• Home
  • »
  • News
  • »
  • lifestyle
  • »
  • Mental Health: ಯಾವಾಗ್ಲೂ ಟೆನ್ಶನ್, ಮೂಡ್​ ಆಫ್; ಮಾನಸಿಕ ಆರೋಗ್ಯ ಕೆಡಿಸೋ ಡೇಂಜರಸ್ ಅಭ್ಯಾಸಗಳಿವು

Mental Health: ಯಾವಾಗ್ಲೂ ಟೆನ್ಶನ್, ಮೂಡ್​ ಆಫ್; ಮಾನಸಿಕ ಆರೋಗ್ಯ ಕೆಡಿಸೋ ಡೇಂಜರಸ್ ಅಭ್ಯಾಸಗಳಿವು

ಮಾನಸಿಕ ಆರೋಗ್ಯ

ಮಾನಸಿಕ ಆರೋಗ್ಯ

ತಲೆಯೊಳಗೆ ಕೊರೆಯುವ ವಿಷಯ ಮನಸಿನ ನೆಮ್ಮದಿ ಕೆಡಿಸಿ, ರಾಡಿ ಮಾಡುತ್ತದೆ. ಹಾಗಿದ್ದರೆ ನಿಮ್ಮ ಮಾನಸಿಕ ಆರೋಗ್ಯ ಕೆಡಿಸುವಂತಹ ಕೆಲವು ಅಪಾಯಕಾರಿ ಅಭ್ಯಾಸಗಳು ಯಾವುವು ? ನೀವು ಅದನ್ನು ಸಾಮಾನ್ಯವಾಗಿ ಕಂಡಿರಬಹುದು. ಅವು ಸೈಲೆಂಟಾಗಿ ನಿಮ್ಮ ಖುಷಿಯನ್ನು ಕಸಿದುಕೊಳ್ಳುತ್ತಿರುತ್ತವೆ. ಅವುಗಳ ಬಗ್ಗೆ ಜಾಗೃತರಾಗಿರಿ.

ಮುಂದೆ ಓದಿ ...
  • Share this:

ದಿನ  ನಿತ್ಯ ಎಲ್ಲವನ್ನೂ ನಗುತ್ತಲೇ ಸ್ವೀಕರಿಸಿ, ಎಲ್ಲವನ್ನೂ ಸಮಚಿತ್ತದಿಂದ ಹ್ಯಾಂಡಲ್ ಮಾಡೋದೆಂದರೆ ಅದು ಸಮಾನ್ಯ ಕೆಲಸವಲ್ಲ, ಅದೊಂದು ಶಕ್ತಿ. ಕಾರಣ ಕೋಪ, ಟೆನ್ಶನ್, ಒತ್ತಡಗಳಿಂದ (Pressure) ಪರಿಸ್ಥಿತಿ, ಸಂದರ್ಭಗಳ ಮೇಲೆ ದೊಡ್ಡ ಪರಿಣಾಮ ಉಂಟಾಗುತ್ತದೆ. ಮುಗಿಯದ ಚಿಂತೆಗಳು, ಮೂಡ್ ಆಫ್ (Mood Off) ಆಗಿದ್ದುಕೊಂಡು ಏನೇ ಮಾಡುವುದಕ್ಕೆ ಹೊರಟರೂ ಅಲ್ಲಿ ಸಮಸ್ಯೆಗಳೇ (Problems). ನಾವು ದಿನನಿತ್ಯ ಮಾಡುವ ಕೆಲವು ತಪ್ಪುಗಳಿಂದಾಗಿ ನಾವು ಯಾವಾಗಲೂ ನಮ್ಮ ಮಾನಸಿಕ ಆರೋಗ್ಯವನ್ನು (Mental Health) ಹಾಳು ಮಾಡುತ್ತೇವೆ. ನಮ್ಮ ಸಿಂಪಲ್ ಮಿಸ್ಟೇಕ್ಸ್ ನಮ್ಮ ಮಾನಸಿಕ ಆರೋಗ್ಯವನ್ನು ನಾವು ನಿರೀಕ್ಷಿಸುವುದಕ್ಕಿಂತ ಎಷ್ಟೋ ಪಟ್ಟು ಹೆಚ್ಚು ಬಾಧಿಸುತ್ತದೆ. ತಲೆಯೊಳಗೆ ಕೊರೆಯುವ ವಿಷಯ ಮನಸಿನ ನೆಮ್ಮದಿ ಕೆಡಿಸಿ, ರಾಡಿ ಮಾಡುತ್ತದೆ. ಹಾಗಿದ್ದರೆ ನಿಮ್ಮ ಮಾನಸಿಕ ಆರೋಗ್ಯ ಕೆಡಿಸುವಂತಹ ಕೆಲವು ಅಪಾಯಕಾರಿ ಅಭ್ಯಾಸಗಳು (Dangerous Habits) ಯಾವುವು ? ನೀವು ಅದನ್ನು ಸಾಮಾನ್ಯವಾಗಿ ಕಂಡಿರಬಹುದು. ಅವು ಸೈಲೆಂಟಾಗಿ ನಿಮ್ಮ ಖುಷಿಯನ್ನು ಕಸಿದುಕೊಳ್ಳುತ್ತಿರುತ್ತವೆ. ಅವುಗಳ ಬಗ್ಗೆ ಜಾಗೃತರಾಗಿರಿ.


ನಾವೆಲ್ಲರೂ ಪ್ರತಿದಿನವೂ ನಮ್ಮ ದಿನಚರಿಯ ಭಾಗವಾಗಿರುವ ಕೆಲಸಗಳನ್ನು ಮಾಡುತ್ತೇವೆ. ಕೆಲವೊಂದು ವಿಷಯ ನಮಗೆ ತಿಳಿಯದೆ ನಮ್ಮನ್ನು ಕೆಲವು ದಣಿದ, ಸೃಜನಾತ್ಮಕವಲ್ಲದ ಮೂಡಿ ವ್ಯಕ್ತಿಯನ್ನಾಗಿ ಮಾಡುತ್ತೇವೆ. ಕೆಲವು ಅದೃಶ್ಯ ಮತ್ತು ಪುನರಾವರ್ತಿತ ಅಭ್ಯಾಸಗಳು ನಮ್ಮ ದುಃಖಕ್ಕೆ ಭಾಗಶಃ ಕಾರಣವಾಗಿವೆ. ಅದೇ ಮುಖ್ಯ ಕಾರಣ ಎನ್ನಲು ಸಾಧ್ಯವಿಲ್ಲ. ಆದರೆ ಅವು ದಿನಕಳೆದಂತೆ ನಮಗೆ ಮಾರಕವಾಗಿ ಬದಲಾಗಬಹುದು.


ಅತಿಯಾದ ಯೋಚನೆ:


ನಾವು ಬಹುಶಃ ತಿಳಿದಿರದ ಈ ಅಪಾಯಕಾರಿ ಅಭ್ಯಾಸಗಳಲ್ಲಿ ಒಂದು ಅತಿಯಾಗಿ ಯೋಚಿಸುವುದು. ಯೋಚನೆಗಾಗಿ ನಾವು ಹಲವು ಗಂಟೆಗಳನ್ನು ವ್ಯರ್ಥ ಮಾಡಿರಬಹುದು, ಇದು ನಮ್ಮ ಆತಂಕವನ್ನು ಹೆಚ್ಚಿಸಬಹುದು, ಅದರೊಂದಿಗೆ ನಮ್ಮ ಉತ್ಪಾದಕತೆಯನ್ನು ಕಡಿಮೆಗೊಳಿಸಬಹುದು. ನೀವು ಅತಿಯಾಗಿ ಆಲೋಚಿಸುತ್ತಿರುವಾಗ ನಿಮ್ಮ ಗಮನವು ಕಡಿಮೆಯಾಗುವುದಲ್ಲದೆ, ತಲೆನೋವು, ದೇಹನೋವು ಮತ್ತು ಅಜೀರ್ಣ ಸಮಸ್ಯೆಗಳಂತಹ ದೈಹಿಕ ಲಕ್ಷಣಗಳಲ್ಲಿಯೂ ಸಹ ಕೆಟ್ಟ ಪರಿಣಾಮ ಬೀರುತ್ತದೆ.


ನೀವು ನಿಯಂತ್ರಿಸಲಾದ ವಿಷಯಗಳನ್ನು ಪ್ಲೀಸ್ ಬಿಟ್ಟುಬಿಡಿ:


ಅನೇಕ ಜನರು ತಮ್ಮ ನಿಯಂತ್ರಣದಲ್ಲಿಲ್ಲದ ವಿಷಯಗಳ ಬಗ್ಗೆಚಿಂತೆ ಮಾಡುತ್ತಾರೆ. ಅತಿಯಾಗಿ ಯೋಚಿಸುವ ಅಭ್ಯಾಸವು ವ್ಯಕ್ತಿಯ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ಹಾಳು ಮಾಡುತ್ತದೆ. ಬದಲಿಗೆ ನಾವು ಎದುರಿಸುತ್ತಿರುವ ಸವಾಲುಗಳಿಗೆ ಸೃಜನಶೀಲ ಪರಿಹಾರಗಳನ್ನು ಹುಡುಕಲು ಆ ಶ್ರಮವನ್ನು ಖರ್ಚು ಮಾಡಬಹುದು.


ಭಾವನಾತ್ಮಕವಾಗಿ ನಿಮ್ಮನ್ನು ಸುಸ್ತಾಗುವಂತೆ ಮಾಡುತ್ತದೆ


ಬದಲಿಗೆ ಅತಿಯಾಗಿ ಯೋಚಿಸುವುದು ನಮ್ಮನ್ನು ಮಾನಸಿಕ ಗೊಂದಲದತ್ತ ಕರೆದೊಯ್ಯುತ್ತದೆ. ಭಾವನಾತ್ಮಕ ನಮ್ಮನ್ನು ಬಳಲುವಂತೆ ಮಾಡುತ್ತದೆ ಎಂದು ಮುಂಬೈನ ಭಾಟಿಯಾ ಹಾಸ್ಪಿಟಲ್‌ನ ಕನ್ಸಲ್ಟೆಂಟ್ ಸೈಕಾಲಜಿಸ್ಟ್ ಮತ್ತು ಫ್ಯಾಮಿಲಿ ಥೆರಪಿಸ್ಟ್ ಡಾ ಮಾಯಾ ಕಿರ್ಪಲಾನಿ ಹೇಳುತ್ತಾರೆ.


ಇದನ್ನೂ ಓದಿ: Mental Health: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಏಕಾಂಗಿತನ ಹೇಗೆ ಸಹಕಾರಿ ಗೊತ್ತಾ..?


ಅತಿಯಾಗಿ ಯೋಚಿಸುವುದರಿಂದ ಉಂಟಾಗುವ ಮತ್ತೊಂದು ಅಭ್ಯಾಸವೆಂದರೆ ಭವಿಷ್ಯದ ಬಗ್ಗೆ ಚಿಂತಿಸುವುದು ಮತ್ತು ಭೂತಕಾಲದ ಜೊತೆ ಬದುಕುವುದು. ನಿನ್ನೆ ಮತ್ತು ನಾಳೆಯ ಚಿಂತೆ ಬಿಟ್ಟುಬಿಡಿ, ಇಂದಿನಲ್ಲಿ ಬದುಕಿ.


ವಾಸ್ತವದಲ್ಲಿ ಬದುಕಿ:


ಹಿಂದಿನವು ಮುಗಿದು ಹೋಗಿದೆ, ನಮಗೆ ಕಲಿಸಿದ ಪಾಠಗಳಿಂದ ನಾವು ಕಲಿಯಬಹುದು. ಪ್ರಧಾನವಾಗಿ ಭವಿಷ್ಯದ ಮೇಲೆ ಕೇಂದ್ರೀಕರಿಸುವುದು ಚಿಂತೆ ಮತ್ತು ಆತಂಕವನ್ನು ಉಂಟುಮಾಡುತ್ತದೆ. ಏಕೈಕ ವಿಷಯವೆಂದರೆ ಈಗ ಅಂದರೆ ಪ್ರಸೆಂಟ್. ಭೂತಕಾಲ ಅಥವಾ ಭವಿಷ್ಯದ ಬಗ್ಗೆ ಯೋಚಿಸುವಾಗ, ನಾವು ಇಂದಿನ ದಿನವನ್ನು ನಿರ್ಲಕ್ಷಿಸುತ್ತೇವೆ. ನಾವು ವಾಸ್ತವವನ್ನು ನಿರಾಕರಿಸುತ್ತಿದ್ದೇವೆ. ಹಾಗೆ ಮಾಡುವುದರಿಂದ ನಮಗೆ ನಾವೇ ಒಂದು ದೊಡ್ಡ ನೋವನ್ನು ಉಂಟುಮಾಡುತ್ತೇವೆ. ಹೀಗಾಗಿ ಪ್ರಸ್ತುತ ಕ್ಷಣವು ಯಾವುದೇ ಹೊಸತನವಿಲ್ಲದೆ ಹಾಳಾಗಿಬಿಡುತ್ತದೆ.


ಇದನ್ನೂ ಓದಿ: Health Tips: ಚೆನ್ನಾಗಿ ನಿದ್ರೆ ಮಾಡುವುದು ನಿಮ್ಮ ಮಾನಸಿಕ ಸಮಸ್ಯೆಗಳಿಗೆ ಪರಿಹಾರವಂತೆ


ಅದೇ ದಿನಚರಿ, ಅದೇ ಬೋರಿಂಗ್ ಶೆಡ್ಯೂಲ್


ಸೃಜನಶೀಲತೆ ಮತ್ತು ಕಲಿಕೆಯ ವ್ಯಾಪ್ತಿಯಿಲ್ಲದ ದೈನಂದಿನ ದಿನಚರಿಯನ್ನು ಅನುಸರಿಸುವುದು ನಮ್ಮನ್ನು ಅತೃಪ್ತರನ್ನಾಗಿಯೂ, ಚಿಂತಿತರನ್ನಾಗಿಯೂ ಮಾಡುತ್ತದೆ. ಇವು ನಮ್ಮ ಮಾನಸಿಕ ಆರೋಗ್ಯದ ಮೇಲೆ ಹಾನಿಯನ್ನುಂಟುಮಾಡುತ್ತದೆ.


ಈ ಅಪಾಯಕಾರಿ ಅಭ್ಯಾಸಗಳನ್ನು ಮೀರಿ ಖುಷಿಯಾಗಿರಲು ಹೀಗೆ ಮಾಡಿ:


  • ನಿಮ್ಮ ಆಲೋಚನೆಗಳನ್ನು ಗಮನಿಸಿ. ಇವು ಅನಗತ್ಯ ಆಲೋಚನೆಗಳಾಗಿದ್ದರೆ ಅಲ್ಲಿಗೇ ನಿಲ್ಲಿಸಿಬಿಡಿ, ಇಲ್ಲವಾದರೆ ಇವು ನಿಮ್ಮ ಅತೀಂದ್ರಿಯ ಶಕ್ತಿಯನ್ನು ಕುಗ್ಗಿಸುತ್ತದೆ.

  • ಈ ಕ್ಷಣದಲ್ಲಿ ಇರಿ. ನಿಮ್ಮ ಕಳೆದು ಹೋದ ಬಗ್ಗೆ ಹೆಚ್ಚು ಯೋಚಿಸಬೇಡಿ ಅಥವಾ ನಿಮ್ಮ ಭವಿಷ್ಯದ ಬಗ್ಗೆ ಗೀಳಿನ ಚಿಂತೆ ಮಾಡಬೇಡಿ. ಜಾಗರೂಕರಾಗಿರಿ. ಪ್ರಸ್ತುತ ಕ್ಷಣವನ್ನು ಆನಂದಿಸಿ.

  • ಹೊಸ ಕೌಶಲ್ಯವನ್ನು ಕಲಿಯಿರಿ. ಹವ್ಯಾಸಗಳನ್ನು ಬೆಳೆಸಿಕೊಳ್ಳಿ. ವಿಭಿನ್ನ ಮತ್ತು ಸೃಜನಶೀಲವಾದದ್ದನ್ನು ಮಾಡಿ. ಇದು ನಿಮಗೆ ವಿಶ್ರಾಂತಿ ನೀಡುವುದಲ್ಲದೆ, ನಿಮ್ಮ ಮನಸ್ಸನ್ನು ಚುರುಕಾಗಿರಿಸುತ್ತದೆ.

Published by:Divya D
First published: