Seema.RSeema.R
|
news18-kannada Updated:October 28, 2020, 11:43 PM IST
ಸಾಂದರ್ಭಿಕ ಚಿತ್ರ
ಮುಟ್ಟಿನ ಸಂದರ್ಭದಲ್ಲಿ ಬಹಳಷ್ಟು ಮಹಿಳೆಯರು ಪ್ಯಾಡ್ಗಳ ಮೊರೆ ಹೋಗುವುದೇ ಹೆಚ್ಚು. ಸಮಯಕ್ಕೆ ಸರಿಯಾಗಿ ಪ್ಯಾಡ್ಗಳ ಬದಲಾಯಿಸದಿದ್ದರೆ, ಸೋರಿಕೆಯಿಂದ ಕೆಲವೊಮ್ಮೆ ಕಿರಿಕಿರಿಯಾಗುವುದು ಸಹಜ. ಅಲ್ಲದೇ, ಈ ಪ್ಯಾಡ್ಗಳ ವಿಲೇವಾರಿ ಕೂಡ ತುಸು ಕಷ್ಟ. ಮಣ್ಣಿನಲ್ಲಿ ಕರಗಲು ಈ ಪ್ಯಾಡ್ಗಳು ಬಹಳ ಸಮಯ ತೆಗೆದುಕೊಳ್ಳುತ್ತದೆ. ಇದೇ ಕಾರಣಕ್ಕಾಗಿ ಮುಟ್ಟಿನ ಕಪ್ಗಳು ಮಾರುಕಟ್ಟೆಗೆ ಬಂದಿದೆ. ಆದರೆ, ಈ ಮಟ್ಟಿನ ಕಪ್ ಬಗ್ಗೆ ಬಹಳಷ್ಟು ಜನರಿಕ್ಕೆ ತಿಳುವಳಿಕೆ ಕೊರತೆ ಕಾರಣದಿಂದ ಇದರ ಬಳಕೆಗೆ ಹಿಂದೇಟು ಹಾಕುತ್ತಾರೆ. ಇವು ತಮ್ಮ ಯೋನಿಗೆ ಹಾನಿಯನ್ನುಂಟು ಮಾಡಬಹುದು ಎಂಬ ತಪ್ಪು ಕಲ್ಪನೆ ಕೂಡ ಹಲವರಲ್ಲಿದೆ. ಅಲ್ಲದೇ, ಇದು ತಮ್ಮ ಕನ್ಯತ್ವಕ್ಕೆ ತೊಡಕು ಆಗಬಹುದು ಎಂಬ ನಂಬಿಕೆ ಕೂಡ ಹಲವರಲ್ಲಿದೆ. ಇದೇ ಹಿನ್ನಲೆ ಇಂದಿಗೂ ಇದರ ಬಳಕೆಗೆ ಅನೇಕರು ಮುಂದಾಗಿಲ್ಲ. ಆದರೆ, ಈ ಮುಟ್ಟಿನ ಕಪ್ ಗಳು ನಿಜಕ್ಕೂ ಕನ್ವತ್ವಕ್ಕೆ ಮಾರಕವಾ ಎಂಬ ಬಗ್ಗೆ ಅರಿವು ಅಗತ್ಯ.
ಮುಟ್ಟಿನ ಕಪ್ಗಳು ಪರಿಸರ ಸ್ನೇಹಿ ಜೊತೆಗೆ ಪ್ಯಾಡ್ಗೆ ಹೋಲಿಸಿದರೆ ಖರ್ಚಿನಲ್ಲಿಯೂ ಉಳಿತಾಯ ಮಾಡುತ್ತವೆ. ಅಲ್ಲದೇ ಇದು ದೀರ್ಘಕಾಲದವರೆಗೆ ಯಾವುದೇ ಅಳುಕಿಲ್ಲದೆ ಬಳಸಬಹುದಾಗಿದೆ. ವಾಸನೆರಹಿತವಾದ ಇವು, ಪ್ಯಾಡ್ನಿಂದ ಉಂಟಾಗುವ ಟಾಕ್ಸಿಕ್ ಶಾಕ್ ಸಿಂಡ್ರೋಮ್ ಅಪಾಯ ತಡೆಯುವಲ್ಲಿ ಕೂಡ ಸಹಾಯ ಮಾಡುತ್ತದೆ.
ಕನ್ಯತ್ವಕ್ಕೆ ತೊಡಕೆ:
ಮುಟ್ಟಿನ ಕಪ್ ಬಳಕೆಗೂ ಮುನ್ನ ಬಹಳಷ್ಟು ಯುವತಿಯರನ್ನು ಕಾಡುವ ಪ್ರಶ್ನೆ ಇದು. ಮುಟ್ಟಿನ ಕಪ್ ಬಳಕೆಗೂ ಕನ್ಯತ್ವಕ್ಕೂ ಯಾವುದೇ ಸಂಬಂಧ ಇಲ್ಲ. ಮುಟ್ಟಿನ ಕಪ್ಗಳನ್ನು ಯೋನಿ ಒಳಗೆ ಹಾಕುವುದರಿಂದ ಕನ್ಯತ್ವ ಹಾಳಾಗುವುದು ಎಂಬ ನಂಬಿಕೆ ಕೆಲವರಲ್ಲಿದೆ. ಆದರೆ . ಕನ್ಯತ್ವ ಎಂಬುಂದು ಲೈಂಗಿಕ ಚಟುವಟಿಕೆಗೆ ಸಂಬಂಧಿಸಿದ್ದು, ಇದಕ್ಕೂ ಮುಟ್ಟಿನ ಕಪ್ಗೂ ಸಂಬಂಧವಿಲ್ಲ. ಮುಟ್ಟಿನ ಕಪ್ನಿಂದ ಯೋನಿ (ಹೈಮನ್) ಹರಿದು ಹರಿಯಬಹುದು. ಆದರೆ, ಇದು ಗಾಬರಿ ಪಡುವ ವಿಷಯವಲ್ಲ. ಕಾರಣ ಮುಟ್ಟಿನ ಸಂದರ್ಭದಲ್ಲಿ ರಕ್ತಸ್ರಾವದಿಂದ ಈಗಾಗಲೇ ಯೋನಿಯೊಳಗೆ ರಂಧ್ರವಿರುತ್ತದೆ. ಈ ರಂಧ್ರವನ್ನು ಕೊಂಚ ಅಧಿಕವಾಗುವ ಸಾಧ್ಯತೆ ಈ ಮುಟ್ಟಿನ ಕಪ್ ಬಳಕೆಯಿಂದ ಆಗುತ್ತದೆ ಎನ್ನುತ್ತಾರೆ ಸ್ತ್ರೀರೋಗ ತಜ್ಞರು.
ಸುರಕ್ಷಿತ
ಮುಟ್ಟಿನ ಕಪ್ ಅನ್ನು ಯಾವುದೇ ಮುಜಗರವಿಲ್ಲ ದೀರ್ಘಾವಧಿ ಕಾಲ ಬಳಸಬಹುದು. ವೈದ್ಯಕೀಯ ಗುಣಮಟ್ಟದ ಸಿಲಿಕೋನ್ನಿಂದ ತಯಾರಿಸುವ ಈ ಕಪ್ಗಳು ಯಾವುದೇ ಹಾನಿಯನ್ನು ಉಂಟು ಮಾಡುವುದಿಲ್ಲ. ಇದು ಮುಟ್ಟಿನ ರಕ್ತವನ್ನು ಪ್ಯಾಡ್ನಂತೆ ಹೀರಿಕೊಳ್ಳುವ ಬದಲು ಸಂಗ್ರಹಿಸಿಡುತ್ತದೆ. ದೀರ್ಘಾವಧಿಯಾಗಿ ಇದನ್ನು ತೆಗೆದು ಮರುಬಳಕೆ ಮಾಡಬಹುದು.
ಖರೀದಿ ಮುನ್ನ ಎಚ್ಚರಿಕೆಬಜೆಟ್ ಫ್ರೆಂಡ್ಲಿಯಾಗಿರುವ ಈ ಮುಟ್ಟಿನ ಕಪ್ ಬಳಸುವಾಗ ಉನ್ನತ ಬ್ರ್ಯಾಂಡ್ ಉತ್ಪನ್ನವನ್ನು ಪರಿಶೀಲಿಸಿ ತೆಗೆದುಕೊಳ್ಳುವುದು ಉತ್ತಮ. ಮೊದಲ ಬಳಕೆಗೂ ಮುನ್ನ ನೀರಿನಲ್ಲಿ ಕುದಿಸಿರಿ. ಮುಟ್ಟಿನ ಸಮಯದಲ್ಲಿ ಬಳಕೆಗೂ ಮುನ್ನ ಕೂಡ ಕೈ ಸ್ವಚ್ಛತೆ ಕಾಪಾಡುವುದು ಅಗತ್ಯ. ಸರಿಯಾಗಿ ಯೋನಿಯೊಳಗೆ ಇವುಗಳನ್ನು ಸೇರಿಸದಿದ್ದರೆ, ಅದು ಕಿರಿಕಿರಿ ಉಂಟು ಮಾಡುವ ಸಾಧ್ಯತೆ ಕೂಡ ಹೆಚ್ಚು. ಈ ಹಿನ್ನಲೆ ಹೇಗೆ ಬಳಕೆ ಮಾಡಬೇಕೆಂಬ ಅರಿವಿರಬೇಕು.
Published by:
Seema R
First published:
October 28, 2020, 4:44 PM IST