• Home
  • »
  • News
  • »
  • lifestyle
  • »
  • Yoga Mistakes: ನೀವು ಯೋಗಾಸನ ಮಾಡುವಾಗ ಈ 7 ತಪ್ಪುಗಳನ್ನು ಮಾಡ್ಲೇಬೇಡಿ

Yoga Mistakes: ನೀವು ಯೋಗಾಸನ ಮಾಡುವಾಗ ಈ 7 ತಪ್ಪುಗಳನ್ನು ಮಾಡ್ಲೇಬೇಡಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Yoga Asana Mistake: ನೀವು ಯೋಗಾಸನಗಳನ್ನು ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ. ಯೋಗಾಭ್ಯಾಸ ಮಾಡುವಾಗ ಜನರು ಮಾಡುವ 7 ಸಾಮಾನ್ಯ ತಪ್ಪುಗಳು ಇಲ್ಲಿವೆ ನೋಡಿ.

  • Share this:

ಈಗಂತೂ ಯೋಗ (Yoga) ಮಾಡುವುದರಿಂದಾಗುವ ಪ್ರಯೋಜನಗಳ ಬಗ್ಗೆ ಜನರಿಗೆ ಏನೂ ಹೇಳಬೇಕಾಗಿಯೇ ಇಲ್ಲ. ಏಕೆಂದರೆ ಕಳೆದ ಎರಡೂವರೆ ವರ್ಷ ಎಂದರೆ ಕೋವಿಡ್-19 ಸಾಂಕ್ರಾಮಿಕ ರೋಗದ (Pandemic) ಹಾವಳಿ ಶುರುವಾದಾಗಿನಿಂದ ಯೋಗಾಭ್ಯಾಸದ ಮಹತ್ವವೇನು ಅಂತ ಎಲ್ಲರಿಗೂ ಸರಿಯಾಗಿ ಮನದಟ್ಟಾಗಿದೆ ಅಂತ ಹೇಳಬಹುದು. ಹೌದು,  ಯೋಗಾಸನಗಳು ಅಗಾಧವಾದ ಆರೋಗ್ಯ ಪ್ರಯೋಜನಗಳನ್ನು (Health Benefits) ಹೊಂದಿವೆ, ಆದರೆ ಆಸನಗಳನ್ನು ಸರಿಯಾದ ರೀತಿಯಲ್ಲಿ ಮಾಡುವುದು ಸಹ ತುಂಬಾ ಅತ್ಯಗತ್ಯವಾಗುತ್ತದೆ. ನೀವು ಯೋಗಾಸನಗಳನ್ನು ಮಾಡುವಾಗ ನೆನಪಿನಲ್ಲಿಟ್ಟುಕೊಳ್ಳಬೇಕಾದ ಕೆಲವು ಅಂಶಗಳಿವೆ. ಯೋಗಾಭ್ಯಾಸ ಮಾಡುವಾಗ ಜನರು ಮಾಡುವ 7 ಸಾಮಾನ್ಯ ತಪ್ಪುಗಳು (Mistakes) ಇಲ್ಲಿವೆ ನೋಡಿ.


1. ಆನ್ಲೈನ್ ನಲ್ಲಿ ನೋಡಿಕೊಂಡು ಯೋಗ ಮಾಡುವಾಗ ಇದ್ದಕ್ಕಿದ್ದಂತೆ ಸ್ಕ್ರೀನ್ ಅನ್ನು ನೋಡುವುದು


ಕೋವಿಡ್-19 ಸಾಂಕ್ರಾಮಿಕ ರೋಗವು ಶುರುವಾದಾಗಿನಿಂದಲೂ ಬಹುತೇಕವಾಗಿ ಎಲ್ಲವೂ ಆನ್ಲೈನ್ ನಲ್ಲಿಯೇ ನಡೆಯುತ್ತಿವೆ ಅಂತ ಹೇಳಬಹುದು. ಯೋಗ ತರಗತಿಗಳು ಸಹ ಆನ್ಲೈನ್ ನಲ್ಲಿಯೇ ನಡೆಯುತ್ತಿವೆ, ಈಗ ನಿರ್ಬಂಧನೆಗಳನ್ನು ತೆಗೆದು ಹಾಕಲಾಗಿದ್ದರೂ, ಜನರು ಆನ್ಲೈನ್ ನಲ್ಲಿಯೇ ಯೋಗ ತರಗತಿಗಳಿಗೆ ಹೋಗಲು ಆದ್ಯತೆ ನೀಡುವುದನ್ನು ಮುಂದುವರಿಸಿದ್ದಾರೆ.


ವ್ಯಾಯಾಮ ಮಾಡುವಾಗ, ನಿಮ್ಮ ತಲೆಯನ್ನು ಅಥವಾ ನಿಮ್ಮ ಕುತ್ತಿಗೆಯನ್ನು ಎತ್ತಿ ವ್ಯಾಯಾಮದ ಮಧ್ಯದಲ್ಲಿ, ಇದ್ದಕ್ಕಿದ್ದಂತೆ ಸ್ಕ್ರೀನ್ ಅನ್ನು ನೋಡದಂತೆ ಖಚಿತಪಡಿಸಿಕೊಳ್ಳಿ. ಇದು ಕುತ್ತಿಗೆ ಅಥವಾ ಬೆನ್ನು ಉಳುಕುವಂತಹ ಗಾಯಕ್ಕೆ ಕಾರಣವಾಗಬಹುದು.


2. ಅಗ್ಗದ ಯೋಗ ಮ್ಯಾಟ್ ಖರೀದಿಸುವುದು


ನೀವು ಯೋಗ ಮಾಡುವಾಗ ಬಳಸುವ ಮ್ಯಾಟ್ ಹೆಚ್ಚು ದುಬಾರಿಯಾಗಿರಬೇಕಾದ ಅಗತ್ಯವಿಲ್ಲ. ಆದಾಗ್ಯೂ, ತಪ್ಪು ಭಂಗಿಗಳು ಮತ್ತು ಗಾಯಗಳನ್ನು ತಪ್ಪಿಸಲು ಉತ್ತಮ ಗುಣಮಟ್ಟದ ಯೋಗ ಮ್ಯಾಟ್ ಅಗತ್ಯವಿದೆ. ಯೋಗ ಮ್ಯಾಟ್ ಜಾರುತ್ತಿದ್ದರೆ ಅಥವಾ ಚಪ್ಪಟೆಯಾಗಿ ಅಥವಾ ಒಳ್ಳೆಯ ಆಕಾರದಲ್ಲಿ ಇಲ್ಲದಿದ್ದರೆ, ಅದು ನಿಮ್ಮ ಆಸನಗಳನ್ನು ಸರಿಯಾಗಿ ಮಾಡದಂತೆ ತಡೆಯುತ್ತದೆ.


ಆದ್ದರಿಂದ ನೀವು ಸಮತೋಲನವನ್ನು ಕಳೆದುಕೊಳ್ಳದಂತೆ ಅಥವಾ ನಿಮ್ಮ ಮೊಣಕಾಲುಗಳು ಅಥವಾ ಮೊಣಕೈಗಳಿಗೆ ಗಾಯವಾಗದಂತೆ ನೋಡಿಕೊಳ್ಳಲು ಆರಾಮದಾಯಕವಾದ ಮ್ಯಾಟ್ ಖರೀದಿಸುವುದು ಒಳ್ಳೆಯದು.


ಇದನ್ನೂ ಓದಿ: ಮಕ್ಕಳಿಲ್ಲದವರನ್ನು ದೂರ ಮಾಡದಿರಿ, ಅವರಲ್ಲೂ ಭಾವನೆಗಳಿವೆ ಎಂಬುವುದನ್ನು ಮರೆಯದಿರಿ!


3. ಅನುಚಿತ ಬಟ್ಟೆಗಳನ್ನು ಧರಿಸುವುದು


ನಿಮ್ಮ ಯೋಗಾಸನಗಳನ್ನು ಸರಿಯಾಗಿ ಮಾಡಲು, ನೀವು ಸರಿಯಾದ ಬಟ್ಟೆಗಳನ್ನು ಧರಿಸಬೇಕು. ತುಂಬಾ ಸಡಿಲವಾದ ಅಥವಾ ತುಂಬಾನೇ ಬಿಗಿಯಾದ ಬಟ್ಟೆಗಳನ್ನು ಧರಿಸಿಬಾರದು. ನಿಮ್ಮ ಕೈಕಾಲುಗಳನ್ನು ಮುಕ್ತವಾಗಿ ಚಲಿಸಲು ಅನುವು ಮಾಡಿಕೊಡುವ ಆರಾಮದಾಯಕ ಬಟ್ಟೆಗಳನ್ನು ಧರಿಸಿ. ಅಲ್ಲದೆ, ಫ್ಯಾಬ್ರಿಕ್ ಹಿಗ್ಗಬಲ್ಲದು ಮತ್ತು ಬೆವರನ್ನು ಸಹ ಹೀರಿಕೊಳ್ಳುತ್ತದೆ.




4. ನಿಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುವುದು


ಸಾಮಾನ್ಯವಾಗಿ, ಜನರು ತಮ್ಮ ಯೋಗ ಭಂಗಿಗಳನ್ನು ಮಾಡುತ್ತಿರುವಾಗ ಅವರು ಆ ಕ್ರಿಯೆಯ ಮೇಲೆ ಹೆಚ್ಚು ಗಮನ ಹರಿಸುತ್ತಾರೆ ಮತ್ತು ತಮ್ಮ ಉಸಿರನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಆದರೆ ಸ್ಥಿರ ಮತ್ತು ಸರಿಯಾದ ಉಸಿರಾಟವು ಯೋಗದ ಅತ್ಯಗತ್ಯ ಭಾಗವಾಗಿದೆ, ಆದ್ದರಿಂದ ನಿಮ್ಮ ಉಸಿರಾಟದ ಮೇಲೂ ಗಮನ ಹರಿಸಿ.


ಅಲ್ಲದೆ, ಜಾಗರೂಕರಾಗಿರಿ ಮತ್ತು ನಿಮ್ಮ ಬಾಯಿಯ ಮೂಲಕ ನೀವು ಉಸಿರಾಡುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ. ಅದು ಸಂಭವಿಸಿದರೆ, ನಿಧಾನಗೊಳಿಸಿ ಮತ್ತು ಸ್ಥಿರವಾದ ಉಸಿರಾಟವನ್ನು ಅಭ್ಯಾಸ ಮಾಡಿ.


5. ತುಂಬಿದ ಅಥವಾ ಖಾಲಿ ಹೊಟ್ಟೆಯಲ್ಲಿ ಯೋಗಾಭ್ಯಾಸ ಮಾಡುವುದು


ನೀವು ತುಂಬಾ ಹಸಿವಿನಿಂದ ಬಳಲುತ್ತಿದ್ದರೆ, ನೀವು ಆಸನಗಳನ್ನು ಸರಿಯಾದ ರೀತಿಯಲ್ಲಿ ಅಭ್ಯಾಸ ಮಾಡಲು ಸಾಧ್ಯವಿಲ್ಲ. ಅತಿಯಾಗಿ ಹೊಟ್ಟೆ ತುಂಬಿದ್ದರೂ ಸಹ ಅದು ನಿಮ್ಮ ಯೋಗಾಭ್ಯಾಸವನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ನಿಮ್ಮ ಯೋಗಾಭ್ಯಾಸದ ಸೆಷನ್ ಅನ್ನು ಪ್ರಾರಂಭಿಸುವಾಗ ಒಂದು ಅಥವಾ ಎರಡು ಗಂಟೆಗಳ ಮೊದಲು ಲಘು ಉಪಾಹಾರವನ್ನು ಸೇವಿಸಿರಬೇಕು.


6. ಸರಿಯಾದ ಪ್ರಾಪ್ ಗಳನ್ನು ಬಳಸದಿರುವುದು


ನಿಮ್ಮ ಯೋಗ ತರಬೇತುದಾರರು ಕೆಲವು ಆಸನಗಳನ್ನು ಮಾಡಲು ಪ್ರಾಪ್ ಗಳನ್ನು ಬಳಸುತ್ತಿದ್ದರೆ, ನೀವು ಅದೇ ರೀತಿ ಮಾಡಬೇಕು. ಪ್ರಾಪ್ ಗಳು ಕೆಲವೊಮ್ಮೆ ಅನಗತ್ಯವೆಂದು ನೀವು ಭಾವಿಸಬಹುದು, ಆದರೆ ನಿಮ್ಮ ತರಬೇತುದಾರ ಅವುಗಳನ್ನು ಬಳಸುತ್ತಿದ್ದರೆ, ನೆನಪಿಡಿ ಈ ಪ್ರಾಪ್ ಗಳು ಆ ಯೋಗಾಸನಗಳಿಗೆ ಮುಖ್ಯವಾಗಿರುತ್ತವೆ ಅಂತ.


ಇದನ್ನೂ ಓದಿ: ಸಂತಾನೋತ್ಪತ್ತಿ ಮೇಲೆ ಪ್ರಭಾವ ಬೀರುತ್ತಂತೆ ದಂಪತಿ ವಯಸ್ಸು! ತಜ್ಞರು ಹೇಳೋದೇನು?


7. ಶವಾಸನವನ್ನು ಬಿಟ್ಟು ಬಿಡುವುದು


ಶವಾಸನವೆಂದರೆ ಕೇವಲ ಮಲಗುವುದು ಅಂತ ಅರ್ಥವಲ್ಲ. ಇದು ಒಂದು ರೀತಿಯ ವಿಶ್ರಾಂತಿಯ ಯೋಗದ ಭಂಗಿಯಾಗಿದೆ. ಯೋಗದ ನಿಜವಾದ ಪ್ರಯೋಜನಗಳನ್ನು ಪಡೆದುಕೊಳ್ಳಲು ನಿಮಗೆ ಶವಾಸನ ತುಂಬಾನೇ ಸಹಾಯ ಮಾಡುತ್ತದೆ. ಯೋಗದ ಪ್ರತಿಯೊಂದು ಸೆಷನ್ ಅನ್ನು ಪೂರ್ಣಗೊಳಿಸಿದ ನಂತರ, ತಪ್ಪದೆ ಶವಾಸನದೊಂದಿಗೆ ಇದನ್ನು ಮುಗಿಸಬೇಕು.

Published by:Sandhya M
First published: