Sleeping Time: ಮಧ್ಯ ವಯಸ್ಕರರು ಪ್ರತಿದಿನ ಎಷ್ಟು ಹೊತ್ತಿನ ನಿದ್ದೆ ಮಾಡಬೇಕು? ಸಂಶೋಧಕರು ಏನು ಹೇಳುತ್ತಾರೆ?

ನಿದ್ರೆಯ ಬಗ್ಗೆ ಪ್ರತಿಯೊಬ್ಬರದೂ ವಿಭಿನ್ನ ದೃಷ್ಟಿಕೋನ ಇರುತ್ತದೆ. ವಿಜ್ಞಾನದ ಪ್ರಕಾರ ಮಧ್ಯವಯಸ್ಸಿನ ಜನರು 8 ಗಂಟೆಗಳ ನಿದ್ರೆ ಪಡೆಯುವುದು ಸರಿಯಲ್ಲ ಎಂದು ಹೇಳಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರತಿಯೊಬ್ಬರೂ (Everyone) ನಿದ್ದೆ (Sleeping) ಮಾಡುವ ಸಮಯ (Time) ಮತ್ತು ಸ್ಥಳ (Place) ವಿಭಿನ್ನ ಆಗಿರುತ್ತದೆ. ಕೆಲವರು ತಾವು ಮಲಗುವ ಸ್ಥಳವನ್ನು ಅಥವಾ ಕೋಣೆಯನ್ನು (Room) ತಮಗಿಷ್ಟದ ವಸ್ತು ಮತ್ತು ಸ್ಟಿಕರ್ ಗಳಿಂದ ಅಲಂಕಾರ (Decoration) ಮಾಡಿಕೊಂಡಿರುತ್ತಾರೆ. ಇನ್ನು ಕೆಲವರು ಇರುವ ಕೋಣೆಯನ್ನು ಸ್ವಚ್ಛವಾಗಿ, ನೀಟಾಗಿ ಇಟ್ಟುಕೊಳ್ಳಲು ಬಯಸುತ್ತಾರೆ. ಒಳ್ಳೆಯ ನಿದ್ದೆ ಮಾಡಲು ನಿಮ್ಮ ಮಲಗುವ ಕೋಣೆ ಮತ್ತು ಹಾಸಿಗೆ ಕೂಡ ಸ್ವಚ್ಛವಾಗಿ ಇರಬೇಕು. ಇಲ್ಲದಿದ್ದರೆ ನಿದ್ದೆಗೆ ಸಾಕಷ್ಟು ತೊಂದರೆ ಆಗುತ್ತದೆ. ರಾತ್ರಿಯ ನಿದ್ದೆ ಸರಿಯಾಗಿ ಆಗದಿದ್ದರೆ, ಮನುಷ್ಯ ತುಂಬಾ ತೊಂದರೆ ಪಡಬೇಕಾಗುತ್ತದೆ. ಮಾರನೇ ದಿನ ಆಲಸ್ಯ, ಆಯಾಸ ಉಂಟಾಗುತ್ತದೆ. ಹಾಗಾಗಿ ಮನುಷ್ಯನಿಗೆ ಒಳ್ಳೆಯ ನಿದ್ದೆ ಪಡೆಯುವುದು ತುಂಬಾ ಮುಖ್ಯ.

    ಎಲ್ಲಾ ವಯಸ್ಸಿನ ಜನರಿಗೆ ನಿದ್ರೆಯ ಸೂಕ್ತ ಸಮಯ ಯಾವುದು?

    ನಿದ್ರೆಯ ಬಗ್ಗೆ ಪ್ರತಿಯೊಬ್ಬರದೂ ವಿಭಿನ್ನ ದೃಷ್ಟಿಕೋನ ಇರುತ್ತದೆ. ಒಬ್ಬ ವ್ಯಕ್ತಿ 7 ಗಂಟೆ ನಿದ್ರೆ ಮಾಡಿದರೆ ಸಾಕು ಎಂದು ಕೆಲವರು ಹೇಳಿದರೆ, ಆದರೆ ಇನ್ನು ಕೆಲವರು ಆರೋಗ್ಯಕರ ಜೀವನಕ್ಕೆ 8 ಗಂಟೆಗಳ ನಿದ್ದೆ ಅಗತ್ಯ ಎಂದು ಹೇಳುತ್ತಾರೆ. ಅದೇ ಸಮಯದಲ್ಲಿ ಎಲ್ಲಾ ವಯಸ್ಸಿನ ಜನರಿಗೆ ನಿದ್ರೆಯ ಸೂಕ್ತ ಸಮಯ ಯಾವುದು ಎಂಬ ಬಗ್ಗೆ ಅನೇಕರು ತಿಳಿಸಿದ್ದಾರೆ.

    ಎಷ್ಟು ಗಂಟೆಗಳ ನಿದ್ದೆ ಮಾಡುವುದು ಒಳ್ಳೆಯದು?

    ಆದರೆ ವಿಜ್ಞಾನದ ಪ್ರಕಾರ ಮಧ್ಯವಯಸ್ಸಿನ ಜನರು 8 ಗಂಟೆಗಳ ನಿದ್ರೆ ಪಡೆಯುವುದು ಸರಿಯಲ್ಲ ಎಂದು ಹೇಳಲಾಗಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದ ಸಂಶೋಧಕರು ಮಧ್ಯ ವಯಸ್ಸಿನ ಜನರು ಕೇವಲ 7 ಗಂಟೆಗಳ ನಿದ್ದೆ ಮಾಡಬೇಕು ಎಂದು ಹೇಳಿದ್ದಾರೆ. ವಯಸ್ಕರರು 7 ಗಂಟೆಯ ನಿದ್ದೆ ಹೊಂದುವುದು  ಆರೋಗ್ಯಕ್ಕೆ ಲಾಭ ತಂದು ಕೊಡುತ್ತದೆ ಎಂದು ಹೇಳಲಾಗಿದೆ.

    ಇದನ್ನೂ ಓದಿ: ಏನು ಮಾಡಿದರೂ ಹೊಟ್ಟೆ ಭಾಗದ ಬೊಜ್ಜು ಕರಗುತ್ತಿಲ್ಲವೇ? ಈ ಸಿಂಪಲ್ ಟಿಪ್ಸ್ ಒಮ್ಮೆ ಟ್ರೈ ಮಾಡಿ

    ಸಂಶೋಧಕರು ಏನು ಹೇಳುತ್ತಾರೆ?

    ಮುಂದೆ ಬುದ್ಧಿಮಾಂದ್ಯತೆಯಂತಹ ವಯಸ್ಸಾದ ಸಮಸ್ಯೆ ಅಪಾಯ ಕಡಿಮೆ ಆಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ. ಇದಕ್ಕಾಗಿ ಸಂಶೋಧಕರು 38 ರಿಂದ 73 ವರ್ಷ ವಯಸ್ಸಿನ ಜನರನ್ನು ಅಧ್ಯಯನದಲ್ಲಿ ಭಾಗವಹಿಸುವಂತೆ ಹೇಳಿದ್ದರು.

    7 ಗಂಟೆಗಳಿಗಿಂತ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡುವವರಲ್ಲಿ ಮಾಡಿದ ಎಲ್ಲಾ ಪರೀಕ್ಷೆಗಳ ಫಲಿತಾಂಶ ತುಂಬಾ ಕೆಟ್ಟ ವರದಿ ನೀಡಿವೆ. ಏಳು ಗಂಟೆಗಿಂತ ಹೆಚ್ಚು, ಮತ್ತು ಕಡಿಮೆ ನಿದ್ದೆ ಮಾಡುವವರಲ್ಲಿ ಆಲೋಚನಾ ವೇಗ ಕಡಿಮೆಯಾಗಿರುವ, ಜಾಗರೂಕತೆ ಮತ್ತು ಜ್ಞಾಪಕಶಕ್ತಿ ಕಡಿಮೆ ಆಗಿರುವುದು ಕಂಡು ಬಂದಿದೆ.

    ನಿದ್ರೆಯಲ್ಲಿ ಅಡಚಣೆ ಉಂಟಾದರೆ ಮೆದುಳಿನ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ

    ಇದರೊಂದಿಗೆ ಸಮಸ್ಯೆ ಪರಿಹರಿಸುವ ಸಾಮರ್ಥ್ಯವೂ ಕಡಿಮೆ ಆಗಿರುವುದು ಕಂಡು ಬಂದಿದೆ. 8 ಗಂಟೆಗಳ ನಿರಂತರ ನಿದ್ರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ. ನಿಮ್ಮ ನಿದ್ರೆಯಲ್ಲಿ ಅಡಚಣೆ ಉಂಟಾದರೆ ಅದು ಮೆದುಳಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದು ಬುದ್ಧಿಮಾಂದ್ಯತೆಯ ಸಂಕೇತವಾಗಿದೆ.

    ಅದೇ ಸಮಯದಲ್ಲಿ ಮಕ್ಕಳ ಬೆಳವಣಿಗೆಯ ಮೆದುಳಿಗೆ 12 ಗಂಟೆಗಳ ನಿದ್ರೆ ಅಗತ್ಯವಾಗಿ ಬೇಕು. ಮೆದುಳಿನ ಆರೋಗ್ಯಕ್ಕೆ ನಿದ್ರೆ ಬಹಳ ಮುಖ್ಯ. ಇದು ಮೆದುಳಿಗೆ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಮೆದುಳಿನಿಂದ ತ್ಯಾಜ್ಯ ಉತ್ಪನ್ನಗಳು ಹೊರ ಬರುತ್ತವೆ. ಇದು ಚಯಾಪಚಯ ಮತ್ತು ಪ್ರತಿರಕ್ಷಣಾ ವ್ಯವಸ್ಥೆಯ ಸರಿಯಾದ ಕಾರ್ಯ ನಿರ್ವಹಣೆಗೆ ಸಹಕಾರಿ ಆಗಿದೆ.

    ವಯಸ್ಕರಿಗೆ ಪ್ರತಿ ರಾತ್ರಿ 6 ರಿಂದ 9 ಗಂಟೆಗಳ ನಿದ್ದೆ ಬೇಕು

    ವಯಸ್ಕರಿಗೆ ಪ್ರತಿ ರಾತ್ರಿ 6 ರಿಂದ 9 ಗಂಟೆಗಳ ನಿದ್ದೆ ಬೇಕು ಎಂದು NHS ಶಿಫಾರಸು ಮಾಡಿದೆ. ಆದರೆ ಮಧ್ಯ ವಯಸ್ಕರು ಮತ್ತು ವೃದ್ಧರು ದೀರ್ಘ ಕಾಲ ಮಲಗುವುದು ತುಂಬಾ ಕಷ್ಟ. ಇದರಿಂದ ವೃದ್ಧಾಪ್ಯದಲ್ಲಿ ಮಾನಸಿಕ ಸಮಸ್ಯೆ ಎದುರಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

    ಇದನ್ನೂ ಓದಿ: ಕಲ್ಲಂಗಡಿ ಬೀಜ ಎಸೆಯೋ ಬದಲು ಹೀಗೆ ತಿನ್ನಿ, ಆರೋಗ್ಯ ಲಾಭ ಬಹಳಷ್ಟಿದೆ

    ಪ್ರತಿದಿನ 7 ಗಂಟೆಗಳ ನಿದ್ದೆ ಮಾಡುವ ಜನರ ಮೆದುಳು ಆರೋಗ್ಯಕರ

    ಪ್ರತಿದಿನ 7 ಗಂಟೆಗಳ ನಿದ್ದೆ ಮಾಡುವ ಜನರ ಮೆದುಳು ಆರೋಗ್ಯವಾಗಿರುತ್ತದೆ. ಏಳಕ್ಕಿಂತ ಹೆಚ್ಚು ಅಥವಾ ಕಡಿಮೆ ನಿದ್ರೆ ಮಾಡುವ ಜನರ ಮೆದುಳು ಆರೋಗ್ಯಕರವಾಗಿ ಇರುವುದಿಲ್ಲ ಎನ್ನುತ್ತಾರೆ ಸಂಶೋಧಕರು. ಪ್ರತಿದಿನ 7 ಗಂಟೆಗಳ ನಿದ್ದೆ ಮಾಡುವ ಜನರ ಮಾನಸಿಕ ಆರೋಗ್ಯವು ತುಂಬಾ ಚೆನ್ನಾಗಿರುತ್ತದೆ. ಅವರಲ್ಲಿ ಆತಂಕ, ಖಿನ್ನತೆಯ ಸಮಸ್ಯೆ ಇರಲ್ಲ.
    Published by:renukadariyannavar
    First published: