Millets: ಸಿರಿಧಾನ್ಯಗಳಲ್ಲಿ ಔಷಧೀಯ ಗುಣಗಳೂ ಇವೆ, ಯಾವ ಖಾಯಿಲೆಗೆ ಯಾವ ಧಾನ್ಯ? ಫುಲ್ ಡೀಟೆಲ್ಸ್

ಸಿರಿಧಾನ್ಯ ತಿನ್ನಿ ಖಾಯಿಲೆ ಓಡಿಸಿ.. ಇಲ್ಲಿದೆ ಸಿರಿಧಾನ್ಯಗಳ ಗುಟ್ಟು! ಅಡುಗೆಯಲ್ಲಿ ನವಣೆ, ಸಜ್ಜೆ ಬಳಸಿ ಶುಗರ್ ಓಡಿಸಿ, ನಿತ್ಯ ಸಿರಿಧಾನ್ಯ ಸೇವಿಸಿ ಖಾಯಿಲೆಯಿಂದ ದೂರವಿರಿ

ಸಿರಿಧಾನ್ಯಗಳು

ಸಿರಿಧಾನ್ಯಗಳು

  • Share this:
ಜನರ ಜೀವನಶೈಲಿ ಬದಲಾಗುತ್ತಿದ್ದಂತೆ ಸಾಂಪ್ರದಾಯಿಕ (traditional food) ಹಾಗೂ ಆರೋಗ್ಯಕರ ಅಡುಗೆ ತಿನ್ನಿಸುಗಳು ಮರೆತೇ ಹೋಗಿವೆ. ಇನ್ನು ಸಿರಿಧಾನ್ಯಗಳ ಬಳಕೆಯಂತೂ ತೀರ ಕಡಿಮೆ. ಆದ್ರೆ ಸಿರಿಧಾನ್ಯಗಳ ಪ್ರಯೋಜನ ಗೊತ್ತಾದ್ರೆ ನೀವು ಪ್ರತಿನಿತ್ಯ ಅಡುಗೆಯಲ್ಲಿ ಸಿರಿಧಾನ್ಯ (Millets)ಬಳಸೋದನ್ನ ಮಿಸ್ ಮಾಡಲ್ಲ. ನಮ್ಮ ರಾಜ್ಯದಲ್ಲಿ ರಾಗಿ, ಸಜ್ಜೆ, ನವಣೆ ಬರಗು ಸಾಮೆ, ಊದಲು, ಆರ್ಕ, ಕೊರಲೆ ಸಿರಿಧಾನ್ಯಗಳನ್ನ ನೋಡಬಹುದು. ಆದ್ರೆ ಇವುಗಳಲ್ಲಿ ನಾವು ಹೆಚ್ಚಾಗಿ ಬಳಸೋದು ರಾಗಿ (Ragi) ಮತ್ತು ಜೋಳ ಮಾತ್ರ ಇನ್ನುಳಿದ ಧಾನ್ಯಗಳನ್ನ (Grains) ಉಪಯೋಗಿಸೋದು ತೀರ ಕಡಿಮೆ. ನಮ್ಮ ಹಿರೀಕರು ಹೆಚ್ಚಾಗಿ ಬೆಳೆಯುತ್ತಿದ್ದುದು ಹಾಗೂ ತಿನ್ನುತ್ತಿದ್ದ ಊಟವೆಲ್ಲಾ ಸಿರಿಧಾನ್ಯಗಳಿಂದ ಕೂಡಿದ್ದವು. ಆಗಾಗಿ ನಮ್ಮ ಹಿರಿಯರು ಯಾವುದೇ ಖಾಯಿಲೆಗಳಿಲ್ಲದೆ ದೀರ್ಘಾಯುಷಿಗಳಾಗಿದ್ದರು (long life).

ಪ್ರತಿನಿತ್ಯದ ಅಡುಗೆಯಲ್ಲಿರಲಿ ಸಿರಿಧಾನ್ಯ

ನಾವು ನಿತ್ಯ ಬಳಸುವ ಅಕ್ಕಿ, ಗೋಧಿಗಿಂತ ಸಿರಿಧಾನ್ಯಗಳಲ್ಲಿ ಹೆಚ್ಚಿನ ಪ್ರೋಟಿನ್, ವಿಟಮಿನ್, ನಾರಿನಾಂಶ, ಖನಿಜ ಹಾಗೂ ಉತ್ತಮ ಕೊಲೆಸ್ಟ್ರಾಲ್ ಒಳಗೊಂಡಿದೆ. ಸಕ್ಕರೆ ಖಾಯಿಲೆ, ಅಧಿಕ ರಕ್ತದೊತ್ತಡ, ಬೊಜ್ಜು, ಕ್ಯಾನ್ಸರ್ ನಂತಹ ರೋಗಗಳನ್ನು ತಡೆಯಲು ಸಿರಿಧಾನ್ಯ ರಾಮಬಾಣವಾಗಿದೆ. ಆದ್ದರಿಂದ ಅಕ್ಕಿ ಬಳಸಿದಂತೆಯೇ ಇವುಗಳನ್ನೂ ಬಳಸಿ ಊಟ ಮಾಡಬಹುದು.

ರಾಗಿ ತಿಂದವ ನಿರೋಗಿ

ರಾಗಿ ತಿಂದವ ನಿರೋಗಿ ಅನ್ನೋ ಹಿರಿಯ ಮಾತು ಅಕ್ಷರಸಃ ಸತ್ಯ. ರಾಗಿ ಮನುಷ್ಯನನ್ನು ಗಟ್ಟಿ ಜೀವಿ ಮಾಡುವ ಗುಣ ಹೊಂದಿದೆ. ರಾಗಿ ಅತಿ ಕಡಿಮೆ ಕೊಬ್ಬಿನಾಂಶವನ್ನು ಹೊಂದಿದೆ. ಅತಿಯಾದ ಬೊಜ್ಜಿನಿಂದ ಬಳಲುತ್ತಿರುವವರು ಆಹಾರದಲ್ಲಿ ರಾಗಿ ಬಳಸೋದು ಉತ್ತಮ. ಮುದ್ದೆ, ಗಂಜಿ, ಅಂಬಲಿ, ಮಣ್ಣಿ ಹೀಗೆ ರಾಗಿಯಿಂದ ನಾನಾ ತಿಂಡಿ ಅಡುಗೆಗಳನ್ನು ನಮ್ಮ ಹಿರಿಯರು ಬಳಸುತ್ತಲೇ ಇದ್ದರು.

ಇದನ್ನೂ ಓದಿ: Weight Loss Tips: ತೂಕ ಇಳಿಸಿಕೊಳ್ಳಬೇಕೆ ಹಾಗಿದ್ರೆ ನಿಮ್ಮ ದಿನನಿತ್ಯದ ಆಹಾರದಲ್ಲಿ ಇರಲಿ ಸಿರಿಧಾನ್ಯ

ಮಧುಮೇಹಿಗಳಿಗೆ ಸಿರಿಧಾನ್ಯವೇ ಮದ್ದು

ಇತ್ತೀಚಿನ ದಿನಗಳಲ್ಲಿ ಸಣ್ಣ ವಯಸ್ಸಿನಲ್ಲಿಯೇ ಅನೇಕರು ಡಯಾಬಿಟಿಸ್ ನಿಂದ ನರಳುತ್ತಿದ್ದಾರೆ. ಜನರಲ್ಲಿ ಗ್ಲೂಕೋಸ್ ಮಟ್ಟ ಹೆಚ್ಚಾಗುತ್ತಿದ್ದು ಮಧುಮೇಹಿಗಳ ಸಂಖ್ಯೆಯು ಹೆಚ್ಚುತ್ತಲೇ ಇದೆ. ಸಕ್ಕರೆ ಖಾಯಿಲೆಗೆ ಗುಡ್ ಬಾಯ್ ಹೇಳಲು ಆಹಾರದಲ್ಲಿ ಹೆಚ್ಚಾಗಿ ರಾಗಿ ಬಳಕೆ ಮಾಡಿ. ನವಣೆ ಆಹಾರ ಸಕ್ಕರೆ ರೋಗಿಗಳಿಗೆ ಅವಶ್ಯಕವಾಗಿದೆ. ಸಾಮೆ ಉಪಯೋಗಿಸುವುದು ಸಹ ಉತ್ತಮ ಇದರಲ್ಲಿ ಅಧಿಕ ಕಬ್ಬಿಣಾಂಶವಿದೆ. ರಕ್ತಹೀನತೆಯಿಂದ ಬಳಲುತ್ತಿರುವವರಿಗೆ ಹೆಚ್ಚುಸಹಕಾರಿ ಆಗಿದೆ.

ಹೃದಯ ಸಮಸ್ಯೆಗೆ ಹೇಳಿ ಗುಡ್ ಬೈ!

ಅಧಿಕ ರಕ್ತದೊತ್ತಡ ಹಾಗೂ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳಿಂದ ಬಳಲುತ್ತಿರುವವರು ದಿನ ನಿತ್ಯ ಸಿರಿಧಾನ್ಯಗಳ ಸೇವನೆಗೆ ಮುಂದಾದರೆ ಸಮಸ್ಯೆಗಳಿಂದ ಸುಲಭವಾಗಿ ಪಾರಾಗಬಹುದು. ದೇಹಕ್ಕೆ ಅಗತ್ಯವಾಗಿರೋ ಪ್ರೊಟೀನ್, ಪೌಷ್ಟಿಕಾಂಶ ಖನಿಜಾಂಶಗಳು ಲಭ್ಯವಾಗಿ ಆರೋಗ್ಯಕರ ಜೀವನ ಶೈಲಿ ನಿಮ್ಮದಾಗುತ್ತದೆ. ಅಲ್ಲದೇ ಹೃದಯ ರಕ್ತನಾಳದ ಕಾಯಿಲೆಗಳ ಮೇಲೆ ಪರಿಣಾಮ ಬೀರುವ ಅಂಶಗಳ ಮೇಲೆ ಹತ್ತಾರು ಅಧ್ಯಯನ ನಡೆಸಲಾಗಿದೆ. ಸಿರಿಧಾನ್ಯಗಳ ನಿಯಮಿತ ಬಳಕೆಯು ಹೃದಯ ಸಂಬಂಧಿ ಕಾಯಿಲೆಯಿಂದ ದೂರವಿಡಲಿದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಇದನ್ನೂ ಓದಿ: ಸಿರಿಧಾನ್ಯಗಳನ್ನು ಕಷ್ಟಪಟ್ಟು ಸೇವಿಸುತ್ತೀರಾ: ಸುಲಭವಾಗಿ ಇಷ್ಟಪಟ್ಟು ತಿನ್ನುವುದು ಹೀಗೆ..!

ರೋಗನಿರೋಧಕ ಶಕ್ತಿ ಹೆಚ್ಚಳ

ರೋಗನಿರೋಧಕ ಶಕ್ತಿ ಕಡಿಮೆಯಾದ್ರೆ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರೋದು ಗ್ಯಾರೆಂಟಿ. ಇದಕ್ಕೆ ಮುಖ್ಯ ಕಾರಣ ದೇಹದಲ್ಲಿ ಪ್ರೋಟಿನ್ ಅಂಶದ ಕೊರತೆ, ಸಿರಿಧಾನ್ಯಗಳ ನಿತ್ಯ ಸೇವನೆಯಿಂದ ದೇಹಕ್ಕೆ ಅಗತ್ಯವಾಗಿರೋ ಪ್ರೋಟಿನ್ ಅಂಶಗಳು ದೊರೆಯಲಿವೆ. ದೇಹ ಸದೃಢವಾಗಿದ್ದರೆ ಎಂತಹ ಕಾಯಿಲೆ ವಿರುದ್ಧವಾದ್ರು ಹೋರಾಡುವ ಶಕ್ತಿ ಹೊಂದಿರುತ್ತಾನೆ. ಪ್ರಪಂಚದಾದ್ಯಂತ ಸುಮಾರು 6,000 ವಿಧದ ಸಿರಿಧಾನ್ಯಗಳಿವೆ. ವೈದ್ಯರ ಪ್ರಕಾರ ಸಿರಿಧಾನ್ಯ ಜೀರ್ಣಕ್ರಿಯೆಯನ್ನು ಬೆಂಬಲಿಸುತ್ತದೆ. ಹಸಿವನ್ನು ಸುಧಾರಿಸಿ ಹೊಟ್ಟೆಯನ್ನು ಸಮಾಧಾನಗೊಳಿಸಿ ನಿದ್ರೆಯನ್ನು ಶಾಂತಗೊಳಿಸುವ ಶಕ್ತಿ ಹೊಂದಿದೆಯಂತೆ. ಹೀಗಾಗಿ ನಿಮ್ಮ ದೈನಂದಿನ ಆಹಾರದಲ್ಲಿ ಸಿರಿಧಾನ್ಯ ಬಳಸಿ ಆರೋಗ್ಯ ಕಾಪಾಡಿಕೊಳ್ಳಿ.
Published by:Soumya KN
First published: