• Home
  • »
  • News
  • »
  • lifestyle
  • »
  • Vitamin B12: ಡಯಾಬಿಟಿಸ್​ ರೋಗಿಗಳಲ್ಲಿ ವಿಟಮಿನ್ ಬಿ 12 ಕಡಿಮೆಯಾಗೋಕೆ ಇದೇ ಕಾರಣವಂತೆ

Vitamin B12: ಡಯಾಬಿಟಿಸ್​ ರೋಗಿಗಳಲ್ಲಿ ವಿಟಮಿನ್ ಬಿ 12 ಕಡಿಮೆಯಾಗೋಕೆ ಇದೇ ಕಾರಣವಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Vitamin B 12 Deficiency: ಮೆಟ್ಫಾರ್ಮಿನ್ ಡೋಸೇಜ್, ಅವಧಿ ಹಾಗೂ ವಿಟಮಿನ್ B12 ಇಂಟೇಕ್ ಗಳಿಗೆ ಸಂಬಂಧಿಸಿದಂತೆ ಯಾವುದೇ ಮಹತ್ತರ ವ್ಯತ್ಯಾಸ ಕಂಡುಬಂದಿಲ್ಲ.

  • Share this:

ಇಂದು ವೈದ್ಯಕೀಯ ವಿಜ್ಞಾನವು (Science) ಸಾಕಷ್ಟು ಮುಂದುವರಿಯುತ್ತಿದೆ. ಜಗತ್ತಿನ ವಿವಿಧ ಮೂಲೆಗಳಿಂದ ವೈದ್ಯಕೀಯ ತಜ್ಞರು (Doctors) ಏನಾದರೊಂದು ಹೊಸ ಶೋಧನೆ, ಸಂಶೋಧನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡೇ ಇರುತ್ತಾರೆ. ಅದಕ್ಕೆ ತಾನೇ ಇಂದು ಹಿಂದೆಂದಿಗಿಂತಲೂ ಅನೇಕ ಕಾಯಿಲೆ, ಸಮಸ್ಯೆಗಳಿಗೆ ಚಿಕಿತ್ಸೆ ಎಂಬುದು ಲಭ್ಯವಿದೆ. ಇದು ಹಾಗಿರಲಿ, ಈಗ ಸದ್ಯಕ್ಕೆ ಗೊತ್ತಾಗಿರುವ ವೈದ್ಯಕೀಯ ಶಾಸ್ತ್ರಕ್ಕೆ ಸಂಬಂಧಿಸಿದ ಸುದ್ದಿ ಎಂದರೆ ಟೈಪ್ ಎರಡರ ಡಯಾಬಿಟೀಸ್ ಸಮಸ್ಯೆಯಿಂದ ಬಳಲುತ್ತಿರುವವರು ಅದರಲ್ಲೂ ವಿಶೇಷವಾಗಿ ಮೆಟ್ಫಾರ್ಮಿನ್ ಬಳಸುವವರಲ್ಲಿ ವಿಟಮಿನ್ B12 (Vitamin B12) ಕೊರತೆಯಿರುತ್ತದೆ ಎಂದು ಗಮನಿಸಲಾಗಿದೆ.


ಇತ್ತೀಚಿಗಷ್ಟೆ 'ಹ್ಯೂಮನ್ ನ್ಯೂಟ್ರೀಶನ್ ಆಂಡ್ ಮೆಟಾಬಾಲಿಸ್ಮ್' ಎಂಬ ವೈಜ್ಞಾನಿಕ ಜರ್ನಲ್ ಒಂದರ ಅಧ್ಯಯನದಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಅದರಲ್ಲಿ, ಮೆಟ್ಫಾರ್ಮಿನ್ ಬಳಸುವ ಟೈಪ್ 2 ಡಯಾಬಿಟೀಸ್ ರೋಗಿಗಳಲ್ಲಿ ವೈಟಮಿನ್ B12 ಕೊರತೆಯು ಶೇ.17.5 ರಷ್ಟಿರುವುದಾಗಿ ತಿಳಿಸಲಾಗಿದೆ. ಇದಷ್ಟೆಅಲ್ಲದೆ, ಹಾಗೇ ನಿರಂತರವಾಗಿ ಮೆಟ್ಫಾರ್ಮಿನ್ ಬಳಕೆಯು ಮುಂದೆ ಅತಿ ಹೆಚ್ಚಿನ ಕೊರತೆಯನ್ನುಂಟು ಮಾಡಿ ಆರೋಗ್ಯಕ್ಕೆ ಸಾಕಷ್ಟು ಸಮಸ್ಯೆಯನ್ನು ತಂದೊಡ್ಡಲಿದೆ ಎನ್ನಲಾಗಿದೆ.


ಮಧುಮೇಹ ಅಥವಾ ಸಾಮಾನ್ಯವಾಗಿ ಕರೆಯಲಾಗುವ ಸಕ್ಕರೆ ಕಾಯಿಲೆಯಲ್ಲಿ ಟೈಪ್ 2 ಪ್ರಕಾರದ ಡಯಬ್ಬಿಟೀಸ್ ಇರುವವರು ಸಾಮಾನ್ಯವಾಗಿ ಮೆಟ್ಫಾರ್ಮಿನ್ ಬಳಸುತ್ತಾರೆ. ಇದೊಂದು ಔಷಧಿಯಾಗಿದ್ದು ಡಯಾಬಿಟೀಸ್ ನಿರ್ವಹಣೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.


ಒಂದಿದ್ದರೆ ಇನ್ನೊಂದು ಹೋದಂತೆ ಎಂಬಂತೆ ಈಗ ಈ ವರದಿಯ ಪ್ರಕಾರ, ಇದು ಸಕ್ಕರೆ ಕಾಯಿಲೆಯ ನಿರ್ವಹಣೆಗೆ ಸಹಾಯಕವಾಗಿದ್ದರೂ ಇದರಿಂದ ಜೀವಸತ್ವ B12 ಕುಂಠಿತವಾಗುತ್ತದೆ ಎನ್ನಲಾಗಿದೆ. ಆದರೆ, ಸೌದಿ ಅರೇಬಿಯಾದಲ್ಲಿ ನಡೆದಿರುವ ಇತರೆ ಅಧ್ಯಯನಗಳು ಈ ಅಪಾಯದ ಕುರಿತು ಇನ್ನೂ ವರೆಗೆ ನಿಖರವಾದ ಮೌಲ್ಯಮಾಪನ ಮಾಡಿಲ್ಲ ಎನ್ನಲಾಗಿದೆ.


ಸೌದಿ ಅರೇಬಿಯಾದ ಮಕ್ಕಾದಲ್ಲಿರುವ ಉಮ್-ಅಲ್-ಕುರಾ ವಿಶ್ವವಿದ್ಯಾಲಯದ ಶೈಮಾ ಬಿ ಅಲ್ಮತ್ರಾಫಿ ಅವರ ನೇತೃತ್ವದಲ್ಲಿ ಈ ಅಧ್ಯಯನ ನಡೆಸಲಾಗಿದ್ದು ತಂಡವು ಮೂಲವಾಗಿ ಮೆಟ್ಫಾರ್ಮಿನ್ ಔಷಧಿಯ ಸೇವನೆಯಿಂದ ರೋಗಿಗಳಲ್ಲಿ ನಿರಂತರವಾಗಿ ಹೆಚ್ಚಾಗುವ B12 ವೈಟಮಿನ್ ಕೊರತೆಯ ವಿವಿಧ ಹಂತಗಳನ್ನು ವಿವರವಾಗಿ ಗಮನಿಸಿ ಅದಕ್ಕೆ ಪೂರಕವಾದ ಫಲಿತಾಂಶವನ್ನು ಪ್ರಕಟಿಸುವುದಾಗಿತ್ತು.
ಟೈಪ್ 2 ಡಯಾಬಿಟೀಸ್ ಇರುವ ಸುಮಾರು 206 ರೋಗಿಗಳು ಈ ಅಧ್ಯಯನದಲ್ಲಿ ಭಾಗವಹಿಸಿದ್ದರು. ಈ ರೋಗಿಗಳು ಕಳೆದ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚಿನ ಸಮಯದಿಂದ ತಮ್ಮ ಸಕ್ಕರೆ ಕಾಯಿಲೆಯ ನಿಯಂತ್ರಣಕ್ಕಾಗಿ ಮೆಟ್ಫಾರ್ಮಿನ್ ಅನ್ನು ಬಳಸುತ್ತಿದ್ದರು. ಸೌದಿ ಅರೇಬಿಯಾದ ಪವಿತ್ರ ನಗರಿ ಮಕ್ಕಾದಲ್ಲಿರುವ ಸ್ಪೆಷಲಿಸ್ಟ್ ಆಸ್ಪತ್ರೆಯಾದ ಅಲ್-ನೂರ್ ಎಂಬಲ್ಲಿ ಈ ರೋಗಿಗಳು ಈ ಅಧ್ಯಯನಕ್ಕಾಗಿ ಪಾಲ್ಗೊಂಡಿದ್ದರೆನ್ನಲಾಗಿದೆ.


ಇದನ್ನೂ ಓದಿ: ಈ ಟಿಪ್ಸ್ ಫಾಲೋ ಮಾಡಿದ್ರೆ ನಿಮ್ಮ ಸಾಂಬಾರ್ ರುಚಿಕರವಾಗುತ್ತೆ


ಈ ಅಧ್ಯಯನ ಪ್ರಕ್ರಿಯೆಯಲ್ಲಿ ಮೊದಲಿಗೆ ಆನ್ಲೈನ್ ಮೂಲಕ ಸಂಶೋಧಕರು ರೋಗಿಗಳ ವೈದ್ಯಕೀಯ ಇತಿಹಾಸ, ವಾಸಸ್ಥಳ, B12 ವಿಟಮಿನ್ ಗೆ ಸಂಬಂಧಿಸಿದ ಡಯಟರಿ ದತ್ತಾಂಶ, ಹಾಗೂ ಮೆಟ್ಫಾರ್ಮಿನ್ ಬಳಕೆಯ ವಿವರಗಳನ್ನು ಸಂಗ್ರಹಿಸಿದ್ದರು. ಈ ಅಧ್ಯಯನದಲ್ಲಿ ಅಂಕಿ-ಅಂಶಗಳ ವಿಶ್ಲೇಷಣೆಗಾಗಿ ಸ್ಟ್ಯಾಟಿಸ್ಟಿಕಲ್ ಪ್ಯಾಕೇಜ್ ಫಾರ್ ಸೋಶಿಯಲ್ ಸೈನ್ಸಸ್ ಅನ್ನು ಬಳಸಲಾಗಿರುವುದಾಗಿ ತಿಳಿದುಬಂದಿದೆ.


ಸಂಶೋಧಕರು ಪತ್ತೆ ಹಚ್ಚಿರುವ ವಿಷಯಗಳು ಹೀಗಿದೆ


* ಮೆಟ್ಫಾರ್ಮಿನ್ ಬಳಸುತ್ತಿದ್ದ ಡಯಾಬಿಟೀಸ್ ರೋಗಿಗಳಲ್ಲಿ B12 ವಿಟಮಿನ್ ಕೊರತೆ ಶೇ.17.5 ರಷ್ಟಾಗಿತ್ತು


* ವಿಟಮಿನ್ B12 ಕೊರತೆಯಿರುವ ಡಯಾಬಿಟೀಕ್ ರೋಗಿಗಳು ಹಾಗೂ ಅದು ಸಾಮಾನ್ಯವಾಗಿರುವ ಡಯಾಬಿಟೀಕ್ ರೋಗಿಗಳು ಮಹತ್ತರವಾದ ವ್ಯತ್ಯಾಸಗಳನ್ನು ತೋರಿಸಿರುವುದಾಗಿ ಕಂಡುಬಂದಿದೆ.


* ಮೆಟ್ಫಾರ್ಮಿನ್ ಡೋಸೇಜ್, ಅವಧಿ ಹಾಗೂ ವಿಟಮಿನ್ B12 ಇಂಟೇಕ್ ಗಳಿಗೆ ಸಂಬಂಧಿಸಿದಂತೆ ಯಾವುದೇ ಮಹತ್ತರ ವ್ಯತ್ಯಾಸ ಕಂಡುಬಂದಿಲ್ಲ.


ಇದನ್ನೂ ಓದಿ: ಆಲೂಗೆಡ್ಡೆ ಬಳಸಿ ನೀವೂ ಮಾಡ್ಬೋದು ಈ 5 ಮಹಾರಾಷ್ಟ್ರದ ತಿಂಡಿಗಳು


ಈ ಅಧ್ಯಯನವನ್ನು "ಪ್ರಿವೆಲನ್ಸ್ ಆಫ್ ವೈಟಮಿನ್ B12 ಡೆಫಿಶಿಯನ್ಸಿ ಆಂಡ್ ಇಟ್ಸ್ ಅಸೋಸಿಯೇಷನ್ ವಿತ್ ಮೆಟ್ಫಾರ್ಮಿ ಟ್ರಿಟೇಡ್ ಟೈಪ್ ಟು ಡಯಾಬಿಟಿಕ್ ಪೆಶಂಟ್ಸ್ " ಎಂದು ಹೆಸರಿಸಲಾಗಿದ್ದು ಇದು ಹ್ಯೂಮನ್ ನ್ಯೂಟ್ರೀಶನ್ ಆಂಡ್ ಮೆಟಾಬಾಲಿಸ್ಮ್ ನಲ್ಲಿ ಪ್ರಕಟವಾಗಿದೆ

Published by:Sandhya M
First published: