Child Care: ನಿಮ್ಮ ಮಕ್ಕಳು ಮೊಬೈಲ್ ಫೋನ್ ಬಿಟ್ಟು ಬರ್ತಿಲ್ವಾ? ಹೀಗೆ ಮಾಡಿ, ಆ ಚಟ ಬಿಡಿಸಿ

ಇಡೀ ದಿನ ಮೊಬೈಲ್ ಹಿಡಿದು ಕೂರುವ ಮಕ್ಕಳ ಅಭ್ಯಾಸವನ್ನು ತಪ್ಪಿಸಲು ಈ ಸರಳ ವಿಧಾನಗಳನ್ನು ಅನುಸರಿಸಿ, ಮಕ್ಕಳನ್ನು ಮೊಬೈಲ್ ವೀಕ್ಷಣೆಯ ಅತೀ ಹೆಚ್ಚು ಬಳಕೆಯನ್ನು ತಪ್ಪಿಸಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೊನಾ ವೈರಸ್ (corona virus) ಜಗತ್ತನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಭಾರತದಲ್ಲೂ ಮಹಾಮಾರಿ ಕೊರೊನಾ ಅತೀ ಹೆಚ್ಚು ಜನರಿಗೆ ಕಂಟಕವಾಗಿ ಕಾಡುತ್ತಿದೆ. ಅದರಲ್ಲೂ ಮಕ್ಕಳ (children's) ಭವಿಷ್ಯಕ್ಕೆ (Future) ಕೊರೊನಾ ಅಡ್ಡಗಾಲು ಹಾಕಿದೆ. ಮಕ್ಕಳ ಚಟುವಟಿಕೆಗಳು (activities), ಶಾಲೆ (school), ತರಗತಿಗಳನ್ನು ಅಟೆಂಡ್ ಮಾಡಲು ಸಾಧ್ಯವಾಗದ ಸ್ಥಿತಿಯನ್ನು ನಿರ್ಮಾಣ ಮಾಡಿದೆ. ಮಕ್ಕಳ ಭವಿಷ್ಯ ಅಡಕತ್ತರಿಯಲ್ಲಿ ಅಡಿಕೆ ಸಿಲುಕಿದಂತಾಗಿದೆ. ಸದ್ಯ ಎಲ್ಲಾ ಪೋಷಕರದ್ದು ಮಕ್ಕಳ ಭವಿಷ್ಯದ ಬಗ್ಗೆಯೇ ಚಿಂತೆಯಾಗಿದೆ. ಯಾಕೆಂದರೆ ದಿನವನ್ನು ಮನೆಯಲ್ಲಿಯೇ ಕಳೆಯುವ ಮಕ್ಕಳ ನಿಯಂತ್ರಣ ಮಾಡುವುದು ಹೇಗೆ..? ಅವರನ್ನು ಶೈಕ್ಷಣಿಕ ಚಟುವಟಿಕೆಗಳಲ್ಲಿ ತೊಡಗಿಸುವುದು ಹೇಗೆ ಎಂಬುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಅದಾಗ್ಯೂ ಈ ಸಮಸ್ಯೆಗೆ ಆನ್ಲೈನ್ ಕ್ಲಾಸ್ (online class) ಗಳು ಆರಂಭವಾಗುವ ಮೂಲಕ ಸಮಸ್ಯೆಯನ್ನು ದೂರ ಮಾಡಲು ಯತ್ನಿಸುತ್ತಿವೆ. ಆದರೆ ಆನ್ಲೈನ್ ಕ್ಲಾಸ್ ಗಳು ಪೋಷಕರಲ್ಲಿ ಮತ್ತಷ್ಟು ಆತಂಕ ಮನೆ ಮಾಡುವಂತೆ ಮಾಡಿವೆ.

  ಮೊಬೈಲ್ (mobile) ಹಿಡಿಯುವ ಮಕ್ಕಳು ಆನ್ಲೈನ್ ಗೇಮಿಂಗ್ ನಲ್ಲಿ ಬ್ಯುಸಿಯಾಗುತ್ತಾರೆ. ಇದು ಮಕ್ಕಳ ಬೆಳವಣಿಗೆಗೆ ತುಂಬಾ ಅಪಾಯಕಾರಿಯಾಗಿದೆ. ಇನ್ನು ಮಕ್ಕಳು ಮನೆಯಲ್ಲಿದ್ದರೆ ಆಟ, ತುಂಟಾಟ, ತರಲೆ, ಟಿವಿ ಮುಂದೆಯೇ ಹೆಚ್ಚು ಹೊತ್ತು ಕುಳಿತು ಸಮಯ ಕಳೆಯುತ್ತಾರೆ. ಅದರಲ್ಲೂ ಈಗ ಕೊರೊನಾ ನಂತರ ಶಾಲೆಗಳು ಆರಂಭವಾಗುತ್ತವೆ. ಮತ್ತೆ 15 ದಿನ ಕಳೆಯುತ್ತಲೇ ಬಂದ್ ಆಗುತ್ತವೆ. ಹೀಗಾಗಿ ಮಕ್ಕಳು ಪಾಠ ಮತ್ತು ಶೈಕ್ಷಣಿಕ ಚಟುವಟಿಕೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅದರಲ್ಲೂ ಊರಲ್ಲಿ ಸ್ನೇಹಿತರ ಗುಂಪು, ಮೊಬೈಲ್ , ಟಿವಿ ಇದ್ದರೆ ಮಕ್ಕಳನ್ನು ನಿಯಂತ್ರಿಸುವುದು ಕಷ್ಟವೇ.

  ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತ

  ಶಾಲೆಯಲ್ಲಿ ನಡೆಯುವ ಎಲ್ಲಾ ತರಗತಿಗಳು ಈಗ ಆನ್ಲೈನ್ ತರಗತಿಯಲ್ಲಿ ನಡೆಯುತ್ತಿವೆ. ಹೀಗಾಗಿ ಮಕ್ಕಳು ಹೆಚ್ಚು ಸಮಯವನ್ನು ಮೊಬೈಲ್ ಹಿಡಿದು ಕಳೆಯುತ್ತಿದ್ದಾರೆ. ಕ್ಲಾಸ್ ಮುಗಿದ ಬಳಿಕವೂ ಹೋಂ ವರ್ಕ್, ಪ್ರೊಜೆಕ್ಟ್ ವರ್ಕ್ ಕಾರಣ ಮತ್ತೆ ಮೊಬೈಲ್ ನ್ನೇ ಹಿಡಿದು ಕೂರುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮಕ್ಕಳಿಗೆ ಕಣ್ಣಿನ ದೋಷ, ದೈಹಿಕ ಚಟುವಟಿಕೆ, ಆಟ, ಪಾಠದ ಕೊರತೆ ಎದ್ದು ಕಾಣುತ್ತಿದೆ. ಇಡೀ ದಿನ ತರಗತಿ ಕೇಳಲು ಕುಳಿತೇ ಇರುವ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುವ ಭಯವೂ ಪೋಷಕರಲ್ಲಿ ಮನೆ ಮಾಡಿದೆ.

  ಇದನ್ನೂ ಓದಿ: ಈ ಪ್ರೋಟೀನ್ ಶೇಕ್​ ಕುಡಿದರೆ ಸಾಕು ತೂಕ ಕಡಿಮೆ ಆಗುತ್ತೆ

  ಹೀಗಾಗಿ ಇಡೀ ದಿನ ಮೊಬೈಲ್ ಹಿಡಿದು ಕೂರುವ ಮಕ್ಕಳ ಅಭ್ಯಾಸವನ್ನು ತಪ್ಪಿಸಲು ಈ ಸರಳ ವಿಧಾನಗಳನ್ನು ಅನುಸರಿಸಿ, ಮಕ್ಕಳನ್ನು ಮೊಬೈಲ್ ವೀಕ್ಷಣೆಯ ಅತೀ ಹೆಚ್ಚು ಬಳಕೆಯನ್ನು ತಪ್ಪಿಸಿ.

  ಮಕ್ಕಳ ವಿಪರೀತ ಮೊಬೈಲ್ ಬಳಕೆ ಅಭ್ಯಾಸ ತಪ್ಪಿಸಲು ಕೆಲವು ಟಿಪ್ಸ್

  • ಇಡೀ ದಿನ ಮೊಬೈಲ್ ಹಿಡಿಯುವ ಮಕ್ಕಳು ಆನ್ಲೈನ್ ಗೇಮಿಂಗ್, ವಿಡಿಯೋ ನೋಡುತ್ತ ಕೂರುವುದನ್ನು ತಪ್ಪಿಸಲು ಪೋಷಕರು ಮಕ್ಕಳೊಂದಿಗೆ ಹೆಚ್ಚು ಸಮಯವನ್ನು ಕಳೆಯಿರಿ. ಮಕ್ಕಳನ್ನು ಇತರೆ ಆಟ-ಪಾಠಗಳಲ್ಲಿ ತೊಡಗಿಸುವಂತೆ ಪ್ರೇರೇಪಿಸಿ. ನೀವೂ ಕೂಡ ಮಕ್ಕಳೊಂದಿಗೆ ಬೆರೆತು ಕೆಲಸ ಮಾಡಿ. ಇದರಿಂದ ನಿಮ್ಮ ಮಕ್ಕಳು ಮೊಬೈಲ್ ಗೆ ಅಡಿಕ್ಟ್ ಆಗುವುದು ತಪ್ಪುತ್ತದೆ.

  • ದೈಹಿಕ ಚಟುವಟಿಕೆಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿ. ದಿನವೂ ಟೈಂ ಟೇಬಲ್ ಹಾಕಿ. ಯೋಗ, ಧ್ಯಾನ ಮತ್ತು ವ್ಯಾಯಾಮ ಮಾಡುವುದನ್ನು ಹೇಳಿ ಕೊಡಿ. ದೈಹಿಕ ಚಟುವಟಿಕೆಗಳಿಂದಾಗು ಉಪಯುಕ್ತತೆಯನ್ನು ತಿಳಿಸಿ. ಪಠ್ಯಪುಸ್ತಕದಲ್ಲಿ ಬರುವ ವಿಷಯಗಳನ್ನು ಕಥೆಯ ರೂಪದಲ್ಲಿ ನಿರೂಪಣೆ ಮಾಡಿ. ಇದರಿಂದ ಮಕ್ಕಳ ಗಮನ ಮೊಬೈಲ್ ನತ್ತ ಹೋಗುವುದನ್ನು ತಪ್ಪಿಸಬಹುದು.

  • ಮಕ್ಕಳು ಆನ್ಲೈನ್ ಕ್ಲಾಸ್ ಮುಗಿದ ನಂತರ ಎಷ್ಟು ಹೊತ್ತು ಮೊಬೈಲ್ ಹಿಡಿಯಬೇಕು. ಎಲ್ಲೆಲ್ಲಿ ಕುಳಿತು ಪಾಠ ಕೇಳಬೇಕು ಎಂಬ ಪಟ್ಟಿ ತಯಾರಿಸಿ, ಮೊಬೈಲ್ ನೋ ಸ್ಕ್ರೀನ್ ಝೋನ್ ರೂಲ್ಸ್ ಹಾಕಿ. ಕಣ್ಣಿನ ದೋಷಕ್ಕೆ ಕಾರಣವಾಗುವ ಮೊಬೈಲ್, ಟ್ಯಾಬ್, ಗ್ಯಾಜೆಟ್ ಗಳಿಂದ ದೂರವಿರುವಂತೆ ಮಾಡಿ.

  • ಮಲಗುವಾಗ, ಊಟದ ವೇಳೆ ಮಕ್ಕಳು ಮೊಬೈಲ್ ಬಳಸದಂತೆ ನೋಡಿಕೊಳ್ಳಿ. ಅಡುಗೆ ಮಾಡುವಾಗ ಮಕ್ಕಳನ್ನು ಕರೆದುಕೊಂಡು, ಅವರಿಗೂ ಚಿಕ್ಕಪುಟ್ಟ ಕೆಲಸ ನೀಡಿ, ಆಸಕ್ತಿಯುತವಾಗಿ ದಿನವನ್ನು ಕಳೆಯುವಂತೆ ಮಾಡಿ.  

  • ಮಕ್ಕಳಿಗೆ ಮೊಬೈಲ್ ಗಿಂತ ಹೊರ ಪ್ರಪಂಚದಲ್ಲಿ ಇರುವ ವಿಷಯಗಳನ್ನು ಹೇಳಿ ಆಸಕ್ತಿ ಮೂಡಿಸಿ. ಪ್ರಕೃತಿಯ ಹಾಗೂ ಪ್ರಕೃತಿಯಲ್ಲಿ ಸಿಗುವ ಅಪರೂಪದ ವಸ್ತುಗಳು, ಪ್ರಕೃತಿಯಿಂದ ನಮಗೆ ಸಿಗುವ ಪ್ರಯೋಜನಗಳ ಬಗ್ಗೆ ತಿಳಿಸಿ. ಸಂಬಂಧಗಳ ಬಗ್ಗೆ ಹೇಳಿಕೊಡಿ. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಳ್ಳುವಂತೆ ಮಾಡಿ.


  ಇದನ್ನೂ ಓದಿ: ನವಜಾತ ಶಿಶುಗಳ ಆಹಾರ ಕ್ರಮ ಹೇಗಿರಬೇಕು? ಮಕ್ಕಳಿಗೆ ಯಾವ ರೀತಿಯ ಘನ ಆಹಾರ ನೀಡಬೇಕು?

  ಒಟ್ಟಿನಲ್ಲಿ ಮಕ್ಕಳೊಂದಿಗೆ ನೀವೂ ಮಗುವಾಗಿ ಅವರೊಂದಿಗಿದ್ದಾಗ ಮಕ್ಕಳ ಅತೀಯಾದ ಮೊಬೈಲ್ ಬಳಕೆ ಅಭ್ಯಾಸವನ್ನು ತಪ್ಪಿಸಬಹುದು.
  Published by:renukadariyannavar
  First published: