಆದರೆ, ಇಂದು, ಕೀರ್ತಿ ಅವರು  ಗಾಲಿಕುರ್ಚಿಯ ಸಹಾಯದಿಂದ ಆರ್ಡರ್ ಸ್ವೀಕರಿಸುತ್ತಾರೆ. ಕೀರ್ತಿ ರೀತಿಯೇ ಹಲವಾರು ಜನರು ಇಲ್ಲಿ ಕೆಲಸ ಮಾಡುತ್ತಾರೆ.

ಇದನ್ನೂ ಓದಿ: ಬ್ರೌನ್ ಬ್ರೆಡ್​ ಅನ್ನು ಹೀಗೆ ತಿಂದ್ರೆ ಬಿಪಿ ಸಮಸ್ಯೆಗೆ ಪರಿಹಾರ ಸಿಗುತ್ತೆ
View this post on Instagram


A post shared by Mitti Cafe (@cafemitti)


ಕೆಫೆಯಲ್ಲಿ ಎಲ್ಲವೂ ಪರಿಪೂರ್ಣ ಕ್ರಮದಲ್ಲಿದೆ. ಮಿಟ್ಟಿ ಕೆಫೆಯಲ್ಲಿ ಅಡುಗೆ, ಶುಚಿಗೊಳಿಸುವಿಕೆ, ಉದ್ಯೋಗಿಗಳಿಗೆ ತರಬೇತಿ ನೀಡುವವರೆಗೆ ಎಲ್ಲವನ್ನೂ ವಿಶೇಷ ಸಾಮರ್ಥ್ಯವುಳ್ಳ ಸಿಬ್ಬಂದಿ ನೋಡಿಕೊಳ್ಳುತ್ತಾರೆ. ಸಾಂಕ್ರಾಮಿಕ ರೋಗದ ಸಮಯದಲ್ಲಿ ಇಲ್ಲಿನ ಉದ್ಯೋಗಿಯೊಬ್ಬರ ಮದುವೆಗೆ ಕೆಫೆಯು ಸಾಕ್ಷಿಯಾಗಿದೆ. ಇಲ್ಲಿ ಕೆಲಸ ಮಾಡುವ ಉದ್ಯೋಗಿಗಳು ತಮ್ಮ ಧೈರ್ಯ, ದೃಢತೆ ಮತ್ತು ಅಸಾಧಾರಣ ಕೌಶಲ್ಯಗಳ ಮೂಲಕ ಮಿಟ್ಟಿ ಕೆಫೆಯನ್ನು ಬೆಂಗಳೂರಿನ ಇತರ ಕೆಫೆಗಳಿಗಿಂತ ಭಿನ್ನವಾಗಿಸಿದ್ದಾರೆ.
View this post on Instagram


A post shared by Mitti Cafe (@cafemitti)


ಮಿಟ್ಟಿ ಕೆಫೆಯಲ್ಲಿ ಊಟ ಮಾಡುವುದು ಒಂದು ವಿಶಿಷ್ಟ ಅನುಭವ ನೀಡುತ್ತದೆ. ಸಿಬ್ಬಂದಿಗಳನ್ನು ಕರೆಯಲು ನೀವು ಬಟನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಮೆನು ಕಾರ್ಡ್‌ಗಳನ್ನು ಬ್ರೈಲ್‌ನಲ್ಲಿ ಮುದ್ರಿಸಲಾಗುತ್ತದೆ ಮತ್ತು ಆಹಾರದ ಆದೇಶಗಳನ್ನು ನೋಟ್‌ಪ್ಯಾಡ್‌ನ ಹಾಳೆಗಳಲ್ಲಿ ಬರೆಯಲಾಗುತ್ತದೆ. ಇಲ್ಲಿನ ಸಿಬ್ಬಂದಿ ಸ್ಮೈಲ್‌ ಮೂಲಕ ನಿಮ್ಮನ್ನು ಸ್ವಾಗತಿಸುತ್ತಾರೆ.

ಇದನ್ನೂ ಓದಿ: ನಿಮ್ಮ ಹಲ್ಲಿಗೆ ಸೂಟ್​ ಆಗೋ ಟೂತ್​ಪೇಸ್ಟ್​ ಸೆಲೆಕ್ಟ್​ ಮಾಡೋದು ಹೀಗಂತೆ

ವಿಳಾಸ: 716/2, 22ನೇ ಅಡ್ಡ ರಸ್ತೆ, ಕೆ.ಆರ್. ರಸ್ತೆ, ಬನಶಂಕರಿ ಹಂತ II, ಬನಶಂಕರಿ, ಬೆಂಗಳೂರು, ಕರ್ನಾಟಕ 560070
Published by:Sandhya M
First published: