Skincare Tips: ನಿಮ್ಮ ಒತ್ತಡವು ಚರ್ಮದ ಮೇಲೆ ಪರಿಣಾಮ ಬೀರುತ್ತೆ! ಹೇಗೆ ಅಂತೀರಾ? ಇಲ್ಲಿದೆ ವಿವರ...

Skincare Tips at home: ಆಂತರಿಕವಾಗಿ ವಿವಿಧ ಅಂಗಾಂಗಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವ ಒತ್ತಡದ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ ಇದು ನಿಮ್ಮ ಚರ್ಮದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದು ಗೊತ್ತಿದೆಯೇ?

Health Tips

Health Tips

  • Share this:
    ನೀವು ಮಾನಸಿಕವಾಗಿ ತುಂಬಾ ಒತ್ತಡದಿಂದ ಬಳಲುತ್ತಿದ್ದರೆ ಅದು ನಿಮಗೆ ಗೊತ್ತಿರದೆ ನಿಮ್ಮ ದೇಹದ ಆರೋಗ್ಯದ ಮೇಲೆ ಪರಿಣಾಮ ಬಿರುತ್ತದೆ. ಈಗ ಮತ್ತೊಂದು ಮಾತು ಕೇಳಿ ಬರುತ್ತಿದ್ದು, ಅದನ್ನು ಕೇಳಿದರೆ ನೀವು ಇನ್ನೂ ದಿಗಿಲುಗೊಳ್ಳುವುದು ಖಂಡಿತ. ಅದೇನಪ್ಪಾ ಅಂತೀರಾ? ದೀರ್ಘಕಾಲದ ಮಾನಸಿಕ ಒತ್ತಡವು ಹಲವಾರು ಸಮಸ್ಯೆಗಳಿಗೆ ಕಾರಣವಾಗಬಹುದು. ಆಂತರಿಕವಾಗಿ ವಿವಿಧ ಅಂಗಾಂಗಗಳ ಮೇಲೆ ವಿವಿಧ ರೀತಿಯಲ್ಲಿ ಪರಿಣಾಮ ಬೀರುವ ಒತ್ತಡದ ಬಗ್ಗೆ ನಿಮಗೆ ತಿಳಿದಿರಬಹುದು. ಆದರೆ ಇದು ನಿಮ್ಮ ಚರ್ಮದ ಮೇಲೂ ನಕಾರಾತ್ಮಕ ಪರಿಣಾಮ ಬೀರಬಹುದು ಎಂಬುದು ಗೊತ್ತಿದೆಯೇ?

    ಡಾ. ಜಯಶ್ರೀ ಶರದ್ ಅವರು "ಸ್ಟ್ರೆಸ್ ಆ್ಯಂಡ್ ಸ್ಕಿನ್” (Stress and Skin) (ಒತ್ತಡ ಮತ್ತು ಚರ್ಮ) ಎಂಬ ಶೀರ್ಷಿಕೆಯ ವಿಡಿಯೋದಲ್ಲಿ ಈ ಬಗ್ಗೆ ಹೇಳಿದ್ದಾರೆ. ತಮ್ಮ Instagram ಖಾತೆಯ ಪುಟದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಚರ್ಮರೋಗ ತಜ್ಞರು ಒತ್ತಡವು ನಿಮ್ಮನ್ನು ಅತಿಯಾಗಿ ಯೋಚಿಸುವಂತೆ, ಆತಂಕಗೊಳಿಸಿ ಮತ್ತು ದುಃಖಕರವಾಗಿಸುತ್ತದೆ ಎಂದು ಹೇಳುತ್ತಾರೆ. ಬರೀ ಮಾನಸಿಕ ಒತ್ತಡವಲ್ಲದೆ, ಶಸ್ತ್ರಚಿಕಿತ್ಸೆ, ಆಘಾತ ಅಥವಾ ಅಪಘಾತದ ರೂಪದಲ್ಲಿನ ದೈಹಿಕ ಒತ್ತಡವೂ ಇದಕ್ಕೆ ಕಾರಣವಾಗುತ್ತದೆ ಎಂದು ತಿಳಿಸಿದ್ದಾರೆ.

    ಸ್ಟ್ರೆಸ್​ ಮತ್ತು ಸ್ಕಿನ್​ ಸಮಸ್ಯೆ:

    ತಾವು ಹಂಚಿಕೊಂಡ ವಿಡಿಯೋದಲ್ಲಿ, ಡಾ. ಜಯಶ್ರೀ ಅವರು ಒತ್ತಡವು ಹೈಪರ್ ಪಿಗ್ಮೆಂಟೇಶನ್, ಬೇಗ ವಯಸ್ಸಾಗುವಿಕೆ, ಒಣ ಚರ್ಮ, ಮೊಡವೆ ಮತ್ತು ಕಪ್ಪು ಕಲೆಗಳಿಗೆ ಕಾರಣವಾಗಬಹುದು, ವಿಶೇಷವಾಗಿ ನೀವು ಚೆನ್ನಾಗಿ ನಿದ್ರೆ ಮಾಡದಿದ್ದಾಗ ಇದು ಸಂಭವಿಸುತ್ತದೆ ಎಂದು ವಿವರಿಸಿದರು. ಇದರಿಂದಾಗಿ ನೀವು ತುರಿಕೆ ಮತ್ತು ವಿಭಿನ್ನ ಅಲರ್ಜಿಯನ್ನು ಸಹ ಅನುಭವಿಸಬಹುದು ಎಂದು ಅವರು ಹೇಳಿದರು. ಕೆಲವೊಮ್ಮೆ "ಚರ್ಮದಲ್ಲಿರುವ ಚಿಕ್ಕ ಪುಟ್ಟ ನರದ ತುದಿಗಳು ತುರಿಕೆಗೆ ಕಾರಣವಾಗುತ್ತದೆ" ಎಂದು ಹೇಳಿದ್ದಾರೆ.

    ಇಡೀ ಪ್ರಕ್ರಿಯೆಯನ್ನು ವಿವರವಾಗಿ ಹೇಳಿದ ಅವರು ಒತ್ತಡವು ಮೆದುಳಿನಲ್ಲಿ ಇರುವ ಹೈಪೋಥಲಾಮಸ್ ಎಂಬ ಭಾಗಕ್ಕೆ ಸಂಕೇತಗಳನ್ನು ರವಾನಿಸುತ್ತದೆ ಎಂದು ಹೇಳಿದರು. "ಹೈಪೋಥಲಾಮಸ್ ನಂತರ ಕಾರ್ಟಿಕೊಟ್ರೋಪಿನ್-ಬಿಡುಗಡೆ ಮಾಡುವ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ. ಈ ಹಾರ್ಮೋನ್ ಮೆದುಳಿನಲ್ಲಿ ಇರುವ ಪಿಟ್ಯುಟರಿ ಗ್ರಂಥಿಗೆ ಸಂಕೇತಗಳನ್ನು ಕಳುಹಿಸುತ್ತದೆ, ಇದು ಆಡ್ರೆನೊಕಾರ್ಟಿಕೊಟ್ರೋಪಿಕ್ ಹಾರ್ಮೋನ್ ಎಂಬ ಮತ್ತೊಂದು ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ" ಎಂದು ಅವರು ಹೇಳಿದರು.

    ಇದನ್ನೂ ಓದಿ: Vitamin D Deficiency: ತೂಕ ಹೆಚ್ಚಳ ಮತ್ತು ಬೊಜ್ಜಿಗೆ ವಿಟಮಿನ್ ಡಿ ಕೊರತೆ ಕಾರಣವೇ..? ಇದನ್ನು ಒಮ್ಮೆ ಓದಿ..

    ಹೈಪರ್​ ಪಿಗ್ಮೆಂಟೇಷನ್​ಗೂ ಕಾರಣವಾಗಬಹುದು:

    ಕೆಲವು ಹಾರ್ಮೋನುಗಳು ಸಾಕಷ್ಟು ಉರಿಯೂತಕ್ಕೆ ಕಾರಣವಾಗಬಹುದು, ಇದರಿಂದ ಚರ್ಮವು ಒಣಗುತ್ತದೆ ಮತ್ತು ಪದರವಾಗುತ್ತದೆ. ಒತ್ತಡವು ಹಾರ್ಮೋನುಗಳ ಬಿಡುಗಡೆಗೆ ಕಾರಣವಾಗಬಹುದು, ಅದು ಚರ್ಮದ ಮೇಲೆ ಕಪ್ಪು ಮಚ್ಚೆಗಳು ಮತ್ತು ಹೈಪರ್ ಪಿಗ್ಮೆಂಟೇಶನ್ ಗೆ ಕಾರಣವಾಗಬಹುದು. ಒತ್ತಡವು ಹಾರ್ಮೋನುಗಳ ಮೇಲೆ ಪರಿಣಾಮ ಬೀರಬಹುದು, ಅದು ಸಾಕಷ್ಟು ಮೊಡವೆಗಳಿಗೆ ಕಾರಣವಾಗಬಹುದು ಎಂದು ಹೇಳಿದರು.

    ಇದನ್ನೂ ಓದಿ: Health Tips| ವಯಸ್ಸಾದವರು ಹೃದಯಾಘಾತದ ಅಪಾಯ ತಪ್ಪಿಸಿಕೊಳ್ಳಲು ಆಸ್ಪಿರಿನ್ ತೆಗೆದುಕೊಳ್ಳುವುದು ಒಳ್ಳೆಯದೇ..?

    ಒತ್ತಡವು ನಮ್ಮೆಲ್ಲರ ಮೇಲೆ ಪರಿಣಾಮ ಬೀರುತ್ತದೆ ಆದರೆ ಅದನ್ನು ಹೇಗೆ ನಿಭಾಯಿಸಬೇಕೆಂದು ತಿಳಿದಿರಬೇಕು ಎಂದು ಹೇಳುತ್ತಾ ಯಾವುದಾದರೊಂದು ಇಷ್ಟದ ಕೆಲಸ ಮಾಡುವುದು, ನೃತ್ಯ ಮಾಡುವುದು, ಧ್ಯಾನ ಮಾಡುವುದು, ಯೋಗ ಮತ್ತು ಚಿತ್ರಕಲೆ ಮುಂತಾದವುಗಳನ್ನು ಮಾಡುವುದರಿಂದ ನಮ್ಮನ್ನು ಒತ್ತಡವು ಬಾಧಿಸುವುದಿಲ್ಲ ಎಂದು ಸಲಹೆ ನೀಡಿದ್ದಾರೆ. ಈ 4 ನಿಮಿಷ 55 ಸೆಕೆಂಡಿನ ವಿಡಿಯೋವನ್ನು ಇದುವರೆಗೆ 250ಕ್ಕೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ.
    Published by:Sharath Sharma Kalagaru
    First published: