ಬೇಸಿಗೆಯಲ್ಲಿ (Summer) ಹೊಟ್ಟೆಗೆ (Stomach) ಸಂಬಂಧಿಸಿದ ಸಮಸ್ಯೆಗಳು (Problems) ಅಧಿಕವಾಗಿ ಕಾಡುತ್ತವೆ. ಹೀಗಾಗಿ ಬೇಸಿಗೆಯಲ್ಲಿ ಹೆಚ್ಚು ತಿನ್ನುವುದು (Eating) ಮತ್ತು ಕುಡಿಯುವುದು (Drinking) ಅಥವಾ ಬೇರೆ ಪದಾರ್ಥಗಳ (Ingredients) ಸೇವನೆ ಹೊಟ್ಟೆಯ ಆರೋಗ್ಯವನ್ನು (Health) ಹಾಳು ಮಾಡುತ್ತದೆ. ಅಂತಹ ಸ್ಥಿತಿಯಲ್ಲಿ ನಿಮ್ಮ ಆಹಾರದಲ್ಲಿ ಹೊಟ್ಟೆಯ ಆರೋಗ್ಯ ಕಾಪಾಡುವ ಕೆಲವು ಪಾನೀಯಗಳನ್ನು ನೀವು ಸೇರಿಸಿದರೆ ನಿಮ್ಮ ಆರೋಗ್ಯಕ್ಕೆ ಹಿತವಾಗಿರುತ್ತದೆ. ಆರೋಗ್ಯಕರ ಪಾನೀಯ ಹಾಗೂ ಆಹಾರ ನಿಮ್ಮ ಹೊಟ್ಟೆ ಮತ್ತು ಜೀರ್ಣಕ್ರಿಯೆಯನ್ನು ಸರಿಯಾಗಿ ಇಡುತ್ತದೆ. ಬೇಸಿಗೆಯಲ್ಲಿ ನೀವು ಏನೇನೋ ಸೇವನೆ ಮಾಡುತ್ತಿದ್ದರೆ ಜೊತೆಗೆ ಪುದೀನಾ ಸೇವನೆ ಮಾಡಬೇಕು. ಪುದೀನಾ ಸಾಕಷ್ಟು ಆರೋಗ್ಯಕರ ಪ್ರಯೋಜನ ನೀಡುತ್ತದೆ.
ಪುದೀನಾ ಪಾನೀಯ
ಪುದೀನಾ ಹೊಟ್ಟೆ ತಂಪು ಮಾಡುತ್ತದೆ. ಮತ್ತು ಉರಿಯೂತ ಸಂವೇದನೆ ಶಾಂತಗೊಳಿಸಲು ಸಹಾಯ ಮಾಡುತ್ತದೆ. ಇಂದು ನಾವಿಲ್ಲಿ ಪುದೀನಾದಿಂದ ಆರೋಗ್ಯಕರ ಅದರಲ್ಲೂ ಹೊಟ್ಟೆಯ ಆರೋಗ್ಯ ಕಾಪಾಡುವ ಪಾನೀಯ ತಯಾರಿಸುವುದನ್ನು ಮತ್ತು ಪುದೀನಾದ ಪ್ರಯೋಜನಗಳನ್ನು ನೋಡೋಣ.
ಪುದೀನಾ ಪಾನೀಯವನ್ನು ಕುಡಿಯುವುದರಿಂದ ನಿಮ್ಮ ಹೊಟ್ಟೆ ನೋವು ಮತ್ತು ಉರಿ ಸಂಪೂರ್ಣವಾಗಿ ಶಾಂತ ಆಗುತ್ತದೆ. ಮಿಂಟ್ ಸಿರಪ್ ಒಂದು ಪರಿಪೂರ್ಣ ಬೇಸಿಗೆ ಪಾನೀಯವಾಗಿದೆ. ಪುದೀನಾ ಪಾನೀಯ ನಿಮ್ಮನ್ನು ಆರೋಗ್ಯಕರವಾಗಿ ಇಡುತ್ತದೆ. ನೀವು ಸುಲಭವಾಗಿ ಮನೆಯಲ್ಲಿ ಪುದೀನಾ ಪಾನೀಯ ತಯಾರಿಸಿ ಸೇವನೆ ಮಾಡಬಹುದು.
ಇದನ್ನೂ ಓದಿ: ಮೂನ್ ಚಾರ್ಜ್ಡ್ ವಾಟರ್ ಎಂದರೇನು? ಇದರಿಂದ ಆರೋಗ್ಯಕ್ಕೆ ಸಿಗುವ ಲಾಭಗಳೇನು?
ಪುದೀನಾ ಪಾನೀಯದ ಪ್ರಯೋಜನಗಳು
ಪುದೀನಾ ಬಾಯಿಯ ಫ್ರೆಶ್ ನೆಸ್ ಜೊತೆಗೆ ರುಚಿಯನ್ನು ಹೆಚ್ಚಿಸುತ್ತದೆ. ಹಲವು ಆರೋಗ್ಯ ಪ್ರಯೋಜನ ನೀಡುತ್ತದೆ. ಬೇಸಿಗೆಯಲ್ಲಿ ಪುದೀನಾವನ್ನು ವಿವಿಧ ಆಹಾರ ಪದಾರ್ಥಗಳ ಮೂಲಕ ಸೇವನೆ ಮಾಡಬಹುದು. ರೈತಾ, ಜಲ್ಜೀರಾ ಮತ್ತು ಐಸ್ ಕ್ರೀಂನಲ್ಲಿ ಬಳಸುತ್ತಾರೆ. ಪುದೀನಾ ಅಂತಹ ಬ್ಯಾಕ್ಟೀರಿಯಾ ವಿರೋಧಿ ಗುಣ ಹೊಂದಿದೆ.
ಇದು ಅಜೀರ್ಣ ಮತ್ತು ಹೊಟ್ಟೆಯ ತೊಂದರೆಗೆ ಪರಿಹಾರ ನೀಡುತ್ತದೆ. ಅಷ್ಟೇ ಅಲ್ಲದೇ ಪುದೀನಾ ತೂಕ ಇಳಿಕೆಗೂ ಸಹಕಾರಿ. ಇದರ ಸೇವನೆ ಸ್ವತಂತ್ರ ರಾಡಿಕಲ್ ಗಳನ್ನು ಕಡಿಮೆ ಮಾಡುತ್ತದೆ. ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ.
ಪುದೀನಾ ಪಾನೀಯ ಮಾಡೋದು ಹೇಗೆ?
ತಾಜಾ ಪುದೀನ ಎಲೆಗಳನ್ನು ಮೊದಲು ಚೆನ್ನಾಗಿ ತೊಳೆಯಿರಿ. ಒಂದು ಪಾತ್ರೆಯಲ್ಲಿ ಪುದೀನ ಎಲೆಗಳನ್ನು ಹಾಕಿ ಮತ್ತು ಅಗತ್ಯಕ್ಕೆ ಅನುಗುಣವಾಗಿ ಜೇನುತುಪ್ಪ ಮತ್ತು ಕಲ್ಲುಪ್ಪು ಸೇರಿಸಿ. ಇದಕ್ಕೆ ಹುರಿದ ಜೀರಿಗೆ ಮತ್ತು ನಿಂಬೆ ರಸ ಸೇರಿಸಿ. ಈಗ ಅಗತ್ಯಕ್ಕೆ ತಕ್ಕಂತೆ ನೀರು ಸೇರಿಸಿ. ನಂತರ ಎಲ್ಲಾ ಪದಾರ್ಥಗಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ.
ನಂತರ ಅದನ್ನು ದೊಡ್ಡ ಪಾತ್ರೆಯಲ್ಲಿ ಹಾಕಿ ನೀರಿನೊಂದಿಗೆ ಮಿಶ್ರಣ ಮಾಡಿ. ಅದು ತಣ್ಣಗಾದ ನಂತರ ಫಿಲ್ಟರ್ ಮಾಡಿ ನಂತರ ಸೇವನೆ ಮಾಡಿ. ನೀವು ಬೇಸಿಗೆಯಲ್ಲಿ ಸೋಡಾ ಅಥವಾ ತಂಪು ಪಾನೀಯ ಕುಡಿಯುತ್ತಿದ್ದರೆ ಅದರ ಬದಲಿಗೆ ಈ ಪುದೀನಾ ಪಾನೀಯ ಕುಡಿಯಿರಿ.
ಹೊಟ್ಟೆಗೆ ಮತ್ತು ಅಸ್ತಮಾ ಸಮಸ್ಯೆ ನಿವಾರಿಸುತ್ತದೆ
ಪುದೀನಾ ವಿಟಮಿನ್ ಸಿ, ವಿಟಮಿನ್ ಎ ಮತ್ತು ವಿಟಮಿನ್ ಬಿ ಕಾಂಪ್ಲೆಕ್ಸ್ ಇದೆ. ಕಬ್ಬಿಣ, ಪೊಟ್ಯಾಸಿಯಮ್ ಮತ್ತು ಮ್ಯಾಂಗನೀಸ್ ಒದಗಿಸುತ್ತದೆ.
ಪುದೀನಾ ಹೊಟ್ಟೆಯ ಶಾಖವನ್ನು ಕಡಿಮೆ ಮಾಡುತ್ತದೆ. ಗ್ಯಾಸ್, ಹೊಟ್ಟೆ ನೋವು, ಎದೆಯುರಿ ಮುಂತಾದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಎದೆಯ ಬಿಗಿತ, ಅಸ್ತಮಾ ಕಾಯಿಲೆ ಇದ್ದವರು ಪುದೀನಾ ಸೇವಿಸುವುದು ಆರೋಗ್ಯಕ್ಕೆ ಸಹಕಾರಿ.
ಇದನ್ನೂ ಓದಿ: ಆಯುರ್ವೇದ ಔಷಧಗಳ ದೀರ್ಘ ಬಳಕೆ ಎಷ್ಟು ಒಳ್ಳೆಯದು? ಇದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಹೀಗಿವೆ!
ಪುದೀನಾ ಮೆಥನಾಲ್ ಹೊಂದಿರುತ್ತದೆ. ಇದು ವಾಯು ಮಾರ್ಗಗಳನ್ನು ತೆರವುಗೊಳಿಸಲು ಮತ್ತು ಲೋಳೆಯನ್ನು ತೆಗೆದು ಹಾಕಲು ಸಹಕಾರಿ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ