ದೇಶ ಕಾಯುವ ಯೋಧರ ನೆಚ್ಚಿನ ಆಹಾರ ಯಾವುದು ಗೊತ್ತೇ..?

ಮೈಸೂರಿನ ಸಿಎಫ್​​ಟಿಆರ್​​ಐ ಸಂಸ್ಥೆಯು ರಕ್ಷಣಾ ಇಲಾಖೆ ಮೂಲಕ ಯೋಧರಿಗೆ ಸೂಕ್ತವಾಗುವ ಸಿರಿಧಾನ್ಯ ಆಹಾರಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದೆ.

Latha CG | news18
Updated:January 26, 2019, 5:54 PM IST
ದೇಶ ಕಾಯುವ ಯೋಧರ ನೆಚ್ಚಿನ ಆಹಾರ ಯಾವುದು ಗೊತ್ತೇ..?
ಸಾಂದರ್ಭಿಕ ಚಿತ್ರ
  • News18
  • Last Updated: January 26, 2019, 5:54 PM IST
  • Share this:
ಸೌಮ್ಯ ಕಳಸ

ಬೆಂಗಳೂರು,(ಜ.26): ಇತ್ತೀಚಿನ ದಿನಗಳಲ್ಲಿ ಮಿಲೆಟ್ಸ್​ ಅಥವಾ ಸಿರಿಧಾನ್ಯ ಎಲ್ಲರ ನೆಚ್ಚಿನ ಆಹಾರವಾಗಿ ಬದಲಾಗುತ್ತಿದೆ. ಈ ಸಿರಿಧಾನ್ಯಗಳು ಕೇವಲ ಸಾಮಾನ್ಯ ಜನರಿಗೆ ಮಾತ್ರವಲ್ಲ, ದೇಶ ಕಾಯುವ ವೀರ ಯೋಧರಿಗೂ ಸಿಕ್ಕಾಪಟ್ಟೆ ಇಷ್ಟವಂತೆ. ಸೈನಿಕರಿಗೆ ಕೊಡುವ ಆಹಾರದಲ್ಲಿ ಹೆಚ್ಚಾಗಿ ಸಿರಿಧಾನ್ಯಗಳನ್ನೇ ಬಳಸಲಾಗುತ್ತಿದೆ.

ಮಳೆ, ಚಳಿ, ಬಿಸಿಲು ಎನ್ನದೇ ಗಡಿ ಕಾಯುವ ಸೈನಿಕರಿಗೆ ಉತ್ತಮ ಆಹಾರದ ಅವಶ್ಯಕತೆಯೂ ಸಹ ಇದೆ. ಹೀಗಾಗಿ ಮೈಸೂರಿನ ಸಿಎಫ್​​ಟಿಆರ್​​ಐ ಸಂಸ್ಥೆಯು ರಕ್ಷಣಾ ಇಲಾಖೆ ಮೂಲಕ ಯೋಧರಿಗೆ ಸೂಕ್ತವಾಗುವ ಸಿರಿಧಾನ್ಯ ಆಹಾರಗಳನ್ನು ತಯಾರಿಸಿ ಸರಬರಾಜು ಮಾಡುತ್ತಿದೆ. 

ಭೂಸೇನೆಗೆ ಒಂದು ಬಗೆ, ವಾಯುಸೇನೆಗೆ ಮತ್ತೊಂದು ವಿಧ, ನೌಕಾದಳಕ್ಕೆ ಇನ್ನೊಂದು ಬಗೆ.. ಹೀಗೆ ಪ್ರತಿಯೊಂದು ವಿಭಾಗಕ್ಕೂ ಬೇರೆ ಬೇರೆ ರೀತಿಯ ಆಹಾರ ಪೊಟ್ಟಣಗಳನ್ನು ಸಿಎಫ್​​ಟಿಆರ್​​ಐ ಸರಬರಾಜು ಮಾಡುತ್ತೆ. ಒಂದು ಬಾಕ್ಸ್​ನಲ್ಲಿ ಒಬ್ಬ ಯೋಧನಿಗೆ ಒಂದಿಡೀ ದಿನಕ್ಕೆ ಬೇಕಾಗುವಷ್ಟು ಆಹಾರವನ್ನು ಇರಿಸಲಾಗಿರುತ್ತದೆ.

ಸಿಎಫ್​ಟಿಆರ್​ಐ ಈ ಎಲ್ಲಾ ಆಹಾರಗಳಲ್ಲೂ ಹೆಚ್ಚಾಗಿ ಸಿರಿಧಾನ್ಯಗಳನ್ನೇ ಬಳಸುತ್ತಿದೆ. ಇದಕ್ಕೆ ಕಾರಣ ಸಿರಿಧಾನ್ಯಗಳಲ್ಲಿ ಹೆಚ್ಚು ಕ್ಯಾಲ್ಶಿಯಂ ಇರುತ್ತೆ. ಜೊತೆಗೆ ಅವು ಅಗತ್ಯವಿರುವ ಕ್ಯಾಲೋರಿಗಳನ್ನು ಸ್ವಲ್ಪ ಪ್ರಮಾಣದಲ್ಲೇ ನೀಡಲಬಲ್ಲವು. ಹಾಗಾಗಿ ರಾಗಿ ಫ್ಲೇಕ್ಸ್, ರಾಗಿ ಚಪಾತಿ, ಸೂಜಿ ಮಿಕ್ಸ್... ಹೀಗೆ ಸಿರಿಧಾನ್ಯಗಳನ್ನು ಬಳಸಿ ತಯಾರಿಸಿದ ನಾನಾ ಬಗೆಯ ಆಹಾರಗಳನ್ನು ಯೋಧರಿಗೆ ಕಳಿಸಲಾಗುತ್ತದೆ.

ಇದನ್ನೂ ಓದಿ: ಈ ಕಂಪನಿಗಳಲ್ಲಿ ಡೇಟಿಂಗ್ ಹೋಗಲೂ ಸಿಗುತ್ತೆ ರಜೆ!

ಬಹಳ ಸಿಂಪಲ್ ಆಹಾರ ಎಂದೇ ಖ್ಯಾತಿ ಹೊಂದಿರುವ ಸಿರಿಧಾನ್ಯಗಳು ಅದೆಷ್ಟು ಉತ್ತಮ ಎನ್ನುವುದು ಇದರಿಂದ ಗೊತ್ತಾಗುತ್ತದೆ. ಯೋಧರಿಗೆ ಯಾವಾಗಲೂ ಅತ್ಯುತ್ತಮ ಗುಣಮಟ್ಟದ ಆಹಾರವನ್ನೇ ನೀಡಲಾಗುತ್ತದೆ. ಅವರಿಗೂ ಹೆಚ್ಚು ಮಿಲೆಟ್ಸ್ ಕೊಡಲಾಗುತ್ತದೆ ಎಂದರೆ ಇದು ಅದೆಷ್ಟು ಪೌಷ್ಟಿಕಾಂಶಯುಕ್ತ ಎನ್ನುವುದನ್ನು ತಿಳಿಯಬಹುದಾಗಿದೆ.

First published:January 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading