Mental Health Care: ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ಈ ಸಿಂಪಲ್ ಟಿಪ್ಸ್​ ಟ್ರೈ ಮಾಡಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತುಂಬಾ ಜನರು ಮಾನಸಿಕ ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಗೆ ಗುರಿಯಾಗುತ್ತಾರೆ. ಇದರಿಂದ ಹೊರಬರಲು ತುಂಬಾ ಜನರು ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಇನ್ನು ಕೆಲವರು ಯಾವುದೇ ಪರಿಹಾರ ಕಂಡುಕೊಳ್ಳದೇ ಅದೇ ಚಿಂತೆ, ನೋವಿನಲ್ಲಿ ದಿನ ದೂಡುತ್ತಾರೆ. ಇದು ಅವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ.

ಮುಂದೆ ಓದಿ ...
  • Share this:

    ದೇಹದ (Body) ಒಟ್ಟಾರೆ ಆರೋಗ್ಯಕ್ಕೆ ಮಾನಸಿಕ ಆರೋಗ್ಯ (Mental Health) ಕಾಪಾಡಿಕೊಳ್ಳುವುದು ತುಂಬಾ ಮುಖ್ಯ. ಯಾಕಂದ್ರೆ ದಿನ ನಿತ್ಯದ ಜಂಜಾಟಗಳು, ಒತ್ತಡ, ಆಲೋಚನೆಗಳು, ಮಾನಸಿಕ ನೆಮ್ಮದಿ ಕೆಡಿಸುವ ಸಂಗತಿಗಳಿಂದಾಗಿ ತುಂಬಾ ಜನರು ಮಾನಸಿಕ ಖಿನ್ನತೆ ಮತ್ತು ಮಾನಸಿಕ ಅಸ್ವಸ್ಥತೆಗೆ ಗುರಿಯಾಗುತ್ತಾರೆ. ಇದರಿಂದ ಹೊರಬರಲು ತುಂಬಾ ಜನರು (People) ವೈದ್ಯರ ಬಳಿ ಚಿಕಿತ್ಸೆ ಪಡೆಯುತ್ತಾರೆ. ಇನ್ನು ಕೆಲವರು ಯಾವುದೇ ಪರಿಹಾರ ಕಂಡುಕೊಳ್ಳದೇ ಅದೇ ಚಿಂತೆ, ನೋವಿನಲ್ಲಿ ದಿನ ದೂಡುತ್ತಾರೆ. ಇದು ಅವರ ಆರೋಗ್ಯವನ್ನು ಮತ್ತಷ್ಟು ಹದಗೆಡಿಸುತ್ತದೆ. ಆದರೆ ನಿಮಗಾಗಿ ನೀವು ಸಮಯ ಕೊಡುವುದು ಮುಖ್ಯ. ನಿಮ್ಮ ಮಾನಸಿಕ ನೆಮ್ಮದಿ ಮತ್ತು ಸ್ವಸ್ಥ ಜೀವನಕ್ಕಾಗಿ ಮಾನಸಿಕ ಆರೋಗ್ಯ ಕಾಯ್ದುಕೊಳ್ಳಲು ಈ ಟಿಪ್ಸ್ ಫಾಲೋ ಮಾಡಿ.


    ಮಾನಸಿಕ ಆರೋಗ್ಯಕ್ಕೆ ಕೆಲವು ಸಲಹೆ


    ದೀರ್ಘಾವಧಿಯ ಉತ್ತಮ ಮಾನಸಿಕ ಆರೋಗ್ಯ ಹೊಂದಲು ಕೆಲವು ಬದಲಾವಣೆ ಮಾಡಿಕೊಳ್ಳಿ. ನಿಮ್ಮ ಜೀವನಶೈಲಿಯನ್ನು ಉತ್ತಮವಾಗಿರಿಸಿ. ನಿಮಗಾಗಿ ನೀವು ಸಮಯ ಕೊಡಿ.


    ಸ್ವಯಂ ಸಮಯ ಮತ್ತು ಸ್ವಯಂ ವಿಮರ್ಶೆ


    ಮಾನಸಿಕ ಆರೊಗ್ಯಕ್ಕೆ ಮೊದಲು ನಿಮಗಾಗಿ ನೀವು ಸಮಯ ಕಾಯ್ದಿರಿಸಿ. ಇದು ನಿಮ್ಮನ್ನು ಆರೋಗ್ಯವಾಗಿರಿಸಲು ಸಹಕಾರಿ. ಜೊತೆಗೆ ನೀವು ಮಾಡಿದ ಕೆಲವು ಕೆಲಸಗಳ ಬಗ್ಗೆ ಸರಿ-ತಪ್ಪುಗಳ ಸ್ವಯಂ ವಿಮರ್ಶೆ ಮಾಡಿ. ನಿಮ್ಮಿಷ್ಟದ ವಿಷಯಗಳತ್ತ ಹೆಚ್ಚು ಗಮನಹರಿಸಿ. ನಿಮಗೆ ಸಂತಸ ಕೊಡುವ ಸಂಗತಿಗಳನ್ನು ಮಾಡುತ್ತಾ ಹೋಗಿ.




    ನಿಮ್ಮ ಹವ್ಯಾಸ ಮತ್ತು ಯೋಜನೆಗಳು ಉತ್ತಮವಾಗಿರಲಿ


    ನೀವು ಮಾಡುವ ಕೆಲಸ ಹಾಗೂ ವೃತ್ತಿ ಮತ್ತು ಪ್ರವೃತ್ತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ನಿಮ್ಮ ನೆಚ್ಚಿನ ಹವ್ಯಾಸಗಳನ್ನು ದಿನವೂ ಮಾಡಿ. ಫೋನ್ ಬದಲು ಪುಸ್ತಕ ಓದಿ. ನಿಮ್ಮಿಷ್ಟದ ಸ್ಥಳಗಳಿಗೆ ಸುತ್ತಾಡಿ. ಹಾಡು, ಆಟ, ನೃತ್ಯ, ಪೇಂಟಿಂಗ್ ಹೀಗೆ ಹಲವು ಹವ್ಯಾಸಗಳಲ್ಲಿ ಬಿಡುವಿನ ಸಮಯವನ್ನು ಮನರಂಜನಾತ್ಮಕವಾಗಿಸಿ.


    ದೈಹಿಕ ಆರೋಗ್ಯ ಕಾಪಾಡಿಕೊಳ್ಳಿ


    ಮಾನಸಿಕ ಆರೋಗ್ಯಕ್ಕೆ ಮುಖ್ಯವಾಗಿ ದೈಹಿಕ ಆರೋಗ್ಯ ಬೇಕು. ಇದಕ್ಕಾಗಿ ರಾತ್ರಿ ಆಳವಾದ ನಿದ್ದೆ, ಉತ್ತಮ ಊಟ, ಹೆಚ್ಚು ನೀರು ಕುಡಿಯುವುದು, ಕಾಯಿಲೆಗಳಿಂದ ದೂರವಿರುವ ಸೇಫ್ಟಿ ಮೆಸೆರ್ಸ್ ಅಪ್ಲೈ ಮಾಡಿಕೊಳ್ಳಿ. ದಿನವೂ ರಾತ್ರಿ ಬೇಗ, ಮಲಗಿ ಬೆಳಗ್ಗೆ ಬೇಗ ಏಳಿ. ಸಮತೋಲಿತ ಆಹಾರ ಸೇವಿಸಿ.


    ಯೋಗ, ವ್ಯಾಯಾಮ ಮತ್ತು ಧ್ಯಾನ ಮಾಡಿ


    ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ದಿನವೂ ನಿಯಮಿತವಾಗಿ ಅರ್ಧ ಗಂಟೆ ವಾಕಿಂಗ್, ಯೋಗ, ವ್ಯಾಯಾಮ ಮಾಡಿ. ಒತ್ತಡ ನಿರ್ವಹಣೆಯ ಆಹಾರ ಕ್ರಮ ಪಾಲಿಸಿ. ಹೆಚ್ಚು ಹಣ್ಣುಗಳು, ಹಸಿರು ಸೊಪ್ಪು ಮತ್ತು ತರಕಾರಿ ಸೇವಿಸಿ. ನಿಮ್ಮಿಷ್ಟದ ಯೋಗ ಭಂಗಿಗಳನ್ನು ಮಾಡಿರಿ. ಮದ್ಯಪಾನ, ಧೂಮಪಾನ ತಪ್ಪಿಸಿ.


    ಸಾಂದರ್ಭಿಕ ಚಿತ್ರ


    ಒತ್ತಡ ನಿಭಾಯಿಸುವುದನ್ನು ಕಲಿಯಿರಿ


    ಒತ್ತಡ, ಚಿಂತೆ, ಸಮಸ್ಯೆ ಇದೆಲ್ಲವೂ ಎಲ್ಲರಿಗೂ ಇರುತ್ತವೆ. ಇವು ಜೀವನದ ಭಾಗಗಳಾಗಿವೆ. ಹಾಗಾಗಿ ಇವುಗಳನ್ನು ಸಮರ್ಪಕವಾಗಿ ನಿಭಾಯಿಸಲು ಕಲಿಯಿರಿ. ನಿಮ್ಮ ಆತ್ಮೀಯರೊಂದಿಗೆ ಮಾತನಾಡಿ. ಹಸಿರು ವಾತಾವರಣದಲ್ಲಿ ಕಾಲ ಕಳೆಯಿರಿ. ಆಳವಾದ ಉಸಿರಾಟ, ತಾಲೀಮು, ನಗುವುದು, ಹಾಸ್ಯ ಕಾರ್ಯಕ್ರಮಗಳ ವೀಕ್ಷಣೆ ಮಾಡಿ. ಇದು ಒತ್ತಡ ನಿಭಾಯಿಸುವಲ್ಲಿ ಸಹಕಾರಿ.


    ಇದನ್ನೂ ಓದಿ: ಮುಖದ ಮೇಲಿನ ರಂಧ್ರಗಳಿಂದ ಮುಜುಗರ ಆಗುತ್ತಿದ್ಯಾ? ಹಾಗಾದ್ರೆ ಈ ಟಿಪ್ಸ್ ಟ್ರೈ ಮಾಡಿ!


    ಒಳ್ಳೆಯ ಜನರೊಂದಿಗೆ ಸಂಪರ್ಕ ಹೊಂದಿ


    ನಿಮ್ಮ ಸುತ್ತಲೂ ಇರುವ ಜನರು ಪಾಸಿಟಿವ್ ಎನರ್ಜಿ ಹೊಂದಿರುವಂತೆ ನೋಡಿಕೊಳ್ಳಿ. ಅವರು ಯಾವೆಲ್ಲಾ ಕೆಲಸ ಮಾಡುತ್ತಾರೆ? ಅವರ ಉತ್ತಮ ಕಾರ್ಯಗಳು ಮತ್ತು ಹವ್ಯಾಸಕ್ಕೆ ಸಾಥ್ ನೀಡಿ. ಹೊಸ ಹೊಸ ಜನರನ್ನು ಭೇಟಿ ಮಾಡಿ. ಕೆಲಸ ಮಾಡುವ ಅಥವಾ ನಿಮಗೆ ಪ್ರೇರಣೆ ನೀಡುವ ವಿಷಯದತ್ತ ಹೆಚ್ಚು ಗಮನಹರಿಸಿ. ಆಗಾಗ್ಗೆ ಪ್ರವಾಸ ಕೈಗೊಳ್ಳಿ. ಡ್ರಗ್ಸ್ ಮತ್ತು ಆಲ್ಕೋಹಾಲ್ ತಪ್ಪಿಸಿ.

    Published by:renukadariyannavar
    First published: