ಮಾನಸಿಕ ಆರೋಗ್ಯಕ್ಕೆ (Mental Health) ಸಂಬಂಧಿಸಿದಂತೆ ಧ್ಯಾನ, ಯೋಗ ಎಲ್ಲವೂ ಬಹಳ ಮುಖ್ಯವಾಗಿದೆ. ಹತ್ತು ನಿಮಿಷ ಕಣ್ಣು ಮುಚ್ಚಿ ಧ್ಯಾನ ಮಾಡಿದರೆ ಸಾಕು ಮನಸ್ಸು ಅದೆಷ್ಟೋ ನಿರಾಳವಾಗುತ್ತದೆ. ಅದೇ ರೀತಿ ಬೌದ್ಧ ಧರ್ಮದ ವಿಪಾಸನಾ ಧ್ಯಾನ ಕೂಡ ಸಾಕಷ್ಟು ಪ್ರಭಾವಿಯಾಗಿದೆ. ಈ ಧ್ಯಾನದ ಕುರಿತಂತೆ ಲೈಟ್‌ಹೌಸ್ ಕ್ಯಾಂಟನ್ ಗ್ರೂಪ್‌ನ ಸಿಇಒ ಶಿಲ್ಪಿ ಚೌಧರಿ (Shilpa Chowdari) ಕೆಲವು ವಿಚಾರಗಳನ್ನು ವಿಶೇಷ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಈ ವಿಪಾಸನಾ ಧ್ಯಾನವನ್ನು ನಾನು ಹಲವು ವರ್ಷಗಳಿಂದ ಮಾಡಿಕೊಂಡು ಬರುತ್ತಿರುವ ಕ್ರಮ. ಕಷ್ಟಕರವಾದ ಅಭ್ಯಾಸವಾದ್ರೂ, ಸಮಯ (Time) ಮತ್ತು ಶ್ರಮದೊಂದಿಗೆ ಇದು ಸುಲಭವಾಗುತ್ತದೆ ಎಂದು ಹೇಳಿದ್ದಾರೆ. ಹಾಗಾದರೆ ವಿಪಾಸನಾ ಧ್ಯಾನ ಕುರಿತು ಮತ್ತು ಯಶಸ್ವಿ ಜೀವನಕ್ಕೆ ಸಿಇಒ ಶಿಲ್ಪಿ ಚೌಧರಿ ನೀಡಿರುವ ಸಲಹೆಗಳ ಬಗ್ಗೆ ನೋಡೋಣ ಬನ್ನಿ.
ಉನ್ನತ ಜಾಗತಿಕ ಹೂಡಿಕೆ ಬ್ಯಾಂಕ್‌ಗಳಲ್ಲಿ ಸುಮಾರು ವರ್ಷಗಳ ಅನುಭವ ನಿಮಗಿದೆ. ಈ ನಿಮ್ಮ ಪ್ರಯಾಣ ಹೇಗಿತ್ತು ಮತ್ತು ಸವಾಲಿನ ಪರಿಸ್ಥಿತಿಗಳನ್ನು ಹೇಗೆ ನಿರ್ವಹಿಸುತ್ತೀರಿ?
ದೇಶ ಸುತ್ತುವುದು, ಅಲ್ಲಾಗುವ ಅನುಭವಗಳು ನನಗೆ ಪಾಠ ಇದ್ದಂತೆ. ನನ್ನ ವೈಫಲ್ಯಗಳು ನನ್ನ ದೊಡ್ಡ ಅಡೆತಡೆಗಳಾಗಿದ್ದರೂ, ಅವು ನನಗೆ ಅಗತ್ಯವಾದ ಒಳನೋಟಗಳು ಮತ್ತು ಪಾಠವನ್ನು ಕಲಿಸಿವೆ.
ಸೋಲು, ವೈಫಲ್ಯ ನನಗೆ ಮತ್ತಷ್ಟು ಅಭಿವೃದ್ಧಿಯಾಗಲು ಸಹಾಯ ಮಾಡಿದೆ. ಸೋಲಿನಿಂದ ಕುಗ್ಗದ ನಾನು ಅದನ್ನೇ ಒಂದು ಅನುಭವ ಮತ್ತು ಪಾಠವಾಗಿ ತೆಗೆದುಕೊಂಡೆ. ಕಷ್ಟದ ಸಂದರ್ಭಗಳನ್ನು ನಾನು ಕಷ್ಟ ಎಂದು ಕೊಳ್ಳದೇ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅವಕಾಶಗಳೆಂದು ಭಾವಿಸಿ ಮುನ್ನುಗ್ಗುತ್ತೇನೆ.
ಇದನ್ನೂ ಓದಿ: ಮನೆಯಲ್ಲಿಯೇ ಫಟಾಫಟ್ ಅಂತ ಮಾಡಿ ಲಸ್ಸಿ; ಉತ್ತಮ ಆರೋಗ್ಯಕ್ಕೂ ಇದು ಬೆಸ್ಟ್!
ಜೀವನದಲ್ಲಿ ಹೊಂದಾಣಿಕೆ ಸಹ ತುಂಬಾ ಮುಖ್ಯ. ಹೊಂದಿಕೊಂಡರೆ ಎಲ್ಲವೂ ಸರಿ ಇರುತ್ತದೆ. ಜೀವನ ಅನ್ನೋದೆ ಅಚ್ಚರಿಗಳ ಆಗರ. ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ.
ಹೀಗಾಗಿ ಹೊಂದಾಣಿಕೆ, ನಿರಂತರ ಕಲಿಕೆ ನಮ್ಮ ಪಯಣದ ಹಾದಿಯನ್ನು ಸುಲಭಗೊಳಿಸುತ್ತದೆ ಮತ್ತು ಎಲ್ಲವನ್ನೂ ನಿಭಾಯಿಸಲು ಸಹಾಯ ಮಾಡುತ್ತದೆ.
ದಿನಚರಿಯ ಬಗ್ಗೆ ಏನಂದ್ರು ಶಿಲ್ಪಿ ಚೌಧರಿ?
ಪ್ರತಿನಿತ್ಯದ ದಿನಚರಿ ಬಗ್ಗೆ ಮಾತನಾಡಿದ ಶಿಲ್ಪಿ ಚೌಧರಿ ನಾನು ಪ್ರತಿನಿತ್ಯ ಬಿಡದೇ ಅಭ್ಯಸಿಸುವುದು ವಿಪಾಸನಾವನ್ನು. ಇದು ನನ್ನ ಜೀವನಸದಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿದೆ.
ನಾನು ಎಂಬಿಎ ಓದಬೇಕಾದರೆ ಇದರ ಬಗ್ಗೆ ತಿಳಿದುಕೊಂಡೆ. ಈ ವೇಳೆ ಅದನ್ನು ಸರಿಯಾಗಿ ಮಾಡಲು ಆಗುತ್ತಿರಲಿಲ್ಲ. ಆದರೆ ಕೋವಿಡ್ ಸಂದರ್ಭದಲ್ಲಿ ಇದನ್ನು ಅಳವಡಿಸಿಕೊಂಡೆ. ವಿಪಾಸನಾದಿಂದ ನಾನು ಕಲಿತ ದೊಡ್ಡ ಪಾಠವೆಂದರೆ ಜೀವನದಲ್ಲಿ ಸ್ಥಿತಿ, ಪರಿಸ್ಥಿತಿ, ಅವಕಾಶ ಹೇಗೆ ಬಂದರೂ ಹಾಗೇ ಅವುಗಳನ್ನು ಸ್ವೀಕರಿಸುವ ಮನೋಭಾವ.
ನಾವು ಬೆಳೆಯಲು ಮತ್ತು ಸುಧಾರಿಸಲು ಪ್ರಯತ್ನಿಸುತ್ತಿರುವಾಗ ವಾಸ್ತವಗಳನ್ನು ಸ್ವೀಕರಿಸಲು ಕಲಿಯಬೇಕು. ಇದನ್ನು ಅರ್ಥಮಾಡಿಕೊಳ್ಳಲು ವಿಪಾಸನಾ ಧ್ಯಾನ ಕ್ರಮ ನನಗೆ ಸಹಾಯ ಮಾಡಿದೆ. ನಾನು ದಿನಕ್ಕೆ ಕನಿಷ್ಠ ಒಂದು ಗಂಟೆ ಸಾವಧಾನತೆಯನ್ನು ಅಭ್ಯಾಸ ಮಾಡಲು ಪ್ರಯತ್ನಿಸುತ್ತೇನೆ, ಕೆಲವೊಮ್ಮೆ ನನಗೆ ಸಮಯವಿದ್ದರೆ ಇನ್ನೂ ಹೆಚ್ಚು ಕಾಲ ಅದರಲ್ಲಿ ತಲ್ಲೀನನಾಗುತ್ತೇನೆ ಎಂದಿದ್ದಾರೆ.
ಮಾನಸಿಕ ಆರೋಗ್ಯ ಪ್ರಸ್ತುತ ಹೆಚ್ಚು ಗಮನ ನೀಡಬೇಕಾದ ಆರೋಗ್ಯ ಸ್ಥಿತಿಯಾಗಿದೆ. ಮಾನಸಿಕ ಆರೋಗ್ಯದ ಸವಾಲುಗಳನ್ನು ಸುಧಾರಿಸಲು ವಿಪಾಸನಾ ನನಗೆ ಅತ್ಯಮೂಲ್ಯ ವಿಧಾನವಾಗಿದೆ ಎಂದಿದ್ದಾರೆ ಚೌಧರಿ.
ಹೂಡಿಕೆದಾರರಿಗೆ ಪುಸ್ತಕಗಳನ್ನು ಓದುವಂತೆ ಸಲಹೆ ನೀಡಿದ ಚೌಧರಿ
ಒಬ್ಬ ಹೂಡಿಕೆದಾರನಾಗಿ, ಪುಸ್ತಕಗಳನ್ನು ಓದುವ ವಿಷಯದಲ್ಲಿ ಒಂದೇ ರೀತಿಯ ವಿಧಾನವಿಲ್ಲ ಎಂದು ನಾನು ನಂಬುತ್ತೇನೆ. ಹೂಡಿಕೆ, ನಿರ್ಧಾರ ತೆಗೆದುಕೊಳ್ಳುವುದು ಮತ್ತು ಸಾಮಾನ್ಯವಾಗಿ ಜೀವನದ ಬಗ್ಗೆ ಮೌಲ್ಯಯುತವಾದ ಒಳನೋಟಗಳನ್ನು ಒದಗಿಸುವ ಬಹಳಷ್ಟು ಉತ್ತಮ ಪುಸ್ತಕಗಳಿವೆ.
ನಾನು ವಿಶೇಷವಾಗಿ ಇಷ್ಟಪಡುವ ಒಂದು ಪುಸ್ತಕವೆಂದರೆ "ಪೂರ್ ಚಾರ್ಲೀಸ್ ಅಲ್ಮಾನಾಕ್: ದಿ ವಿಟ್ ಅಂಡ್ ವಿಸ್ಡಮ್ ಆಫ್ ಚಾರ್ಲ್ಸ್ ಟಿ. ಮುಂಗರ್". ಇದೊಂದು ಅದ್ಭುತ ಪುಸ್ತಕವಾಗಿದ್ದು, ಎಲ್ಲರೂ ಇದನ್ನು ಓದಬಹುದು ಎಂದಿದ್ದಾರೆ.
ಮನೋವಿಜ್ಞಾನದ ವಿಷಯದ ಕುರಿತು ಸಹ ಪುಸ್ತಕ ಶಿಫಾರಸು ಮಾಡಿದ ಚೌಧರಿ ಅವರು "ಥಿಂಕಿಂಗ್, ಫಾಸ್ಟ್ ಮತ್ತು ಸ್ಲೋ" ಎಂಬ ಪುಸ್ತಕವನ್ನು ಉಲ್ಲೇಖಿಸಿದರು.
ಇದನ್ನೂ ಓದಿ: ನಲ್ಲಿ ಬೊಕ್ಕ ಹಲೀಮ್ ಸವಿಯಲು ಮುಗಿಬೀಳ್ತಿದ್ದಾರೆ ಜನ; ಅಷ್ಟಕ್ಕೂ ಏನಿದು?
ಈ ಪುಸ್ತಕವು ನಮ್ಮ ಆಲೋಚನಾ ವ್ಯವಸ್ಥೆಗಳು ಮತ್ತು ನಾವು ಹೇಗೆ ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇವೆ ಎಂಬುದರ ಕುರಿತು ಹೇಳುತ್ತದೆ. ಇದು ಕೂಡ ಬದುಕಿಗೆ ಉಪಯುಕ್ತವಾಗುವ ಪುಸ್ತಕ ಎಂದಿದ್ದಾರೆ.
ವಿಪಾಸನಾದಿಂದ ಕಲಿಯಬಹುದಾದ ಕಲಿಕೆ/ನಿರ್ವಹಣೆಯ ಪಾಠಗಳು ಯಾವುವು?
1) ಮೊದಲಿಗೆ ವಿಪಾಸನಾದಿಂದ ನಾನು ಮಾಡುತ್ತಿರುವ ಕೆಲಸದ ಬಗ್ಗೆ ನಂಬಿಕೆ ಬೆಳೆಸಿಕೊಳ್ಳುವುದು ಮುಖ್ಯವಾಗಿ ಕಲಿತೆ. ನಾವು ಮಾಡುವ ಕೆಲಸದ ಮೇಲೆ ನಮ್ಮ ನಂಬಿಕೆ ಮುಖ್ಯವಾಗುತ್ತದೆ. ಇದನ್ನು ನಾನು ವಿಪಾಸನಾದಿಂದ ಕಲಿತೆ ಎನ್ನುತ್ತಾರೆ ಸಿಇಒ.
2) ಇನ್ನೊಂದು ಪಾಠವೆಂದರೆ ನಿಮ್ಮ ಜೀವನೋಪಾಯವನ್ನು ನಿಮ್ಮ ಮೌಲ್ಯಗಳೊಂದಿಗೆ ಜೋಡಿಸುವುದು. ಮತ್ತು ಸಮಾಜಕ್ಕೆ ನಮ್ಮ ಕೊಡುಗೆ ಮತ್ತು ಯಾವ ರೀತಿಯ ವ್ಯವಹಾರಗಳನ್ನು ಅನುಸರಿಸಬೇಕು ಎಂಬುದರ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳಲು ಇದು ಸಹಾಯ ಮಾಡುತ್ತದೆ.
3) ಜನರ ಬಗ್ಗೆ ಕಾಳಜಿ ವಹಿಸುವುದು, ಪ್ರೀತಿ-ಗೌರವ ವ್ಯಕ್ತಪಡಿಸುವುದನ್ನು ಸಹ ನಾನು ಇದರಿಂದ ಕಲಿತೆ ಎನ್ನುತ್ತಾರೆ ಶಿಲ್ಪಿ ಚೌಧರಿ.
ಮೆಂಟಲ್ ಹೆಲ್ತ್ ಬಗ್ಗೆ ಇವರ ಸಲಹೆ ಏನು?
ಮಾನಸಿಕ ಆರೋಗ್ಯವು ಯಾವಾಗಲೂ ಮುಖ್ಯವಾಗಿದೆ, ಆದರೆ ದೈಹಿಕ ಯೋಗಕ್ಷೇಮ ಮತ್ತು ಫಿಟ್ನೆಸ್ ಬಗ್ಗೆ ಮಾತನಾಡುವ ನಾವು ಮಾನಸಿಕ ಆರೋಗ್ಯವನ್ನು ಕಡೆಗಣಿಸುತ್ತಿದ್ದೇವೆ.
ನಮ್ಮ ದೇಹಕ್ಕೆ ತರಬೇತಿ ನೀಡುವಂತೆಯೇ, ನಾವು ನಮ್ಮ ಮನಸ್ಸನ್ನು ತರಬೇತಿಗೊಳಿಸಬೇಕು ಮತ್ತು ನಮ್ಮ ಮಾನಸಿಕ ಆರೋಗ್ಯದಲ್ಲಿನ ಯಾವುದೇ ದೌರ್ಬಲ್ಯಗಳ ಬಗ್ಗೆ ತಿಳಿದಿರಬೇಕು.
ದೈಹಿಕ ಆರೋಗ್ಯದಷ್ಟೇ, ಮಾನಸಿಕ ಆರೋಗ್ಯವೂ ಮುಖ್ಯ. ದೈಹಿಕ ಆರೋಗ್ಯ ನಿಂತಿರುವುದೇ ನಮ್ಮ ಜೀವನ ಶೈಲಿ ಮತ್ತು ಮೆಂಟಲ್ ಹೆಲ್ತ್ ಮೇಲೆ ಎನ್ನುತ್ತಾರೆ ಶಿಲ್ಪಿ ಚೌಧರಿ.
ವಿಪಾಸನಾ ಧ್ಯಾನ ಕ್ರಮ
ವಿಪಾಸನಾ, ಅಂದರೆ ವಿಷಯಗಳನ್ನು ನಿಜವಾಗಿ ನೋಡುವುದು, ಭಾರತದ ಅತ್ಯಂತ ಪುರಾತನವಾದ ಧ್ಯಾನ ತಂತ್ರಗಳಲ್ಲಿ ಇದು ಒಂದಾಗಿದೆ. ಇದನ್ನು 2500 ವರ್ಷಗಳ ಹಿಂದೆ ಗೌತಮ ಬುದ್ಧನು ಮರುಶೋಧಿಸಿದನು ಮತ್ತು ಸಾರ್ವತ್ರಿಕ ಕಾಯಿಲೆಗಳಿಗೆ ಸಾರ್ವತ್ರಿಕ ಪರಿಹಾರವಾಗಿ ಬುದ್ಧ ಎಲ್ಲರಿಗೂ ಈ ವಿಧಾನವನ್ನು ಕಲಿಸಿದನು ಎನ್ನಲಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ