Menstrual Hygiene: ಮುಟ್ಟಿನ ಬಗ್ಗೆ ಇರಲಿ ಕಾಳಜಿ - ಹೆಣ್ಣುಮಕ್ಕಳು ಇದನ್ನು ತಿಳಿದಿರಲೇಬೇಕು

Menstrual Hygiene Day: ಬದಲಾದ ಜೀವನ ಶೈಲಿಯಿಂದ ಹೆಣ್ಣುಮಕ್ಕಳು ಅವಧಿಗೂ ಮುನ್ನವೇ ಮುಟ್ಟಾಗುತ್ತಿರುವುದು ಕಂಡು ಬರುತ್ತಿದೆ. ಆದರೆ, ಈ ಮಕ್ಕಳು ಆ ಬದಲಾವಣೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಬಹಳ ಮುಖ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪ್ರತಿಯೊಂದ ಹೆಣ್ಣು ಋತುಚಕ್ರಕ್ಕೆ (Period Cycle) ಸಿಲುಕಲೇ ಬೇಕು. ಇದು ಪ್ರತಿ ಮಹಿಳೆಗೂ (Women) ನೈಸರ್ಗಿಕದತ್ತವಾಗಿ (Natural) ದೊರೆತ ವಿಶೇಷ ಬಳುವಳಿ. ಸಾಮಾನ್ಯವಾಗಿ 11 ರಿಂದ 12 ವರ್ಷ ಒಳಗಿನ ಹೆಣ್ಣುಮಕ್ಕಳು ಋತುಮತಿಯಾಗುವುದು ಸಾಮಾನ್ಯ. ಇನ್ನೂ ಎಳೆವಯಸ್ಸಿನ ಈ ಹೆಣ್ಣುಮಕ್ಕಳಿಗೆ ಋತುಚಕ್ರದ ಬಗ್ಗೆ ಯಾವುದೇ ಅರಿವಿರುವುದಿಲ್ಲ. ಪ್ಯಾಡ್‌  (Pads) ಬಳಸುವುದು, ನೈರ್ಮಲ್ಯ ಕಾಪಾಡಿಕೊಳ್ಳುವುದು, ಅದರಿಂದಾಗುವ ಹೊಟ್ಟೆ ನೋವು ಎಲ್ಲಾ ವಿಷಯವು ಹೊಸದು. ಆದರೆ, ಅನಿವಾರ್ಯವಾಗಿ ಈ ಎಲ್ಲಾ ಬದಲಾವಣೆಗಳನ್ನು ಕಲಿಸಬೇಕು. ಮೇ.28ರಂದು ವಿಶ್ವ ಮುಟ್ಟಿನ ನೈರ್ಮಲ್ಯ ದಿನದ ಅಂಗವಾಗಿ ಈಗಷ್ಟೇ ಋತುಚಕ್ರಕ್ಕೆ ಕಾಲಿಡುತ್ತಿರುವ ಹೆಣ್ಣು ಮಕ್ಕಳು ಮುಟ್ಟಿನ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಬಗ್ಗೆ ಫೋರ್ಟಿಸ್‌ ಆಸ್ಪತ್ರೆ ಸ್ತ್ರೀರೋಗ ತಜ್ಞೆ ಡಾ. ಮನೀಶಾ ಸಿಂಗ್‌ ಸಲಹೆ ನೀಡಿದ್ದಾರೆ.

ಬದಲಾದ ಜೀವನ ಶೈಲಿಯಿಂದ ಹೆಣ್ಣುಮಕ್ಕಳು ಅವಧಿಗೂ ಮುನ್ನವೇ ಮುಟ್ಟಾಗುತ್ತಿರುವುದು ಕಂಡು ಬರುತ್ತಿದೆ. ಆದರೆ, ಈ ಮಕ್ಕಳು ಆ ಬದಲಾವಣೆಯನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಬಹಳ ಮುಖ್ಯ.

ನೆನಪಿಡುವ ಅಂಶಗಳು:
1. ಹೊಸದಾಗಿ ಋತುಮತಿಯಾದ ಮಕ್ಕಳಿಗೆ ಒಂದಷ್ಟು ವಿಷಯಗಳ ಬಗ್ಗೆ ಮೊದಲೇ ಜಾಗೃತಿ ಮೂಡಿಸಿರುವುದು ಒಳ್ಳೆಯದು. ಮುಟ್ಟಾದ ಮೊದಲ ದಿನ ಹೆಚ್ಚು ರಕ್ತಸ್ತ್ರಾವವಾಗುವುದರಿಂದ ಸ್ಯಾನಿಟರಿ ನ್ಯಾಪ್‌ಕಿನ್‌ನನ್ನು ಪ್ರತಿ 4 ರಿಂದ 5 ಗಂಟೆಗೊಮ್ಮೆ ಬದಲಿಸುವುದು ಒಳಿತು. ಇಲ್ಲವಾದರೆ, ರಕ್ತಸ್ತ್ರಾವ ಹೆಚ್ಚಾಗಿ ಹರಡುವ ಸಾಧ್ಯತೆ ಇರುತ್ತದೆ, ಜೊತೆಗೆ ಖಾಸಗಿ ಜಾಗದಲ್ಲಿ ದದ್ದು ಆಗುವುದು, ಮೂತ್ರದ ಸೋಂಕು ತಗುಲುವ ಸಾಧ್ಯತೆ ಹೆಚ್ಚು. ಹೀಗಾಗಿ ಹೆಚ್ಚು ಕಾಲ ಒಂದೇ ಪ್ಯಾಡ್‌ ಬಳಸುವುದನ್ನು ತಪ್ಪಿಸಿ

2. ಪ್ರತಿ ಬಾರಿ ನೀವು ಪ್ಯಾಡ್‌ ಬದಲಿಸುವ ವೇಳೆ ನಿಮ್ಮ ಖಾಸಗಿ ಅಂಗವನ್ನು ನೀರಿನಲ್ಲಿ ಸ್ವಚ್ಛಗೊಳಿಸುವುದು ಉತ್ತಮ. ಏಕೆಂದರೆ, ಪ್ಯಾಡ್‌ ತೆಗದವೇಳೆ ರಕ್ತದಲ್ಲಿನ ಬ್ಯಾಕ್ಟೀರಿಯಾಗಳು ನಿಮ್ಮ ದೇಹಕ್ಕೂ ಅಂಟಿಕೊಂಡಿರುತ್ತದೆ. ನೀವು ಪ್ಯಾಡ್‌ ಬದಲಿಸಿದರೂ ಅಂಟಿಕೊಂಡಿರುವ ಬ್ಯಾಕ್ಟೀರಿಯಾ ಪ್ರತಿಕ್ರಿಸುವ ಸಾಧ್ಯತೆ ಹೆಚ್ಚು. ಹೀಗಾಗಿ ಪ್ಯಾಡ್‌ ಬದಲಿಸುವ ವೇಳೆ ಸ್ವಚ್ಛ ನೀರಿನಿಂದ ತೊಳೆಯುವುದನ್ನು ಮರೆಯಬೇಡಿ.

3. ಕೆಲವರು ಮುಟ್ಟಾದ ವೇಳೆಯಲ್ಲಿ ತಮ್ಮ ಖಾಸಗಿ ಅಂಗವನ್ನು ಆಗಾಗ್ಗೇ ಸಾಬೂನು ಅಥವಾ ಯೋನಿ ನೈರ್ಮಲ್ಯ ಉತ್ಪನ್ನಗಳನ್ನು ಬಳಸಿ ತೊಳೆದುಕೊಳ್ಳುತ್ತಾರೆ. ಇದು ಅಪಾಯ. ಹೌದು, ಮುಟ್ಟಿನ ಸಮಯದಲ್ಲಿ ರಾಸಾಯನಿಕಯುಕ್ತ ಸಾಬೂನು ಬಳಸುವುದು ಆರೋಗ್ಯಕ್ಕೆ ಸಮಸ್ಯೆ ಉಂಟು ಮಾಡಬಹುದು. ಸಾಮಾನ್ಯವಾಗಿ ಯೋನಿಯೂ ಮುಟ್ಟಿನ ವೇಳೆಯಲ್ಲಿ ನೈಸರ್ಗಿಕವಾಗಿ ಶುದ್ಧೀಕರಣವಾಗುವ ವ್ಯವಸ್ಥೆಯನ್ನು ಹೊಂದಿದೆ. ಹೀಗಿರುವಾಗ ನೀರಿನ ಬದಲು ಕೃತಕ ನೈರ್ಮಲ್ಯ ಉತ್ಪನ್ನ ಬಳಸುವುದರಿಂದ ನೈಸರ್ಗಿಕ ಕ್ರಿಯೆಗೆ ತೊಡಕು ಉಂಟಾಗಬಹುದು. ಇದು ಇತರೆ ಆರೋಗ್ಯ ಸಮಸ್ಯೆಗೆ ಕಾರಣವಾಗುವ ಜೊತೆಗೆ, ಸೋಂಕು ಹಾಗೂ ಕೆಟ್ಟ ಬ್ಯಾಕ್ಟೀರಿಯಾ ಬೆಳವಣಿಗೆಗೆ ಕಾರಣವಾಗಬಹುದು.

ಇದನ್ನೂ ಓದಿ: ಪದೇ ಪದೇ IVF ಫೇಲ್​ ಆಗೋಕೆ ಇದೇ ಕಾರಣವಂತೆ? ಮುಂದೇನು? ಈ ಸ್ಟೋರಿ ಓದಿ

4. ಸ್ಯಾನಿಟರಿ ನ್ಯಾಪ್ಕಿನ್ ಅನ್ನು ಸರಿಯಾಗಿ ವಿಲೇವಾರಿ ಮಾಡಿ-
ಬಹಳಷ್ಟು ಮಂದಿ ಬಳಸಿದ ಸ್ಯಾನಿಟರಿ ಪ್ಯಾಡ್‌ಗಳನ್ನು ಬೇಕಾಬಿಟ್ಟಿ ವಿಲೇವಾರಿ ಮಾಡುತ್ತಾರೆ. ಇದು ತಪ್ಪು, ಇದರಿಂದ ಬೇರೆಯವರಿಗೆ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಇರುತ್ತದೆ. ಇನ್ನೂ ಕೆಲವರು ಅದನ್ನು ಟಾಯ್ಲೆಟ್‌ನಲ್ಲಿಯೇ ಹಾಕಿ ಪ್ಲಶ್‌ ಮಾಡುವ ಹವ್ಯಾಸ ಇಟ್ಟುಕೊಂಡಿರುತ್ತಾರೆ. ಇದು ಸರಿಯಾದ ಮಾರ್ಗವಲ್ಲ. ನೀವು ಬಳಸಿದ ಪ್ಯಾಡ್‌ನನ್ನು ನೀಟಾಗಿ ಸುತ್ತಿ, ಅದನ್ನು ಕವರ್‌ನಲ್ಲಿ ಹಾಕಿ, ಅದನ್ನು ಡಸ್ಟ್‌ಬಿಸ್‌ನಲ್ಲಿ ವಿಲೇವಾರಿ ಮಾಡಿ. ಇದು ಉತ್ತಮ ಮಾರ್ಗ. ನೀವು ಸುತ್ತಿದ ಬಳಿಕ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ.

5. ಪ್ಯಾಡ್‌ ಬಳಸುವ ಬದಲು ಸಿಲಿಕೋನ್‌ ಮುಟ್ಟಿನ ಕಪ್‌ ಬಳಸುವುದು ಹೆಚ್ಚು ಸೂಕ್ತ. ಇದನ್ನು ವಿಲೇವಾರಿ ಮಾಡುವ ಅವಶ್ಯಕತೆ ಇಲ್ಲ. ಇದನ್ನು ಬಳಸುವ ಮಾರ್ಗ ಹಾಗೂ ನಿಮ್ಮ ಕಪ್‌ ಗಾತ್ರವನ್ನು ನಿಮ್ಮ ವೈದ್ಯರನ್ನು ಭೇಟಿ ಮಾಡಿ ತಿಳಿದುಕೊಳ್ಳುವುದು ಉತ್ತಮ.

ಇದನ್ನೂ ಓದಿ: ಸ್ಪೈಸಿ ಚಿಕನ್ ಐಟಮ್ ಬೇಕಾ? ಹಾಗಾದ್ರೆ ಜಯನಗರದ ಈ ರೆಸ್ಟೊರೆಂಟ್​ಗಳಿಗೆ ಹೋಗಿ

6. ಜಾಗೃತಿ ಇರಲಿ. ಈಗಷ್ಟೇ ಋತುಮತಿಯಾದ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಜಾಗೃತಿ ಇರುವುದಿಲ್ಲ. ಹೀಗಾಗಿ ಮನೆಯಲ್ಲಿ ತಾಯಿ ಅಥವಾ ಶಾಲೆಯಲ್ಲಿ ಶಿಕ್ಷಕರು ಈ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ ಮಕ್ಕಳು ತಮ್ಮ ಮುಟ್ಟಿನ ದಿನವನ್ನು ಸೂಕ್ತವಾಗಿ ನಿಭಾಯಿಸಬಹುದು.
Published by:Sandhya M
First published: