ಬೆಳ್ಳಗೆ ಎದ್ದ ತಕ್ಷಣ ಅನೇಕರಿಗೆ ಚಹಾ ಇರಲೇಬೇಕು. ಹಾಗೆ ಚಹಾ ಕುಡಿದರೇನೇ ಅವರಿಗೆ ದಿನ ಆರಂಭವಾಗೋದು. ಅನೇಕರಿಗೆ ಇಂಥದದ್ದೊಂದು ಅಭ್ಯಾಸ ಇರುತ್ತದೆ. ಆದ್ರೆ ಇದು ಆರೋಗ್ಯದ ಮೇಲೆ ಏನು ಪರಿಣಾಮ ಬೀರಬಹುದು ಅನ್ನೋದನ್ನು ಎಂದಾದರೂ ಯೋಚಿಸಿದ್ದೀರಾ? ಹಾಲಿನ ಚಹಾದ ಕಪ್ ಜೊತೆ ದಿನವನ್ನು ಆರಂಭಿಸೋದು ಎಷ್ಟು ಚೆನ್ನಾಗಿರುತ್ತೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ ಇದರಿಂದ ಆರೋಗ್ಯದ ಮೇಲೆ ಸಾಕಷ್ಟು ಅಡ್ಡ ಪರಿಣಾಮಗಳೂ ಇವೆ ಅನ್ನೋದನ್ನ ಮರೆಯಬೇಡಿ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ಹಾಲಿನ ಚಹಾ ಸೇವಿಸಿದರೆ ಸಾಕಷ್ಟು ಆರೋಗ್ಯ ತೊಂದರೆಗಳು ಉಂಟಾಗಬಹುದು. ಆ ಸಮಸ್ಯೆಗಳು ಯಾವುವು ಎಂಬುದು ಇಲ್ಲಿದೆ
ಹಾಲಿನ ಚಹಾದ ಅಡ್ಡ ಪರಿಣಾಮಗಳು
ಚಹಾ ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದು. ಆದ್ರೆ ಹಾಲು ಮತ್ತು ಸಕ್ಕರೆ ಸೇರಿಸಿದ ಚಹಾ ನಿಮಗೆ ಆರೋಗ್ಯದ ಸಮಸ್ಯೆಗಳನ್ನು ಉಂಟುಮಾಡಬಹುದು ಎಂಬುದಾಗಿ ತಜ್ಞರು ಹೇಳುತ್ತಾರೆ.
ಹೊಟ್ಟೆ ಉಬ್ಬರಿಸುವುದು: ಹಾಲಿನ ಚಹಾವನ್ನು ಹೆಚ್ಚು ಕುಡಿಯುವುದರಿಂದ ನಿಮಗೆ ಹೊಟ್ಟೆ ಉಬ್ಬರಿಸಿದಂಥ ಅನುಭವವಾಗಬಹುದು. ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ. ಅದು ಹೊಟ್ಟೆಯನ್ನು ಉಬ್ಬುವಂತೆ ಮಾಡುತ್ತದೆ. ಈ ಪಾನೀಯಕ್ಕೆ ಹಾಲನ್ನು ಸೇರಿಸಿದಾಗ, ಎರಡು ಅನಿಲ ಉತ್ಪಾದನೆ ಆಗುತ್ತದೆ. ಚಹಾದಲ್ಲಿ ಕಂಡುಬರುವ ಟ್ಯಾನಿನ್‌ಗಳು ಜೀರ್ಣಾಂಗ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ. ಜೊತೆಗೆ ಹೊಟ್ಟೆ ನೋವನ್ನೂ ಕೂಡ ಉಂಟುಮಾಡಬಹುದು.
ಮಲಬದ್ಧತೆ: ಚಹಾವು ಕೆಫೀನ್ ಜೊತೆಗೆ ಥಿಯೋಫಿಲಿನ್ ಕೂಡ ಒಳಗೊಂಡಿದೆ. ಚಹಾದ ಹೆಚ್ಚಿನ ಸೇವನೆಯು ದೇಹವು ಒಣಗುವಂತೆ ಮಾಡುತ್ತದೆ ಮತ್ತು ನಿರ್ಜಲೀಕರಣಗೊಳಿಸುತ್ತದೆ. ಇದರಿಂದಾಗಿ ಗಂಭೀರವಾದ ಮಲಬದ್ಧತೆ ಸಮಸ್ಯೆ ಉಂಟಾಗುವ ಸಾಧ್ಯತೆಗಳಿರುತ್ತವೆ.
ಆತಂಕ: ನೀವು ಆತಂಕದಿಂದ ಬಳಲುತ್ತಿದ್ದರೆ ಆಗಾಗ ಟೀ ಕುಡಿಯುವುದನ್ನು ನಿಲ್ಲಿಸಿ. ಪಾನೀಯವು ವಾಸ್ತವವಾಗಿ ಈ ಸ್ಥಿತಿಯ ಲಕ್ಷಣಗಳನ್ನು ಪ್ರಚೋದಿಸುತ್ತದೆ. ಇದನ್ನು ನೀವು ಕಡಿಮೆ ಮಾಡಿಕೊಳ್ಳಲು ಯತ್ನಿಸುತ್ತಿದ್ದರೆ ಅದನ್ನು ಚಹಾ ಇನ್ನಷ್ಟು ಹದಗೆಡಿಸಬಹುದು.
ನಿದ್ರಾಹೀನತೆ: ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ ಅನ್ನೋದು ತಿಳಿದಿರುವ ವಿಷಯ. ಇದು ನಿಮ್ಮ ನಿದ್ರೆಯ ಚಕ್ರವನ್ನು ಅಡ್ಡಿಪಡಿಸುತ್ತದೆ. ಹಾಗಾಗಿ ನಿದ್ರಾಹೀನತೆಯನ್ನು ಉಂಟುಮಾಡುತ್ತದೆ. ನೀವು ಈಗಾಗಲೇ ನಿದ್ರಾಹೀನತೆಯಿಂದ ಬಳಲುತ್ತಿದ್ದರೆ ಹಾಲಿನ ಚಹಾ ಕುಡಿಯೋದನ್ನು ನಿಲ್ಲಿಸಿ.
ಇದನ್ನೂ ಓದಿ: ಈ ಆರೋಗ್ಯಕರ ಆಹಾರಗಳು ನಿಮ್ಮ ಪ್ರತಿದಿನದ ಡಯೆಟ್ನಲ್ಲಿ ಇರಲೇಬೇಕು
ರಕ್ತದೊತ್ತಡದ ಅಸಮತೋಲನ: ರಕ್ತದೊತ್ತಡವು ಹಲವಾರು ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಧಿಕ ರಕ್ತದೊತ್ತಡವು ಹೃದಯದ ಸಮಸ್ಯೆಗಳನ್ನು ಹೆಚ್ಚು ಮಾಡುತ್ತದೆ. ಅತಿಯಾದ ಹಾಲಿನ ಚಹಾ ಕುಡಿಯುವುದರಿಂದ ರಕ್ತದೊತ್ತಡದ ಅಸಮತೋಲನ ಉಂಟಾಗುತ್ತದೆ. ಆದ್ದರಿಂದ ಈಗಾಗಲೇ ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರು ಹೆಚ್ಚಿನ ಪ್ರಮಾಣದಲ್ಲಿ ಹಾಲಿನ ಚಹಾವನ್ನು ಸೇವಿಸುತ್ತಿದ್ದರೆ ಅದನ್ನು ಈಗಲೇ ನಿಲ್ಲಿಸಿ.
ನಿರ್ಜಲೀಕರಣ: ಹಾಲಿನ ಚಹಾದ ಅತ್ಯಂತ ಅಪಾಯಕಾರಿ ಅಡ್ಡಪರಿಣಾಮವೆಂದರೆ ಅದು ನಿರ್ಜಲೀಕರಣವನ್ನು ಉತ್ತೇಜಿಸುತ್ತದೆ. ಡಿಹೈಡ್ರೇಶನ್ ಅನ್ನೋದು ಪ್ರಾಥಮಿಕವಾಗಿ ಕೆಫೀನ್ ಅಂಶದಿಂದಾಗಿ ಸಂಭವಿಸುತ್ತದೆ. ಆದ್ದರಿಂದ, ಖಾಲಿ ಹೊಟ್ಟೆಯಲ್ಲಿ ಹಾಲಿನ ಚಹಾವನ್ನು ಕುಡಿಯಬೇಡಿ.
ತಲೆನೋವು: ಹಾಲಿನ ಚಹಾವನ್ನು ಹೆಚ್ಚು ಸೇವಿಸೋದ್ರಿಂದ ನಿರ್ಜಲೀಕರಣಕ್ಕೆ ಕಾರಣವಾಗಿ ತಲೆನೋವಿಗೂ ಇದು ಕಾರಣವಾಗುತ್ತದೆ. ಆದ್ದರಿಂದ, ಹಾಲು ಮತ್ತು ಸಕ್ಕರೆಯೊಂದಿಗೆ ಹೆಚ್ಚು ಚಹಾವನ್ನು ಕುಡಿಯುವುದನ್ನು ಆದಷ್ಟೂ ತಡೆಯಿರಿ.
ಇದನ್ನೂ ಓದಿ: ಮೈ-ಕೈ ನೋವನ್ನು ಕಡಿಮೆ ಮಾಡುವ ಪೋಷಕಾಂಶ ಭರಿತ ಆಹಾರಗಳಿವು
ಕೆಲವೊಮ್ಮೆ ಕೆಲವೊಂದು ಅಭ್ಯಾಸಗಳು ನಮಗೆ ಇಷ್ಟದ್ದಾಗಿದ್ದರೂ ಅದು ಆರೋಗ್ಯದ ಮೇಲೆ ಬೀರುವ ಅಡ್ಡ ಪರಿಣಾಮಗಳಿಂದ ನಾವು ಅಂಥ ಅಭ್ಯಾಸಗಳನ್ನು ಬಿಡಲೇಬೇಕಾಗುತ್ತದೆ. ಸ್ವಲ್ಪ ದಿನ ಕಷ್ಟ ಪಟ್ಟು ಕಡಿಮೆ ಮಾಡಿದರೆ ಅದು ತನ್ನಿಂದ ತಾನೇ ಬಿಟ್ಟು ಹೋಗುತ್ತದೆ. ಆದ್ರೆ ಇಂಥ ಅಭ್ಯಾಸಗಳನ್ನು ಬಿಡುವಲ್ಲಿ ಪ್ರಯತ್ನ ಮುಖ್ಯ. ಒಮ್ಮೆ ಕಷ್ಟಪಟ್ಟು ಕಡಿಮೆ ಮಾಡಿದರೆ ಬಿಟ್ಟೇ ಬಿಡಬಹುದು ಅಂದುಕೊಂಡು ಪ್ರಯತ್ನಿಸಿ. ಖಂಡಿತಾ ಸಾಧ್ಯವಾಗುತ್ತದೆ. ಎಲ್ಲದಕ್ಕಿಂತ ಆರೋಗ್ಯ ದೊಡ್ಡದು ಅಲ್ಲವೇ?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ