Health Tips: ಮುಖದಲ್ಲಿ ಮೊಡವೆ ಇದ್ಯಾ? ಹಾಗಿದ್ರೆ ಪ್ರತಿನಿತ್ಯ ಪುದೀನ ಬಳಕೆ ಮಾಡಿ ನೋಡಿ

Mint leaves: ಪುದೀನ ಸೊಪ್ಪಿನಲ್ಲಿರುವ ನಿರೋಧಕಶಕ್ತಿ ಅಧಿಕವಾಗಿದ್ದು, ವಿಟಮಿನ್ ಸಿ, ಡಿ ಇ ಬಿ ಕ್ಯಾಲ್ಸಿಯಂ ಹಾಗೂ ರಂಜಕ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿವೆ.. ಹೀಗಾಗಿ ಪುದೀನ ಸೇವನೆ ಮಾಡುವುದರಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು

ಪುದೀನಾ

ಪುದೀನಾ

 • Share this:
  ಪುದೀನ (Mint leaves), ಗೃಹಿಣಿಯರು(Housewives) ಅಡುಗೆ(Kitchen) ಮನೆಯಲ್ಲಿ(Home) ದಿನನಿತ್ಯ ಬಳಕೆ ಮಾಡುವ ಪದಾರ್ಥವಾಗಿದ್ದು ಇದು ಹಲವು ಔಷಧಿಗಳ(Medicine) ಆಗರ. ಇದು ಪಾಲಿಫಿನಾಲ್‌ಗಳನ್ನು ಹೊಂದಿದ್ದು, ರೋಗ ನಿರೋಧಕಗಳಿಂದ ತುಂಬಿದ ಸೂಕ್ಷ್ಮ ಪೋಷಕಾಂಶಗಳಿಂದ ತುಂಬಿರುತ್ತದೆ. ಇಂತಹ ಪುದೀನವನ್ನು ತಿಳಿದೋ ಅಥವಾ ತಿಳಿಯದೆಯೋ ನಮ್ಮಲ್ಲಿ ಬಹುತೇಕರು ತಮ್ಮ ದೈನ೦ದಿನ ಜೀವನದಲ್ಲಿ ಪುದೀನವನ್ನು ಬಳಸಿಕೊಳ್ಳುತ್ತಲೇ ಇರುತ್ತಾರೆ. ನಾವು ಜಗಿಯುವ ಚ್ಯೂಯಿ೦ಗ್ ಗಮ್‌ಗಳಲ್ಲಿ ಪುದೀನ ಇರುತ್ತದೆ ಹಾಗೂ ಪ್ರತಿದಿನ ಬೆಳಗ್ಗೆ ನಾವು ಬಳಸಿಕೊಳ್ಳುವ ಟೂಥ್ ಪೇಸ್ಟ್ ನಲ್ಲಿಯೂ ಸಹ ಪುದೀನ ಇರುತ್ತದೆ. 

  ಇನ್ನು ಪುದೀನವನ್ನು ಚಹಾಗೆ ಹಾಕಿ ಕುಡಿಯುವುದು, ಚಟ್ನಿ ಮಾಡುವುದು, ಸಲಾಡ್, ಹಣ್ಣು, ಮೊಸರಿನೊಂದಿಗೆ ಸೇರಿಸಿ ತಿನ್ನುವ ಅಭ್ಯಾಸವಿರುತ್ತದೆ. ಪುದೀನವನ್ನು ಬಳಸಿ ಹಲವು ರೀತಿಯಲ್ಲಿ ಚಟ್ನಿ ಮಾಡುತ್ತಾರೆ. ಪುದೀನ ಎಲೆಗಳನ್ನು ಹಲವು ಪದಾರ್ಥಗಳಲ್ಲಿ ಬಳಸುತ್ತಾರೆ. ಇಂತಹ ಪುದೀನ ದೇಹದ ಆರೋಗ್ಯಕ್ಕೂ ಸೌಂದರ್ಯ ಕಾಪಾಡುವ ಸಹಕಾರಿಯಾಗಿದೆ.. ಜೊತೆಗೆ ಹತ್ತು ಹಲವು ಪ್ರಯೋಜನಗಳನ್ನು ಪುದೀನ ಬಳಕೆಯಿಂದ ಇವೆ.

  ಇದನ್ನೂ ಓದಿ: ಸದಾ ಕಾಲಕ್ಕೂ ಮಹಿಳೆಯರನ್ನ ಕಾಡುವ ಈ 6 ರೋಗಗಳ ಬಗ್ಗೆ ಇರಲಿ ಸದಾ ಎಚ್ಚರ

  1)ಅಜೀರ್ಣ ನಿವಾರಣೆ: ನೀವು ಅಜೀರ್ಣದಿಂದ ಬಳಲುತ್ತಿದ್ದರೆ, ಪುದೀನ ಎಲೆಗಳಿಂದ ನಿಮಗೆ ಸಹಾಯವಾಗುತ್ತದೆ. ಪುದೀನ ಎಲೆಗಳು ಜೊಲ್ಲುರಸದ ಗ್ರಂಥಿಗಳನ್ನು ಕ್ರಿಯಾತ್ಮಕಗೊಳಿಸುವುದು ಮತ್ತು ಕಿಣ್ವಗಳನ್ನು ಪ್ರೇರೇಪಿಸುವ ಮೂಲಕ ಜೀರ್ಣಕ್ರಿಯೆಗೆ ಶಕ್ತಿ ನೀಡುತ್ತದೆ

  2) ಮೊಡವೆ ಸಮಸ್ಯೆಯಿಂದ ಮುಕ್ತಿ: ಪುದೀನ ಸೊಪ್ಪಿನಲ್ಲಿ ಬ್ಯಾಕ್ಟೀರಿಯಾ ನಿರೋಧಕ ಗುಣವಿದ್ದು ಅದರಿಂದ ಮೊಡವೆ ಮತ್ತು ತ್ವಚೆಯ ಉರಿಯೂತದಂಥ ಸಮಸ್ಯೆಗಳಿಗೆ ಪರಿಹಾರ ಕೊಡುತ್ತದೆ.ವಿಟಮಿನ್ ಎ ಹೇರಳವಾಗಿರುವ ಪುದೀನವನ್ನು ಹಿಚುಕಿದಾಗ ಬರುವ ಪರಿಮಳಕ್ಕೆ ಕಾರಣ ಮೆಂಥಾಲ್. ಇದು ನೋವನ್ನು ಗುಣಪಡಿಸುವ ಗುಣ ಹೊಂದಿದೆ.ತುರಿಕೆ ಕಜ್ಜಿ ಮೊದಲಾದ ತ್ವಚೆಗೆ ಸಂಬಂಧಿಸಿದ ಕ್ರೀಮ್ ಗಳಲ್ಲಿ ಮೆಂಥಾಲ್ ಅನ್ನು ಕಡ್ಡಾಯವಾಗಿ ಬಳಸಿರುತ್ತಾರೆ. ನೀವು ಪುದೀನ ಎಲೆಗಳ ಪೇಸ್ಟ್ ಅನ್ನೇ ತಯಾರಿಸಿ ಕಜ್ಜಿ ಅಥವಾ ಮೊಡವೆಗಳ ಮೇಲೆ ಲೇಪಿಸಿಕೊಳ್ಳುವುದರಿಂದ ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು.

  3) ತೂಕ ನಷ್ಟಕ್ಕೆ: ತೂಕನಷ್ಟವನ್ನು ಹೊ೦ದುವ ನಿಮ್ಮ ಗುರಿಸಾಧನೆಗೆ ಸಾಥ್ ನೀಡುವಲ್ಲಿ ಪುದೀನವು ಬಹು ಪ್ರಮುಖ ಪಾತ್ರವಹಿಸುತ್ತದೆ. ಪುದೀನ ಕ್ಕೆ ನಿಮ್ಮ ಜೀರ್ಣಾ೦ಗವ್ಯವಸ್ಥೆಯನ್ನು ಉದ್ದೀಪನಗೊಳಿಸುವ ಸಾಮರ್ಥ್ಯವಿದೆಯಾದ್ದರಿ೦ದ, ನಿಮ್ಮ ಶರೀರಕ್ಕೆ ಹೆಚ್ಚಿನ ಪೋಷಕಾ೦ಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ. ನಿಮ್ಮ ಶರೀರವು ಕೊಬ್ಬಿನಾ೦ಶವನ್ನು ಪರಿಣಾಮಕಾರಿಯಾಗಿಚಯಾಪಚಯಕ್ರಿಯೆಗೊಳಪಡಿಸಲು ಸಮರ್ಥವಾದಾಗ, ನೀವು ಸುಲಭವಾಗಿ ದೇಹ ತೂಕವನ್ನು ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

  4)ಅಲರ್ಜಿಗಳಿಂದ ಮುಕ್ತಿ: ನಮ್ಮಲ್ಲಿ ಹೆಚ್ಚಿನವರು ಕೆಲಬಗೆಯ ಋತುಮಾನ ಸಂಭಂದಿ ಅಲರ್ಜಿಗಳಿಂದ ಬಳಲುತ್ತಿರುತ್ತಾರೆ. ಕೆಲಬಗೆಯ ಅಲರ್ಜಿಗಳನ್ನು ಗುಣಪಡಿಸುವ ನಿಟ್ಟಿನಲ್ಲಿ ಪುದೀನ ಸೊಪ್ಪಿನ ಸಾರವು ಅತ್ಯುತ್ತಮವಾದ ರೀತಿಯಲ್ಲಿ ಕಾರ್ಯಾಚರಿಸುತ್ತಿರುವುದು ಸಾಬೀತಾಗಿರುತ್ತದೆ. ಪುದೀನ ಸೊಪ್ಪಿನ ಪ್ರಯೋಜನಗಳ ಪೈಕಿ ಇದೂ ಸಹ ಒ೦ದು.

  5) ಬಾಯಿ ದುರ್ವಾಸನೆ ಹೋಗಲಾಡಿಸಲು ಆಸ್ತಮಾ ನಿವಾರಣೆ: ಪುದೀನ ಎಲೆಯ ಪಾನೀಯ ಮಾಡಿ ಕುಡಿಯುವುದರಿಂದ ಬಾಯಿಂದ ಬರುವ ದುರ್ವಾಸನೆ ಕಡಿಮೆ ಮಾಡಬಹುದು. ಆಹಾರದಲ್ಲಿ ನಿಯಮಿತವಾಗಿ ಬಳಸುತ್ತ ಬಂದರೆ ಅಸ್ತಮಾ ತೊಂದರೆ ಕಡಿಮೆಯಾಗುತ್ತದೆ.

  ಇದನ್ನೂ ಓದಿ: ಬಾಳೆಹಣ್ಣು ಜಾಸ್ತಿ ತಿಂದ್ರೆ ಒಳ್ಳೆಯದಲ್ಲ, ಅದ್ರಿಂದಲೂ ಸಾಕಷ್ಟು ಸಮಸ್ಯೆ ಆಗುತ್ತೆ ಜೋಪಾನ!

  6) ರೋಗನಿರೋಧಕ ಶಕ್ತಿ ಹೆಚ್ಚಳ: ಪುದೀನ ಸೊಪ್ಪಿನಲ್ಲಿರುವ ನಿರೋಧಕಶಕ್ತಿ ಅಧಿಕವಾಗಿದ್ದು, ವಿಟಮಿನ್ ಸಿ, ಡಿ ಇ ಬಿ ಕ್ಯಾಲ್ಸಿಯಂ ಹಾಗೂ ರಂಜಕ ಮತ್ತು ಆಂಟಿ ಆಕ್ಸಿಡೆಂಟ್ ಗಳು ಹೇರಳವಾಗಿವೆ.. ಹೀಗಾಗಿ ಪುದೀನ ಸೇವನೆ ಮಾಡುವುದರಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು
  Published by:ranjumbkgowda1 ranjumbkgowda1
  First published: