• Home
  • »
  • News
  • »
  • lifestyle
  • »
  • Millets: ಮಧುಮೇಹ, ತೂಕ ನಷ್ಟ ಎಲ್ಲದ್ದಕ್ಕೂ ಬೆಸ್ಟ್ ಈ ಸೂಪರ್‌ ಫುಡ್ ಸಿರಿಧಾನ್ಯ

Millets: ಮಧುಮೇಹ, ತೂಕ ನಷ್ಟ ಎಲ್ಲದ್ದಕ್ಕೂ ಬೆಸ್ಟ್ ಈ ಸೂಪರ್‌ ಫುಡ್ ಸಿರಿಧಾನ್ಯ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ಅಚ್ಚುಕಟ್ಟಾದ ಆರೋಗ್ಯ ನಿರ್ವಹಣೆಗೆ ಸಿರಿ ಧಾನ್ಯಗಳು ತುಂಬಾ ಅವಶ್ಯಕವಾಗಿದ್ದು, ಬಿಳಿ ಅಕ್ಕಿ, ಗೋಧಿ ಬದಲಿಗೆ ನೀವು ಸಿರಿಧಾನ್ಯವನ್ನು ಬಳಕೆ ಮಾಡಿದರೆ ಸಿಗುವ ಪ್ರಯೋಜನಗಳು ಹತ್ತು-ಹಲವು. ಸಿರಿಧಾನ್ಯ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು, ತೂಕವನ್ನು ಕಳೆದುಕೊಳ್ಳಲು ಮತ್ತು ಹೃದಯಘಾತ ತಡೆಯಲು ಸಹಾಯ ಮಾಡುತ್ತದೆ.

ಮುಂದೆ ಓದಿ ...
  • Share this:

ಹಿಂದಿನ ಕಾಲದಿಂದಲೂ ಹೆಚ್ಚು ಬಳಸಲಾಗುತ್ತಿದ್ದ ಸಿರಿಧಾನ್ಯ (Millet) ಈಗ ಮತ್ತೆ ಆರೋಗ್ಯಕರ ಆಹಾರವಾಗಿ ಮುನ್ನೆಲೆಗೆ ಬರುತ್ತಿದೆ ಎನ್ನಬಹುದು. ಅಚ್ಚುಕಟ್ಟಾದ ಆರೋಗ್ಯ ನಿರ್ವಹಣೆಗೆ ಸಿರಿ ಧಾನ್ಯಗಳು ತುಂಬಾ ಅವಶ್ಯಕವಾಗಿದ್ದು, ಬಿಳಿ ಅಕ್ಕಿ, ಗೋಧಿ ಬದಲಿಗೆ ನೀವು ಸಿರಿಧಾನ್ಯವನ್ನು ಬಳಕೆ ಮಾಡಿದರೆ ಸಿಗುವ ಪ್ರಯೋಜನಗಳು ಹತ್ತು-ಹಲವು. ಸಿರಿಧಾನ್ಯ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು, ತೂಕವನ್ನು ಕಳೆದುಕೊಳ್ಳಲು (Weight loss) ಮತ್ತು ಹೃದಯಘಾತ ತಡೆಯಲು ಸಹಾಯ ಮಾಡುತ್ತದೆ. “ನಾವು ನಮ್ಮ ದೇಶದಲ್ಲಿ ಸುಮಾರು 300 ಬಗೆಯ ಮಿಲ್ಲೆಟ್‌ ಗಳನ್ನು ಹೊಂದಿದ್ದೇವೆ. ಇವುಗಳ ಕೃಷಿಗೆ ಕಡಿಮೆ ನೀರಿನ ಅವಶ್ಯಕತೆ ಇದ್ದು, ಶಾಖ-ನಿರೋಧಕ ಮತ್ತು ಪೋಷಕಾಂಶದಲ್ಲೂ (nutrient) ದಟ್ಟವಾಗಿರುತ್ತವೆ.


ವಾತಾವರಣದಿಂದ ಕೂಡ ಗರಿಷ್ಠ ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಂಡು ಮತ್ತು ಆಮ್ಲಜನಕವನ್ನು ಬಿಡುಗಡೆ ಮಾಡುತ್ತವೆ. ಹೀಗಾಗಿ ಸಿರಿಧಾನ್ಯಗಳು ನಿಜಕ್ಕೂ ಒಂದು ಸೂಪರ್‌ ಫುಡ್‌ ಎನ್ನುತ್ತಾರೆ AIIMS ನ ಮಕ್ಕಳ ವಿಭಾಗದ ಮಾಜಿ ಹಿರಿಯ ಆಹಾರ ತಜ್ಞ ಡಾ.ಅನುಜಾ ಅಗರ್‌ವಾಲಾ ಹೇಳುತ್ತಾರೆ.


ಇತರೆ ಕಾರ್ಬೋಹೈಡ್ರೇಟ್‌ಗಳಿಗಿಂತ ಮಧುಮೇಹಿಗಳಿಗೆ ಸಿರಿಧಾನ್ಯ ಏಕೆ ಉತ್ತಮ?
(1) ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್
ಜೋಳ, ಬಜ್ರಾ ಮತ್ತು ರಾಗಿಯಂತಹ ಸಿರಿಧಾನ್ಯಗಳು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಅನ್ನು ಹೊಂದಿವೆ. ಅಕ್ಕಿ ಮತ್ತು ಗೋಧಿ ಹಿಟ್ಟಿಗೆ ಹೋಲಿಸಿದರೆ ಡಯಾಬಿಟಿಸ್‌ ಇರುವವರಿಗೆ ಇದು ಉತ್ತಮ ಆಹಾರ. “ನಾವು ಯಾವುದೇ ಆಹಾರ ಪದಾರ್ಥವನ್ನು ಮಧುಮೇಹಿಗಳಿಗೆ ಸೂಚಿಸಿದಾಗ, ನಾವು ಅದರ ಗ್ಲೈಸೆಮಿಕ್ ಸೂಚಿಯನ್ನು ನೋಡುತ್ತೇವೆ. ಎಲ್ಲಾ ಮಿಲ್ಲೆಟ್‌ ಗಳ ಗ್ಲೈಸೆಮಿಕ್ ಸೂಚ್ಯಂಕವು 50 ಕ್ಕಿಂತ ಕಡಿಮೆಯಿರುವುದರಿಂದ ಅವುಗಳನ್ನು ಆಯ್ಕೆಯ ಆಹಾರವನ್ನಾಗಿ ಶಿಫಾರಸ್ಸು ಮಾಡುತ್ತೇವೆ” ಎಂದು ವೈದ್ಯ ರಿತಿಕಾ ಸಮದ್ದಾರ್ ಹೇಳುತ್ತಾರೆ.


(2) ಹೈ-ಫೈಬರ್, ಹೈಪರ್ ಅಥವಾ ಹೈಪೊಗ್ಲಿಸಿಮಿಯಾ ಇಲ್ಲ ಎಂದು ಖಚಿತಪಡಿಸುತ್ತದೆ
ರಾಗಿ ಗ್ಲೈಸೆಮಿಕ್ ಇಂಡೆಕ್ಸ್‌ನಲ್ಲಿ ಕಡಿಮೆಯಾಗಿರುವುದು ಮಾತ್ರವಲ್ಲ, ಅವು ಒಳಗೊಂಡಿರುವ ಫೈಬರ್ ಪ್ರಮಾಣವು ಅಕ್ಕಿ, ಗೋಧಿ ಹಿಟ್ಟು, ಮೈದಾ ಅಥವಾ ಕಾರ್ನ್‌ಫ್ಲೇಕ್‌ಗಳಲ್ಲಿ ಕಂಡುಬರುವ ಪ್ರಮಾಣಕ್ಕಿಂತ ಹೆಚ್ಚಾಗಿರುತ್ತದೆ. "ಗ್ಲೂಕೋಸ್ ಕ್ರಮೇಣ ರಕ್ತಪ್ರವಾಹಕ್ಕೆ ಬಿಡುಗಡೆಯಾಗುವುದರಿಂದ ಅವು ಸಕ್ಕರೆಯ ಸ್ಪೈಕ್‌ಗಳನ್ನು ನಿಧಾನಗೊಳಿಸುತ್ತವೆ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ” ಎಂದು ಡಾ ಅಗರ್‌ವಾಲಾ ಹೇಳುತ್ತಾರೆ.


ಇದನ್ನೂ ಓದಿ: Weight Loss: ತೂಕ ನಷ್ಟದ ಪ್ರಯತ್ನದಲ್ಲಿರುವವರು ರಾತ್ರಿ ಊಟ ಬೇಡವೆಂದರೆ ಸಂಜೆ ಈ ತಿಂಡಿ ಸೇವಿಸಿ!


ಸಿರಿಧಾನ್ಯದಲ್ಲಿರುವ ಕರಗದ ನಾರುಗಳು ಕಾರ್ಬೋಹೈಡ್ರೇಟ್‌ಗಳು ಮತ್ತು ಕೊಬ್ಬಿನ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸಲು ಮತ್ತು ನಿಯಂತ್ರಿಸುವಲ್ಲಿ ಸಹಕಾರಿಯಾಗಿದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳುತ್ತದೆ. ಇದಲ್ಲದೆ, ಅಡಿಪೋನೆಕ್ಟಿನ್ ಸಾಂದ್ರತೆಯ ಹೆಚ್ಚಳವು ಮಧುಮೇಹಿಗಳಿಗೆ ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸುತ್ತದೆ ಎನ್ನುತ್ತಾರೆ ವೈದ್ಯರು.


ಮಿಲ್ಲೆಟ್ ಹೃದಯದ ಆರೋಗ್ಯಕ್ಕೆ ಹೇಗೆ ಒಳ್ಳೆಯದು?
ಮಿಲ್ಲೆಟ್ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ ಮತ್ತು ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್ ಅನ್ನು ಗಮನಾರ್ಹವಾಗಿ ನಿಯಂತ್ರಿಸುತ್ತದೆ. ಹೃದಯದ ಆರೋಗ್ಯಕ್ಕೆ ಹೇಗೆ ಸಹಕಾರಿ ಅಂತಾ ನೋಡುವುದಾದರೆ ಸಿರಿಧಾನ್ಯದಲ್ಲಿರುವ ನಿಯಾಸಿನ್ ಅಥವಾ ವಿಟಮಿನ್ ಬಿ 3 ಅಂಶವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹೀಗಾಗಿ ಹೃದಯದ ಆರೋಗ್ಯಕ್ಕೆ ಮಿಲ್ಲೆಟ್‌ ಉತ್ತಮ ಎನ್ನುತ್ತಾರೆ ವೈದ್ಯರು.


ಸಿರಿಧಾನ್ಯ ಕರುಳಿನ ಆರೋಗ್ಯವನ್ನು ಹೇಗೆ ಸುಧಾರಿಸುತ್ತದೆ?
(1) ಗ್ಲುಟೆನ್-ಮುಕ್ತ: ಸಿರಿಧಾನ್ಯಗಳ ಅನೇಕ ಪ್ರಯೋಜನಗಳಲ್ಲಿ ಒಂದಾದ ಅವು ಅಂಟು ಮುಕ್ತವಾಗಿದ್ದು, ಗ್ಲುಟೆನ್ ಅಲರ್ಜಿ ಮತ್ತು ಕರುಳಿನ ಸಮಸ್ಯೆ ಹೊಂದಿರುವವರಿಗೆ ಸೂಕ್ತವಾಗಿವೆ ಎಂದು ವೈದ್ಯರು ಹೇಳುತ್ತಾರೆ. "ಇದಲ್ಲದೆ, ಮಿಲ್ಲೆಟ್ ಮೈಕ್ರೋಬಯೋಮ್‌ನೊಳಗೆ ಪ್ರೋಬಯಾಟಿಕ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ಕರುಳಿನ ಆರೋಗ್ಯ ಮತ್ತು ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಯಲ್ಲಿ ಪಾತ್ರವನ್ನು ವಹಿಸುತ್ತದೆ. ಜೊತೆಗೆ ಹೊಟ್ಟೆಯ ಕೆಲ ಸಮಸ್ಯೆಗಳನ್ನೂ ಸಹ ನಿವಾರಿಸುತ್ತದೆ" ಎಂದು ಡಾ ಸಂಧನ್ ಹೇಳುತ್ತಾರೆ.


ರಾಗಿಯಲ್ಲಿರುವ ಫೈಬರ್ ಅಂಶವು ಜೀರ್ಣಕ್ರಿಯೆಗೆ ಪ್ರಮುಖ ಕೊಡುಗೆಯಾಗಿದ್ದು, ಕರುಳಿನ ಚಲನೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.


ಪ್ರೊಟೀನ್‌ಗಳು, ವಿಟಮಿನ್‌ಗಳು ಮತ್ತು ಖನಿಜಗಳ ಉತ್ತಮ ಮೂಲ ಉತ್ತಮ
ಸಿರಿಧಾನ್ಯಗಳು "ಹೆಚ್ಚಿನ ಪ್ರೋಟೀನ್‌ಗಳು, ವಿಟಮಿನ್ ಎ, ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ನ ಸಮೃದ್ಧ ಮೂಲಗಳಾಗಿದ್ದು, ಪೂರ್ತಿ ಆರೋಗ್ಯಕ್ಕೆ ಸಹಕಾರಿಯಾಗಿದೆ.


ತೂಕ ನಷ್ಟದಲ್ಲಿ ಮಿಲ್ಲೆಟ್‌ ಹೇಗೆ ಕೆಲಸ ಮಾಡುತ್ತದೆ?
ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಿರಿ ಧಾನ್ಯಗಳು ಸಹಾಯ ಮಾಡುತ್ತವೆ. ಏಕೆಂದರೆ ಇವುಗಳಲ್ಲಿ ಕಡಿಮೆ ಕ್ಯಾಲೋರಿಗಳಿವೆ. ಪ್ರತಿ ದಿನವೂ ತಾವು ಸೇವಿಸುತ್ತಿರುವ ಕ್ಯಾಲೋರಿಗಳ ಬಗ್ಗೆ ಹೆಚ್ಚು ಗಮನ ಹೊಂದಿದ ಜನರಿಗೆ ಹೇಳಿ ಮಾಡಿಸಿದ ಆಹಾರಗಳು ಎಂದರೆ ಅದು ಸಿರಿ ಧಾನ್ಯಗಳು ಎಂದು ಹೇಳಬಹುದು. ಇದು ಆರೋಗ್ಯಕರ ಚಯಾಪಚಯಕ್ಕೆ ಸಹಕಾರಿಯಾಗಿದ್ದು, ಅಂತಿಮವಾಗಿ ದೇಹದ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.


ಇದನ್ನೂ ಓದಿ:  Health Tips: ವಯಸ್ಸಾದ ನಂತರ ಕಾಡುವ ಸಾಮಾನ್ಯ ಆರೋಗ್ಯ ಸಮಸ್ಯೆಗಳು ಇವು


ಸಿರಿಧಾನ್ಯಗಳನ್ನು ಆಹಾರದಲ್ಲಿ ಹೇಗೆ ಸೇರಿಸಿಕೊಳ್ಳುವುದು?
ಬಿಳಿ ಅಕ್ಕಿಯ ಬದಲಿಗೆ ಸಿರಿಧಾನ್ಯಗಳನ್ನು ಬಳಸಿ ಇಡ್ಲಿ, ದೋಸೆ, ರೊಟ್ಟಿ ಮಾಡಿಕೊಂಡು ಸೇವಿಸಬಹುದು. ಜೋಳದ ಮೂಲಕ ರೊಟ್ಟಿಯನ್ನು ತಯಾರಿಸಬಹುದು. ಇದು ರುಚಿಕರ ಮತ್ತು ಆರೋಗ್ಯಕರವಾಗಿರುತ್ತದೆ.

Published by:Ashwini Prabhu
First published: