HOME » NEWS » Lifestyle » MILK AND HONEY ARE VERY BENEFICIAL FOR HEALTH ZP

Health Tips: ಜೇನು ಬೆರೆಸಿದ ಹಾಲು ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನಗಳು

ನಿಯಮಿತವಾಗಿ ಹಾಲು ಮತ್ತು ಜೇನು ಬೆರೆಸಿ ಕುಡಿದರೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ದೇಹಕ್ಕೆ ಚೈತನ್ಯ ನೀಡುತ್ತದೆ ಮತ್ತು ಮೆದುಳನ್ನು ಚುರುಕುಗೊಳಿಸುತ್ತದೆ.

news18-kannada
Updated:March 2, 2021, 7:20 AM IST
Health Tips: ಜೇನು ಬೆರೆಸಿದ ಹಾಲು ಕುಡಿಯುವುದರಿಂದ ಸಿಗುತ್ತೆ ಅದ್ಭುತ ಪ್ರಯೋಜನಗಳು
ಸಾಂದರ್ಭಿಕ ಚಿತ್ರ
  • Share this:
ಹಾಲು ಮತ್ತು ಜೇನುತುಪ್ಪದ ಸೇವನೆಯು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ 'ಎ', 'ಬಿ' ಮತ್ತು 'ಡಿ' ಜೊತೆಗೆ ಲ್ಯಾಕ್ಟಿಕ್ ಆಮ್ಲವಿದೆ. ಹಾಗೆಯೇ ಜೇನುತುಪ್ಪವು ಕಬ್ಬಿಣ, ಕ್ಯಾಲ್ಸಿಯಂ, ಫಾಸ್ಫೇಟ್, ಗ್ಲೂಕೋಸ್, ಸೋಡಿಯಂ, ಕ್ಲೋರಿನ್, ಪೊಟ್ಯಾಸಿಯಮ್ ಮುಂತಾದ ಅನೇಕ ಅಂಶಗಳನ್ನು ಹೊಂದಿರುತ್ತದೆ. ಇದು ಉತ್ಕರ್ಷಣ ನಿರೋಧಕ, ಅ್ಯಂಟಿಫಂಗಲ್ ಅಂಶಗಳನ್ನು ಒಳಗೊಂಡಿರುತ್ತವೆ. ಹೀಗಾಗಿ ಈ ಎರಡು ಆಹಾರವನ್ನು ಜೊತೆಯಾಗಿ ಸೇವಿಸುವುದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಅಂತಹ ಕೆಲ ಪ್ರಯೋಜನಗಳ ಬಗ್ಗೆ ಇಲ್ಲಿ ತಿಳಿಸಲಾಗಿದೆ.

- ಬಿಸಿ ಹಾಲಿನೊಂದಿಗೆ ಜೇನುತುಪ್ಪವನ್ನು ಬೆರೆಸುವುದರಿಂದ ಒತ್ತಡ ಕಡಿಮೆಯಾಗುತ್ತದೆ. ಇದು ನರಮಂಡಲ ಮತ್ತು ನರ ಕೋಶಗಳನ್ನು ಸಹ ಸಡಿಲಗೊಳಿಸುತ್ತದೆ.

- ಹಾಲು ಮತ್ತು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಪುರುಷರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.

- ಮಲಗುವ ಒಂದು ಗಂಟೆ ಮೊದಲು, ಪ್ರತಿ ರಾತ್ರಿ ಹಾಲಿನೊಂದಿಗೆ ಜೇನುತುಪ್ಪವನ್ನು ಸೇವಿಸುವುದರಿಂದ ಉತ್ತಮ ನಿದ್ರೆ ಪಡೆಯಬಹುದು. ಹಾಗೆಯೇ ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ.

-ಹಾಲನ್ನು ಜೇನುತುಪ್ಪದಿಂದ ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಅಲ್ಲದೆ, ಮೂಳೆಗಳಿಗೆ ಸಂಬಂಧಿಸಿದ ಇತರ ಸಮಸ್ಯೆಗಳೂ ಕಡಿಮೆಯಾಗುತ್ತವೆ.

- ನಿಯಮಿತವಾಗಿ ಹಾಲು ಮತ್ತು ಜೇನು ಬೆರೆಸಿ ಕುಡಿದರೆ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ದೇಹಕ್ಕೆ ಚೈತನ್ಯ ನೀಡುತ್ತದೆ ಮತ್ತು ಮೆದುಳನ್ನು ಕ್ರೀಯಾಶೀಲವಾಗಿಸುತ್ತದೆ.

- ಜೀರ್ಣಕಾರಿ ಚಟುವಟಿಕೆಯನ್ನು ಉತ್ತಮವಾಗಿಡಲು, ನೀವು ಬಿಸಿ ಹಾಲಿಗೆ ಜೇನುತುಪ್ಪವನ್ನು ಸೇರಿಸಿ ಸೇವಿಸಬಹುದು. ಇದು ಮಲಬದ್ಧತೆಗೆ ಸಮಸ್ಯೆಯನ್ನೂ ದೂರ ಮಾಡುತ್ತದೆ.- ಜೇನುತುಪ್ಪ ಮತ್ತು ಹಾಲಿನ ಸೇವನೆಯು ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ. ಅದರೊಂದಿಗೆ ಕಫ, ಅಧಿಕ ರಕ್ತದೊತ್ತಡ ಮತ್ತು ಆಸ್ತಮಾವನ್ನು ಕಡಿಮೆ ಮಾಡುತ್ತದೆ.

- ಹಾಲಿಗೆ ಜೇನುತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಎಂಬ ಹಾರ್ಮೋನ್ ಹೆಚ್ಚಾಗುತ್ತದೆ. ಇದು ಪುರುಷತ್ವದ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

- ಹಾಲು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಬೆರೆಸುವ ಮೂಲಕ ಪುರುಷರ ಸ್ಟೆಮಿನಾ ಕೂಡ ಹೆಚ್ಚಾಗುತ್ತದೆ. ಇದರಿಂದ ಲೈಂಗಿಕ ದೌರ್ಬಲ್ಯಗಳು ದೂರವಾಗುತ್ತವೆ.
Published by: zahir
First published: March 2, 2021, 7:20 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories