• Home
  • »
  • News
  • »
  • lifestyle
  • »
  • Mid Night Snack: ಮಧ್ಯರಾತ್ರಿ ತಿನ್ನುವ ಬಯಕೆಯಿಂದ ತೂಕ ಹೆಚ್ಚುತ್ತದೆ ಎಚ್ಚರ!

Mid Night Snack: ಮಧ್ಯರಾತ್ರಿ ತಿನ್ನುವ ಬಯಕೆಯಿಂದ ತೂಕ ಹೆಚ್ಚುತ್ತದೆ ಎಚ್ಚರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮಧ್ಯರಾತ್ರಿ ತಿಂಡಿ ಸೇವನೆ ಮಾಡುವುದು ಹಾಗೂ ಇದರ ನಿಯಮಿತ ಅಭ್ಯಾಸವು ನಿಮ್ಮ ತೂಕವನ್ನು ಎಲ್ಲಾ ರೀತಿಯಲ್ಲಿ ಹೆಚ್ಚಿಸುತ್ತದೆ. ಅದು ಆರೋಗ್ಯಕರವಾಗಿರಲಿ ಅಥವಾ ಅನಾರೋಗ್ಯಕರವಾಗಿರಲಿ. ಆರೋಗ್ಯಕರ ತಿಂಡಿಗಳು ನಿಮ್ಮ ಮಧ್ಯರಾತ್ರಿಯ ಕಡುಬಯಕೆ ತಣಿಸಬಹುದು. ಆದರೆ ರಾತ್ರಿ ಸೇವನೆ ತೂಕ ಹೆಚ್ಚಿಸಬಹುದು.

ಮುಂದೆ ಓದಿ ...
  • Share this:

    ದಿನವಿಡೀ (Throughout Day) ಕೆಲಸದ ಜಂಜಾಟದಿಂದ ರಾತ್ರಿ ಆಯಾಸವಾಗುವುದು (Night Tiredness) ಸಾಮಾನ್ಯ. ಯಾವಾಗ ಹಾಸಿಗೆಯಲ್ಲಿ ಒರಗುತ್ತೇವೆಯೋ, ನಿದ್ದೆ (Sleeping) ಮಾಡುತ್ತೇವೆಯೋ ಎಂದು ಅನ್ನಿಸುತ್ತದೆ. ಬೆಳಿಗ್ಗೆಯಿಂದ (Morning) ಸಂಜೆಯವರೆಗಿನ ಕೆಲಸ, ಓಡಾಟದಿಂದ ದೇಹ (Body) ದಣಿಯುತ್ತದೆ. ಹೀಗಾಗಿ ರಾತ್ರಿಯಾಗುತ್ತಿದ್ದಂತೆ ಶಕ್ತಿ (Energy) ಕುಸಿಯುತ್ತದೆ. ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಕುಗ್ಗುತ್ತದೆ. ಹೀಗಾಗಿ ಮತ್ತೆ ರಾತ್ರಿ ಯಾವುದೇ ರೀತಿಯ ಕೆಲಸ ಮಾಡಲು ಸಾಧ್ಯ ಆಗಲ್ಲ. ಹಾಗಾದರೆ ಸಂಜೆ ಆಫೀಸ್ ನಿಂದ ಮನೆಗೆ ಬಂದ ನಂತರ ನೀವು ಏನು ಮಾಡುತ್ತೀರಿ? ಆಯಾಸ ನಿವಾರಿಸಲು ಏನು ಮಾಡುತ್ತೀರಿ? ಮೊಬೈಲ್ ನೋಡುತ್ತಾ ಸಮಯ ಕಳೆಯುತ್ತೀರಿ. ನೆಚ್ಚಿನ ಧಾರಾವಾಹಿ, ಮೂವಿ, ವೆಬ್ ಸೀರಿಸ್, ಶೋ ನೋಡುತ್ತೀರಿ.


    ಮಿಡ್ ನೈಟ್ ತಿನ್ನುವ ಕಡು ಬಯಕೆಗಳು


    ಈ ಮಧ್ಯೆ ಸಮಯ ಸರಿದದ್ದೇ ಗೊತ್ತಾಗಲ್ಲ. ಆಗ ಮತ್ತೆ ಏನಾದ್ರೂ ತಿನ್ನಬೇಕು ಎಂಬ ಬಯಕೆ ಉಂಟಾಗುತ್ತದೆ. ಹೀಗೆ ಮಿಡ್ ನೈಟ್ ತಿನ್ನುವ ಕಡು ಬಯಕೆಗಳು ತೂಕ ಹೆಚ್ಚಾಗಲು ಕಾರಣವಾಗುತ್ತವೆ. ರಾತ್ರಿ ಚಯಾಪಚಯವು ನಿಧಾನವಾಗಿರುತ್ತದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ತಿಂಡಿಯಲ್ಲಿ ಆರೋಗ್ಯಕರ ಆಹಾರ ಸೇವಿಸಿದರೆ ತೂಕ ಹೆಚ್ಚಾಗಲ್ಲ ಎಂದು ಕೆಲವರು ಭಾವಿಸುತ್ತಾರೆ.


    ಇದು ತಪ್ಪು. ಮಧ್ಯರಾತ್ರಿ ತಿಂಡಿ ಸೇವನೆ ಮಾಡುವುದು ಹಾಗೂ ಇದರ ನಿಯಮಿತ ಅಭ್ಯಾಸವು ನಿಮ್ಮ ತೂಕವನ್ನು ಎಲ್ಲಾ ರೀತಿಯಲ್ಲಿ ಹೆಚ್ಚಿಸುತ್ತದೆ. ಅದು ಆರೋಗ್ಯಕರವಾಗಿರಲಿ ಅಥವಾ ಅನಾರೋಗ್ಯಕರವಾಗಿರಲಿ. ಆರೋಗ್ಯಕರ ತಿಂಡಿಗಳು ನಿಮ್ಮ ಮಧ್ಯರಾತ್ರಿಯ ಕಡುಬಯಕೆ ತಣಿಸಬಹುದು.


    ಇದನ್ನೂ ಓದಿ: ತೂಕ ಹೆಚ್ಚಾಗ್ಬೇಕು ಅಂತ ಸಿಕ್ಕಿದ್ದೆಲ್ಲಾ ತಿಂತೀರಾ? ಅದರ ಬದಲು ಈ ಆರೋಗ್ಯಕರ ಆಹಾರ ಸೇವಿಸಿ


    ಆದರೆ ರಾತ್ರಿ ಅದನ್ನು ಸೇವನೆ ಮಾಡುವುದರಿಂದ ನಮ್ಮ ತೂಕ ಹೆಚ್ಚಾಗುತ್ತದೆಯಾ? ಅದರಿಂದ ಆಗುವ ಅಪಾಯ ತಡೆಯಲು ಏನು ಮಾಡಬೇಕು? ಇಲ್ಲಿ ನೋಡೋಣ.


    ರಾತ್ರಿಯಲ್ಲಿ ಚಯಾಪಚಯ


    ರಾತ್ರಿ ವ್ಯಕ್ತಿಯ ಚಯಾಪಚಯ ನಿಧಾನವಾಗುತ್ತದೆ. ಹಾಗಾಗಿ ನೀವು ರಾತ್ರಿ ಏನು ತಿಂದರೂ ಅದು ಹಗಲಿಗಿಂತ ಸುಲಭವಾಗಿ ಕೊಬ್ಬಾಗಿ ಪರಿವರ್ತನೆಯಾಗುತ್ತದೆ. ಇದರ ಬಗ್ಗೆ ಇನ್ನೂ ಯಾವುದೇ ಸಂಶೋಧನೆ ಪುರಾವೆಗಳಿಲ್ಲ.


    ರಾತ್ರಿಯಲ್ಲಿ ತಿನ್ನುವ ಜನರು ತೂಕ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅನೇಕ ಅಧ್ಯಯನಗಳು ಹೇಳಿವೆ. ಚಯಾಪಚಯ ನಿಧಾನವಾಗಿದ್ದರೆ, ನಂತರ ಕ್ಯಾಲೊರಿಗಳು ಹೆಚ್ಚಾಗಲ್ಲ. ಹಾಗಾದರೆ ತೂಕ ಹೆಚ್ಚಾಗಲು ಕಾರಣವೇನು?


    ಒರೆಗಾನ್ ಹೆಲ್ತ್ ಅಂಡ್ ಸೈನ್ಸ್ ಯೂನಿವರ್ಸಿಟಿಯ ವಿಜ್ಞಾನಿಗಳ ಅಧ್ಯಯನವು ರೀಸಸ್ ಕೋತಿಗಳ ಆಹಾರ ಪದ್ಧತಿ ಮತ್ತು ತೂಕ ಹೆಚ್ಚಾಗುವ ಮಾದರಿಗಳನ್ನು ಪರಿಶೀಲಿಸಿದೆ. ಹಗಲಿನಲ್ಲಿ ತಿನ್ನಲು ಇಷ್ಟಪಡುವ ಕೋತಿಗಳಿಗಿಂತ ರಾತ್ರಿಯಲ್ಲಿ ಹೆಚ್ಚಿನ ಊಟ ಸೇವಿಸುವ ಕೋತಿಗಳು ತೂಕ ಹೆಚ್ಚಾಗುವ ಅಪಾಯ ಹೊಂದಿವೆ ಎಂದು ಅಧ್ಯಯನ ಹೇಳಿದೆ.


    ಅನಾರೋಗ್ಯಕರ ಅಭ್ಯಾಸಗಳು ತೂಕ ಹೆಚ್ಚಿಸುವ ಅಂಶಗಳಾಗಿವೆ


    ಕ್ಯಾಲೋರಿ ಸಂಖ್ಯೆ ಹೆಚ್ಚಿಸಿದರೆ


    ರಾತ್ರಿಯಲ್ಲಿ ತಿಂಡಿ ತಿನ್ನುವುದು ನಿಮ್ಮ ಕ್ಯಾಲೋರಿ ಸಂಖ್ಯೆ ಹೆಚ್ಚಿಸುವಷ್ಟು ಸಮಸ್ಯೆಯಲ್ಲ. ಏಕೆಂದರೆ ನಮ್ಮ ದಿನದ ಕ್ಯಾಲೋರಿ ಸೇವನೆಯು ಮುಗಿದ ನಂತರ ಮಾತ್ರ ನಾವು ರಾತ್ರಿ ತಿನ್ನುತ್ತೇವೆ ಎಂದು ಸಾಮಾನ್ಯವಾಗಿ ಕಂಡು ಬರುತ್ತದೆ.ಅದಕ್ಕಾಗಿ ಮಧ್ಯರಾತ್ರಿಯ ತಿಂಡಿ ನಮ್ಮ ಹೆಚ್ಚುವರಿ ಕ್ಯಾಲೋರಿ ಆಗಿದೆ.


    ಅನಾರೋಗ್ಯಕರ ತಿಂಡಿ


    ನಾವು ರಾತ್ರಿಯ ಊಟವನ್ನು ಸೇವಿಸಿದಾಗ ಅಥವಾ ಮಧ್ಯರಾತ್ರಿಯ ತಿಂಡಿಗಳಲ್ಲಿ ಪಾಲ್ಗೊಳ್ಳುವಾಗ, ನಮ್ಮ ಹೆಚ್ಚಿನ ಆಯ್ಕೆಗಳು ಅನಾರೋಗ್ಯಕರ. ಹಗಲಿನಲ್ಲಿ ನಾವು ಏನಾದರೂ ಆರೋಗ್ಯಕರವಾದ ಅತಿಯಾಗಿ ತಿನ್ನಲು ಪ್ರಯತ್ನಿಸುತ್ತೇವೆ. ಆದರೆ ರಾತ್ರಿ ಚಿಪ್ಸ್, ಐಸ್ ಕ್ರೀಮ್, ನೂಡಲ್ಸ್ ಅನ್ನು ಹೆಚ್ಚು ಪ್ರಮಾಣದಲ್ಲಿ ತಿನ್ನಲು ಬಯಸುತ್ತೇವೆ.


    ಬೆಡ್ಟೈಮ್ ಮೊದಲು ಸಣ್ಣ ಊಟ ಮಾಡಿ ಅಂತಾರೆ ತಜ್ಞರು. ನೀವು ಕೆಟ್ಟ ಅಭ್ಯಾಸ ನಿಲ್ಲಿಸಿದಾಗ, ಅದು ನಿಮಗೆ ನಿದ್ರೆ ಮಾಡಲು, ಕಡಿಮೆ ತಿನ್ನಲು ಮತ್ತು ದಿನವಿಡೀ ಸ್ಥಿರವಾದ ರಕ್ತದ ಸಕ್ಕರೆ ಕಾಪಾಡುತ್ತದೆ. ನಿಮ್ಮ ದಿನದ ಕ್ಯಾಲೋರಿ ಸೇವನೆಗಿಂತ ರಾತ್ರಿ ಹೆಚ್ಚು ಸೇವನೆ ಮಾಡಬಾರದು. ಹಾಗಾಗಿ ಹಗಲಿನಲ್ಲಿ ನಿಮ್ಮ ಕ್ಯಾಲೋರಿ ಸಂಖ್ಯೆ ಕಡಿಮೆ ಮಾಡಬೇಕು.


    ನೀವು ರಾತ್ರಿ ತಿನ್ನಲು ಸಿಹಿತಿಂಡಿ ಮತ್ತು ಜಂಕ್ ಫುಡ್ ಅನ್ನು ಬಯಸಿದರೆ ಅದನ್ನು ಬಿಟ್ಟು ಬಿಡಿ. ಅದು ನಿಮ್ಮ ತೂಕವನ್ನು ತ್ವರಿತವಾಗಿ ಹೆಚ್ಚಿಸಬಹುದು. ಹಾಗಾದರೆ ರಾತ್ರಿಯಲ್ಲಿ ತೂಕ ಹೆಚ್ಚಾಗುವುದನ್ನು ಹೇಗೆ ನಿಲ್ಲಿಸಬಹುದು?


    ಇದನ್ನೂ ಓದಿ: ನೈಸರ್ಗಿಕವಾಗಿ ಚರ್ಮದ ಕಾಳಜಿಗೆ ಈ ಆಹಾರ ಸೇವಿಸಿ, ಒಮ್ಮೆ ಟ್ರೈ ಮಾಡಿ ನೋಡಿ


    ಕಾರ್ಬೋಹೈಡ್ರೇಟ್‌ ಮತ್ತು ಪ್ರೋಟೀನ್‌ ಜೋಡಿಸಿ. ಮಲಗುವ ಮುನ್ನ ನೀವು ತಿಂಡಿ ಸೇವಿಸುವುದಾದರೆ ಅದರಲ್ಲಿ ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಪ್ರೋಟೀನ್‌ ಸೇರಿಸಿ.

    Published by:renukadariyannavar
    First published: